ಬ್ರಹ್ಮಾವರ|| ಅಂಬೇಡ್ಕರ್ ಭವನದಲ್ಲಿ ಭರ್ಜರಿ ಎಣ್ಣೆ ಪಾರ್ಟಿ: ವಿಡಿಯೋ ಮಾಡಿದ ಮಹಿಳೆಗೆ ಬೆದರಿಕೆ, ದೂರು ದಾಖಲು
ಬ್ರಹ್ಮಾವರದ ವಾರಂಬಳ್ಳಿ ತೆಂಕು ಬಿರ್ತಿಯ ದಲಿತ ಮುಖಂಡರ ಪುತ್ರ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಅಯ್ಕೆಯಾದ ಹಿನ್ನಲೆಯಲ್ಲಿ, ಅಭಿನಂದನಾ ಸಮಾರಂಭವನ್ನು ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿತ್ತು. ಅದೇ ದಿನ ಸಂಜೆ ಕಾರ್ಯಕ್ರಮದ ಯಶಸ್ವಿಯ ಹಿನ್ನಲೆಯಲ್ಲಿ ಅಂಬೇಡ್ಕರ್ ಭವನದಲ್ಲಿ ಎಣ್ಣೆ ಪಾರ್ಟಿ ನಡೆಸಿದ್ದರು.
ಈ ವಿಚಾರ ತಿಳಿದ ಸ್ಥಳೀಯ ಮಹಿಳೆ ಸವಿತಾ ಎನ್ನುವವರು ಅಂಬೇಡ್ಕರ್ ಭವನಕ್ಕೆ ತೆರಳಿ ಮದ್ಯಪಾನ ಮಾಡುತ್ತಿರುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿ, ವಿಡಿಯೋ ಮಾಡಿದ್ದರು. ಈ ಸಂಧರ್ಭದಲ್ಲಿ ಅಲ್ಲಿದ್ದವರು ಅಕ್ಷೇಪ ವ್ಯಕ್ತಪಡಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಬಗ್ಗೆ ಮಹಿಳೆ ಬ್ರಹ್ಮಾವರ ಠಾಣೆಯಲ್ಲಿ ನಾಲ್ವರ ವಿರುದ್ದ ದೂರು ದಾಖಲಿಸಿದ್ದಾರೆ.