ನಾವು ಮಕ್ಕಳು ಅಥವಾ ವಿದ್ಯಾರ್ಥಿಗಳ ನಡುವೆ ಬೆರೆತರೆ ಯುವಕರಾಗಿ, ಯುವ ಮನಸ್ಸುಗಳಾಗಿ ಚಿಂತನೆ ಮಾಡಲು ಸಾಧ್ಯ ಮತ್ತು ನಮ್ಮಲ್ಲಿ ಧನಾತ್ಮಕ ಚಿಂತನೆ ಹೆಚ್ಚಾಗುತ್ತದೆ. ನವೋದಯ ಅಥವಾ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಸಹ ಶಿಕ್ಷಣದೊಂದಿಗೆ ಸಹಬಾಳ್ವೆಯ ಮಹತ್ವ ಬಹುಬೇಗನೆ ಅರಿತುಕೊಳ್ಳುತ್ತಾರೆ. ಭಾರತೀಯ ಸೇನೆಗಳಲ್ಲಿ ವಸತಿ ಶಾಲೆಗಳಲ್ಲಿ ಕಲಿತ ಯುವಕರೇ
ಮಂಗಳೂರು: ಹಿಮಾನಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಸುಮನ್ ಸುವರ್ಣ ನಿರ್ದೇಶನದಲ್ಲಿ ಶರತ್ ಕುಮಾರ್ ಎ.ಕೆ. ನಿರ್ಮಾಣದಲ್ಲಿ ತಯಾರಾದ “ಕಲ್ಜಿಗ” ಸಿನಿಮಾ ಶುಕ್ರವಾರ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ತೆರೆಕಂಡಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ಬಳಿಕ ಮಾತಾಡಿದ ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಕಲ್ಜಿಗ ಸಿನಿಮಾ ಕುರಿತು ಟೀಕೆ ಟಿಪ್ಪಣಿ ಬರುತ್ತಿದೆ. ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ.
ಮಂಗಳೂರು: ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ. ಮನಸ್ಸಿಗೆ ಹಗುರವಾಗುವ ಭಾವನೆಯನ್ನು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ನೀಡುತ್ತದೆ. ಒಮ್ಮೆ ಬಂದಲ್ಲಿ ಇಲ್ಲಿಂದ ಹೋಗುವ ಮನಸ್ಸಾಗುವುದಿಲ್ಲ. ಮನಸ್ಸಲ್ಲಿ ಏನು ಬೇಸರವಿದ್ದರೂ ಇಲ್ಲಿಗೆ ಬಂದಾಗ ಅದನ್ನು ಕಳೆಯುತ್ತೇವೆ ಎಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ ಕನ್ನಡ ಚಲನಚಿತ್ರ
ಎಂ.ಕೆ ಗ್ಲಾಜಿಂಗ್ ಸಿಸ್ಟಮ್ ಮತ್ತು ಎಸ್‌ಎಟಿ ಗ್ಲೋಬಲ್ ಗ್ರೂಪ್ ವೆಂಚರ್‌ನ ಅರ್ಬನ್ ಕ್ಲಾಡ್ ಇಂಡಿಯಾದ ವತಿಯಿಂದ ನೂತನ ಭವ್ಯವಾದ ಎಕ್ಸ್‌ಪೀರಿಯನ್ಸ್ ಸೆಂಟರ್ ಸ್ಪಲ್ವಾ ಇದರ ಉದ್ಘಾಟನಾ ಕಾರ್ಯಕ್ರಮವು ಸೆ.14ರಂದು ನಡೆಯಲಿದೆ. ಮಂಗಳೂರಿನ ಕೊಟ್ಟಾರದ ನೂತನ ಭವ್ಯವಾದ ಎಕ್ಸ್‌ಪೀರಿಯನ್ಸ್ ಸೆಂಟರ್ ಸ್ಪಲ್ವಾ ಶುಭಾರಂಭಗೊಳ್ಳಲಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ನೂತನ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಸೆಪ್ಟಂಬರ್ 14ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ
ತುಳು ಲಿಪಿ ಯನ್ನು ಯುನಿಕೋಡಿಗೆ ಸೇರಿಸಲಾಗಿದೆ ಎಂದು ಹೆಚ್ಚಿನ ಮಾಧ್ಯಮಗಳಲ್ಲಿ ವರದಿ ಬಂದಿದೆ, ಇದು ಮಾಧ್ಯಮಗಳಿಗೆ ಸಿಕ್ಕಿರುವ ತಪ್ಪು ಮಾಹಿತಿ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷರು ದಯಾನಂದ ಜಿ ಕತ್ತಲ್ ಸಾರ್ ಹೇಳಿದರು. ಗೌರವಾನ್ವಿತ ವೆಂಕಟರಾಜ ಪುಣಿಚಿತ್ತಾಯರು 1100 ವರ್ಷ ಇತಿಹಾಸವುಳ್ಳ ತುಳು ಲಿಪಿಯ ಬಗ್ಗೆ ಬೆಳಕು ಚೆಲ್ಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2001 ರಲ್ಲಿ “ತುಳು
ಏಸು ಕ್ರಿಸ್ತರಿಗೆ ಜನ್ಮ ನೀಡಿದ ಮಹಾ ಮಾತೆ ಪವಿತ್ರ ಮೇರಿ ಮಾತೆಯ ಜನ್ಮ ದಿನವಾಗಿರೋ ಇಂದು ಕರಾವಳಿಯ ಕೊಂಕಣಿ ಕ್ರೈಸ್ತರಿಗೆ ವಿಶೇಷ ದಿನ. ಮೇರಿ ಮಾತೆಯ ಹುಟ್ಟು ಹಬ್ಬವನ್ನ ವಿಶೇಷ ರೀತಿಯಲ್ಲಿ ಆಚರಿಸೋ ಕ್ರೈಸ್ತರು ಇದನ್ನ ತೆನೆ ಹಬ್ಬ ಅಥವಾ ಬೆಳೆ ಹಬ್ಬ ಅಂತ ಆಚರಿಸ್ತಾರೆ. ಈ ಸಂಧರ್ಭದಲ್ಲಿ ವಿಶೇಷವಾಗಿ ಹೂವುಗಳನ್ನ ಎಸೆದು ಹೊಸ ಪೈರುಗಳನ್ನ ಹಿಡಿದು ಮೇರಿ ಮಾತೆಗೆ ಸ್ವಾಗತ ನೀಡ್ತಾರೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯದಲ್ಲಿ
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ಸೆ.7ರಿಂದ 9ರ ವರೆಗೆ ನಡೆಯುವ18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಉದ್ಘಾಟನಾ ಸಮಾರಂಭ ಜರಗಿತು. ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ,115 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಬಂಟರ ಮಾತೃ ಸಂಘದ ನೇತೃತ್ವದಲ್ಲಿ ಕಳೆದ 18 ವರ್ಷಗಳಿಂದ
ಮಂಗಳೂರು: “ಶಿಕ್ಷಕರು ಸಮಾಜದಲ್ಲಿ ನಂಬಿಕೆ ಮತ್ತು ಅತ್ಯಂತ ಹೆಚ್ಚು ಗೌರವದ ಸ್ಥಾನಮಾನಕ್ಕೆ ಅರ್ಹರಾಗಿದವರು. ಆ ಸ್ಥಾನಮಾನ ಮುಂದೆಯೂ ಉಳಿಯುವಂತಾಗಲಿ“ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.ಅವರು ಗುರುವಾರ ಸಂಜೆ ಅಡ್ಯಾರ್ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಭಂಡಾರಿ ಫೌಂಡೇಶನ್ ವತಿಯಿಂದ ಜರುಗಿದ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.“ಶಿಕ್ಷಕ ವೃತ್ತಿ ಎನ್ನುವುದು ಸನ್ಯಾಸತ್ವ ಸ್ವೀಕಾರ
ಮಂಗಳೂರು: ಮುಂದಿನ ನವೆಂಬರ್ 14ರಿಂದ 18ರವರೆಗೆ ಪಿಲಿಕುಳ ನಿಸರ್ಗಧಾಮದಲ್ಲಿ “ಪಿಲಿಕುಳೋತ್ಸವ” ಅಥವಾ “ತುಳುನಾಡೋತ್ಸವ” ಹೆಸರಿನಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳ ಹಾಗೂ ಮಕ್ಕಳ ಹಬ್ಬ, ಕೃಷಿ ಮತ್ತು ಜಾನುವಾರು ಮೇಳ, ಕೆಸರುಗದ್ದೆಯಲ್ಲಿ ಜಿಲ್ಲಾಮಟ್ಟದ ಜಾನಪದ ಕ್ರೀಡೆ ಹಾಗೂ ಕಂಬಳ ಮತ್ತು ಸಾಂಸ್ಕೃತಿಕ
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ ಕಠಿಣಕ್ರಮ ಜರುಗಿಸುವ ಕುರಿತು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದಾರೆ.ಕರಾವಳಿ ಜಿಲ್ಲೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಡ್ರಗ್ಸ್ ಮಾಫಿಯಾದ ಹಾವಳಿಯೂ ಹೆಚ್ಚಾಗಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಇದರ ಪಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ.




























