ಪುತ್ತೂರಿನಲ್ಲಿ ಡಿ.ಕೆ. ಶಿವಕುಮಾರ್ ಆಪ್ತನ ಮೇಲೆ ಅಟ್ಯಾಕ್

ಪುತ್ತೂರು : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತ ಪಾಂಬಾರು ಪ್ರದೀಪ್ ರೈ ಮೇಲೆ ಇಬ್ಬರು ಮಾರಣಾಂತಿಕ ಹಲ್ಲೆಗೈದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪ್ರದೀಪ್ ರೈ ಅವರು ಬೊಳುವಾರು ಆಸ್ಪತ್ರೆಯ ಬಳಿ ಕಾರನ್ನು ಪಾರ್ಕ್ ಮಾಡುತ್ತಿದ್ದ ವೇಳೆ ಡಸ್ಟರ್ ಕಾರಿನಲ್ಲಿ ಬಂದ ತಂಡವೊಂದು ಅವರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿ

ಸುರತ್ಕಲ್ :- ದೇಶವಿರೋಧಿ ದುಷ್ಟ ಶಕ್ತಿಗಳು ಬಿಲದಿಂದ ಹೊರಗೆ ಬರುತ್ತಿವೆ ಡಾ. ಭರತ್ ಶೆಟ್ಟಿ ವೈ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಬಿಲದಲ್ಲಿ ಅಡಗಿ ಕುಳಿತಿದ್ದ ದುಷ್ಟ ಶಕ್ತಿಗಳು ಒಂದೊಂದಾಗಿ ಹೊರಗೆ ಬರುತ್ತಿವೆ . ಇದಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ, ಹಾಗೂ ಅದರ ಆಡಳಿತದ ಮೇಲೆ ಯಾವುದೇ ಹೆದರಿಕೆ ಇಲ್ಲದಿರುವುದೇ ಕಾರಣ ಎಂದು ಡಾ. ಭರತ್ ಶೆಟ್ಟಿ ಹೇಳಿದ್ದಾರ ಬಿಜೆಪಿ ಅಧಿಕಾರದಲ್ಲಿದ್ದಾಗ ಉಗ್ರರ ಚಟುವಟಿಕೆಗಳನ್ನ ಸಂಪೂರ್ಣ ಮಟ್ಟ ಹಾಕಲಾಗಿತ್ತು. ಇದೀಗ ರಾಜಾರೋಷವಾಗಿ ಬಾಂಬುಗಳ ತಯಾರಿಕೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಬೆಂಗಳೂರಿನಲ್ಲಿ

ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್, ಕಾರ್ಯದರ್ಶಿಯಾಗಿ ಬೈಲೂರು ಹರೀಶ್ ಅಚಾರ್ಯ

ಕಾರ್ಕಳ: ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಕಳ ತಾಲೂಕು ಘಟಕ ಇದರ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಷರೀಫ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ  ಬೈಲೂರು ಹರೀಶ್ ಅಚಾರ್ಯ ಆಯ್ಕೆಯಾಗಿದ್ದಾಾರೆ. , ಕೋಶಾಧಿಕಾರಿ ಸ್ಥಾನಕ್ಕೆ ಕೆ.ಎಂ ಖಲೀಲ್ ಆಯ್ಕೆ ನಡೆಯಿತು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯಂತೆ  ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಕಳ ತಾಲೂಕು ಘಟಕದ  ಪದಾಧಿಕಾರಿಗಳ ಪುನರ್ ರಚನೆ ಪ್ರಕ್ರೀಯೆ ತಾಲೂಕು ಪ್ರವಾಸಿ

ದಲಿತ ಕುಟುಂಬದ ಮನೆ ನಿರ್ಮಾಣದ ಸಹಾಯಧನ ವಿಳಂಬ ; ಕೂಡಲೇ ಬಿಡುಗಡೆಗೊಳಿಸಲು DHS ಒತ್ತಾಯ

ದೇರೆಬೈಲ್ ಪಶ್ಚಿಮ ವಾರ್ಡಿನ ಉರ್ವಸ್ಟೋರ್ ಸುಂಕದಕಟ್ಟೆಯ ದಲಿತ ಕುಟುಂಬದ ಮನೆ ನಿರ್ಮಾಣದ ಸಹಾಯಧನ ತೀರಾ ವಿಳಂಬವಾಗಿದ್ದು ,ಅದನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ದಲಿತ ಹಕ್ಕುಗಳ ಸಮಿತಿ( DHS ) ಯ ಮಂಗಳೂರು ನಗರ ಸಮಿತಿಯು ಮನಪಾದ ಆಯುಕ್ತರು ಹಾಗೂ ಮೇಯರ್ ರವರಿಗೆ ಮನವಿ ಅರ್ಪಿಸುವ ಮೂಲಕ ಒತ್ತಾಯಿಸಿದೆ. ಉರ್ವಸ್ಟೋರ್ ಸುಂಕದಕಟ್ಟೆ ಪ್ರದೇಶದ ನಿವಾಸಿ ಪದ್ಮ ಎಂಬ ದಲಿತ ಮಹಿಳೆಯ ಪಾಳುಬಿದ್ದ ಮನೆಯು ಕಳೆದ ವರ್ಷದ ಮಳೆಗಾಲದ ಸಮಯಕ್ಕೆ ಕುಸಿದು ಬಿದ್ದು,ಅದಾಗಲೇ ಮಾದ್ಯಮದ

ಸುರತ್ಕಲ್ ನಿಂದ ಬಿ.ಸಿ ರೋಡ್ ವರೆಗಿನ ಹೆದ್ದಾರಿ ಗುಂಡಿಗಳನ್ನು ಮುಚ್ಚಲು ಡಿವೈಎಫ್ಐ ಮನವಿ

ಸುರತ್ಕಲ್ ನಿಂದ ಬಿ.ಸಿ ರೋಡ್ ವರೆಗಿನ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಇಂದು (19-7-2023) ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನಿಯೋಗವು ಮನವಿಯನ್ನು ಸಲ್ಲಿಸಿದೆ. ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ,ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಮುಖಂಡರಾದ ಉಸ್ಮಾನ್ ಕಣ್ಣೂರ್, ಆಸೀಫ್, ರಿಯಾಝ್ ಮುಂತಾದವರು ಉಪಸ್ಥಿತರಿದ್ದರು.

ವಿಧಾನಸಭೆಯಿಂದ ಅಮಾನತುಗೊಂಡ ಬಿಜೆಪಿ ಶಾಸಕರು ಅಮಾನತು

ಬೆಂಗಳೂರು: ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಮಾತಿನ ಚಕಮಕಿ ನಡೆದು ಸದನದಲ್ಲಿ ಬಜೆಪಿ ಶಾಸಕರು ವಿಧಾನಸಭೆ ಉಪ ಸಭಾಧ್ಯಕ್ಷರ ಮೇಲೆ ಕಾಗದ ಚೂರುಗಳನ್ನು ತೂರಿದ ಘಟನೆಗೆ ಸಂಬಂಧಿಸಿ 10 ಮಂದಿ ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ. ಅಶ್ವತ್ಥ ನಾರಾಯಣ, ಆರ್.ಅಶೋಕ್, ವೇದವ್ಯಾಸ ಕಾಮತ್, ಅರಗಜ್ಞಾನೇಂದ್ರ, ಸುನೀಲ್ ಕುಮಾರ್, ಅರವಿಂದ ಬೆಲ್ಲದ್, ಯಶ್‍ಪಾಲ್ ಸುವರ್ಣ, ಧೀರಜ್ ಮುನಿರಾಜ್, ಉಮಾನಾಥ್ ಕೋಟ್ಯಾನ್, ಭರತ್

ಬೆಳ್ಮಣ್: ರಸ್ತೆಗೆ ಬಂದ ಕಾಡುಕೋಣ ವಾಹನ ಸವಾರರು ಆತಂಕ

ಬೆಳ್ಮಣ್: ಪಿಲಾರುಖಾನ ಕಾಡು ಪ್ರದೇಶದಲ್ಲಿ ಕಾಡುಕೋಣವೊಂದು ರಸ್ತೆಗೆ ಬಂದು ವಾಹನ ಸವಾರರು ಆತಂಕಗೊಳಿಸಿದ ಘಟನೆ ನಡೆದಿದೆ. ಪಿಲಾರುಖಾನ ಅರಣ್ಯ ಪ್ರದೇಶದ ಸುತ್ತ ತಂತಿ ಬೇಲಿಯನ್ನು ಅಳವಡಿಸಿದ್ದು ಇದರಿಂದ ಒಂದು ಬದಿಯ ತಂತಿ ಬೇಲಿಯನ್ನು ದಾಟಿಕೊಂಡ ಬಂದ ದೊಡ್ಡ ಕಾಡುಕೋಣವೊಂದು ಮತ್ತೊಂದು ಬದಿಯ ಕಾಡಿಗೆ ಹೋಗಲು ಪರದಾಡಿತು.

ವೆಸ್ಟ್ ಕೋಸ್ಟ್ ಶೋ ರೂಮ್ ನಲ್ಲಿ ದ್ವಿಚಕ್ರ ವಾಹನ ಸವಾರರ ಕನಸು ನನಸಾಗಿಸುವ ಅವಕಾಶ

ಮಂಗಳೂರಿನ ವೆಸ್ಟ್ ಕೋಸ್ಟ್ ಶೋರೂಮ್ ನಲ್ಲಿ ಅಮೇರಿಕಾ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಾಕರದ ಹಾರ್ಲೆ ಡೇವಿಡ್ಸನ್ ನ ಹೊಸ ಹಾರ್ಲೆ ಡೇವಿಡ್ಸನ್ *440, ಹಾರ್ಲೆ ಎವಿಡ್ ಮತ್ತು ಎಸ್ ಡೇವಿಡ್ಸನ್ ಬಿಡುಗಡೆಯಾಗಿದ್ದು ಭಾರತೀಯ ಮಾರುಕಟ್ಟೆಗೆ ಹೊಸ ಸಂಚಲನ ಸೃಷ್ಟಿಸಿದೆ. ಈಗಾಗಲೇ ಉತ್ತಮ ಸ್ಪಂದನೆ ಸಿಗುತ್ತಿದ್ದೂ,ಆಗಸ್ಟ್ 15 ರ ಬಳಿಕ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾರ್ಲೆ ಡೇವಿಡ್ಸನ್ ರಸ್ತೆಗಿಳಿಯಲಿದೆ. ಈಗಾಗಲೇ ಮುಂಗಡ ಬುಕಿಂಗ್ ತೆರೆದಿದ್ದು

ಪೊಲೀಸರಿಗೆ ಬಂದೂಕು ತೋರಿಸಿ ಆಕ್ರಮಣಕ್ಕೆ ಯತ್ನಿಸಿದ
ಆರೋಪಿಗಳು

ಪೊಲೀಸರಿಗೆ ಬಂದೂಕು ತೋರಿಸಿ ಆಕ್ರಮಣ ಗೈಯಲು ಯತ್ನಿಸಿದ ಹಾಗೂ ಲಾರಿಯೊಂದನ್ನು ಅಪಹರಣಗೈದ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಜೇಶ್ವರ ಹಾಗೂ ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಮೀಯಪದವು ನಿವಾಸಿಗಳಾದ ರಹಿಂ ಹಾಗೂ ಲತೀಫ್ ಬಂಧಿತ ಆರೋಪಿಗಳು. ರಹೀಂ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಅದೇ ರೀತಿ ಲತೀಫ್ ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಕೇರಳ ಹಾಗೂ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ 14 ಪ್ರಕರಣಗಳು ಇರುವುದಾಗಿ

ಚಪ್ಪಲಿ ಕಳೆದುಕೊಂಡ ಯುವಕನಿಂದ 112ಕ್ಕೆ ಕರೆ

ನಗರದ ಸಭಾಂಗಣದಲ್ಲಿ ಯುವಕನೊಬ್ಬ ಹೊರಗೆ ಬಿಟ್ಟಿದ್ದ ಚಪ್ಪಲಿ ನಾಪತ್ತೆಯಾಗಿದ್ದು ಇದಕ್ಕಾಗಿ 112 ನಂಬರಿಗೆ ಕರೆ ಮಾಡಿ ಪೊಲೀಸರನ್ನು ಕರೆಸಿಯಿಸಿದ ಘಟನೆ ನಡೆದಿದೆ. ಶರವು ದೇವಸ್ಥಾನದ ಸಮೀಪದ ಸಭಾಂಗಣಕ್ಕೆ ಆಗಮಿಸಿದ್ದ ಯುವಕ ಚಪ್ಪಲಿಯನ್ನು ಹೊರಗೆ ಬಿಟ್ಟಿದ್ದು ವಾಪಾಸ್ ಬಂದಾಗ ಚಪ್ಪಲಿ ಇಲ್ಲದಿರುವುದನ್ನು ಕಂಡು 112 ನಂಬರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾನೆ. ಈ ದೂರನ್ನು ಪರಿಶೀಲಿಸುವಂತೆ ಬಂದರು ಠಾಣೆಗೆ ಸಂದೇಶ ಬಂದಿತ್ತು. ಇದನ್ನು ನೋಡಿ ಪೊಲೀಸರೂ ಸುಸ್ತು