ಮಂಗಳೂರಿನಲ್ಲಿ 8 ನೇ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವ

ಕರಾವಳಿ ಉತ್ಸವದ ಅಂಗವಾಗಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ‘ ಟೀಮ್ ಮಂಗಳೂರು ‘ ಹವ್ಯಾಸಿ ಗಾಳಿಪಟ ತಂಡವು ಮಂಗಳೂರಿನ ತಣ್ಣೀರುಬಾವಿಯ ಹೊಸತನದೊಂದಿಗೆ ನವೀಕರಣಗೊಂಡ ಬ್ಲೂ ಬೇ ಬೀಚ್ ನಲ್ಲಿ ಪ್ರಥಮ ಕಾರ್ಯಕ್ರಮವಾಗಿ 8 ನೇ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಓ ಯನ್ ಜಿ ಸಿ – ಎಮ್ ಆರ್ ಪಿ ಎಲ್ ಪ್ರಾಯೋಜಕತ್ವದಲ್ಲಿ ಜನವರಿ 17 ಮತ್ತು 18 ರಂದು ಆಯೋಜಿಸುತ್ತಿದೆ.
ಈ ಉತ್ಸವದ ಪೂರ್ವ ಭಾವಿ ಕಾರ್ಯಕ್ರಮದ ಸಲುವಾಗಿ ಜನವರಿ 10 ರಂದು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮತ್ತು ಉಪ ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ರವರು ಬಾನಿಗೆ ಬಣ್ಣದ ತೋರಣ ಕಟ್ಟಲಿರುವ ಗಾಳಿಪ ಟವನ್ನು ಎತ್ತಿ ಹಿಡಿದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್, ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್, ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ ಕರ್, ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ವಿಧಾನ ಪರಿಷತ್ ಸಚಿವ ಐವನ್ ಡಿಸೋಜ ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಉಪಸ್ಥಿತರಿದ್ದರು.
14 ಅಂತರ್ ರಾಷ್ಟ್ರೀಯ ಗಾಳಿಪಟ ತಂಡಗಳು, 8 ರಾಷ್ಟ್ರೀಯ ತಂಡಗಳು ಈ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲಿವೆ.
ದೇಶೀ ಪರಂಪರೆ, ಸಂಸ್ಕೃತಿಯನ್ನು ಬಿಂಬಿಸುವುದರೊಂದಿಗೆ ಅಂತರ್ ರಾಷ್ಟ್ರೀಯ ಸ್ನೇಹ ಭಾವಗಳ ಸಂಕಲೆ ಬೆಸೆಯುವುದರೊಂದಿಗೆ ಸಾರ್ವಜನಿಕ ಬ್ರಹತ್ ಮನರಂಜನೆ ನೀಡಲು ಈ ಗಾಳಿಪಟ ಉತ್ಸವವು ಸಜ್ಜಾಗುತ್ತಿದೆ.

Related Posts

Leave a Reply

Your email address will not be published.