ಚಿಕ್ಕೋಡಿ ಜೈನ ಮುನಿಯ ಹತ್ಯೆ ಪ್ರಕರಣ : ಕಡಬದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಕಡಬ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಕ್ಷೇತ್ರದಲ್ಲಿ ವಾಸ್ತವ್ಯವಿದ್ದ ಆಚಾರ್ಯ ಮುನಿಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಿರುವುದು ಖಂಡನೀಯ. ಈ ಹೇಯ ಕೃತ್ಯ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ವಿ.ಹಿಂ.ಪ. ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಆಗ್ರಹಿಸಿದರು. ಅವರು ಕಡಬದ ಮುಖ್ಯ

ಶಿರೂರಿನಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಕಳವು

: ಹಾಡುಹಗಲೇ ಮನೆಗೆ ನುಗ್ಗಿ ಮೂರು ಲಕ್ಷಕ್ಕೂ ಅಧಿಕ ಚಿನ್ನಾಭರಣ ಕದ್ದೋಯ್ದ ಘಟನೆ ಶಿರೂರಿನಲ್ಲಿ ನಡೆದಿದೆ. ಶಿರೂರು ಮಾರ್ಕೆಟ್ ಬಳಿ ಠಾಕೇಶ್ ಪಟಗಾರ್ ದಂಪತಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದು ನಿನ್ನೆ ಮಧ್ಯಾಹ್ನ ಊಟ ಮುಗಿಸಿ ಕಾಲೇಜಿಗೆ ಮರಳಿದ ಸಮಯ ನೋಡಿ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು, 32 ಗ್ರಾಂ ಮಾಂಗಲ್ಯ ಸರ ಸೇರಿದಂತೆ 10 ಗ್ರಾಂ ಕಿವಿಯೋಲೆ, 100 ಗ್ರಾಂ ಬೆಳ್ಳಿ ಹಾಗೂ 1000 ರೂಪಾಯಿ ನಗದು ಕದ್ದೊಯ್ದಿದ್ದಾರೆ. ಪಕ್ಕದ ಮನೆಗೆ ತೆರಳಿ ಅಲ್ಲೂ ಕೂಡ ಬಾಗಿಲು

“ಸಿನೆಮಾ ಮತ್ತು ಸಿನೆಮಾ ನಿರ್ಮಾಣ” : ಮೂಡುಬಿದರೆಯ ಆಳ್ವಾಸ್‍ನಲ್ಲಿ ಕಾರ್ಯಾಗಾರ

ಮೂಡುಬಿದಿರೆ: `ಸಿನಿಮಾವು ಕಲೆ, ತಂತ್ರಜ್ಞಾನದ ಸಮ್ಮಿಲನವಾಗಿದ್ದು, ವಿಜ್ಞಾನ, ಮನೋರಂಜನೆ ಎಲ್ಲವೂ ಇಲ್ಲಿದೆ. ಇದು ಅತ್ಯಂತ ಪ್ರಭಾವ ಬೀರುವ ಮಾಧ್ಯಮ’ ಎಂದು ಸಿನಿಮಾ ಬರಹಗಾರ ಮತ್ತು ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಿನಿಮಾ ಸಮಾಜದಲ್ಲಿ ಸಿನಿಮಾ ಮತ್ತು ಸಿನಿಮಾ ನಿರ್ಮಾಣ' ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಾನವನು ನೀರಿನಲ್ಲಿ

ಬ್ರಹ್ಮಾವರ : ಕೆಸರು ಗದ್ದೆಯಲ್ಲಿ ಒಂದು ದಿನ

ಬ್ರಹ್ಮಾವರದ ಶ್ರೀ ವೇಣುಗೋಪಾಲಕೃಷ್ಣ ಯುವಕ ಸಂಘ ಮೂಡುಕೇರಿ ಬಾರ್ಕೂರು, ಸೋಮ ಕ್ಷತ್ರಿಯ ಗಾಣಿಗ ಸಮಾಜ, ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸಂಘ, ಜಿಲ್ಲಾ ಗಾಣಿಗ ಯುವ ಸಂಘಟನೆ ಉದ್ಯಾವರ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೆಸರು ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮವು ದೇವಸ್ಥಾನದ ಬಳಿಯ ಸುಜಾತ ಶೆಟ್ಟಿ ಅವರ ಗದ್ದೆಯಲ್ಲಿ ಜರುಗಿತು. ಸೋಮಕ್ಷತ್ರಿಯ ಗಾಣಿಗೆ ಸಮಾಜದ ಅಧ್ಯಕ್ಷ ಸೂರ್ಯನಾರಾಯಣಗಾಣಿಗ ಮಟಪಾಡಿ ಮತ್ತು ಗಣ್ಯರು ಗದ್ದೆಗೆ ಹಾಲು ಸಮರ್ಪಿಸಿ

ಪಣಪಿಲದಲ್ಲಿ ಮತ್ಸ್ಯ ಮಿಲನ ಮಾಹಿತಿ ಕಾರ್ಯಾಗಾರ

ಮೂಡುಬಿದಿರೆ: ಮೀನು ಕೃಷಿಕರ ದಿನದ ಅಂಗವಾಗಿ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿ.ವಿ.ಬೀದರ್, ಭಾ.ಕೃ.ಸಂ.ಪ. ಕೃಷಿ ವಿಜ್ಞಾನ ಕೇಂದ್ರ ದ.ಕ.ಮಂಗಳೂರು ಮತ್ತು ಮೀನುಗಾರಿಕೆ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್ ಇವುಗಳ ವತಿಯಿಂದ ಮೀನು ಸಾಕಾಣಿಕೆ ಮಾಹಿತಿ ಕಾರ್ಯಾಗಾರ ಹಾಗೂ ಮೀನು ಹಿಡಿಯುವ ಕಾರ್ಯಕ್ರಮ “ಮತ್ಸ್ಯ ಮಿಲನ” ಪಣಪಿಲ ಕೊಟ್ಟರಿಬೆಟ್ಟು ರಾಜ್ ಫಿಶ್ ಫಾರ್ಮಿಂಗ್‍ನಲ್ಲಿ ನಡೆಯಿತು. ಮಂಗಳೂರು ಕೆ.ವಿ.ಕೆ ಯ

ಬೆಳ್ತಂಗಡಿ : ನೆಟ್ವರ್ಕ್ ಸಮಸ್ಯೆ- ಏರ್ಟೆಲ್ ಸಂಸ್ಥೆಯ ವಿರುದ್ಧ ಪ್ರತಿಭಟನೆ

ನಿರಂತರ ನೆಟ್ವರ್ಕ್ ಸಮಸ್ಯೆಯಿಂದ ಪರದಾಡುತ್ತಿರುವ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮಸ್ಥರು, ಏರ್ಟೆಲ್ ಸಂಸ್ಥೆ ವಿರುದ್ಧ ಟವರ್ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಏರ್ಟೆಲ್ ನೆಟ್ವರ್ಕ್ ವಿರುದ್ಧ ಘೋಷಣೆಯನ್ನು ಕೂಗಲಾಯಿತು ಮತ್ತು ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸಲು ಗಡುವು ನೀಡಲಾಯಿತು. ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಬೃಹತ್ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಸಲಾಯಿತು. ಪ್ರತಿಭಟನೆಯಲ್ಲಿ ಬಳಂಜ ಗ್ರಾಮ ಪಂಚಾಯತ್

ಕಾಪುವಿನಲ್ಲಿ ಕಡಲು ಅಪಾಯಕಾರಿ: ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ

ಕಾಪು ಬೀಚ್‌ನಲ್ಲಿ ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ಲೈಟ್‌ಹೌಸ್ ಪಕ್ಕದಲ್ಲಿ ಸಮುದ್ರಕ್ಕೆ ಇಳಿಯುವುದು ಮತ್ತು ಲೈಟ್‌ಹೌಸ್ ಬಂಡೆ ಮೇಲಿನ ಪ್ರವೇಶ ನಿರ್ಬಂಧಿಸಲಾಗಿದೆ. ಕಡಲು ಪ್ರಕ್ಷುಬ್ಧಗೊಂಡು, ಲೈಟ್‌ಹೌಸ್ ಬಳಿಯಲ್ಲಿ ಸಮುದ್ರ ಮತ್ತು ಹಿನ್ನೀರಿನ ಹೊಳೆ ಪರಸ್ಪರ ಜೋಡಣೆಯಾಗಿದೆ. ಇದರಿಂದಾಗಿ ಲೈಟ್‌ಹೌಸ್ ಇರುವ ಬಂಡೆ ಮೇಲೆ ಪ್ರವೇಶಿಸುವುದೇ ಕಷ್ಟಕರವಾಗಿದೆ. ಇಷ್ಟಿದ್ದರೂ ಕೆಲವೊಂದು ಪ್ರವಾಸಿಗರು ಪ್ರಯಾಸಪಟ್ಟು ಮೆಟ್ಟಿಲಗಳನ್ನೇರಿ ಲೈಟ್ ಹೌಸ್ ಪಕ್ಕಕ್ಕೆ ಹೋಗಲು

ವಿಟ್ಲ : ಕಾರು ಅಪಘಾತ – ಚಾಲಕಿಗೆ ಗಾಯ

ವಿಟ್ಲ: ಡಿವೈಡರ್ ಮೇಲಿನಿಂದ ಹಾರಿದ ಕಾರೊಂದು ವಿರುದ್ಧ ಬದಿಯಲ್ಲಿ ಬರುತ್ತಿದ್ದ ಬೇರೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರು ಚಾಲಕಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಿಟ್ಲದಲ್ಲಿ ನಡೆದಿದೆ. ಸೂರಿಕುಮೇರು ಪೆಟ್ರೋಲಿಯಂ ಪಂಪ್ ಮುಂಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಬಂಟ್ವಾಳ ಬಿಸಿರೋಡು ನಿವಾಸಿ ರಮ್ಯ ಅವರು ಕಾರಿನಲ್ಲಿ ಬಿಸಿರೋಡಿನಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಮೇಲೆ ಹತ್ತಿ ಕೆಳಗೆ ರಸ್ತೆಗೆ

ಕಿಟಕಿ ಪೊರಂನಲ್ಲಿ ಸಿಲುಕಿಕೊಂಡ ವಿಶೇಷಚೇತನ ಬಾಲಕನ ರಕ್ಷಣೆ

ಉಡುಪಿ: ಉಡುಪಿ ನಗರದ ಬ್ರಹ್ಮಗಿರಿಯ ಅಪಾರ್ಟ್ಮೆಂಟ್ ನ ಕಿಟಕಿ ಪೊರಂನಲ್ಲಿ ಎಂಟು ವರ್ಷದ ವಿಶೇಷಚೇತನ ಬಾಲಕ ಸಿಲುಕಿಕೊಂಡಿರುವ ಘಟನೆ ನಡೆದಿದೆ. 11ನೇ ಮಹಡಿಯ ಬಾಲ್ಕನಿ ಮೂಲಕ ಹೊರ ಹೋಗಿ 10ನೇ ಮಹಡಿಯ ಕಿಟಕಿ ಪೋರಂ‌ನಲ್ಲಿ ಸಿಲುಕಿಕೊಂಡಿದ್ದ ಆರುಷ್ ಎಂಬ ಬಾಲಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಯಶಸ್ವಿ ಕಾರ್ಯಚರಣೆಯಿಂದ ಆರುಷ್ ಪೋಷಕರು ನಿಟ್ಟುಸಿರು ಬಿಟ್ಟರು.

ಜೈನ ಮುನಿಗಳ ಹತ್ಯೆಗೆ ಪೇಜಾವರ ಶ್ರೀಗಳು ಖಂಡನೆ

ಉಡುಪಿ : ಜೈನ ಮುನಿಗಳ ಹತ್ಯೆಯನ್ನು ಖಂಡಿಸಿ ಇಂದು ಉಡುಪಿಯಲ್ಲಿ ಮಾತನಾಡಿದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ವಿಚಾರ ತಿಳಿದು ನನಗೆ ಅತೀವ ದುಃಖವಾಗಿದೆ. ಇದು ಜನತೆಯಲ್ಲಿ ಗಾಬರಿ ಹುಟ್ಟಿಸುವ ಘಟನೆ. ಓರ್ವ ಸಾಧುವನ್ನು ಸ್ವತಂತ್ರ ಭಾರತದಲ್ಲಿ ಈ ರೀತಿ ಹತ್ಯೆ ಮಾಡಿರುವುದು ದುರಂತ. ಹೀಗಾದರೆ ಸಾಮಾನ್ಯ ಜನರ ಪಾಡೇನು? ಇಂತಹ ಕೃತ್ಯ ಎಂದೂ ಎಲ್ಲೆಲ್ಲೂ ನಡೆಯಬಾರದು. ಈ ಘಟನೆಯನ್ನು ತೀಕ್ಷ್ಣ ಮಾತುಗಳಿಂದ ಖಂಡಿಸುತ್ತೇವೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು