ಮಂಗಳೂರು: ಸೆ.30ರಿಂದ ಅ.2ರ ವರೆಗೆ ಬಿಎನ್‌ಐ ಮಂಗಳೂರು ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋ- 2023

ಬಿಎನ್‌ಐ ಮಂಗಳೂರು ವತಿಯಿಂದ ಬಿಗ್ ಬ್ರ್ಯಾಂಡ್ ಎಕ್ಸ್‌ಪೋ-2023 ಸೆಪ್ಟಂಬರ್ 30ರಿಂದ ಅಕ್ಟೋಬರ್ 2ರ ವರೆಗೆ ನಗರದ ಟಿಎಮ್‌ಎಪೈ ಕನ್ವೆನ್ಷನಲ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ಬಿಎನ್‌ಐ ಮಂಗಳೂರಿನ ಎಕ್ಸಿಕ್ಯೂಟಿವ್ ಡೆರೆಕ್ಟರ್ ಗಣೇಶ್ ಎನ್ ಶರ್ಮ ತಿಳಿಸಿದ್ದಾರೆ.

ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೊಷ್ಠಿ ನಡೆಸಿ ಮಾಹಿತಿ ನೀಡಿದರು. ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋ ವನ್ನು ಕಳೆದ ಬಾರಿ 2 ದಿನಗಳ ಕಾಲ ಪ್ರದರ್ಶನ ಆಯೋಜಿಸಲಾಗಿತ್ತು. ಆದರೆ ಈ ಬಾರಿ 3 ದಿನಗಳು ನಡೆಯಲಿದ್ದು, 120ರಷ್ಟು ಮಳಿಗೆಗಳು ತಮ್ಮ ಉದ್ಯಮದ ಬಗ್ಗೆ ಮಾಹಿತಿ ಮತ್ತು ಪ್ರದರ್ಶನ ನೀಡಲಿದ್ದಾರೆ. ಎಲ್ಲಾ ರೀತಿಯ ಉದ್ಯಮಗಳ ಪ್ರಮುಖರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದು, ಈ ಪ್ರದರ್ಶನದ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಬೆಳಿಗ್ಗೆ 10ರಿಂದ ರಾತ್ರಿ 8 ರವರೆಗೆ ನಡೆಯಲಿದೆ ಎಂದರು.

ಬಿಗ್ ಬ್ರಾಂಡ್ಸ್ ಎಕ್ಸ್‌ಪೋ ದ ಚೇರ್‌ಮಾನ್ ಮೋಹನ್‌ರಾಜ್ ಅವರು ಮಾತನಾಡಿ, 3 ದಿನಗಳ ಕಾಲ ನಡೆಯಲಿರುವ ಬಿಗ್ ಬ್ರಾಂಡ್ ಎಕ್ಸ್‌ಪೋ-2023ರ ಮೊದಲ ದಿನವಾದ ಸೆ.30 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾರತ್ ಗ್ರೂಪ್‌ನ ಎಂಡಿ ಸುಬ್ರಾಯ ಎಂ ಪೈ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ವೈ ಶೆಟ್ಟಿ ಹಾಗೂ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಭಾಗವಹಿಸಲಿದ್ದಾರೆ. ನಂತರ ಪ್ರದರ್ಶನದಲ್ಲಿ ಪ್ರತಿ 2 ಗಂಟೆಗೊಮ್ಮೆ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದು, ಒಟ್ಟು 36 ರಷ್ಟು ಮುಖ್ಯ ಅತಿಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಎನ್‌ಐನ ಸದಸ್ಯರಾದ ಡಾ.ಸಚಿನ್ ನಡ್ಕ, ಹೆಲೆನ್, ಪ್ರವೀಣ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.