Home Blog Left SidebarPage 211

ಬ್ರಹ್ಮಾವರದಲ್ಲಿ ಭಾರೀ ಮಳೆಗೆ ಮನೆ ಕುಸಿತ

ಬ್ರಹ್ಮಾವರದಲ್ಲಿ ಕಳೆದ ಕೆಲವು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಬ್ರಹ್ಮಾವರ ರಥ ಬೀದಿಯಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಬಳಿ ಇರುವ ಮನೆಯೊಂದು ಕುಸಿದು ಬಿದ್ದಿದೆ. ಗೋಪಾಲ ಪೂಜಾರಿ ಎನ್ನುವವರ ಮನೆಯು ಮಳೆಗೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ ಮೂರ್ತಿ ಕಂದಾಯ ನೀರೀಕ್ಷಕ ಲಕ್ಷ್ಮೀ

ಜೈನ ಮುನಿಯ ಹತ್ಯೆ ಪ್ರಕರಣ : ಕಡಬದಲ್ಲಿ ಜೈನ ಸಮುದಾಯದವರಿಂದ ಪ್ರತಿಭಟನೆ

ಹಿರೇಕೋಡಿ ನಂದಿ ಪರ್ವತ ಆಶ್ರಮದ ಆಚಾರ್ಯ 108 ಶ್ರೀ ಕಾಮಕುಮಾರ ನಂದಿ ಮುನಿಶ್ರೀ ಮಹಾರಾಜರ ಹತ್ಯೆಯನ್ನು ಖಂಡಿಸಿ, ಘಟನೆಯ ಸಮಗ್ರ ತನಿಖೆಗಾಗಿ ಮತ್ತು ಮುಂದಿನ ದಿನಗಳಲ್ಲಿ ಜೈನ ಮುನಿಗಳಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವಂತೆ ಆಗ್ರಹಿಸಿ ಕಡಬ ತಾಲೂಕಿನ ಜೈನ ಸಮಾಜ ಬಾಂಧವರು ಕಡಬ ತಾಲೂಕು ಆಡಳಿತ ಸೌಧದ ಮುಂದೆ ಮೌನ ಪ್ರತಿಭಟನೆ ನಡೆಸಿದರು. ಕಡಬದ ಸಿ.ಎ.ಬ್ಯಾಂಕ್ ವಠಾರದಿಂದ ಕಡಬದ ಮುಖ್ಯರಸ್ತೆಯಲ್ಲಿ ಮೌನ ಮೆರವಣಿಗೆಯ ಮೂಲಕ ಸಾಗಿದ ಪ್ರತಿಭಟನಾಕಾರರು ಕಡಬ ತಾಲೂಕು ಆಡಳಿತ

ಹಲಸು-ವಿಧ್ಯಮಯ ಹಣ್ಣುಗಳ ಮಹಾಮೇಳ “ಸಮೃದ್ಧಿ”ಗೆ ವಿದ್ಯಾಗಿರಿ ಸಜ್ಜು

ಮೂಡುಬಿದಿರೆ: ಕೃಷಿ ಋಷಿ ಡಾ.ಎಲ್.ಸಿ.ಸೋನ್ಸ್ ಸ್ಮರಣಾರ್ಥ ನಾಳೆಯಿಂದ ಮೂರು ದಿನಗಳ ಕಾಲ ನಡೆಯುವ ಹಲಸು-ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ “ಸಮೃದ್ಧಿ”ಗೆ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಸಭಾಭವನವು ಸಿಂಗರಿಸಿಕೊಂಡು ಸಜ್ಜಾಗಿದೆ. ಹಲಸು ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿವತಿಯಿಂದ ಹಿರಿಯ ಕೃಷಿ ತಜ್ಞ ಡಾ| ಎಲ್ ಸಿ ಸೋನ್ಸ್ ಸ್ಮರಣಾರ್ಥ “ಸಮೃದ್ಧಿ”ಹಲಸು

ಜುಲೈ 16ರಂದು “ಪುಣ್ಯ ಕ್ಷೇತ್ರ ಬೀಬಿಲಚ್ಚಿಲ್” ಭಕ್ತಿ ಗೀತೆ ಬಿಡುಗಡೆ

ಹಚ್ಚ ಹಸಿರಿನಲ್ಲಿ ಕಂಗೊಳಿಸುತ್ತಿರುವ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಅದ್ಯಪಾಡಿಯ ಬೀಬಿಲಚ್ಚಿಲ್ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ ಜುಲೈ ೧೬ರಂದು “ಪುಣ್ಯ ಕ್ಷೇತ್ರ ಬೀಬಿಲಚ್ಚಿಲ್” ಎಂಬ ಭಕ್ತಿ ಗೀತೆಯು ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳ್ಳಲಿದೆ. ಈ ಬಿಡುಗಡೆಯ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲ್‌ನ ಶ್ರೀ ಲಕ್ಮೀನಾರಾಯಣ ಅಸ್ರಣ್ಣ, ಶ್ರೀಮತಿ ಸೌಮ್ಯ ಭಟ್ ಕಟೀಲ್, ನಂದಗೋಕುಲ ಗಾಣದ ಕೊಟ್ಯದಪ್ರಶಾಂತ್ ಪೂಜಾರಿ,ನೋಟರಿ ವಕೀಲರಾದ

“ಸರ್ಕಸ್” ತುಳು ಚಿತ್ರ ಸಕ್ಸಸ್ ಮೀಟ್

ಮಂಗಳೂರು: “ಸಿನಿಮಾ ಗೆದ್ದಿರುವುದು ಒಬ್ಬನಿಂದಲ್ಲ. ನನ್ನ ಇಡೀ ತಂಡ ಇದಕ್ಕಾಗಿ ರಾತ್ರಿ ಹಗಲು ಶ್ರಮವಹಿಸಿ ದುಡಿದಿದೆ. ಹೆಚ್ಚಿನವರು ಭಾಷೆಯ ಮೇಲೆ ಪ್ರೀತಿಯಿಟ್ಟು ತುಳು ಸಿನಿಮಾ ಮಾಡುತ್ತಾರೆ, ಆದರೆ ಬಿಡುಗಡೆ ವೇಳೆ ಅವಸರ ಮಾಡುತ್ತಾರೆ. ಇದರಿಂದ ಒಳ್ಳೆಯ ಸಿನಿಮಾಗಳು ಕೂಡ ಸೋಲುತ್ತಿರುವುದು ವಿಷಾದದ ಸಂಗತಿ. ಆದ್ದರಿಂದ ಸಿನಿಮಾ ಬಿಡುಗಡೆ ವೇಳೆ ಪೈಪ್ರೋಟಿ ಬೇಡ”. “ನನ್ನ ಜೀವನದ ಪ್ರತಿಯೊಂದು ಘಟ್ಟದಲ್ಲೂ ಪತ್ರಕರ್ತ ಮಿತ್ರರು ನನ್ನ ಜೊತೆ ನಿಂತು

ಉಚಿತ ಆರೋಗ್ಯ ಯೋಗಕ್ಷೇಮ ಕಾರ್ಯಕ್ರಮ, ಉಚಿತ ದಂತ ಚಿಕಿತ್ಸಾ ಹಾಗೂ ಮಾಹಿತಿ ಶಿಬಿರ

ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ , ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠ ಉಪ್ಪಳ, ಜುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಒಂಕಾಲಜಿ, ಸಮುದಾಯ ದಂತ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದಲ್ಲಿ ಕೊಂಡೆವೂರು ಮಠದ ವಿಂಶತಿ ಕಾರ್ಯಕ್ರಮದ ಅಂಗವಾಗಿ ಮಹಿಳೆಯರ ಉಚಿತ ಆರೋಗ್ಯ ಯೋಗಕ್ಷೇಮ ಕಾರ್ಯಕ್ರಮ ಮತ್ತು ಉಚಿತ ದಂತ ಚಿಕಿತ್ಸಾ ಶಿಬಿರ ಹಾಗೂ

ಪುತ್ತೂರು : ಮೋರಿ ಕಾಮಗಾರಿಯಿಂದ ರಸ್ತೆಯಲ್ಲಿ ಅಪಾಯಕಾರಿ ಹೊಂಡ

ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸಂಪ್ಯ ಅಕ್ಷಯ ಕಾಲೇಜು ಬಳಿ ಹೊಸ ಮೋರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಿರ್ಮಾಣದ ವೇಳೆ ರಸ್ತೆ ಮಧ್ಯೆ ಅಪಾಯಕಾರಿ ಹೊಂಡ ನಿರ್ಮಾಣವಾಗಿದೆ. ಹೊಂಡ ಮುಚ್ಚುವಂತೆ ಹೆದ್ದಾರಿ ಇಲಾಖೆಗೆ ಸಾರ್ವಜನಿಕರು ಮನವಿ ಮಾಡಿದ್ದರೂ ಹೊಂಡ ಮುಚ್ಚಿರಲಿಲ್ಲ. ಈ ನಡುವೆ ವಾಹನಗಳು ಅಪಘಾತ ಉಂಟಾಗುವ ಸಂಭವ ಇರುವ ಕಾರಣ ಸಂಪ್ಯ ಬೂತ್ ಅಧ್ಯಕ್ಷರಾದ ಶಾಫಿ ಎಂಬವರು ಶಾಸಕರಿಗೆ ದೂರು ಸಲ್ಲಿಸಿದ್ದರು. ಶಾಸಕರ ಸೂಚನೆಯಂತೆ

ಹೋಟೆಲ್ ಡಿಂಕಿ ಡೈನ್‍ನಲ್ಲಿ ಜುಲೈ 17ರಂದು ಆಟಿ ಅಮಾವಾಸ್ಯೆಯ ಉಚಿತ ಕಷಾಯ ವಿತರಣೆ

ಹೋಟೆಲ್ ಡಿಂಕಿ ಡೈನ್‍ನ ಸಹಕಾರದಲ್ಲಿ ತುಳುವ ಬೊಳ್ಳಿ ಪ್ರತಿಷ್ಠಾನದ ವತಿಯಿಂದ ಆಟಿದ ಅಮಾವಾಸ್ಯೆಯ ಪ್ರಯುಕ್ತ ಉಚಿತ ಹಾಲೆ ಮರದ ಕೆತ್ತೆಯ ಕಷಾಯ ಮತ್ತು ಮೆಂತೆ ಗಂಜಿಯ ವಿತರಣಾ ಕಾರ್ಯಕ್ರಮ ಜುಲೈ 17ರಂದು ಹಮ್ಮಿಕೊಳ್ಳಲಾಗಿದೆ. ನಗರದ ಕದ್ರಿಯಲ್ಲಿರುವ ಡಿಂಕಿ ಡೈನ್ ಹೋಟೆಲ್‍ನ ಆವರಣದಲ್ಲಿ ಬೆಳಗ್ಗೆ 6 ಗಂಟೆಗೆ ವಿತರಿಸಲಿದ್ದಾರೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತುಳು ವಾಗ್ಮಿ ದಯಾನಂದ ಕತ್ತಲ್‍ಸಾರ್ ತಿಳಿಸಿದ್ದಾರೆ

ಮೂಡುಬಿದಿರೆ : ಲೋಕಾಯುಕ್ತ ಜನಸಂಪರ್ಕ ಸಭೆ – ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಮೂಡುಬಿದಿರೆ ಆಡಳಿತ ಸೌಧದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತದಿಂದ ಜನ ಸಂಪರ್ಕ ಸಭೆ ನಡೆಯಿತು. ಎಸ್‍ಪಿ ಸೈಮನ್ ಸಿ.ಎ ಹಾಗೂ ಅಧಿಕಾರಗಳ ತಂಡವು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 10 ಅಹವಾಲುಗಳನ್ನು ಸ್ವೀಕರಿಸಿದರು. ಸರ್ವೆ(2), ಕಂದಾಯ (5) ಪಂಚಾಯತ್ (1) ಪುರಸಭೆ (1) ಕೇಂದ್ರ ಲೋಕಾಯುಕ್ತ(1) ಸಹಿತ ಒಟ್ಟು 10 ದೂರುಗಳು ಬಂದಿದ್ದು ಈ ದೂರುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ದೂರುಗಳು

ಕಡಬದಲ್ಲಿ ಪ್ರಕೃತಿ ವಿಕೋಪದ ಮುನ್ನೆಚ್ಚರಿಕೆ ಕ್ರಮದ ಕುರಿತು ಸಭೆ

ನೆರೆಪೀಡಿತ ಪ್ರದೇಶಗಳನ್ನು ಗುರುತಿಸಿಕೊಂಡು ಅವುಗಳಲ್ಲಿ ಸಮಸ್ಯೆಗಳು ಉದ್ಬವವಾಗದಂತೆ ಮುನ್ನೆಚ್ಚರಿಕೆವಹಿಸುವ ಕಾರ್ಯ ಗ್ರಾಮ ಮಟ್ಟದಿಂದಲೇ ಆಗಬೇಕು ಎಂದು ದ.ಕ. ಜಿಲ್ಲಾಧಿಕಾರಿ ಮುಲೈ ಮುಹಿಲನ್ ಹೇಳಿದರು. ಅವರು ಕಡಬ ತಾಲೂಕು ಸೌಧದಲ್ಲಿ ಪ್ರಕೃತಿವಿಕೋಪ ಮುನ್ನೆಚ್ಚರಿಕೆ ಕ್ರಮವಹಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಗ್ರಾಮ ಮಟ್ಟದಲ್ಲಿಯೇ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಎಲ್ಲೆಲ್ಲಿ ಪ್ರಕೃತಿವಿಕೋಪಗಳು ನಡೆದ ಪ್ರದೇಶಗಳನ್ನು ಗುರುತಿಸಿ