Home ಕರಾವಳಿ Archive by category ಉಡುಪಿ (Page 38)

ಬೆಳ್ಮಣ್: ರಸ್ತೆಗೆ ಬಂದ ಕಾಡುಕೋಣ ವಾಹನ ಸವಾರರು ಆತಂಕ

ಬೆಳ್ಮಣ್: ಪಿಲಾರುಖಾನ ಕಾಡು ಪ್ರದೇಶದಲ್ಲಿ ಕಾಡುಕೋಣವೊಂದು ರಸ್ತೆಗೆ ಬಂದು ವಾಹನ ಸವಾರರು ಆತಂಕಗೊಳಿಸಿದ ಘಟನೆ ನಡೆದಿದೆ. ಪಿಲಾರುಖಾನ ಅರಣ್ಯ ಪ್ರದೇಶದ ಸುತ್ತ ತಂತಿ ಬೇಲಿಯನ್ನು ಅಳವಡಿಸಿದ್ದು ಇದರಿಂದ ಒಂದು ಬದಿಯ ತಂತಿ ಬೇಲಿಯನ್ನು ದಾಟಿಕೊಂಡ ಬಂದ ದೊಡ್ಡ ಕಾಡುಕೋಣವೊಂದು ಮತ್ತೊಂದು ಬದಿಯ ಕಾಡಿಗೆ ಹೋಗಲು ಪರದಾಡಿತು.

ಮರವಂತೆ ತ್ರಾಸಿ ಬೀಚ್‍ನಲ್ಲಿ ಗದಗ ಮೂಲದ ಯುವಕ ಸಮುದ್ರಪಾಲು

ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್‍ನಲ್ಲಿ ಮಧ್ಯಾಹ್ನದ ವೇಳೆ ಗದಗ ಮೂಲದ ಮೂವರು ಯುವಕರು ಈಜಲು ಹೋಗಿದ್ದು ಈ ಪೈಕಿ ಗದಗ ಜಿಲ್ಲೆಯ ಮುಂಡ್ರಂಗಿ ತಾಲೂಕು ಮೇವಂಡಿ ಗ್ರಾಮದ ಪೀರ್ ನದಾಫ್ ನೀರುಪಾಲಾಗಿದ್ದಾರೆ. ಮಧ್ಯಾಹ್ನದ ವೇಳೆ ಸಮುದ್ರದ ನೀರಿಗೆ ಈಜಲು ಇಳಿದಿದ್ದು ಮೂವರು ಅಲೆಯ ರಭಸಕ್ಕೆ ಓರ್ವ ಯುವಕ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳೀಯ ಆಂಬುಲೆನ್ಸ್ ಡೈವರ್ ಸಮಾಜಸೇವಕ ಇಬ್ರಾಹಿಂ ಗಂಗೊಳ್ಳಿ

ಕಟಪಾಡಿ ಕೊಲೆ ಪ್ರಕರಣ ಆರೋಪಿ ಸೆರೆ

ಕಟಪಾಡಿಯಲ್ಲಿ ನಡೆದ ಕೂಲಿ ಕಾರ್ಮಿಕನ ಬಲಿ ಪಡೆದ ವ್ಯಕ್ತಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಒರಿಸ್ಸಾ ಮೂಲದ ಆಕನ್. ಈತ ಹಾಗೂ ಗಣೇಶ್ ನಡುವೆ ಜಗಳ ನಡೆದು ಕಬ್ಬಿಣದ ಸಲಾಖೆಯಲ್ಲಿ ತಲೆ ಹೊಡೆದು ಕೊಲೆ ನಡೆಸಿ ಪರಾರಿಯಾಗಿದ್ದ ಆಕನ್ ನನ್ನು ರಾತ್ರಿ ಉಡುಪಿ ಬಸ್ ನಿಲ್ದಾಣದ ಬಳಿ ಕಾಪು ಪೊಲೀಸರು ಬಂಧಿಸಿದ್ದರು.

ಪಡುಬಿದ್ರಿ : ಗೃಹಜ್ಯೋತಿ ಹೆಸರಲ್ಲಿ ಹಣ ಪಡೆಯುತ್ತಿದ್ದ ಸೈಬರ್ ಮಾಲಕ

ಗೃಹಜ್ಯೋತಿ ಯೋಜನೆಯ ನೋಂದಾಣಿಗೆ ಪಡುಬಿದ್ರಿ ಸೈಬರ್ ಒಂದರಲ್ಲಿ 100 ರೂಪಾಯಿ ಪಡೆಯುತ್ತಿರುವುದನ್ನು ಗ್ರಾಮಸ್ಥರು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಗ್ರಾ.ಪಂ.ಸದಸ್ಯರ ದೂರಿನನ್ವಯ ಕಾಪು ತಹಶಿಲ್ದಾರ್ ಅಂಥಹ ಸೈಬರ್‍ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ. ಸದಸ್ಯೆ ಜ್ಯೋತಿ ಮೆನನ್ ಅವರು, “ಗೃಹಜ್ಯೋತಿ” ಯೋಜನೆಯನ್ನು ದುರುಪಯೋಗ ಮಾಡಿಕೊಂಡ

ಪಡುಬಿದ್ರಿ : ಅಪಘಾತವಾದ ಕಾರನ್ನುಕಿಲೋ ಮೀಟರ್ ದೂರಕ್ಕೆ ಎಳೆದುಕೊಂಡು ಹೋದ ಟಿಪ್ಪರ್

ಟಿಪ್ಪರೊಂದರ ಹಿಂಭಾಗಕ್ಕೆ ಡಿಕ್ಕಿಯಾಗಿ ಸಿಲುಕಿಕೊಂಡ ಕಾರನ್ನು ಸುಮಾರು ಒಂದು ಕೀ.ಮೀ. ದೂರಕ್ಕೆ ಎಳೆದುಕೊಂಡೋದ ಘಟನೆ ಹೆಜಮಾಡಿ ಕನ್ನಾಂಗಾರಿನಲ್ಲಿ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ. ತಲೆ, ಕೈ, ಕಾಲು, ಮೂಗು ಸಹಿತ ದೇಹದ ಕೆಲ ಭಾಗಗಳಿಗೆ ಗಾಯಗೊಂಡ ಸಾಗರ ಮೂಲದ ಜಾಫರ್ ಖಾನ್, ಶಹೀನಾ ಹಾಗೂ ಯಾಸೀರ್ ಖಾನ್. ಇವರು ಸ್ಯಾಂಡ್ರೋ ಕಾರಿನಲ್ಲಿ ಸಾಗರದಿಂದ ಮಂಗಳೂರಿಗೆ ಹೋಗುತ್ತಿದ್ದು, ಪಡುಬಿದ್ರಿ ದಾಟಿ ಕನ್ನಾಂಗಾರಿನಲ್ಲಿ ಟಿಪ್ಪರ್ ಚಾಲಕ ತನ್ನ ವಾಹನವನ್ನು

ಪಡುಬಿದ್ರಿ ಇನ್ನರ್‌ ವೀಲ್‌ನ ಪದಾಧಿಕಾರಿಗಳ ಪದಗ್ರಹಣ

ಮಹಿಳೆಯರು ಯಾವಾಗಲೂ ಪುರುಷರಿಗಿಂತ ಕೆಳಗಿನವರು ಎಂಬ ಭಾವನೆಯನ್ನು ಹೋಗಲಾಡಿಸ ಬೇಕು ಮಾನವ ಹಕ್ಕು ಮತ್ತು ವ್ಯಯಕ್ತಿಕ ಹಕ್ಕುಗಳನ್ನು ಒದಗಿಸಬೇಕು ತಮ್ಮ ಜೀವನವನ್ನು ಸ್ವತಂತ್ರವಾಗಿ ಯಾವುದೇ ಭಯವಿಲ್ಲದೆ ಬದುಕುವಂತಾಗಲಿ ಎಂಬ ಉದ್ದೇಶವಿದೆ. ಜೀವನಕ್ಕೆ ಅವಶ್ಯಕವಾದ ಅವಕಾಶಗಳನ್ನು ಪಡೆದು ಕೊಳ್ಳಲು ಮಹಿಳೆಯರು ಯಾವುದೇ ಭಯವಿಲ್ಲದೆ ತಮ್ಮ ಹಕ್ಕು ಚಲಾಯಿಸಬೇಕು ಎಂದು ಉಡುಪಿ ರೋಟರಿ ಅಧ್ಯಕ್ಷೆ  ದೀಪಾ ಭಂಡಾರಿ ಹೇಳಿದರು. ಅವರು ಪಡುಬಿದ್ರಿ ಸಹಕಾರಿ ಸಂಗಮದಲ್ಲಿ ನಡೆದ

ಕಾರ್ಕಳ ಪೊಲೀಸ್ ಹೆಡ್‌ ಕಾನ್ಸ್ಟೇಬಲ್ ಆತ್ಮಹತ್ಯೆ

ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಮಿಯ್ಯಾರು ಎಂಬಲ್ಲಿ ನಡೆದಿದಿದೆ. ಮೃತರನ್ನು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಹೆಡ್ ಕಾನ್ ಸ್ಟೇಬಲ್, ಮಿಯ್ಯಾರು ಗ್ರಾಮದ ಕಾಜರಬೈಲು ನಿವಾಸಿ ಪ್ರಶಾಂತ್ ಮಿಯ್ಯಾರು (49) ಎಂದು ಗುರುತಿಸಲಾಗಿದೆ. ರಜೆಯಲ್ಲಿದ್ದ ಇವರು ಕಾರ್ಕಳದ ಮಿಯ್ಯಾರಿನ ತನ್ನ ಮನೆಯ ಹಿಂಭಾಗದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಈ ಘಟನೆ

ಹೆಜಮಾಡಿ : ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ಹೊಡೆದಾಟ ಹಲವರಿಗೆ ಗಾಯ

ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿ ಹಲವು ಮಂದಿ ಗಾಯಗೊಂಡ ಘಟನೆ ಹೆಜಮಾಡಿಯಲ್ಲಿ ನಡೆದಿದೆ. ಕ್ರಿಕೆಟ್ ಬೆಟ್ಟಿಂಗ್ ವಿಚಾರವಾಗಿ ಎರಡು ತಂಡಗಳ ಮಧ್ಯೆ ಮಾರಕಾಯುಧಗಳಿಂದ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಸಂದೇಶ್ ಶೆಟ್ಟಿ ಹಾಗೂ ಸೂರಜ್ ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ಪರಸ್ಪರ ರೋಷದಿಂದ ಬೈದಾಡಿಕೊಂಡ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂದೇಶ್ ಶೆಟ್ಟಿ ಮತ್ತಿತರರು ಕಾರಿನಲ್ಲಿ ಬಂದು

ತಿಮಿಂಗಲದ ಅಂಬರ್‌ಗ್ರೀಸ್ ಎಂದು ಹೇಳಿ ಮಾರಾಟಕ್ಕೆ ಯತ್ನ : ಮೂವರು ಆರೋಪಿಗಳ ಬಂಧನ

ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್‌ಗ್ರಿಸ್ ಎಂದು ಹೇಳಿ 10 ಲಕ್ಷ ರೂ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ ಘಟನೆ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್‌ಗ್ರಿಸ್ ಎಂದು ಹೇಳಿ 10ಲಕ್ಷ ರೂ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಶಿವಮೊಗ್ಗ

ಬ್ರಹ್ಮಾವರದಲ್ಲಿ ಭಾರೀ ಮಳೆಗೆ ಮನೆ ಕುಸಿತ

ಬ್ರಹ್ಮಾವರದಲ್ಲಿ ಕಳೆದ ಕೆಲವು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಬ್ರಹ್ಮಾವರ ರಥ ಬೀದಿಯಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಬಳಿ ಇರುವ ಮನೆಯೊಂದು ಕುಸಿದು ಬಿದ್ದಿದೆ. ಗೋಪಾಲ ಪೂಜಾರಿ ಎನ್ನುವವರ ಮನೆಯು ಮಳೆಗೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ ಮೂರ್ತಿ ಕಂದಾಯ ನೀರೀಕ್ಷಕ ಲಕ್ಷ್ಮೀ ಮೀನಾರಾಯಣ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಕುಸಿತಗೊಂಡ ಸಂದರ್ಭದಲ್ಲಿ ಗೋಪಾಲ ಪೂಜಾರಿಯವರ