Home Archive by category ಕರಾವಳಿ (Page 299)

“ನನ್ನ ಮತ ಉತ್ತಮ ಕೌಶಲ್ಯ, ಉಜ್ವಲ ಭವಿಷ್ಯ” ಕುರಿತು ಯುವ ಮತದಾರರೊಂದಿಗೆ ಸಂವಾದ ; ಶೇ 40 ರ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಯುವ ಶಕ್ತಿ ಮುಂದಾಗಬೇಕು – ಶಶಿ ‌ತರೂರ್

ಯುವ ಜನಾಂಗ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಬೆಂಬಲಿಸಬೇಕು. ಸ್ವಚ್ಛ ಆಡಳಿತ ನೀಡುವ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ. ನಗರದ ಹೊರ ವಲಯದ ಭಾರತೀಯ ವಾಯುಪಡೆ ಸಮೀಪದ ಹೊಸಹಳ್ಳಿಯಲ್ಲಿ ಆಯೋಜಿಸಿದ್ದ “ಯುವ ಮತ” ಅಭಿಯಾನದಡಿ “ನನ್ನ ಮತ ಉತ್ತಮ

ತಮಿಳಿನಾಡಿನ ತೆಪ್ಪಕಾಡು ಆನೆ ಶಿಬಿರಕ್ಕೆ ಪ್ರಧಾನಿ ಮೋದಿ ಭೇಟಿ

ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ “ದಿ ಎಲಿಫೆಂಟ್ ವಿಸ್ಪರರ್ಸ್’ನ ಪ್ರಮುಖ ಪಾತ್ರಧಾರಿ ಗಳಾದ ಕಾವಾಡಿ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮೈಸೂರಿನಲ್ಲಿ ಭಾನುವಾರ ನಡೆದ `ಪ್ರಾಜೆಕ್ಟ್ ಟೈಗರ್’ 50 ವರ್ಷಗಳನ್ನು ಪೂರೈಸಿದ ಸಮಾರಂಭದಲ್ಲಿ, ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಎಲಿಫೆಂಟ್ ವಿಸ್ಪರರ್ಸ್

ವಿದ್ಯುತ್ ಕನೆಕ್ಷನ್‌ ನೀಡಲು ಲಂಚದ ಬೇಡಿಕೆ : ರೈತ ಸಂಘ ಆಕ್ರೋಶ

ಎಪ್ರಿಲ್ 8,2023 ರಂದು ಬಡ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಸರ್ವೋದಯ ಕರ್ನಾಟಕ ಪಕ್ಷ ಯುವ ನಾಯಕ ಆದಿತ್ಯ ನಾರಾಯಣ ಕೊಲ್ಲಾಜೆ ನೇತೃತ್ವದ ರೈತ ಸಂಘದ ತಂಡವು ಕಣಿಯೂರು ಗ್ರಾಮ, ಅಂತಾರಕ್ಕೆ ಭೇಟಿ ನೀಡಿತ್ತು. ಈ ಬಡ ಕುಟುಂಬಕ್ಕೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಪಂಚಾಯತ್ ಈಗಾಗಲೇ ನಿರ್ಣಯ ಕೈಗೊಂಡಿದೆ ಎಂದು ಸಂಶೋಧನೆ ನಡೆಸಿದಾಗ ರೈತ ಸಂಘಕ್ಕೆ ತಿಳಿಯಿತು. ಆದರೆ ಭ್ರಷ್ಟಾಚಾರದಿಂದ ಕುಟುಂಬ ಬಲಿಯಾಗಿದ್ದು, ಲಂಚ ಕೊಡಲು ಸಾಧ್ಯವಾಗದೆ ವಿದ್ಯುತ್ ಸಂಪರ್ಕ

ವಿಶೇಷ ಮಕ್ಕಳ ಪೋಷಕರ ಭೇಟಿ ಮಾಡಿದ ಡಾ.ಮಮತಾ ಹೆಗ್ಡೆ

ಹೆಬ್ರಿ ತಾಲೂಕಿನ ಮುನಿಯಾಲ್ ಮುದ್ರಾಡಿ ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಯಲ್ಲೇ ವಿದ್ಯಾಬ್ಯಾಸ ಮುಂದುವರಿಸಿರುವ ವಿಶೇಷ ಚೇತನ ಮಕ್ಕಳ ಮನೆಗಳಿಗೆ ಕಾರ್ಕಳದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಹಾಗೂ ಸತ್ಯವಾನ್ ಸಾವಿತ್ರಿ ಟ್ರಸ್ಟ್ ಅಧ್ಯಕ್ಷೆ ಡಾ. ಮಮತಾ ಹೆಗ್ಡೆ ಅವರು ಭೇಟಿ ನೀಡಿದರು.ವಿಶೇಷ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಮಮತಾ ಹೆಗ್ಡೆ ಅವರು ಮಕ್ಕಳ ಪೋಷಕ ರೊಂದಿಗೆ ಸಮಾಲೋಚನೆ ನಡೆಸಿದರು .ನೆಕ್ರೆಯಲ್ಲಿ ನಡೆದ ನಾಗಮಂಡಲ ಪೂಜೆಯಲ್ಲಿ ಭಾಗವಹಿಸಿದ ಮಮತಾ ಹೆಗ್ಡೆ

ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಇಲ್ಲ : ಕುಕ್ಕೆಯಲ್ಲಿ ಸಚಿವ ಎಸ್.ಅಂಗಾರ

ಸುಬ್ರಹ್ಮಣ್ಯ: ಚುನಾವಣೆಗೆ ಸಂಬಂಧಿಸಿದಂತೆ ದಿನಾಂಕ ನಿಗಧಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಈಗಾಗಲೇ ಕೆಲಸ ಕಾರ್ಯಗಳನ್ನು ಆರಂಭಿಸಲಾಗಿದೆ. ಅಭ್ಯರ್ಥಿ ಆಯ್ಕೆ ಮಾಡಿ ಇನ್ನು ನಿರ್ಧಾರ ಹೈಕಮಾಂಡ್ ಗೆ ಕಳುಹಿಸಬೇಕಿದೆ. ಆದರೆ ಅಭ್ಯರ್ಥಿ ಆಯ್ಕೆಯಲ್ಲಿ ಇಡೀ ರಾಜ್ಯದಲ್ಲಿ ಯಾವುದೇ ಗೊಂದಲಗಳು ಇಲ್ಲ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.ಅವರು ರವಿವಾರ ಕುಕ್ಕೆ ಶ್ರೀ

ಮಂಜೇಶ್ವರದ ಪಟ್ಟತ್ತಮೊಗರುವಿನಲ್ಲಿ ಮೊಗೇರ ದೈವದ ಪವಾಡ

ಮಂಜೇಶ್ವರದ ಮಿಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಟ್ಟತ್ತಮೊಗರುವಿನಲ್ಲಿ ಮೊಗೇರ ದೈವದ ಪವಾಡ ಕಂಡು ಅಲ್ಲಿನ ಜನತೆ ಅಚ್ಚರಿಗೆ ಒಳಗಾಗಿದ್ದಾರೆ. ಮೊಗೇರ ದೈವಗಳ ವರ್ಷಾವಧಿ ನೇಮೋತ್ಸವ ನಡೆಯುತ್ತದೆ. ಈ ಬಾರಿ ದೈವಗಳ ಭಂಡಾರವನ್ನು ಈ ವರ್ಷದ ಉತ್ಸವಕ್ಕೆಂದು ತೆಗೆದಿಡುವಾಗ, ಕಳೆದ ವರ್ಷ ದೈವದ ಭಂಡಾರಕ್ಕೆ ಅರ್ಪಿಸಿದ ಮಲ್ಲಿಗೆ ಹೂ ವರ್ಷ ಕಳೆದರೂ ಇಂದಿಗೂ ಬಾಡದೆ ಹಾಗೆ ಇರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ಇದು ದೈವದ ಕಾರಣಿಕ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ.

ಮಂಜೇಶ್ವರದ ಮೊರತ್ತಾಣೆ ನಿವಾಸಿ ರೋಹಿತಾಕ್ಷ ನಾಪತ್ತೆ

ಮಂಜೇಶ್ವರದ ಮೊರತ್ತಾಣೆ ನಿವಾಸಿ ಬಾಬು ಬೆಳ್ಚಪ್ಪಾಡ ಎಂಬವರ ಪುತ್ರ ರೋಹಿತಾಕ್ಷ ಎಂಬವರು ನಾಪತ್ತೆಯಾಗಿದ್ದಾರೆ. ಮಂಜೇಶ್ವರ ಸಮೀಪದ ದೈಗೋಳಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಎಪ್ರಿಲ್ 4ರಂದು ಕೆಲಸಕ್ಕೆಂದು ಹೋದಾವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಆತನ ಸಹೋದರ ಗಂಗೂ ಮೊರತ್ತಾಣೆ ಅವರು ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೆ ರೋಹಿತಾಕ್ಷನ ಬಗ್ಗೆ ಸುಳಿವು ಸಿಕ್ಕಲ್ಲಿ

ಮೂಡುಬಿದಿರೆ: ಬೈಕ್ ಮತ್ತು ಕಾರು ನಡುವೆ ಅಪಘಾತ : ದ್ವಿಚಕ್ರ ವಾಹನ ಸವಾರ ಸಾವು

ಪುರಸಭಾ ವ್ಯಾಪ್ತಿಯ ಜ್ಯೋತಿನಗರದಲ್ಲಿ ಶನಿವಾರ ರಾತ್ರಿ ಕಾರೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಕಾಶಿಪಟ್ಣದ ಉಮೇಶ್ ( 49) ಮೃತಪಟ್ಟ ವ್ಯಕ್ತಿ. ಉಮೇಶ್ ಅವರು ಮೂಡುಬಿದಿರೆ ಕಡೆಯಿಂದ ಮಹಾವೀರ ಕಾಲೇಜು ರಸ್ತೆಗೆ ಹೋಗುತ್ತಿದ್ದು ಜ್ಯೋತಿನಗರದಲ್ಲಿ ಕ್ರಾಸ್ ಆಗಿ ಲಾಡಿಯಲ್ಲಿರುವ ಪತ್ನಿ ಆಗಿ ಹೋಗುವ ಸಂದರ್ಭ ಬಂಟ್ವಾಳದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕಾರು ಬೈಕ್ ಗೆ ಢಿಕ್ಕಿ ಹೊಡೆದು ರಸ್ತೆಯ ಪಕ್ಕಕ್ಕೆ

13ನೇ ವರ್ಷದ ಪಣಪಿಲದಲ್ಲಿ ಜಯ-ವಿಜಯ ಜೋಡುಕರೆ ಕಂಬಳ

ಮೂಡುಬಿದಿರೆ: “ಜಯ-ವಿಜಯ” ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ವತಿಯಿಂದ ನಡೆಯುವ ಹದಿಮೂರನೇ ವರುಷದ ಕಿರಿಯ ವಿಭಾಗದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ನಡೆಯಿತು. 2022-23 ನೇ ಸಾಲಿನ ಕೊನೆಯ ಕಂಬಳ ಇದಾಗಿದ್ದು, ಊರಿನ ದೈವಸ್ಥಾನ, ದೇವಸ್ಥಾನಗಳ ಪ್ರಸಾದ ಮತ್ತು ತೀರ್ಥವನ್ನು ಕರೆಗೆ ಹಾಕುವ ಮೂಲಕ ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ ಕಂಬಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪಣಪಿಲ ಕಂಬಳ ಸಮಿತಿಯ ಗೌರವಾಧ್ಯಕ್ಷ ಶಾಸಕ ಉಮಾನಾಥ

ಆತೂರು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಅಚ್ಚರಿ : ಗಾಳಿಯ ವಿರುದ್ಧ ದಿಕ್ಕಿನಲ್ಲಿ ಸಾಗಿದ ಗಂಧದ ಕಡ್ಡಿಯ ಹೊಗೆ

ಕಡಬ: ಗಾಳಿ ಇರುವ ದಿಕ್ಕಿನಲ್ಲಿಯೇ ಹೊಗೆ ಸಾಗುವುದು ಸಾಮಾನ್ಯ. ಆದರೆ, ಇಲ್ಲೊಂದು ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ್ದ ಗಂಧದ ಕಡ್ಡಿಯ ಹೊಗೆಯು ಗಾಳಿಯ ವಿರುದ್ಧ ದಿಕ್ಕಿನಲ್ಲಿ ಸಾಗಿದೆ. ಈ ಮೂಲಕ ನೆರೆದಿದ್ದ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಈ ಘಟನೆ ನಡೆಸಿದೆ. ವಿಶೇಷ ಪೂಜೆಯ ಸಂದರ್ಭದಲ್ಲಿ ದೇವರಿಗಾಗಿ ಹಚ್ಚಿದ ಗಂಧದ ಕಡ್ಡಿಯಿಂದ ಹೊರಹೊಮ್ಮಿದ