ಮಕ್ಕಳಲ್ಲಿ ಯಕ್ಷಗಾನದ ಒಲವು ತುಂಬಿಸಬೇಕು : ಕರಿಂಜೆ ಶ್ರೀ

ಮೂಡುಬಿದಿರೆ: ಮಕ್ಕಳಲ್ಲಿ ಯಕ್ಷಗಾನದ ಒಲವನ್ನು ತುಂಬಿದಾಗ ತುಳುನಾಡಿನಲ್ಲಿ ಯಕ್ಷಗಾನ ಕಲೆ ಇನ್ನಷ್ಟು ಶ್ರೀಮಂತ ಕಲೆಯಾಗಿ ಬೆಳೆಯಲು ಸಾಧ್ಯ ಎಂದು ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು. ಅವರು ಇಲ್ಲಿನ ಶ್ರೀ ಯಕ್ಷನಿಧಿ ಮೂಡುಬಿದಿರೆ ಇದರ ದಶಮಾನೋತ್ಸವದ ಅಂಗವಾಗಿ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಭಾ ಕಾಯ೯ಕ್ರಮದಲ್ಲಿ ಆಶೀರ್ವಚನ ನೀಡಿದರು.

ಜೈನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಭಾತ್ ಕುಮಾರ್ ಬಲ್ನಾಡ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ` ಆರ್ಥಿಕ ಶಿಸ್ತು, ಕಲಾಭಿಮಾನ, ಸಂಘಟನಾ ಚಾತುರ್ಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಯಕ್ಷಗಾನವನ್ನು ಇಂದಿಗೂ ವೃತ್ತಿಯಾಗಿ ಸ್ವೀಕರಿಸಬಹುದು’ ಎಂದರು. ಬಿಜೆಪಿ ಮುಖಂಡ ಸುದರ್ಶನ್ ಎಂ ಮಾತನಾಡಿ ಯಕ್ಷಗಾನವನ್ನು ಕೇವಲ ಸಾಂಸ್ಕøತಿಕ ದೃಷ್ಟಿಕೋನದಿಂದ ನೋಡಬಾರದು. ಇದಕ್ಕೆ ದೈವತ್ವದ ಹಿನ್ನೆಲೆ ಹಾಗೂ ಧಾರ್ಮಿಕ ಪರಂಪರೆ ಇದೆ. ಇತ್ತೀಚಿನ ದಿನಗಳಲ್ಲಿ ಯುವ ಕಲಾವಿದರು ಯಕ್ಷಗಾನದ ಕಡೆ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದರು. ಪ್ರಶಸ್ತಿ ಪ್ರದಾನ : ಕಟೀಲು ಮೇಳದ ಯಕ್ಷಗಾನ ಕಲಾವಿದ ಅಶೋಕ್ ಆಚಾರ್ಯ ವೇಣೂರು ಅವರಿಗೆ ರೂ ಹತ್ತು ಸಾವಿರ ನಗದಿನೊಂದಿಗೆ `ಶ್ರೀ ಯಕ್ಷನಿಧಿ ಪ್ರಶಸ್ತಿ -2025′ ನೀಡಿ ಸನ್ಮಾನಿಸಲಾಯಿತು. ವಿವಿಧ ಸಾಧಕರನ್ನು ಗೌರವಿಸಲಾಯಿತು.
ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಸಾಧಕರನ್ನು ಗೌರವಿಸಲಾಯಿತು. ಯಕ್ಷಗಾನ ತರಬೇತುದಾರ ಶಿವಕುಮಾರ್ ಅವರ ಮಾತೃಶ್ರೀ ಗಿರಿಜ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಪ್ರೋತ್ಸಾಹಕರಾದ ಪ್ರೇಮನಾಥ ಮಾರ್ಲ, ಕ್ರಿಯೇಟಿವ್ ಕಾಲೇಜಿನ ಅಶ್ವತ್ಥ್ ಎಸ್.ಎಲ್, ಬೆಳುವಾಯಿ ಗ್ರಾ.ಪಂ. ಸದಸ್ಯ ಭರತ್ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಅಶೋಕ್ ನಾಯ್ಕ್ ಮುಚ್ಚೂರು, ಯಕ್ಷನಿಧಿಯ ಅಧ್ಯಕ್ಷೆ ಲತಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಸ್ಥಾಪಕರಾದ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನ್ನಾಡಿದರು. ಧೀಕ್ಷಾ ಸಫಲಿಗ ವರದಿ ವಾಚಿಸಿದರು. ಸಂದೀಪ್ ಶೆಟ್ಟಿ ನಿರೂಪಿಸಿದರು.

Related Posts

Leave a Reply

Your email address will not be published.