Home ಕರಾವಳಿ Archive by category ಮಂಗಳೂರು (Page 7)

ಕಸಬಾ ಬೆಂಗ್ರೆಯಲ್ಲಿ ಸಿಪಿಐಎಮ್‌ನಿಂದ ರಾಜಕೀಯ ಸಮಾವೇಶ

ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ,ಬೆಲೆ ಏರಿಕೆ, ನಿರುದ್ಯೋಗ- ರೈತರ ಭೂಸ್ವಾಧೀನ ನೀತಿಯ ವಿರುದ್ಧ CPIMದಕ್ಷಿಣ ‌ಕನ್ನಡ ಜಿಲ್ಲೆಯಾದ್ಯಂತ 2025 ಆಗಸ್ಟ್ 3 ರಿಂದ 11ರ ವರೆಗೆ ನಡೆಯುವ ರಾಜಕೀಯ ಪ್ರಚಾರಾಂದೋಲನದ ಭಾಗವಾಗಿ ಇವತ್ತು ಮಂಗಳೂರಿನ CPIM ದಕ್ಷಿಣ ಭಾಗದ ಕಸಬಾ ಬೆಂಗ್ರೆ ಪ್ರದೇಶದ ಫುಟ್ಬಾಲ್ ಮೈದಾನದ ಸಮೀಪ ಪಿ‌.ಜಿ.ಪಾಯಿಂಟ್ ಬಳಿ

ತುಳು ಭಾಷೆಗೆ ಶೀಘ್ರ ಅಧಿಕೃತ ಸ್ಥಾನಮಾನ ಲಭಿಸಲಿ : ಚಂದ್ರಕಲಾ ನಂದಾವರ

ಮಂಗಳೂರು: ತುಳು ಭಾಷೆ ಪಂಚದ್ರಾವಿಡ ಭಾಷೆಗಳಲ್ಲಿ ಹಳೆಯ ಭಾಷೆಯಾಗಿದ್ದರೂ ರಾಜ್ಯದ ಅಧಿಕೃತ ಸ್ಥಾನಮಾನ ಇನ್ನೂ ದೊರಕದಿರುವುದು ವಿಷಾದನೀಯ, ಶೀಘ್ರವಾಗಿ ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ಲಭಿಸಲಿ ಎಂದು ಹಿರಿಯ ಲೇಖಕಿ ಹಾಗೂ ವಿಶ್ರಾಂತ ಪ್ರಾಂಶುಪಾಲರಾದ ಚಂದ್ರಕಲಾ ನಂದಾವರ ಅವರು ಹೇಳಿದರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಸಹಯೋಗದಲ್ಲಿ ಶನಿವಾರ ಉರ್ವ ತುಳು ಭವನದಲ್ಲಿ ಆಯೋಜಿಸಿದ

ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ:’ಬ್ಯಾಕ್ ಟು ಊರು’ ಪರಿಕಲ್ಪನೆಗೆ, ಅಭಿವೃದ್ಧಿ-ಹೂಡಿಕೆಗಳಿಗೆ ಈ ಮನ್ನಣೆ ಪ್ರಬಲ ದಿಕ್ಸೂಚಿ: ಸಂಸದ ಕ್ಯಾ. ಚೌಟ

ನವದೆಹಲಿ: ಕಡಲ ನಗರಿ ಮಂಗಳೂರು ದೇಶದಲ್ಲೇ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಗೂ ಜಾಗತಿಕವಾಗಿ 49ನೇ ಸ್ಥಾನ ಪಡೆದಿರುವುದು ಬಹಳ ಸಂತೋಷ ಹಾಗೂ ಹೆಮ್ಮೆಯ ಸಂಗತಿ. ಇದು ಕೇವಲ ಕರಾವಳಿಗೆ ಮಾತ್ರವಲ್ಲದೆ, ಜಾಗತಿಕವಾಗಿಯೂ ಮಂಗಳೂರಿನ ಹಿರಿಮೆ ಮತ್ತು ಗರಿಮೆಯನ್ನು ಹೆಚ್ಚಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ವಿಶ್ವದ ದೊಡ್ಡ ಡೇಟಾ ಸಂಗ್ರಹ ಸಂಸ್ಥೆಯಾದ ನಂಬಿಯೋ (Numbeo) ಇತ್ತೀಚೆಗೆ ಬಿಡುಗಡೆ ಮಾಡಿದ 2025ರ

ಅಲೋಶಿಯಸ್ ವಿವಿಯ ನಿವೇದಿತ ಅವರಿಗೆ ಪಿಎಚ್‌ಡಿ ಪದವಿ

ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ವಾಣಿಜ್ಯ, ಹಣಕಾಸು ಮತ್ತು ಲೆಕ್ಕಶಾಸ್ತ್ರ ಶಾಲೆಯ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ನಿವೇದಿತರವರು ಮಂಡಿಸಿದ “Impact of Large-scale Retailing on Consumers and Small Traders: A Study with Reference to Dakshina Kannada District” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿಯನ್ನು ನೀಡಿದೆ. ಇವರು ಯುನಿವರ್ಸಿಟಿ ಕಾಲೇಜು

ಮಂಗಳೂರು:ಎಜೆ ಆಸ್ಪತ್ರೆ ಯಲ್ಲಿ ಪ್ರೋಸ್ಟೇಟ್ ವೃದ್ಧಿಗೆ ರೀಜಮ್ ಹೊಸ ಥೆರಪಿ ಪರಿಚಯ ದಕ್ಷಿಣ ಕನ್ನಡ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪ್ರಥಮ ಪ್ರಯೋಗ

ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ವಿಸ್ತರಿಸಿದ ಪ್ರಾಸ್ಟೇಟ್‌ಗೆ ಚಿಕಿತ್ಸೆ ನೀಡುವ ಅತ್ಯಾಧುನಿಕ ಹಾಗೂ ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸಾ ವಿಧಾನವಾದ ರೀಜಮ್ ಅನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಪರಿಚಯಿಸಿದೆ. ರೀಜಮ್ ಥೆರಪಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ನೀರಿನ ವಾಷ್ಪದ ಶಕ್ತಿಯನ್ನು ಬಳಸುವ ಪರಿಣಾಮಕಾರಿಯಾದ ವಿಧಾನವಾಗಿದೆ. ಇದು ದೀರ್ಘಕಾಲದ ಮೂತ್ರ ತೊಂದರೆಗಳಿಗೆ ಪರಿಹಾರ ನೀಡುತ್ತದೆ ಮತ್ತು

‘ಬಲೆ ತುಳು ಓದುಗ’ ಅಭಿಯಾನ: ಆ.9 ರಂದು ಅಕಾಡೆಮಿಗೆ ರೋಶನಿ ನಿಲಯ ವಿದ್ಯಾರ್ಥಿಗಳ ಭೇಟಿ

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ವಿದ್ಯಾರ್ಥಿ, ಯುವಜನರಲ್ಲಿ ತುಳು ಸಾಹಿತ್ಯ ಓದಿನ ಅಭಿರುಚಿ ಮೂಡಿಸಲು ಹಮ್ಮಿಕೊಂಡಿರುವ ‘ಅಕಾಡೆಮಿಡ್ ಒಂಜಿ ದಿನ ; ಬಲೆ ತುಳು ಓದುಗ’ ಅಭಿಯಾನದ ಏಳನೇ ಕಾರ್ಯಕ್ರಮ ಆ.09 ರಂದು ನಡೆಯಲಿದೆ.ಶನಿವಾರದಂದು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಕಾಲೇಜಿನ ಕನ್ನಡ ವಿಭಾಗದ 35 ವಿದ್ಯಾರ್ಥಿಗಳು ಉರ್ವಾಸ್ಟೋರ್ ನಲ್ಲಿರುವ ತುಳು ಭವನದ ಗ್ರಂಥಾಲಯಕ್ಕೆ ಭೇಟಿ ನೀಡಿ ಅಧ್ಯಯನ ಹಾಗೂ ಸಂವಾದ

ವಿಕೆ ಗ್ರೂಪ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆನ್‌ಲೈನ್ ಫ್ಯಾನ್ಸಿ ಡ್ರೆಸ್ ಸ್ಪರ್ಧೆ

ವಿಕೆ ಗ್ರೂಪ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆನ್ ಲೈನ್ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ಆಯೋಜಿಸಲಾಗಿದೆ. ಮಕ್ಕಳ ಪ್ರತಿಭೆ ಮತ್ತು ಬುದ್ಧಿವಂತಿಕೆಯ ಪ್ರದರ್ಶಿಸುವ ನಿಟ್ಟಿನಲ್ಲಿ ಈ ಸ್ಪರ್ಧೆ ನಡೆಯಲಿದೆ. ಈ ಬಾರಿ 4ನೇ ವರ್ಷ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ಆಗಿದ್ದು, ನಿಮ್ಮ ಮಗುವನ್ನು ಸ್ವಾತಂತ್ರ್ಯ ಹೋರಾಟಗಾರನಂತೆ ಬಟ್ಟೆ ಧರಿಸಿ, ಇತ್ತೀಚಿನ ಫೋಟೋ ಮತ್ತು ವಿಡಿಯೋವನ್ನ ಕಳುಹಿಸಬೇಕಾಗಿದೆ. ಇನ್ನೂ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು,

ಆಟಿಯ ನೈಜ ಅರ್ಥ ತಿಳಿಯುವ ಕೆಲಸ ನಡೆಯಬೇಕು: ಆತ್ರಾಡಿ ಅಮೃತ ಶೆಟ್ಟಿ

ಮಂಗಳೂರು: ಆಟಿಯೆಂದರೆ ಹತ್ತಾರು ಬಗೆಯ ತಿಂಡಿಗಳನ್ನು ತಯಾರಿಸಿ ಸವಿಯುವುದಷ್ಟೇ ಅಲ್ಲ, ಬದಲಾಗಿ ಆಟಿಯ ನೈಜ ಮಹತ್ವ ಹಾಗೂ ನಿಜವಾದ ರೂಪದಲ್ಲಿ ಅರ್ಥ ತಿಳಿಯುವ ಕೆಲಸ ನಡೆಯಬೇಕು ಎಂದು ಡಾ.ಶಿವರಾಮ ಕಾರಂತ ಟ್ರಸ್ಟ್ ಸದಸ್ಯೆ ಆತ್ರಾಡಿ ಅಮೃತಾ ಶೆಟ್ಟಿ ಹೇಳಿದರು.ಅವರು ಭಾನುವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಮಹಿಳಾ ಘಟಕ ಉರ್ವದ ತುಳು ಭವನದಲ್ಲಿ ಆಯೋಜಿಸಿದ್ದ ಆಟಿದ ಗೇನ ಕಾರ್ಯಕ್ರಮದಲ್ಲಿ ಆಟಿಯ ಕುರಿತು ಮಾತನಾಡಿದರು. ಆಟಿ

ಮಂಗಳೂರು: ಪಾಳು ಬಿದ್ದಿರುವ ಮನೆ, ಒಂಟಿ ಜೀವನ: ಮಹಿಳೆಗೆ ಬೇಕಿದೆ ನೆರವಿನ ಹಸ್ತ

ಪಾಳು ಬಿದ್ದಂತಿರುವ ಮನೆಯಲ್ಲಿ ಆಕೆಯದ್ದು ಒಂಟಿ ಜೀವನ. ದಿನದ ತುತ್ತಿಗೂ ನಿತ್ಯದ ಪರದಾಟ. ನಗರದ ಮಧ್ಯ ಭಾಗದಲ್ಲೇ ಇದ್ರೂ, ಯಾರೊಬ್ಬರ ಸಹಾಯವೂ ದೊರಕುತ್ತಿಲ್ಲ. ಸರಕಾರದ ಸವಲತ್ತೂ ಅಷ್ಟೇ, ಈ ತಾಯಿಯ ಕೈಗೆ ಎಟುಕಿಲ್ಲ. ಅಷ್ಟೊಂದು ಶೋಚನೀಯವಾಗಿ ಬದುಕುವ ಈ ಮಹಿಳೆಯ ಕಥೆ ಕೇಳಿದ್ರೆ ಕಣ್ಣೀರು ತರಿಸುವಂತಿದೆ. ಹೌದು, ಯಾವಾಗ ಬೀಳುತ್ತೋ ಅನ್ನುವ ಸ್ಥಿತಿಯಲ್ಲಿರುವ ಮನೆ…ಆ ಮನೆಯಲ್ಲಿಯೇ ಜೀವನ ಸಾಗಿಸಿಕೊಳ್ಳುತ್ತಿರುವ ಹಿರಿಯ ಜೀವ.. ಇವ್ರ ಹೆಸ್ರು ಯಶೋಧಾ.. ಕಳೆದ ೬೦

ಸುಳ್ಳು ಆರೋಪ ಹೊರಿಸಿ ಕ್ರೈಸ್ತ ಸನ್ಯಾಸಿನಿಯರ ಬಂಧನ ವಿರೋಧಿಸಿ ಪ್ರತಿಭಟನೆ

ಸುಳ್ಳು ಆರೋಪ ಹೊರಿಸಿ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ಬಂಧಿಸಿ ಜೈಲುಗಟ್ಟಿದ ಚತ್ತೀಸ್ ಗಡ್ ರಾಜ್ಯ ಸರಕಾರದ ಫ್ಯಾಸಿಸ್ಟ್ ರಾಜಕಾರಣವನ್ನು ವಿರೋಧಿಸಿ ಹಾಗೂ ಕ್ರೈಸ್ತ ಸನ್ಯಾಸಿನಿ ಯರನ್ನು ಬಿಡುಗಡೆಗೊಳಿಸಬೇಕು,ಅವರ ಮೇಲಿನ ಸುಳ್ಳು ಮೊಕದ್ದಮೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಶನಿವಾರ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಜನವಾದಿ ಮಹಿಳಾ ಸಂಘಟನೆಯ ನೇತ್ರತ್ವದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ