Home Blog Left SidebarPage 234

ಕೊಡಿಯಾಲ್ ಬೈಲ್‍ : ಭೂ ಕುಸಿತದಿಂದ ಸಂಚಾರಕ್ಕೆ ತೊಡಕು

ಕರಾವಳಿಯಲ್ಲಿ ನಿನ್ನೆ ಸಂಜೆಯಿಂದ ಮಳೆ ಬಿರುಸುಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವೆಡೆ ಹಾನಿ ಸಂಭವಿಸಿದೆ. ಮಂಗಳೂರಿನ ಕೊಡಿಯಾಲ್ ಬೈಲ್‍ನ ಬಿಷಪ್ ಕಂಪೌಂಡ್‍ನ ಮೇಲ್ಬಾಗದ ಗುಡ್ಡ ಕುಸಿದು ಬಿದ್ದಿದೆ.ಗುಡ್ಡ ಕುಸಿತದ ಮೇಲ್ಭಾಗದಲ್ಲಿ ಕೋರ್ಟ್ ಆವರಣ ಮತ್ತು ರಸ್ತೆ ಇದ್ದು ವಾಹನಗಳು ನಿತ್ಯ ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಇದೀಗ ಈ

ಕರಾವಳಿಯ ಸೊಬಗಿನಲ್ಲಿ ರಂಗೇರಿತು “ಕೆಸರ್ಡ್ ಒಂಜಿ ದಿನ”

ಉಡುಪಿ : ಕರಾವಳಿಯ ಮಣ್ಣಿನ ಸೊಬಗು, ಆಚರಣೆಯ ಸೊಗಡು ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಕರಾವಳಿಯಲ್ಲಿ ಮಳೆ ಬಂದರೆ ಸಾಕು ಅನೇಕ ಪದ್ಧತಿಗಳು, ಆಟೋಟ ಸ್ಪರ್ದೆಗಳು ಆರಂಭವಾಗುತ್ತವೆ. ಮಳೆಗಾಲ ಬಂದಾಗ ಕರಾವಾಳಿಯ ಗದ್ದೆಗಳು ತುಂಬಿ ತುಳುಕುತ್ತವೆ, ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಆದರೆ ಇಂದಿನ ಕಂಪ್ಯೂಟರ್ ಯುಗದಲ್ಲಿ ಪಾರಂಪರಿಕವಾಗಿ ಬೆಳೆದು ಬಂದ ಹಳ್ಳಿ ಜನಪದ ಕ್ರೀಡೆಗಳು ಮೂಲೆ ಗುಂಪಾಗುತ್ತಿರುವುದರಿಂದ, ಕೆಸರುಗದ್ದೆ ಜನಪದ ಕ್ರೀಡೆಯನ್ನು ಉಳಿಸುವ

Udupi : ಜೀವ ಜಂತುಗಳು ಕೂಡಾ ಗುರುಗಳಿಂದ ಸಾಯಬಾರದು ; ಚಾತುರ್ಮಾಸ್ಯ ವೃತದ ಮಹತ್ವ

ಉಡುಪಿ : ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಹಾಸನ ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅವರು ನಾಲ್ಕೂರು ಕಜ್ಕೆಯ ಶಾಖಾ ಮಠದಲ್ಲಿ ಜುಲೈ 3ರಿಂದ ಸೆಪ್ಟಂಬರ್ 29ರ ತನಕ 41ನೇ ಚಾತುರ್ಮಾಸ್ಯ ವೃತಾನುಷ್ಠಾನದ ಅಂಗವಾಗಿ ಪುರಪ್ರವೇಶ ಕಾರ್ಯಕ್ರಮ ನಡೆಯಿತು. ಹೆಬ್ರಿ ಶ್ರೀ ವಿಶ್ವಕರ್ಮ ಸಮುದಾಯ ಭವನದಿಂದ ಹೊರಟು ಸಂತೆಕಟ್ಟೆ, ಕೆಂಜೂರು ಮೂಲಕ ಪುರಪ್ರವೇಶ ಮಾಡಿದರು. ಮಹಿಳಾ ಸಂಘದವರಿಂದ

ಸಿಮ್ರಾನ್ ಇನ್ಸ್ಟಿಟ್ಯೂಟ್ ಫ್ಯಾಶನ್ ಡಿಸೈನಿಂಗ್ ಮತ್ತು ಬ್ಯೂಟಿಕ್ ಬ್ಯಾಚ್ 2022-23ರ ಪದವಿ ಸಮಾರಂಭ

ಸಿಮ್ರಾನ್ ಇನ್ಸ್ಟಿಟ್ಯೂಟ್ ಇತ್ತೀಚೆಗೆ 2022-23 ಬ್ಯಾಚಿನ ಪದವಿ ಸಮಾರಂಭವು ನೆರವೇರಿಸಲ್ಪಟ್ಟಿತು. ಕಾರ್ಯಕ್ರಮದ ನಿರೂಪಕ ಐಕ್ಬಾಲ್ ಬಾಳಿಲ ಅವರ ಸ್ವಾಗತದೊಂದಿಗೆ ಸಮಾರಂಭವು ಪ್ರಾರಂಭವಾಯಿತು. ಮುಖ್ಯ ಅತಿಥಿಯಾಗಿ ಮಹಮ್ಮದ್ ನಾಗಮಾನ್ ಲತೀಫ್, ಗೌರವ ಅತಿಥಿಗಳಾಗಿ ವಕೀಲ ಮೋಹನ್ ದಾಸ್ ರೈ ಕೆ. ಗೌರವಾನ್ವಿತ ನ್ಯಾಯವಾದಿ ಮೋಹನ್‌ದಾಸ್, ಅರೆನಾ ಆನಿಮೇಷನ್‌ನ ಕೇಂದ್ರದ ಮುಖ್ಯಸ್ಥೆ ಸಿಲ್ವಿಯಾ ಡೆಸಾ, ಪ್ರಾಂಶುಪಾಲರಾದ ಸಜೀಲಾ ಕೋಲಾ ಉಪಸ್ಥಿತರಿದ್ದರು . ಸಿಮ್ರಾನ್ ಸಂಸ್ಥೆಯ

puttur : ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಗ್ರೌಂಡ್ ತರಬೇತಿ

ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವಂತಹ ಉತ್ತಮ ನಿರ್ಣಯ ಕೈಗೊಂಡಿರುವುದು ಸಂತೋಷದ ವಿಚಾರವಾಗಿದ್ದು,ಇದಕ್ಕಿಂತಹ ಉತ್ತಮ ಬೇರೊಂದಿಲ್ಲ. ಹೀಗೆಂದು ಹೇಳಿದರು ನಿವೃತ್ತ ಏರ್ ವೇಸ್ ಮಾರ್ಷಲ್ ರಮೇಶ್ ಕಾರ್ಣಿಕ್. ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ ವತಿಯಿಂದ ಭಾನುವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಭಾರತೀಯ ಸೇನೆಗೆ ಸೇರುವ ಅಭ್ಯರ್ಥಿಗಳಿಗೆ ಗ್ರೌಂಡ್ ತರಬೇತಿ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸೇನೆಗೆ ಸೇರುವುದರಿಂದ ಅವರ

ಪಿಲಿಕುಳದಲ್ಲಿ ಮತ್ಸ್ಯೋತ್ಸವ

ಬಲೆಗೆ ಬಿದ್ದ ಕೆಜಿಗಟ್ಟಲೆ ತೂಕವಿರುವ ಮೀನು . ಬಲೆಯಿಂದ ಇಳಿಸುತ್ತಿದ್ದಂತೆ ಮೀನುಗಳ ಮಾರಾಟ. ಖರೀದಿಸಿದ ಮೀನು ಮಧ್ಯಾಹ್ನಕ್ಕೆ ಔತಣ. ಹೌದು.. ಈ ದೃಶ್ಯ ಕಂಡುಬಂದದ್ದು ಮಂಗಳೂರಿನ ಪಿಲಿಕುಳ ಮತ್ಸ್ಯೋತ್ಸವದಲ್ಲಿ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಮೀನುಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ಪಿಲಿಕುಳದ ಲೇಕ್ ಗಾರ್ಡನ್ ಕೆರೆಯಲ್ಲಿ ಮತ್ಸ್ಯಬೇಟೆ ನಡೆದು ಅಲ್ಲಿಯೇ ತಾಜಾ ಮೀನುಗಳ ಮಾರಾಟ ಮಾಡಲಾಯಿತು. ರೋಹ್, ಕಾಟ್ಲ, ತಿಲೇಪಿಯಾ, ಮುಗುಡು ಹಾಗೂ ಗೌರಿ ಮೀನುಗಳು

ಮನೋಜ್ ಕನಪಾಡಿ ಕೈಚಳಕದಲ್ಲಿ ಮೂಡಿಬಂದ ಫೈಬರ್ ಆರ್ಟ್

ಬಂಟ್ವಾಳದ ಖ್ಯಾತ ಫೈಬರ್ ಆರ್ಟ್ ಕಲಾವಿದ ಮನೋಜ್ ಕನಪಾಡಿ ಅವರ ಕೈ ಚಳಕದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಶಸ್ತ್ರ ತ್ಯಾಗ ಮಾಡಿದ ಅರ್ಜುನನಿಗೆ ಗೀತೆಯನ್ನು ಭೋಧಿಸುವ ಶ್ರೀ ಕೃಷ್ಣನ ಬೃಹತ್ ಕಲಾಕೃತಿಯೊಂದು ರಚನೆಗೊಂಡಿದೆ. ಈ ಕಲಾಕೃತಿಯನ್ನು ಮಂಗಳೂರು ಹೊರ ವಲಯದ ಕಿನ್ನಿಗೋಳಿಯ ಎಳತ್ತೂರಿನಲ್ಲಿರುವ ಶ್ರೀ ಶಕ್ತಿ ದರ್ಶನ ಯೋಗಾಶ್ರಮದ ನೂತನ ಮುರಳೀವನದಲ್ಲಿ ಸ್ಥಾಪಿಸಲಾಗಿದೆ. 10 ಅಡಿ ಎತ್ತರದ ನಿಂತ ಭಂಗಿಯಲ್ಲಿರುವ ಶ್ರೀ ಕೃಷ್ಣನ ವಿಗ್ರಹ, 6 ಅಡಿ ಎತ್ತರದ

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಮಾಡಿಯೇ ಸಿದ್ಧ : ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕು ಎಂಬ ಆಗ್ರಹ ನನಗೆ ಶಾಸಕನಾಗುವ ಮೊದಲೇ ಇತ್ತು. ಅಭಿವೃದ್ದಿಯಾಗುತ್ತಿರುವ ಪುತ್ತೂರಿಗೆ ಈ ಯೋಜನೆಯನ್ನು ಜಾರಿಗೆ ತರಲು ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಕ್ಯಾಬಿನೆಟ್‍ನಲ್ಲಿ ಅನುಮೋದನೆ ಮಾಡಿಸಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿಸಿಯೇ ಸಿದ್ದ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಮೆಡಿಕಲ್ ಕಾಲೇಜಿಗೆ ನಿಗಧಿಪಡಿಸಲಾದ ಜಾಗವನ್ನು ವೀಕ್ಷಣೆ ಮಾಡಿದರು. ಸುಮಾರು 40 ಎಕ್ರೆ ಸರಕಾರಿ

ಆಂಬ್ಯುಲೆನ್ಸ್ ಢಿಕ್ಕಿ : ಪಾದಚಾರಿ ಮೃತ್ಯು

ಉಳ್ಳಾಲ: ಆಂಬ್ಯುಲೆನ್ಸ್ ಢಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ತಲಪಾಡಿ ಮರೋಳಿ ಬಾರ್ ಎದುರುಗಡೆ ಸಂಭವಿಸಿದೆ. ಕಾಸರಗೋಡು ಮಂಗಲ್ಪಾಡಿ ಹೇರೂರು ನಿವಾಸಿ ಫ್ರಾನ್ಸಿಸ್ ಡಿಸೋಜ (62) ಮೃತರು. ಮನೆಯಿಂದ ತಲಪಾಡಿಗೆ ಬಂದಿದ್ದ ಫ್ರಾನ್ಸಿಸ್, ಮರೋಳಿ ಬಾರ್ ಎದುರುಗಡೆಯಿಂದ ವಾಪಸ್ಸು ಮನೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟುವ ಸಂದರ್ಭ ಕೇರಳದಿಂದ ಮಂಗಳೂರು ಕಡೆಗೆ ಅಮಿತ ವೇಗದಲ್ಲಿ ಬರುತ್ತಿದ್ದ ಖಾಲಿ ಆಂಬ್ಯುಲೆನ್ಸ್ ಫ್ರಾನ್ಸಿಸ್ ಅವರಿಗೆ ಢಿಕ್ಕಿ

ಕಾರ್ಕಳದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಸಮ್ಮೇಳನ

ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ವತಿಯಿಂದ ನಗರ ಸಮ್ಮೇಳನ ಜುಲೈ 2 ರಂದು ಕಾರ್ಕಳದ ವೇಣುಗೋಪಾಲ ಕೃಷ್ಣ ದೇವಸ್ಥಾನ ಕಾಬೆಟ್ಟುನಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಎಬಿವಿಪಿಯ ಹಿರಿಯ ಕಾರ್ಯಕರ್ತ ರಾಜೇಂದ್ರ ಅಮಿನ್ ಅವರು, ದೇಶ ಸೇವೆಗೆ ತಮ್ಮ ಸಮಯವನ್ನು ಮೀಸಲಿಡುವ ಮೂಲಕ ತಮ್ಮ ವಿದ್ಯಾರ್ಥಿ ಜೀವನವನ್ನು ಸಮರ್ಪಕವಾಗಿಸಿಕೊಳ್ಳಬೇಕೆಂದು ಹೇಳಿದರು. ನಂತರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಸಹ