ಗುಜರಾತ್: ಅತ್ಯಾಚಾರಿಗಳಿಗೆ ಜೈಲು ಮುಕ್ತಿ ಇಲ್ಲ- ಸುಪ್ರೀಂ ಕೋರ್ಟ್
ಬಿಲ್ಕಿಸ್ ಬಾನು ಅತ್ಯಾಚಾರಕ್ಕೆ ಶಿಕ್ಷೆಗೆ ಒಳಗಾದವರನ್ನು ಬಿಜೆಪಿಯು ತಾನೇ ಬಿಡಿಸಿ ಸ್ವಾಗತ ಕಾರ್ಯಕ್ರಮ ಕೂಡ ನಡೆಸಿತ್ತು. ಸುಪ್ರೀಂ ಕೋರ್ಟು ಅವರನ್ನು ಮತ್ತೆ ಜೈಲಿಗೆ ಹೋಗಿ ಎಂದು ಬಿಜೆಪಿ ಮುಖಕ್ಕೆ ಮಂಗಳಾರತಿ ಮಾಡಿದೆ. ನ್ಯಾಯಾಂಗದ ಮೇಲಿನ ನಂಬಿಕೆ ಉಳಿಯುವಂತೆ ಮಾಡಿದೆ.
ಬಿಲ್ಕಿಸ್ ಒಂದು ಪ್ರದೇಶ; ಗುಂಪು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಆ ಹೆಸರಿನಿಂದಲೆ ಗುರುತಿಸಲಾಗಿದೆ. ಆಕೆಯ ಅತ್ಯಾಚಾರಕ್ಕೆ ಶಿಕ್ಷೆಗೊಳಗಾದ 11 ಜನರ ಬಿಡುಗಡೆ ಆಗಿತ್ತು. ಅದಕ್ಕೆ ಕಾನೂನು ನಿಯಮ ಅನುಸರಿಸಲಾಗಿದೆಯಂತೆ. ಆದರೆ ಗುಜರಾತಿನಲ್ಲಿ ಚುನಾವಣೆ ನಡೆಯುವ ಕಾಲದಲ್ಲೇ ಈ ಖದೀಮರ ಬಿಡುಗಡೆ ಯಾಕೆ ಆಗಿತ್ತು?
ಒಬ್ಬ ಬಿಜೆಪಿ ಶಾಸಕರಂತೂ ಅತ್ಯಾಚಾರಿಗಳಲ್ಲಿ ಹೆಚ್ಚಿನವರು ಸಂಸ್ಕಾರವಂತ ಬ್ರಾಹ್ಮಣರು ಎಂದು ಅಪ್ಪಣೆ ಕೊಡಿಸಿದ್ದರು.
ಗುಜರಾತ್ ಚುನಾವಣೆಗೆ ಬಿಜೆಪಿಯು ಎಷ್ಟು ಜನರನ್ನು ಶುದ್ಧೀಕರಣಗೊಳಿಸಿ ತಯಾರು ಮಾಡಿತ್ತು ಎಂಬುದು ತಿಳಿಯಬೇಕಾದ ಸಂಗತಿ.
ಬಿಲ್ಕಿಸ್ ಬಾನೊ ಕುಟುಂಬದ 14 ಜನರನ್ನು ಕೊಂದು ಆಕೆಯ ಮೇಲೆ 2002ರ ಮಾರ್ಚ್‍ನಲ್ಲಿ ಗುಂಪು ಅತ್ಯಾಚಾರ ನಡೆಸಲಾಗಿತ್ತು. ಆಕೆಯ ಮನೆಯನ್ನು ಎರಡು ಹಿಂದೂ ಕುಟುಂಬಗಳು ಹಂಚಿಕೊಂಡಿವೆ.ಅತ್ಯಾಚಾರಿಗಳ ಬಿಡುಗಡೆಗೆ ಹಬ್ಬ ಆಚರಿಸಿದ್ದರು. ಲೋಕ ಸಭೆ ಚುನಾವಣೆಗೆ ಮತ್ತೆ ಯಾವ ಅಪರಾಧಿಗಳ ಶುದ್ಧಿ ಇದೆ?.