Home Archive by category ಕರಾವಳಿ

ಉಡುಪಿ ಧರ್ಮಪ್ರಾಂತ್ಯದ ‘ಸುವಿಚಾರ ಚಿಂತನ-ಮಂಥನ ತಂಡ’ದ ಅಧ್ಯಕ್ಷರಾಗಿ ಡಾ|ಜೆರಾಲ್ಡ್ ಪಿಂಟೊ, ಪ್ರ. ಕಾರ್ಯದರ್ಶಿಯಾಗಿ ಮೈಕಲ್ ರೊಡ್ರಿಗಸ್ ಆಯ್ಕೆ

ಉಡುಪಿ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಖಂಡರನ್ನು ಒಳಗೊಂಡ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಸುವಿಚಾರ ಚಿಂತನ-ಮಂಥನ ತಂಡದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲರಾದ ಡಾ|ಜೆರಾಲ್ಡ್ ಪಿಂಟೊ ಆಯ್ಕೆಯಾಗಿದ್ದು ಪ್ರಧಾನ ಕಾರ್ಯದರ್ಶಿಯಾಗಿ ಧರ್ಮಪ್ರಾಂತ್ಯದ ಮಾಧ್ಯಮ ಸಂಯೋಜಕ, ಪತ್ರಕರ್ತರಾದ ಮೈಕಲ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ

ಉಡುಪಿ: ಡಿಸೆಂಬರ್ 6 ರಿಂದ ಡಿ. 21 ರ ವರೆಗೆ ಜೋಯಾಲುಕ್ಕಾಸ್ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

ಉಡುಪಿ, ಕರ್ನಾಟಕ-ಡಿಸೆಂಬರ್ ೨೦೨೫: ಜಗತ್ತುನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, ಡಿಸೆಂಬರ್ ೬, ೨೦೨೫ ರಿಂದ ಕರ್ನಾಟಕದ ತನ್ನ ಪ್ರತಿಷ್ಠಿತ ಉಡುಪಿ ಶೋ ರೂಂನಲ್ಲಿ “ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ” ಮೂಲಕ ಇಡೀ ನಾಡನ್ನು ಬೆರಗುಗೊಳಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಪ್ರದರ್ಶನವು ವಜ್ರಾಭರಣಗಳಲ್ಲಿನ ಕರಕುಶಲತೆ, ಸೊಬಗು ಮತ್ತು ನಾವೀನ್ಯತೆಯ ಮರೆಯಲಾಗದ ಅನುಭವದ ಭರವಸೆ ನೀಡುತ್ತದೆ. ವಿಶಿಷ್ಟ ವಧುವಿನ ಸೆಟ್‌ಗಳಿಂದ ಸಮಕಾಲೀನ

Mangaluru: ಮುಂದಿನ ಮಳೆಗಾಲದೊಳಗೆ ಸೀ ಆ್ಯಂಬುಲೆನ್ಸ್‌  ಕಾರ್ಯಾಚರಣೆ

ಮೀನುಗಾರರು ಮೀನುಗಾರಿಕೆಗೆ ಹೋದ ಸಂದರ್ಭ ಸಮುದ್ರದಲ್ಲಿ ಅವಘಡಗಳು ಉಂಟಾದಾಗ ಮೀನುಗಾರರ ಜೀವರಕ್ಷಣೆಗೆ ನೆರವಾಗುವ ನಿಟ್ಟಿನಲ್ಲಿ ಆರಂಭಿಸಲು ಉದ್ದೇಶಿಸಲಾಗಿರುವ “ಸೀ ಆ್ಯಂಬುಲೆನ್ಸ್‌’ ವ್ಯವಸ್ಥೆ ಮುಂದಿನ ಮಳೆಗಾಲದ ಒಳಗೆ ಕಾರ್ಯಾರಂಭ ಮಾಡಲಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್‌. ವೈದ್ಯ ತಿಳಿಸಿದ್ದಾರೆ. ಶನಿವಾರ ನಗರದಲ್ಲಿ ಮಾಧ್ಯಮದವರ ಜತೆ ಅವರು ಮಾತನಾಡಿ, ಸೀ ಆ್ಯಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸುವುದಾಗಿ

ಮಂಗಳೂರು: ಮೀನುಗಾರಿಕಾ ಬಂದರು ಆಧುನೀಕರಣಕ್ಕೆ ಶಂಕುಸ್ಥಾಪನೆ

ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೀನುಗಾರರ ಬೇಡಿಕೆ ಏನು ಎಂದು ಕೇಳಿ ಯೋಜನೆ ರೂಪಿಸಿದರೆ ಮಾತ್ರ ಅವರ ಕಷ್ಟಗಳು ನಿವಾರಣೆಯಾಗಲು ಸಾಧ್ಯ. ಸಮುದ್ರ ತಟದಲ್ಲಿರುವ 16 ರಾಜ್ಯಗಳಲ್ಲಿ ಮೀನುಗಾರಿಕೆ ನಡೆಯುತ್ತಿದೆ, ಹಾಗಾಗಿ ಆಯಾ ರಾಜ್ಯದ ಆವಶ್ಯಕತೆಗೆ ಪೂರಕವಾಗಿ ಸಹಾಯ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು. ಪ್ರಧಾನ ಮಂತ್ರಿ

ವಿಶ್ವಬ್ರಾಹ್ಮಣ ಯುವ ಸಂಘಟನೆ (ರಿ.)ಚತುರ್ಥ ಬಾರಿಯ ಸಾಮೂಹಿಕ ವಿವಾಹ ಹಾಗೂ ಸಭಾ ಕಾರ್ಯಕ್ರಮ

ಕಾಪು: ವಿಶ್ವಬ್ರಾಹ್ಮಣ ಯುವ ಸಂಘಟನೆ (ರಿ.)ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿ, ಉಡುಪಿ ಜಿಲ್ಲೆ ದಶಮಾನೋತ್ಸವ ಸಂಭ್ರಮಹಾಗೂ ಚತುರ್ಥ ಬಾರಿಯ ಸಾಮೂಹಿಕ ವಿವಾಹ ಹಾಗೂ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಸಂಗಮ ಡಿ.10ರಂದು ನಡೆಯಲಿದೆ. ಕಟಪಾಡಿ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ವಿಶ್ವ ಬ್ರಾಹ್ಮಣ ಸಂಘಟನೆಯ ದಶಮಾನೋತ್ಸವ ಸಂಭ್ರಮ ಹಾಗೂ ಚತುರ್ಥ ಬಾರಿಯ ಸಾಮೂಹಿಕ ವಿವಾಹದಲ್ಲಿ ವಿಶ್ವಕರ್ಮ ಸಮಾಜದ 12 ಜೋಡಿಗಳು ಹಸೆಮನೆ ಏರಲಿದ್ದಾರೆ.ಕಳೆದ 3 ಬಾರಿ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ : ಗೊನ್ಝಾಗ ಶಾಲೆಯ ಯುವರಾಜ್ ಗೆ ಚಿನ್ನದ ಪದಕ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಅವರು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯ ಆಯೋಜಿಸಿದ ರಾಷ್ಟ್ರಮಟ್ಟದ 69ನೇ ನ್ಯಾಶನಲ್ ಸ್ಕೂಲ್ ಗೇಮ್ಸ್ ನ ಅಥ್ಲೆಟಿಕ್ಸ್ ನಲ್ಲಿ 200 ಮೀ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದು ಶಾಲೆಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. 23.37 ಸೆಕೆಂಡಿನಲ್ಲಿ ಈ ಸಾಧನೆಗೈದ ಯುವರಾಜ್ ಸಿ ಬಿ ಎಸ್ ಇ ಪರವಾಗಿ ರಾಷ್ಟ್ರಮಟ್ಟದ ಈ ಸ್ಪರ್ಧಾಕೂಟದಲ್ಲಿ ಭಾಗವಹಿಸಿದ ಮೊದಲ ಅಲೋಶಿಯಸ್

ಹಾಡುಗಳ ಮೂಲಕ ತುಳು ಅಭಿರುಚಿ ಮೂಡಿಸಲು ಸಾಧ್ಯ: ಭಾಸ್ಕರ್ ತೊಕ್ಕೊಟ್ಟು

ಮಂಗಳೂರು : ತುಳು ಭಾಷಾ ಕಲಿಕೆ ಮತ್ತು ಭಾಷಾಭಿಮಾನ ಮೂಡಿಸುವ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿ ಕೊಂಡಿರುವ “ಡೆನ್ನ ಡೆನ್ನಾನ-ಪದ ಪನ್ಕನ” ಅಭಿಯಾನವು ಮಹತ್ವಪೂರ್ಣವಾಗಿದೆಯೆಂದು ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ದೇಹಧಾರ್ಡ್ಯ ಪಟು ಭಾಸ್ಕರ ತೊಕ್ಕೊಟ್ಟು ಅಭಿಪ್ರಾಯಪಟ್ಟರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸರಕಾರಿ ಪ್ರೌಢಶಾಲೆ ಬಬ್ಬುಕಟ್ಟೆಯ ಜಂಟಿ ಆಶ್ರಯದಲ್ಲಿ ಬಬ್ಬುಕಟ್ಟೆ ಶಾಲೆಯಲ್ಲಿ ಗುರುವಾರದಂದು

ವಿಟ್ಲ ಪಟ್ಟಣ ಪಂಚಾಯತ್‌ ಸ್ಥಾಯಿ ಸಮಿತಿಯ ಎರಡನೇ ಅವಧಿಯ ಅಧ್ಯಕ್ಷ ಅಶೋಕ್‌ ಕುಮಾರ್‌ ಶೆಟ್ಟಿ ಆಯ್ಕೆ

ವಿಟ್ಲ ಪಟ್ಟಣ ಪಂಚಾಯತ್‌ ಸ್ಥಾಯಿ ಸಮಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್‌ ಕುಮಾರ್‌ ಶೆಟ್ಟಿಯವರ ಪದಗ್ರಹಣ ಕಾರ್ಯಕ್ರಮ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಪ್ರಸನ್ನ ಮಾರ್ತ ಮತ್ತು ಬಿಜೆಪಿ ಮುಖಂಡರು ಭಾಗಿ. ವಿಟ್ಲ ಪಟ್ಟಣ ಪಂಚಾಯತ್‌ ಸ್ಥಾಯಿ ಸಮಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್‌ ಕುಮಾರ್‌ ಶೆಟ್ಟಿಯವರ ಪದಗ್ರಹಣ ಕಾರ್ಯಕ್ರಮ ಪಟ್ಟಣ ಪಂಚಾಯತ್‌ನ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ

ಕಾರ್ಮಿಕರು ದೇಶದ ಬೆನ್ನೆಲುಬು – ಶಾಸಕ ಸಿಮೆಂಟ್ ಮಂಜು

ಆಲೂರು: ಕಾರ್ಮಿಕರು ನಮ್ಮ ದೇಶದ ಬೆನ್ನೆಲುಬು, ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು  ಶಾಸಕ ಸಿಮೆಂಟ್ ಮಂಜು ಹೇಳಿದರು. ಗುರುವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ   ಬ್ರಿಡ್ಜ್ ಕೋರ್ಸ್ ತರಬೇತಿ  ಹಾಗೂ  ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಫಲಾನುಭವಿಗಳಿಗೆ ಸುರಕ್ಷತಾ ಕಿಟ್ ವಿತರಿಸಿ ಮಾತನಾಡಿದರು.ದುಶ್ಚಟಕ್ಕೆ ಬಲಿಯಾದ ವ್ಯಕ್ತಿಯ ಆರೋಗ್ಯ ಹಾಳಾಗುವುದಲ್ಲದೆ, ಅವರ ಕುಟುಂಬ ಮತ್ತು