ಕಾರ್ಮಿಕ ಸಚಿವ ಸಂತೋಷ್ ಲಾಡ್ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ

ಉಚ್ಚಿಲ:ಕರ್ನಾಟಕ ಸರಕಾರ ಕಾರ್ಮಿಕ ಸಚಿವರಾದ ಸನ್ಮಾನ್ಯ ಸಂತೋಷ್ ಲಾಡ್ ರವರು ಇಂದು ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.

ಸಂತೋಷ್ ಲಾಡ್ ಅವರನ್ನು ಶ್ರೀ ಕ್ಷೇತ್ರದ ವತಿಯಿಂದ ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದ. ಕ. ಮೊಗವೀರ ಮಹಾಜನ ಸಂಘದ ಸದಸ್ಯರಾದ ಕಿರಣ್ ಕುಮಾರ್ ಪಿತ್ರೊಡಿ ದೇವಳದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ, ಲಾವಣ್ಯ ಬಲ್ಲಾಳ್, ಸುರೇಶ್ ಕಾಂಚನ್ ಕೋಟ, ಸೌರಭ್ ಬಳ್ಳಾಲ್, ಶ್ರೀ ಕ್ಷೇತ್ರ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಮುಂತಾದವರು ಉಪಸ್ಥಿತರಿದ್ದರು.