ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ವಡ್ಯಾ ಸಂಪರ್ಕ ರಸ್ತೆ ಕಡಿತ
ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಮಿತಡ್ಕ ವಡ್ಯಾ ಎಂಬಲ್ಲಿ ಸಾರ್ವಜನಿಕ ರಸ್ತೆಗೆ ಮರ ಬಿದ್ದು ಸಂಪೂರ್ಣ ಸಾರ್ವಜನಿಕರಿಗೆ ಸಂಪರ್ಕ ಕಡಿತಗೊಂಡಿದೆ ಇದಕ್ಕೆ ಸುಮಾರು 10 ದಿನದಿಂದ ಇಲ್ಲಿಯ ಶಾಲಾ ಮಕ್ಕಳಿ ಗೆ ಸಾರ್ವಜನಿಕರಿಗೆ ತೊಂದರೆ ಈಡಾಗಿದ್ದು ಯಾವುದೇ ಅಧಿಕಾರಿಗಳು ಹಾಗೂ ಪಂಚಾಯತ್ ಸಿಬ್ಬಂದಿಗಳೂ ಕೂಡ ಭೇಟಿ ನೀಡದೆ ಜನಪ್ರತಿನಿಧಿಯು ಕೂಡ ಭೇಟಿ ನೀಡದೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಸದ್ಯ ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ಸಂಪರ್ಕ ರಸ್ತೆಯಲ್ಲಿ ಬಿದ್ದಿರುವ ಮರವನ್ನ ತೆರವುಗೊಳಿಸಬೇಕಾಗಿ ಈ ಮೂಲಕ ಮನವಿ ಮಾಡಲಾಗಿದೆ



















