ಬಂಟ್ವಾಳ : ಹಿರಿಯ ರಂಗಭೂಮಿ ಕಲಾವಿದ ಚಿ. ರಮೇಶ್ ಕಲ್ಲಡ್ಕ ನಿಧನ

ಕಲ್ಲಡ್ಕ ಕೊಳಕೀರು ನಿವಾಸಿ, ಹಿರಿಯ ರಂಗಭೂಮಿ ಕಲಾವಿದ, ತುಳು ರಂಗಭೂಮಿಯ ಕಲಾವಿದ, ಚಿತ್ರನಟ ಚಿ.ರಮೇಶ್ ಕಲ್ಲಡ್ಕ (68) ಅವರು ಜು.23ರ ಬುಧವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.

ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಕಳೆದ ಹಲವು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು ಮಂಗಳೂರಿನ ಹೆಸರಾಂತ ನಾಟಕ ತಂಡ ಕಲಾಸಂಗಮದಲ್ಲಿ ಕಳೆದ 20 ವರ್ಷಗಳಿಂದ ಹತ್ತಾರು ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದರು.
