ಗಾಂಜಾ ಮಾರಾಟದಲ್ಲಿ ಇಬ್ಬರು ಅಸ್ಸಾಂ ಮೂಲದ ಕಾರ್ಮಿಕರ ಬಂಧನ

ಸಕಲೇಶಪುರ- ನಗರ ಪೊಲೀಸ್ ಠಾಣೆ ವ್ಯಾಪ್ತಿಯ APMC ಬಳಿ ಅಸ್ಸಾಂ ಮೂಲದ ಕಾರ್ಮಿಕರಾದ ಅಮ್ಜದ್ ಅಲಿ ಮತ್ತು ಇದ್ರೀಸ್ ಅಲಿ ಎಂಬ ಇಬ್ಬರನ್ನು ಪೊಲೀಸರು ದಸ್ತಗಿರಿಮಾಡಿದ್ದಾರೆ. ಇವರು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಬೆಟ್ಟದಮನೆಯ ಎಸ್ಟೇಟ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಸುಮಾರು 500 ಗ್ರಾಂ (ಅರ್ಧ ಕಿಲೋ) ಗಾಂಜಾ ಸೊಪ್ಪನ್ನು ಮಾರಾಟಮಾಡುತ್ತಿದ್ದ ವೇಳೆ ಹಿಡಿಯಲ್ಪಟ್ಟಿದ್ದಾರೆ.

ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ದಾಳಿ ಸಕಲೇಶಪುರ ಉಪವಿಭಾಗದ ಡಿವೈಎಸ್ಪಿ ಮಾಲತೇಶ್ ಎಸ್.ಕೆ. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ವಿ.ಸಿ. ವನರಾಜು ಹಾಗೂ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಜೆ.ಇ. ಅವರ ನೇತೃತ್ವದಲ್ಲಿ ನಡೆಯಿತು. ಸಿಬ್ಬಂದಿಗಳಾದ ಪೃಥ್ವಿ, ರೇವಣ್ಣ, ಶ್ರೀಧರ್, ಸೋಮಶೇಖರ್, ಚಂದ್ರಕಾಂತ್ ಮತ್ತು ಮಧು ದಾಳಿಯಲ್ಲಿ ಶ್ರಮಿಸಿದ್ದಾರೆ

Related Posts

Leave a Reply

Your email address will not be published.