ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಸಂಸ್ಥೆಯ ಆವರಣದಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಪಂಜ ವಲಯ ಅರಣ್ಯ ಅಧಿಕಾರಿ ಶ್ರೀಮತಿ ಸಂಧ್ಯಾ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭೂಮಿಯ ಮೇಲಿನ ಜೀವ ವೈವಿಧ್ಯವನ್ನು ರಕ್ಷಿಸಲು ಪರಿಸರ ಪರಿಪೂರ್ಣವಾಗಿ ನಿರ್ಮಾಣಗೊಂಡಿದೆ; ಇಂದು
ಕಡಬ: ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಸಮೀಪದ ಹಳೆನೇರೆಂಕಿ ಗ್ರಾಮದ ನೇರೆಂಕಿ ಎಂಬಲ್ಲಿ ತೋಟವೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಪೊಲೀಸರು ಜೂ.10ರಂದು ದಾಳಿ ನಡೆಸಿದ್ದಾರೆ.ಘಟನಾ ಸ್ಥಳದಿಂದ ವಾಹನ, ಕೋಳಿ ಹಾಗೂ ನಗದು ವಶಪಡಿಸಿಕೊಂಡಿದಲ್ಲದೆ, ಅಕ್ರಮ ಕೋಳಿ ಅಂಕದ ಪ್ರಮುಖ ರೂವಾರಿ ಸಹಿತ ವೇಳೆ ಮೂವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ನೇರೆಂಕಿ ನಿವಾಸಿ ಮೋಹನ್ ದಾಸ್ ರೈ (48 ವ),ಪೆರಾಬೆ ಗ್ರಾಮದ ಬೇಲ್ವಾಡಿ ನಿವಾಸಿ ರಾಧಕೃಷ್ಣ, (51 ವ) ಆಲಂಕಾರು
ಕಡಬ: ಕಡಬ ತಾಲೂಕು ಆಲಂಕಾರು ಗ್ರಾಮದ ಕಕ್ವೆ ಎಂಬಲ್ಲಿ ಮೇ 30ರಂದು ಸುರಿದ ಧಾರಕಾರ ಮಳೆಗೆ ರಸ್ತೆ ಕೊಚ್ಚಿ ಹೋಗಿ10 ಮನೆಗಳ ಬಾಹ್ಯ ಸಂಪರ್ಕ ಕಳೆದುಕೊಂಡಿದೆ. ಘಟನೆ ನಡೆದು ವಾರ ಕಳೆದರೂ ಸಮಸ್ಯೆ ಪರಿಹಾರವಾಗದೆ ಜನ ಪರದಾಡುತ್ತಿದ್ದಾರೆ. ಮೇ 30ರಂದು ಸಾಯಂಕಾಲದಿಂದ ತಡರಾತ್ರಿಯವರೆಗೆ ತಾಲೂಕಿನ ಕುಂತೂರು, ಆಲಂಕಾರು, ಸವಣೂರು, ಕೊಯಿಲ, ರಾಮಕುಂಜ, ಕಾಣಿಯೂರು ಮೊದಲಾದೆಡೆ ಎಡಬಿಡದೆ ಧಾರಕಾರ ಮಳೆಯಾಗಿತ್ತು. ಪರಿಣಾಮ ಬಹುತೇಕ
ಪುತ್ತೂರು ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಯಿತು. ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ವಿಜ್ಞಾನ ವಿಭಾಗದ ಶಿಕ್ಷಕಿಯಾದ ಶ್ರೀಮತಿ ಸಿಂಧು .ವಿ.ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪರಿಸರದ ಮಹತ್ವವನ್ನು ತಿಳಿಸಿದರು. ನಮ್ಮ ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿ ಹಾಗೂ ಜಾಗತಿಕ ತಾಪಮಾನ ಏರುವುದಕ್ಕೆ ಇರುವ ಅನೇಕ ಕಾರಣಗಳನ್ನು
ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಬೈಕ್ ಮೊಬೈಲ್ ಶರ್ಟ್ ಮತ್ತು ಚಪ್ಪಲಿ ಅನಾಥವಾಗಿ ಸಿಕ್ಕಿದ್ದು, ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರ ಸೊತ್ತುಗಳು ಇದಾಗಿದ್ದು,ಇದನ್ನು ಅಲ್ಲಿಟ್ಟು ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಮೇಶ್ ರೈ ಅವರು ಇತ್ತೀಚಿಗೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ,ಅಯ್ಕೆಯಾಗಿದ್ದರು.ಇಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಇಲ್ಲಿ ಅನಾಥವಾಗಿ ಕಂಡು
ಪುತ್ತೂರು: ಪುತ್ತೂರು ತಾಲ್ಲೂಕು ಒಳಮೊಗ್ರು ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ, ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷ ಎಸ್ ಮಾಧವ ರೈ ಕುಂಬ್ರ (61 ವ) ರವರು ಹೃದಯಾಘಾತದಿಂದ ಮೇ.22ರಂದು ರಾತ್ರಿ ನಿಧನರಾಗಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ಬೂತ್ ಅಧ್ಯಕ್ಷರಾಗಿ ಪ್ರಸ್ತುತ ಒಳಮೊಗ್ರು ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷರಾಗಿ, ಪುತ್ತೂರು ಶ್ರೀ
ಸುಬ್ರಹ್ಮಣ್ಯ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಆಯ್ಕೆಯಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರ ನೇಮಕ ಮಾಡಿ ಸರಕಾರ ಆದೇಶ ಮಾಡಿತ್ತು. ಇಂದು ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಭಾರೀ ನಾಟಕೀಯ ತಿರುವು ಪಡೆದು ಹರೀಶ್ ಇಂಜಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷತೆಗೆ ಮಹೇಶ್ ಕುಮಾರ್ ಕರಿಕ್ಕಳ ಅವರನ್ನು ಕಾಂಗ್ರೆಸ್ ಜಿಲ್ಲಾ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಚಲನಚಿತ್ರ ನಟ ಧ್ರುವ ಸರ್ಜಾ ಅವರು ಕುಟುಂಬ ಸಮೇತ ಭೇಟಿ ನೀಡಿದರು. ಕ್ಷೇತ್ರಕ್ಕೆ ಆಗಮಿಸಿದ ಅವರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಬಳಿಕ ಹೊಸಳಿಗಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಳದ ವತಿಯಿಂದ ಧ್ರುವ ಸರ್ಜಾ ಅವರನ್ನು ಗೌರವಿಸಲಾಯಿತು. ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮತ್ತಿತರರು ಉಪಸ್ಥಿರಿದ್ದರು.
ಪುತ್ತೂರು: ಉದ್ಯಮಿ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಅರುಣ್ ಕುಮಾರ್ ಅವರ ಪುತ್ತಿಲ ಪರಿವಾರದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿದ್ದ ಎಡಕ್ಕಾನ ರಾಜಾರಾಮ ಭಟ್ ರವರು ಇಂದು ಮುಂಜಾನೆ ದುಬೈಯಲ್ಲಿ ಹೃದಯಾಘಾತದಿಂದ ನಿಧನಾರಾದರೆಂದು ತಿಳಿದುಬಂದಿದೆ. ಸುಳ್ಯದ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ ಎಂಬಲ್ಲಿಯ ನಿವಾಸಿಯಾದ ರಾಜಾರಾಮ ಭಟ್ ರು ಎಡಕ್ಕಾನ ಟ್ರೇಡರ್ಸ್ ಎಂಬ ವ್ಯಾಪಾರ ಮಳಿಗೆಯನ್ನು ಹೊಂದಿದ್ದರಲ್ಲದೆ, ದುಬೈ, ಮಸ್ಕತ್ ಗಳಲ್ಲಿ ಖರ್ಜೂರದ ವ್ಯಾಪಾರ ಕೂಡ
ತೆಂಗಿನಕಾಯಿ ಕೀಳಲು ತೆಂಗಿನ ಮರಕ್ಕೆ ಹತ್ತಿದ್ದ ವ್ಯಕ್ತಿಯೊಬ್ಬರು ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ.ಮೃತಪಟ್ಟವರನ್ನು ಕಡಬ ತಾಲೂಕು ಬಲ್ಯ ಗ್ರಾಮದ ಪಲ್ಲತಡ್ಕ ನಿವಾಸಿ ದಿ|ಐತ್ತಪ್ಪ ಪೂಜಾರಿ ಅವರ ಪುತ್ರ ಉಮೇಶ್ (46) ಎಂದು ಗುರುತಿಸಲಾಗಿದೆ. ಇವರು ತನ್ನ ಮನೆಯ ತೋಟದಲ್ಲಿ ತೆಂಗಿನ ಮರಕ್ಕೆ ಹತ್ತಿದ್ದರು. ಕೆಳಕ್ಕೆ ಬಿದ್ದು ಗಂಭೀರಗಾಯ ಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ




























