Home Blog Left SidebarPage 230

ಯಕ್ಷಸುಮ ತೋನ್ಸೆ ಜಯಂತ್ ಕುಮಾರ್ ಸ್ವರ್ಗಸ್ಥ

ಉಡುಪಿ : ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದ ಪ್ರತಿಭಾನ್ವಿತ ಕಲಾವಿದರಾಗಿ ಸಾಕಷ್ಟು ಸಾಧನೆಗಳೊಂದಿಗೆ ಪ್ರಸಿದ್ದರಾಗಿದ್ದ, ತೋನ್ಸೆ ಜಯಂತ್ ಕುಮಾರ್ (77) ಇಂದು ಬೆಳಗಿನ ಜಾವ ಸ್ವರ್ಗಸ್ಥರಾಗಿದ್ದಾರೆ. ಇವರು ಯಕ್ಷಗಾನದ ಸಾಂಪ್ರದಾಯಿಕ ಮೌಲ್ಯಗಳ ಉಳಿಯುವಿಕೆಗೆ ಸಮಗ್ರವಾಗಿ ಶ್ರಮಿಸಿದ್ದು ಯಕ್ಷಗುರುಗಣ್ಯರಾಗಿ ಗೌರವಾಭಿಮಾನಗಳಿಂದ ಗುರುತಿಸಿಕೊಂಡಿದ್ದರು. ರಾಷ್ಟ್ರ

ಸಜೀಪಮೂಡ : ಇಂದಿರಾ ಸೇವಾ ಕೇಂದ್ರದ ಉದ್ಘಾಟನೆ

ಸಜೀಪಮೂಡ ಗ್ರಾಮದ ಬೊಳ್ಳಾಯಿ ಜಂಕ್ಷನ್ ಹಾಗೂ ಸುಭಾಶ್‍ನಗರದ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದ ಆವರಣದಲ್ಲಿ ಸಜೀಪಮೂಡ ವಲಯ ಕಾಂಗ್ರೆಸ್ ವತಿಯಿಂದ ನಿರ್ವಹಿಸಲ್ಪಡುವ ಇಂದಿರಾ ಸೇವಾ ಕೇಂದ್ರವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸರ್ಕಾರದ ಎಲ್ಲಾ ಸೌಲಭ್ಯಗಳು ಜನರಿಗೆ ಸುಲಭವಾಗಿ ದೊರಕುವಂತಾಗಲೂ ಪಕ್ಷದ ವತಿಯಿಂದ ಇಂದಿರಾ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಭೇಟಿ

ಭಾರತ ತಂಡದ ಕ್ರಿಕೆಟಿಗ ಕೆ.ಎಲ್.ರಾಹುಲ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ನಂತರ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ರಾಹುಲ್‌ಗೆ ಹೆಗ್ಗಡೆಯವರು ಶಾಲು ಹೊದಿಸಿ ಬೆಳ್ಳಿಯ ನಾಣ್ಯ, ಗೋವಿನ ಕಂಚಿನ ಪ್ರತಿಮೆಯನ್ನು ನೀಡಿ ಗೌರವಿಸಿದರು. ಈ ವೇಳೆ ಹೆಗ್ಗಡೆ ಕುಟುಂಬದವರು ಜತೆಯಲ್ಲಿದ್ದರು. ಐಪಿಎಲ್ ವೇಳೆ ಗಾಯಗೊಂಡಿದ್ದ ಕೆಎಲ್ ರಾಹುಲ್ ಬಳಿಕ ಲಂಡನ್ ನಲ್ಲಿ

ಕೊಲ್ಲಪದವು: ಗೋಫಾರ್ಮ್ ಕಟ್ಟಡ ನಿರ್ಮಾಣಕ್ಕೆ ಕಾನೂನು ಬದ್ಧ ಪರವಾನಿಗೆ : ರದ್ದುಗೊಳಿಸಲು ಅವಕಾಶ ಇಲ್ಲ: ರಾಮಕೃಷ್ಣ ಮೂಡಂಬೈಲು

ವಿಟ್ಲ: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಲಪದವು ಕೊಡಂಚಡ್ಕ ಎಂಬಲ್ಲಿ ನಿರ್ಮಾಣವಾಗುತ್ತಿರುವ ಗೋಫಾರ್ಮ್ ಕಟ್ಟಡಕ್ಕೆ ಪುಣಚ ಗ್ರಾಮ ಪಂಚಾಯತ್ ಕಾನೂನು ಬದ್ಧ ಪರವಾನಿಗೆಯನ್ನು ನೀಡಲಾಗಿದೆ. ಇದನ್ನು ರದ್ದುಗೊಳಿಸಲು ಅವಕಾಶ ಇಲ್ಲ ಎಂದು ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ತಿಳಿಸಿದ್ದಾರೆ. ಅವರು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಪರವಾನಿಗೆ ನೀಡಿದ ವಿಚಾರವನ್ನು ಸಮರ್ಥಿಸಿ ಕೊಂಡರು. ಇದು ಹಸೈನಾರ್ ಮಾದುಮೂಲೆ ಎಂಬವರಿಗೆ

ಯುವಕರಿಂದ ಸಮಾಜ ಕಟ್ಟುವ ಕೆಲಸವಾಗಲಿ: ಸ್ಪೀಕರ್ ಯು.ಟಿ. ಖಾದರ್

ಪುತ್ತೂರು: ಯುವಕರು ಸಮಾಜ ಕಟ್ಟಬೇಕು ಹೊರತು ಬಿಕ್ಕಟ್ಟು ಸೃಷ್ಠಿಸಬಾರದು. ಅದೇ ರೀತಿ ಸಮಸ್ಯೆಯನ್ನು ಬಗೆಹರಿಸಬೇಕು ಹೊರತು ಸಮಸ್ಯೆಯನ್ನು ಸೃಷ್ಠಿಸುವ ಕೆಲಸ ಮಾಡಬಾರದು ಎಂದು ನೂತನ ಸ್ಪೀಕರ್ ಯು.ಟಿ. ಖಾದರ್ ಹೇಳಿದರು. ಅವರು ಪುತ್ತೂರಿನ ಮುಸ್ಲಿಂ ಸಮುದಾಯ ಒಕ್ಕೂಟದ ವತಿಯಿಂದ ಪುರಭವನದಲ್ಲಿ ನೂತನ ಸ್ಪೀಕರ್ ಯು.ಟಿ. ಖಾದರ್ ಮತ್ತು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಯುವ ಸಮುದಾಯ ಉತ್ತಮ ನಡೆಯೊಂದಿಗೆ ಮುಂದುವರಿದಲ್ಲಿ

ಮೂಡುಬಿದಿರೆಯಲ್ಲಿ ” ರೈತ-ವಿಜ್ಞಾನಿ” ಸಂವಾದ

ಭಾರತೀಯ ಕಿಸಾನ್ ಸಂಘ (ರಿ.) ಮೂಡುಬಿದಿರೆ ತಾಲೂಕು ಮತ್ತು ತೋಟಗಾರಿಕಾ ಇಲಾಖೆ ಇವುಗಳ  ಜಂಟಿ ಆಶ್ರಯದಲ್ಲಿ ತೋಟಗಾರಿಕಾ ಕೃಷಿಯಲ್ಲಿ ಮಳೆಗಾಲದ ಸಮಸ್ಯೆಗಳ ಕುರಿತು “ರೈತ – ವಿಜ್ಞಾನಿ ಸಂವಾದ ಕಾರ್ಯಕ್ರಮವು ಶ್ಯಾಮಿಲಿ ಎನ್ಕ್ಲೈವ್ ಸಭಾಂಗಣದಲ್ಲಿ ನಡೆಯಿತು. ಭಾರತೀಯ ಕಿಸಾನ್ ಸಂಘ(ರಿ) ಕರ್ನಾಟಕ ದಕ್ಷಿಣ ಪ್ರಾಂತದ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ವಿಶೇಷ ಆಹ್ವಾನಿತರಾಗಿ ಶಾಸಕ ಉಮಾನಾಥ

‘ಸಾಧನೆಗೆ ಕಲಿಕೆಯ ಜೊತೆಗೆ ಕೌಶಲ್ಯವು ಮುಖ್ಯ’

ಉಜಿರೆ: ವಿದ್ಯಾರ್ಥಿಗಳಿಗೆ ಸಾಧನೆಯ ಹಾದಿಯಲ್ಲಿ, ಕಲಿಕೆಯ ಜೊತೆ ಕೌಶಲ್ಯವೂ ಮುಖ್ಯವಾಗಿರುತ್ತದೆ, ಯಶಸ್ಸಿಗೆ ಓದು ಮಾತ್ರವಲ್ಲದೆ, ಬೇರೆ ಚಟುವಟಿಕೆಗಳೂ ಅಗತ್ಯ. ವಿವಿಧ ಸ್ಪರ್ಧೆಗಳಲ್ಲಿ ಭಾಗವಿಸುವುಕೆಯಿಂದಾಗಿ ಕೌಶಲ್ಯ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಐ.ಟಿ ಮತ್ತು ವಿದ್ಯಾರ್ಥಿ ನಿಲಯದ ಸಿ.ಇ.ಒ ಪೂರಣ್ ವರ್ಮ ನುಡಿದರು. ಶ್ರೀ ಧ.ಮಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಬಿ.ವೋಕ್ ವಿಭಾಗವು ಆಯೋಜಿಸಿದ್ದ ‘ಬಿ.ವೋಕ್

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ : ಸಂಸದ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಬಳ್ಳಾರಿಯಲ್ಲಿ ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷೆಯನ್ನು ಪ್ರಕಟಿಸಿದ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಸೋಲಿನ ಕಾರಣಗಳ ಕುರಿತಂತೆ ಪಕ್ಷದ ಹಿರಿಯರಿಗೆ ಮಾಹಿತಿ

ಬ್ರಹ್ಮಾವರ : ಸರ್ವರ್ ಸಮಸ್ಯೆಯಿಂದ ಪಡಿತರಕ್ಕೆ ಕಾದುಕುಳಿತ ಜನತೆ

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಪಡಿತರ ವಿತರಣಾ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಿಸಲಾಗುತ್ತಿಲ್ಲ. ಕಳೆದ 4 ದಿನದಿಂದ ಪಡಿತರದಾರರು ಕಾದು ಕಾದು ಸುಸ್ತಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ 8 ಪಡಿತರ ವಿತರಣಾ ಕೇಂದ್ರದಲ್ಲಿ 8000 ಮಂದಿ ಪಡಿತರ ಕಾರ್ಡು ಹೊಂದಿದವರು ಇದ್ದಾರೆ. ಇಲ್ಲಿನ ಬಹತೇಕ ಕೇಂದ್ರದಲ್ಲಿ ಕಳೆದ 5 ದಿನದಿಂದ ಪಡಿತರ ಸಿಗದೆ ಜನರು ಕಾದು ಸುಸ್ತಾಗಿದ್ದಾರೆ. 70 ವರ್ಷ

ಪುತ್ತೂರು : ಕಟ್ಟಡ ಕಾಮಗಾರಿ ಮುಗಿದರೂ ಕಾಲೇಜು ಪ್ರಾರಂಭ ಕನಸು ಇನ್ನೂ ದೂರ

ಪುತ್ತೂರು ತಾಲೂಕಿನ ಕೊಯಿಲದಲ್ಲಿ ನಿರ್ಮಾಣವಾದ ಪಶು ವೈದ್ಯಕೀಯ ಕಾಲೇಜಿಗೆ 2012-13ನೇ ಸಾಲಿನಲ್ಲಿ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಬಜೆಟ್ ನಲ್ಲಿ ಪಶು ವೈದ್ಯಕೀಯ ಕಾಲೇಜು ಘೋಷಿಸಿ 145 ಕೋಟಿ ರೂ. ಮೀಸಲಿಟ್ಟಿದ್ದರು. ಬಳಿಕ ಸದಾನಂದ ಗೌಡ ಕನಸಿನ ಕೂಸಿಗೆ 2016 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಶಿಲಾನ್ಯಾಸ ನೆರವೇರಿಸಿದ್ದರು. ಆದ್ರೆ ಅಂದಿನಿಂದ ಇಂದಿನ ತನಕವೂ ಕಾಮಗಾರಿ ಕುಂಟುತ್ತಾ ಸಾಗಿ ಒಂದು ಹಂತಕ್ಕೆ ಬಂದು ನಿಂತಿದೆ.