Home Blog Left SidebarPage 231

ಮಂಗಳೂರು – ಮೇರಿಹಿಲ್ , ಡಿವೈಡರಿಗೆ ಬೈಕ್ ಗುದ್ದಿ ಬಾಲಕರಿಬ್ಬರು ಬಲಿ

ಮಂಗಳೂರು: ನಗರದ ಮೇರಿಹಿಲ್ ವಿಕಾಸ್ ಕಾಲೇಜಿನ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತರನ್ನು ಸ್ಥಳೀಯ ನಿವಾಸಿಗಳಾದ ಪವನ್ ( 16) ಹಾಗೂ ಚಿರಾಗ್ ( 15) ಎಂದು ಗುರುತಿಸಲಾಗಿದೆ. ಅಪಘಾತದಿಂದ ಒಬ್ಬ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ. ಗಾಯಗೊಂಡ ಇನ್ನೊಬ್ಬ ಬಾಲಕನನ್ನು ರಾಜಲಕ್ಷ್ಮೀ ಬಸ್ಸಿನಲ್ಲಿ

ಸುರೇಶ್‌ ಪಳ್ಳಿ, ಭರತ್‌ರಾಜ್‌ ಸನಿಲ್‌ ಗೆ ‘ಬ್ರ‍್ಯಾಂಡ್ ಮಂಗಳೂರು ಪ್ರಶಸ್ತಿ’

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದತೆ ಪ್ರತಿ ಬಿಂಬಿಸುವ ವರದಿಗೆ ನೀಡಲಾಗುವ ಬ್ರ‍್ಯಾಂಡ್ ಮಂಗಳೂರು ಪ್ರಶಸ್ತಿಗೆ ಪತ್ರಿಕಾ ಮಾಧ್ಯಮ ವಿಭಾಗದಲ್ಲಿ ಹೊಸದಿಗಂತ ವರದಿಗಾರ ಸುರೇಶ್‌ ಡಿ.ಪಳ್ಳಿ ಮತ್ತು ದೃಶ್ಯ ಮಾಧ್ಯಮ ವಿಭಾಗದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿಗಾರ ಭರತ್‌ರಾಜ್‌ ಕೆ. ಸನಿಲ್‌ ಆಯ್ಕೆಯಾಗಿದ್ದಾರೆ.ಹೊಸದಿಗಂತ ಪತ್ರಿಕೆಯಲ್ಲಿ 2022ರ ಜೂ.13ರಂದು ಪ್ರಕಟಗೊಂಡ “ಮತ್ತೆ ಒಂದಾಗಲಿ ಒಡೆದ

ಬಿಪಿಎಲ್ ಪಡಿತರ ಕಾರ್ಡ್‍ದಾರರ ಖಾತೆಗೆ 170 ರೂ !!

ಅನ್ನಭಾಗ್ಯ ಯೋಜನೆಯಡಿ ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಹೆಚ್ಚುವರಿ ಅಕ್ಕಿ ಹೊಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 5 ಕೆ.ಜಿ ಅಕ್ಕಿಗೆ ಬದಲಾಗಿ ಹಣವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ 5.ಕೆ.ಜಿ ಅಕ್ಕಿಯನ್ನು ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದ್ದು, ಉಳಿದ ಹೆಚ್ಚುವರಿ 5 ಕೆ.ಜಿ ಅಕ್ಕಿಗೆ 170 ರೂ. ನೀಡಲು ತೀರ್ಮಾನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ-ಆರೋಪಿಗಳಿಗೆ ಜೂನ್30ರ ಒಳಗೆ ಶರಣಾಗಲು ಗಡುವು

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‍ಐಎ ಅಧಿಕಾರಿಗಳು ನಾಪತ್ತೆಯಾಗಿರುವ ಆರೋಪಿಗಳಿಗೆ ತೀವ್ರ ಶೋಧ ನಡೆಸುತ್ತಿದ್ದಾರೆ. ಸುಳ್ಯ ನಗರದ ಬೀದಿಗಳಲ್ಲಿ ಈ ಬಗ್ಗೆ ಧ್ವನಿವರ್ಧಕ ಬಳಸಿ ಪ್ರಕಟಣೆ ಹೊರಡಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಜೂ. 30 ರೊಳಗೆ ಶರಣಾಗದೇ ಇದ್ದಲ್ಲಿ ಅವರ ಮನೆಯನ್ನು ಮುಟ್ಟುಗೋಲು ಮಾಡಲಾಗುವುದೆಂದು ಅನೌನ್ಸ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಎನ್‍ಐಎ ನ್ಯಾಯಾಲಯದ

ಬೆಳ್ತಂಗಡಿ : ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡುವಂತೆ ಮನವಿ

ಬೆಳ್ತಂಗಡಿ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಬೆಳ್ತಂಗಡಿ ತಾಲೂಕಿನ ಸುಲ್ಕೇರಿಮೊಗ್ರು, ಗ್ರಾಮದ ಬಲ್ಯ ಮಾಳಿಗೆಬೈಲು ಸೇರಿದಂತೆ ಬೆಳ್ತಂಗಡಿ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡುವಂತೆ ಅರಣ್ಯ ಜೈವಿಕ ಪರಿಸರ ಸಚಿವರಾದ ಈಶ್ವರ್ ಖಂಡ್ರೆ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನವಿ ಸಲ್ಲಿಸಿದರು. ಕುದುರೆಮುಖ ರಾಷ್ಟ್ರೀಯ

ಸುಳ್ಯ : ಸ್ವಯಂ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ಬಂದೂಕಿನಿಂದ ಸ್ವಯಂ ಗುಂಡು ಹೊಡೆದುಕೊಂಡು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುಳ್ಯ ತಾಲೂಕಿನ ಉಬರಡ್ಕದಲ್ಲಿ ನಡೆದಿದೆ. ಮೃತ ಯುವಕನನ್ನು ಅರಂತೋಡು ಗ್ರಾಮದ ರವಿ ಎಂದು ಗುರುತಿಸಲಾಗಿದೆ. ಈತ ಉಬರಡ್ಕ ಗ್ರಾಮದ ಬೆಳ್ರಂಪಾಡಿ ಎಂಬಲ್ಲಿನ ಗುಡ್ಡದಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ.ಬೆಳ್ರಂಪಾಡಿಯ ಮನೆಯೊಂದರಲ್ಲಿ ರವಿ ಕೆಲಸಮಯದಿಂದ ಕೆಲಸಕ್ಕಿದ್ದು ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ. ಕಳೆದ ರಾತ್ರಿ ಕೋವಿ

ಉಡುಪಿಯ ಇನ್ಸ್ ಪಾಯರ್ ನೀಟ್ ಅಕಾಡೆಮಿಯಲ್ಲಿ ಜೂಲೈ 1 ರಿಂದ ತರಗತಿಗಳು ಪ್ರಾರಂಭ

ಉಡುಪಿ : ನೀಟ್, ಸಿಇಟಿ ಮತ್ತು ಜೆಇಇ ಕೋರ್ಸ್ಗಳ ಅತ್ಯುತ್ತಮ ತರಬೇತಿಯನ್ನು ನೀಡುವ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಕಾಪೌಂಡ್‌ನಲ್ಲಿರುವ ನೂತನವಾಗಿ ಆರಂಭಗೊಂಡ ‘ಇನ್ಸ್ ಪಾಯರ್ ನೀಟ್ ಅಕಾಡೆಮಿ’ಯಲ್ಲಿ ತರಗತಿಗಳು ಜುಲೈ 01, 2023 ರಂದು ಪ್ರಾರಂಭವಾಗಲಿದೆ. ಇಲ್ಲಿ ನೀಟ್ ದೀರ್ಘಾವಧಿಯ ಕೋರ್ಸ್ಗಳು ನೀಟ್, ಸಿಇಟಿ, ಜೆಇಇ ನಿಯಮಿತ ವಾರಾಂತ್ಯದ ಬ್ಯಾಚ್ ಲಭ್ಯವಿದೆ. ಕರ್ನಾಟಕ ಮತ್ತು ಹೊಸದಿಲ್ಲಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ 16 ವರ್ಷಗಳ ಕಾಲ ಬೋಧನಾ

ಮಂಜೇಶ್ವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿರುವುದರಿಂದ ವಿದ್ಯಾರ್ಥಿಗಳು, ಪಾದಚಾರಿಗಳು ಭಯದ ವಾತಾವರಣದಲ್ಲಿ ನಡೆದಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲ್ಯಕ್ಷ ವನ್ನು ಖಂಡಿಸಿ ಎಸ್‍ಡಿಪಿಐ ಮಂಜೇಶ್ವರ ಪಂಚಾಯಿತಿ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ ಗ್ರಾಮ ಪಂಚಾಯಿತಿ ಕಚೇರಿಗೆ ಪ್ರತಿಭಟನಾ

ಕಡಬ : 40ಕೆಜಿ ತೂಕದ ಆಡನ್ನೇ ನುಂಗಲು ಯತ್ನಿಸಿದ ಹೆಬ್ಬಾವು

ಕಡಬ ತಾಲೂಕಿನ ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಭಾರೀ ಗಾತ್ರದ ಹೆಬ್ಬಾವೊಂದು ಆಡೊಂದನ್ನು ನುಂಗಲು, ಸುಮಾರು ಒಂದು ತಾಸು ಸೆಣಸಿ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ. ಸ್ಥಳೀಯರಾದ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 40 ಕೆಜಿ ತೂಕದ ಗಂಡು ಆಡು ಹೆಬ್ಬಾವಿನ ಉರುಳಿಗೆ ಸಿಕ್ಕಿ ಉಸಿರುಗಟ್ಟಿ ಪ್ರಾಣ ಬಿಟ್ಟಿದೆ. ಆಡಿನ ತಲೆಯ ಭಾಗವನ್ನು ನುಂಗಿದರೂ ಉಳಿದ ಭಾಗವನ್ನು ನುಂಗಲು ಸಾಧ್ಯವಾಗದೆ ಸೋತು, ಸತ್ತ ಆಡನ್ನು ಸ್ಥಳದಲ್ಲೇ ಬಿಟ್ಟು

ಕಾರ್ಕಳ : ಹೊಂಡಮಯ ರಸ್ತೆಯಿಂದ ನರಕಯಾತನೆ

ಹವಲ್ದಾರ್ ಬೆಟ್ಟು ರಸ್ತೆ ಹೊಂಡಮಯವಾಗಿದ್ದು, ಚರಂಡಿಯಿಲ್ಲದೆ ಮಳೆ ನೀರು ರಸ್ತೆ ಮಧ್ಯೆಯೇ ಹರಿದು ಕೆಸರುಮಯವಾಗಿದೆ. ಸಂಚಾರಕ್ಕೆ ಯೋಗ್ಯವಲ್ಲದ ಈ ರಸ್ತೆಯ ದು:ಸ್ಥಿತಿಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆಯುದ್ದಕ್ಕೂ ಹೊಂಡಗಳು ಮತ್ತು ತುಂಬಿದ ಮಳೆ ನೀರಿನಿಂದ ವಾಹನ ಸಂಚಾರಕ್ಕೆ ತ್ರಾಸದಾಯಕ ಮಾತ್ರವಲ್ಲದೆ ಪಾದಚಾರಿಗಳ ಓಡಾಟಕ್ಕೂ ಕಷ್ಟಕರವಾಗಿದೆ. ಪುರಸಭಾ ವ್ಯಾಪ್ತಿಗೆ ಬರುವ ಈ ರಸ್ತೆ ಗಾಂಧಿ ಮೈದಾನ ಹಾಗೂ ಕಾರ್ಕಳ ಪೇಟೆಯನ್ನು