ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆ ಹಾಗೂ ಆವಿಷ್ಕಾರ ಯೋಗ ಮಂಗಳೂರು ಇದರ ಸಹಯೋಗದಲ್ಲಿ ಜೂನ್ 17 ರಿಂದ 21ರ ವರೆಗೆ ಆವಿಷ್ಕಾರ ಯೋಗ ಚಿಕಿತ್ಸಾ ಕೇಂದ್ರ ಬಿಜೈ ಮತ್ತು ಬಂಟ್ಸ್ ಹಾಸ್ಟೆಲ್‌ನಲ್ಲಿ ಯೋಗ ದಿನದ ಸಾಮಾನ್ಯ ಪ್ರೊಟೋಕಾಲ್‌ನ ಯೋಗ ತರಬೇತಿಯು ನಡೆಯಲಿದೆ. ಈ ಶಿಬಿರ ಉಚಿತವಾಗಿದ್ದು ಸಾರ್ವಜನಿಕರು ತರಬೇತಿಗೆ ಭಾಗವಹಿಸಬಹುದು. ತರಬೇತಿ ಸಿಗುವ ಸಮಯ ಬೆಳಿಗ್ಗೆ 6
ಕರಾವಳಿಯಲ್ಲಿ ಕೋಮು ಸಂಘರ್ಷ ತಡೆಯುವ ನಿಟ್ಟಿನಲ್ಲಿ ರಚಿಸಲಾದ ವಿಶೇಷ ಕಾರ್ಯ ಪಡೆ (ಸ್ಪೆಷಲ್ ಆ್ಯಕ್ಷನ್ ಫೋರ್ಸ್) ನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು. ನಗರ ಪೊಲೀಸ್ ಕಮಿಷನರ್ ಕಚೇರಿ ಬಳಿಯ ಗೆಸ್ಟ್ ಹೌಸ್ ಕಟ್ಟಡದಲ್ಲಿ ವಿಶೇಷ ಕಾರ್ಯ ಪಡೆ ಕಚೇರಿ ಕಾರ್ಯಾಚರಣೆ ನಡೆಸಲಿದೆ. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯರಾದ ಐವನ್ ಡಿ’ಸೊಜಾ ಮಂಜುನಾಥ ಭಂಡಾರಿ, ರಾಜ್ಯ ಪೊಲೀಸ್ ಮಹಾ
ಕುಂದಾಪುರ: ಶುಕ್ರವಾರ ನಸುಕಿನ ಜಾವ ಸುರಿದ ಭಾರೀ ಗಾಳಿ-ಮಳೆಗೆ ಬೃಹತ್ ಅರಳಿ ಮರ ಮನೆಯೊಂದರ ಮೇಲೆ ಬಿದ್ದು ಮನೆ ಹಾನಿಯಾದ ಘಟನೆ ಕುಂದಾಪುರ ಪುರಸಭಾ ವ್ಯಾಪ್ತಿಯ ಭಗತ್ ಸಿಂಗ್ ರಸ್ತೆಯಲ್ಲಿನ ಮಠದಬೆಟ್ಟುವಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ವಸಂತಿ ದೇವಾಡಿಗ ಮನೆ ಮೇಲೆ ಮರ ಬಿದ್ದಿದ್ದು, ಮನೆಯ ಸ್ಲ್ಯಾಬ್ ಗೆ ಹಾನಿಯಾಗಿದೆ. ಪಕ್ಕದಲ್ಲೇ ಯಕ್ಷೇಶ್ವರಿ ದೇವಸ್ಥಾನವಿದ್ದು, ದೇವಸ್ಥಾನಕ್ಕೆ ತಾಗಿಕೊಂಡೆ ಮರ ಬಿದ್ದಿದೆ. ಸ್ಲ್ಯಾಬ್ ಮನೆಯಾದ್ದರಿಂದ ಮನೆಯಲ್ಲಿ
ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಯ ವತಿಯಿಂದ ದಿನಾಂಕ 12.06 2025ರಂದು ಸಿಬ್ಬಂದಿಗಳಿಗೆ ಅಗ್ನಿನಿವಾರಣೆ ಕ್ರಮ ಮತ್ತು ಅಗ್ನಿಶಮನದ ಬಗ್ಗೆ ತಮ್ಮ ಇಲಾಖೆಯಿಂದ ಒಂದು ದಿನದ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಾಗಾರವನ್ನು ನಡೆಸಲಾಯಿತು. ತರಬೇತಿ ಕಾರ್ಯಾಗಾರದಲ್ಲಿ ಅಗ್ನಿಶಾಮಕ ಇಲಾಖೆಯ ಮಾಹಿತಿ, ಬೇರೆ ಬೇರೆ ವಿಧಗಳ ಅಗ್ನಿ ಅವಘಡಗಳು, ನಿವಾರಣಾ ಹಾಗೂ ಮುನ್ನೆಚ್ಚರಿಕಾ ಕ್ರಮ, ಪ್ರಥಮ
ಉಳ್ಳಾಲ: 12 ನೇ ಮಹಡಿಯಿಂದ ಬಿದ್ದು ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಸಿಲಿಕೋನಿಯಾ ವಸತಿ ಸಂಕೀರ್ಣದಲ್ಲಿ ತಡರಾತ್ರಿ ವೇಳೆ ಸಂಭವಿಸಿದೆ.ವೈದ್ಯರಾಗಿರುವ ಡಾ. ಮಮ್ತಾಝ್ ಅಹಮ್ಮದ್ ಎಂಬವರ ಪುತ್ರಿ ಹಿಬಾ(15) ಸಾವನ್ನಪ್ಪಿರುವ ಬಾಲಕಿ. 18ನೇ ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12 ಮಹಡಿಯಲ್ಲಿ ವೈದ್ಯ ದಂಪತಿ ವಾಸವಿದ್ದರು. ತಡರಾತ್ರಿ ಏಕಾಏಕಿ ಬಾಲಕಿ ಹಿಬಾ ಮೇಲಿಂದ ಕೆಳಬಿದ್ದು ಸಾವನ್ನಪ್ಪಿದ್ದಾಳೆ.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಲವರಿಮಠ ಬೈಂದೂರು ವಲಯ ಉಡುಪಿ ಜಿಲ್ಲೆ. ಇಂದು ಶಾಲೆಯಲ್ಲಿ ಹೊಸಕಿರಣ ನ್ಯೂಸ್ ಚಾನೆಲ್ ವತಿಯಿಂದ 21 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಹಾಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕೊಡುಗೆ ನೀಡಿದ ಹೊಸ ಕಿರಣ ನ್ಯೂಸ್ ಚಾನೆಲ್ ಸಂಪಾದಕರಾದ ಕಿರಣ್ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಸರಳವಾಗಿ ಉದ್ಘಾಟಿಸಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹಾಗು ಸಹಾಯ ಮನೋಭಾವದ ಕುರಿತು ಮಾತನಾಡಿದರು.
ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ)ಯಿಂದ 2024 ರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ ಮತ್ತು ಎನ್‌ಸಿಸಿ ಮಾಜಿ ಕೆೆಡೆಟ್ ಆಗಿರುವ ಸಬ್ ಲೆಫ್ಟಿನೆಂಟ್ ಅನನ್ಯ ರಾವ್ ಭಾರತೀಯ ನೌಕಾಪಡೆಗೆ ನಿಯೋಜನೆಗೊಂಡಿದ್ದಾರೆ. ಮಂಗಳೂರಿನ ಅನನ್ಯರವರು ನಿವೃತ್ತ ಟೆಲಿಕಾಂ ಅಧಿಕಾರಿ ಸತೀಶ್ ರಾವ್ ಮತ್ತು ವೀಣಾ ರಾವ್ ದಂಪತಿ ಪುತ್ರಿ. ಎಳಿಮಲದ ಭಾರತೀಯ ನೌಕಾ ಅಕಾಡೆಮಿಯಲ್ಲಿ 10 ತಿಂಗಳ ತೀವ್ರ ಮಿಲಿಟರಿ ತರಬೇತಿ ಕಾರ್ಯಕ್ರಮದ ನಂತರ, ಮೇ 31ರ, 2025 ರಂದು
ಹೊಸಕಿರಣ ನ್ಯೂಸ್ ಚಾನೆಲ್ ವತಿಯಿಂದ 23 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಹಾಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡಮೊಗೆ. ಬೈಂದೂರು ವಲಯ ಉಡುಪಿ ಜಿಲ್ಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೊಡುಗೆ ನೀಡಿದ ಹೊಸ ಕಿರಣ ನ್ಯೂಸ್ ಚಾನೆಲ್ ಸಂಪಾದಕರಾದ ಶ್ರೀಯುತ ಕಿರಣ್ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಸರಳವಾಗಿ ಉದ್ಘಾಟಿಸಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹಾಗು ಸಹಾಯ ಮನೋಭಾವದ ಕುರಿತು ಮಾತನಾಡಿದರು.
ಪೆರ್ನಾಜೆ:ಆರ್ ಪಿ ಕಲಾ ಸೇವಾ ಟ್ರಸ್ಟ್ (ರಿ).ಪಾಂಬಾರ್ ಇದರ ವತಿಯಿಂದ ಅಂತರ್ ರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರ ಪುತ್ತುರಲ್ಲಿ ಜೂನ್ 15 ರಂದು ಗಣ್ಯರ ಸಮ್ಮುಖದಲ್ಲಿ ನಡೆಯಲಿರುವುದು. ಆ ವೇದಿಕೆಯಲ್ಲಿ ವಿಶಿಷ್ಟ ವಿಶೇಷ ಬರಹಗಾರ ತಮ್ಮ ಕೃಷಿ ಜೇನು ಕೃಷಿ ಜೇನುಗಡ್ಡ ಸಂಶೋಧನೆ ಬರಹ ಕಲಾ ಸೇವೆಗಾಗಿ ಅಂತರ್ ರಾಜ್ಯ ಮಟ್ಟದ ಕೃಷಿ ರತ್ನ ಪ್ರಶಸ್ತಿಗೆ, ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳನ್ನು
ಕಡಬ :ಇಲ್ಲಿನ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಉದ್ಘಾಟನೆ ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಹೊಸ ಶೈಕ್ಷಣಿಕ ವರ್ಷವನ್ನು ಉದ್ಘಾಟಿಸಿ ಮಾತನಾಡಿದ ಕಡಬ ಕ್ಲಸ್ಟರ್ ನ ಸಂಪನ್ಮೂಲ ಅಧಿಕಾರಿ ಶ್ರೀಯುತ ಗಣೇಶ್ ನಡುವಲ್ ವಿದ್ಯಾರ್ಥಿಗಳಿಗೆ ಉತ್ತಮ ಓದುಗಾರರಾಗಿ ,ಆತ್ಮಚರಿತ್ರೆಯನ್ನು ಓದಿ, ಕನಸುಗಳನ್ನು ಹೇಗೆ ಕಾಣಬೇಕು ಮತ್ತು ಕನಸುಗಳನ್ನು ಹೇಗೆ ನನಸಾಗಿಸಬೇಕು, ಜೊತೆಗೆ ಕಥೆಗಳನ್ನು ಬರೆಯುವ ರೂಢಿಯನ್ನು