Home Archive by category ಕರಾವಳಿ (Page 861)

ಮಂಗಳೂರಿನಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರತಿಭಟನೆ

ಖಾಸಗಿ ಬಸ್ ಪ್ರಯಾಣ ದರವನ್ನು ಜಿಲ್ಲಾಡಳಿತ ಏಕಪಕ್ಷೀಯ ನಿರ್ಧಾರ ಮಾಡಿದೆ ಎಂದು ಆಕ್ಷೇಪಿಸಿ ಜಾತ್ಯಾತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಫಟನೆಗಳ ಒಕ್ಕೂಟ ದ.ಕ.ಜಿಲ್ಲೆ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು. ಬಸ್ ಪ್ರಯಾಣ ದರ ಏರಿಕೆ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು. ಸಾರಿಗೆ ಪ್ರಾಧಿಕಾರದ ಸಭೆ ಕರೆಯದೆ ಜಿಲ್ಲಾಧಿಕಾರಿ ಬಸ್ ದರವನ್ನು

ಕೆ ಎಮ್ ಎಫ್ ವತಿಯಿಂದ ನಂದಿನಿ ಸಿಹಿ ಉತ್ಸವ: ಬಿ.ಸಿ. ರೋಡಿನ ಔಟ್‌ ಲೆಟ್‌ ನಲ್ಲಿ ಚಾಲನೆ

ಬಂಟ್ವಾಳ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನಂದಿನಿ ಸಿಹಿ ಉತ್ಸವವನ್ನು ಆ. 19 ರಿಂದ ಹಮ್ಮಿಕೊಂಡಿದ್ದು ಬಿ.ಸಿ.ರೋಡಿನ ವಿತರಕರಾದ ಅಲೋಷಿಯಸ್ ಡಿಸೋಜಾ ಅವರ ಮಳಿಗೆಯಲ್ಲಿ ಚಾಲನೆ ನೀಡಲಾಯಿತು. ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಸವಿತ ಎನ್. ಶೆಟ್ಟಿ ದೀಪ ಪ್ರಜ್ವಲಿಸಿದರು. ಅವರು ವಿ4 ನ್ಯೂಸ್‌ನೊಂದಿಗೆ ಮಾತನಾಡಿ ನಂದಿನಿ ಸಿಹಿ ಉತ್ಸವದ  ಪ್ರಯುಕ್ತ ಎಲ್ಲಾ ನಂದಿನಿ ಸಹಿ ಉತ್ಪನ್ನಗಳ ಮೇಲೆ ಶೇ.10ರಷ್ಟು ರಿಯಾಯಿತಿಯನ್ನು

ಶ್ರೀ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಆ.30ರ ತನಕ ಯಾವುದೇ ಸೇವೆಗಳಿಗೆ ಅವಕಾಶವಿಲ್ಲ

ಕಡಬ : ಸುಬ್ರಹ್ಮಣ್ಯ: ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದ ದ.ಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.30ರ ತನಕ ಯಾವುದೇ ಸೇವೆಗಳು ನಡೆಯುವುದಿಲ್ಲ. ಕೇವಲ ಶ್ರೀ ದೇವರ ದರುಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ಇರುವುದಿಲ್ಲ. ಶನಿವಾರ ಮತ್ತು ಆದಿತ್ಯವಾರ

ಪುತ್ತೂರಿನಲ್ಲಿ ಎಸ್‌ಡಿಪಿಐನಿಂದ ಪ್ರತಿಭಟನೆ

ಪುತ್ತೂರು: ಜಾತಿ, ಧರ್ಮದ ಹೆಸರಿನಲ್ಲಿ ಗಲಭೆ ನಡೆಸುತ್ತಾ ಬರುತ್ತಿರುವ ಇದೀಗ ಸಾವರ್‌ಕರ್ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಫ್ಯಾಸಿಸ್ಟ್ ಶಕ್ತಿಗಳಿಗೆ ಎಚ್ಚರಿಕೆ ಕೊಡುವ ನಿಟ್ಟಿನಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಎಸ್‌ಡಿಪಿಐ ಫ್ಯಾಸಿಸಂನ ಯಾವುದೇ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಹೇಳಿದರು. ಅವರು ಎಸ್‌ಡಿಪಿಐ ವತಿಯಿಂದ ಪುತ್ತೂರಿನ ದರ್ಬೆಯಲ್ಲಿ ನಡೆದ ಪ್ರತಿಭಟನೆಯನ್ನು

ಎಸ್ ಕೆ ಪಿ ಎ ಅಯೋಜಿಸಿದ್ದ ಪ್ರತಿಷ್ಟಿತ ಛಾಯಾ ಚಿತ್ರ ಸ್ಪರ್ಧೆ:ಛಾಯಾಗ್ರಾಹಕ ಅಶ್ವಿನ್ ಕೊಡವೂರಿಗೆ ಪ್ರಥಮ ಬಹುಮಾನ

ಕರಾವಳಿಯ ಎಸ್ ಕೆ ಪಿ ಎ ಛಾಯಾಗ್ರಾಹಕರ ಸಂಘಟನೆ ಎರ್ಪಡಿಸಿ ಪ್ರತಿಷ್ಠಿತ ಛಾಯಾಗ್ರಹ ಸ್ಪರ್ಧೆಯಲ್ಲಿ ಉದಯೋನ್ಮುಖ ಯುವ ಛಾಯಾಗ್ರಾಹಕ ಅಶ್ವಿನ್ ಕೊಡವೂರಿಗೆ ವೆಡ್ಡಿಂಗ್ ಮೂಂಮೆಟ್ಸ್ ವಿಭಾಗದಲ್ಲಿ ಪ್ರಥಮ ಬಹುಮಾನ ದೊರಕಿದೆ.ಮದುವೆ ಸಂಭ್ರಮದಲ್ಲಿ ತಂದೆ ಮಗಳ‌ ಭಾನಾತ್ಮಕ ಕ್ಷಣಗಳನ್ನು ಮನಮುಟ್ಟುವಂತೆ ತನ್ನ ಕ್ಯಾಮರದಲ್ಲಿ ಸೆರೆ ಹಿಡಿದಿದ್ದು, ನಿರ್ಣಯಕರು ಮೊದಲ ಪ್ರಶಸ್ತಿಯನ್ನು ನೀಡಿದ್ದಾರೆ. ಮೂಲತಃ ಉಡುಪಿಯ ಕೊಡವೂರು ಮೂಲದವರಾಗಿರುವ ಅಶ್ವಿನ್ ಕೊಡವೂರು ತನ್ನ ವಿಭಿನ್ನ

ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ಗೆ ವೆಂಟಿಲೇಟರ್ ಕೊಡುಗೆ

ಸುರತ್ಕಲ್ :ಮುಕ್ಕದಲ್ಲಿರುವ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ನಲ್ಲಿ  ಹೊಸ  ವೆಂಟಿಲೇಟರ್ ಯಂತ್ರವನ್ನು ಕರ್ನಾಟಕ  ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರು ಇವರ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.  ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ  ಎ ಶಾಮ್ ರಾವ್ ಪ್ರತಿಷ್ಠಾನಾದ ಅಧ್ಯಕ್ಷಾರಾದ ಡಾ. ಸಿಎ. ಎ. ರಾಘವೇಂದ್ರ ರಾವ್ ರವರ ಆಶೀರ್ವಾದದೊಂದಿಗೆ ಮತ್ತು ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ  ನಿರ್ದೇಶಕರಾದಂತ

ಹಡಗು ಮುಳುಗಡೆಯಾಗಿರುವ ಜಾಗದಲ್ಲಿ ಎಚ್ಚರಿಕೆ ಗುರುತು: ಸಚಿವ ಎಸ್. ಅಂಗಾರ

ಸಮುದ್ರದಲ್ಲಿ ಹಡಗು ಮುಳುಗಡೆಯಾಗಿರುವ ಜಾಗದಲ್ಲಿ ಎಚ್ಚರಿಕೆ ಗುರುತು ಮಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ಕೊಟ್ಟಿದ್ದೇನೆ ಎಂದು ಮೀನುಗಾರಿಕಾ ಸಚಿವ ಎಸ್. ಅಂಗಾರ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ಸುದ್ದಿಗಾರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ್ರು, ಸಮುದ್ರದಲ್ಲಿ ಹಡಗು ಮುಳಗಡೆಯಾಗಿರುವ ಜಾಗದಲ್ಲಿ ಯಾವುದೇ ಗುರುತು ಇಲ್ಲದ ಕಾರಣ ಮತ್ತೆ ಅವಘಾತಯಾಗುತ್ತೆ ಎಂಬ ದೂರು ಬಂದಿದೆ. ಈ ನಿಟ್ಟಿನಲ್ಲಿ ಮುಳುಗಡೆಯಾಗಿರುವ ಜಾಗದಲ್ಲಿ

ಸಂಪರ್ಕದ ವಿಚಾರವಾಗಿ ಬಹಳಷ್ಟು ಅಭಿವೃದ್ಧಿದಾಯಕ ನಡೆ ಅಗತ್ಯವಿದೆ: ಮಂಗಳೂರಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ 

 ಮುಂದಿನ ದಿನಗಳಲ್ಲಿ ಭಾರತ್ ನೆಟ್ ಯೋಜನೆಯನ್ನ ೫ ಸಾವಿರ ಹಳ್ಳಿಗಳಿಗೆ ತಲುಪಿಸುವ ಯೋಜನೆ ಹಾಕಿದ್ದೇವೆ ಎಂದು ಕೌಶಲಾಭಿವೃದ್ಧಿ ಮತ್ತು ಉದ್ಯಮ ಶೀಲತೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ರು. ಅವರು ಮಂಗಳೂರಲ್ಲಿ ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡಿದ ಬಳಿಕ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ರು, ಅದನ್ನ ಮತ್ತಷ್ಟು ಉತ್ತಮವಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ.ಅದರ ಜೊತೆಗೆ ೫ ಸಾವಿರ ಹಳ್ಳಿಗಳಿಗೆ ಇಂಟರ್ ನೆಟ್ ತಲುಪಿಸುವ ಯೋಜನೆ

ಬಿಎನ್‍ಐ ಮಂಗಳೂರು ಕರಾವಳಿ ಎಕ್ಸ್ ಪೋ-2021

ಬಿಎನ್‍ಐ ಮಂಗಳೂರು ವತಿಯಿಂದ ಕರಾವಳಿ ಎಕ್ಸ್ ಪೋ 2021 ವರ್ಚುವಲ್ ಬಿಸಿನೆಸ್ ಎಕ್ಸಿಬಿಷನ್ ಅನ್ನು ಆಗಸ್ಟ್ 20ರಿಂದ ಆಗಸ್ಟ್ 22ರ ವರೆಗೆ ಆಯೋಜಿಸುತ್ತಿದ್ದೇವೆ ಎಂದು ಬಿಎನ್‍ಐ ಮಂಗಳೂರಿನ ಕರಾವಳಿ ಎಕ್ಸ್ ಪೋ ಇದರ ಅಧ್ಯಕ್ಷರಾದ ಸುನಿಲ್ ದತ್ ಪೈ ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಬಿಎನ್‍ಐ ಮಂಗಳೂರಿನ ನಾಲ್ಕು ಅಧ್ಯಾಯಗಳ ಭಾಗವಾಗಿದೆ. ಈ ಸಾಂಕ್ರಾಮಿಕ ಸಮಯದಲ್ಲಿ ಬಿಎನ್‍ಐ ಮಂಗಳೂರು ವರ್ಚುವಲ್ ಎಕ್ಸ್‍ಪೋವನ್ನು

ಪರಸ್ಪರ ಸೌಹಾರ್ದತೆಯಿಂದ ಮೀನುಗಾರಿಕೆ ಮಾಡಲಿ ಎಂದು ಸತ್ಯನಾರಾಯಣ ಪೂಜೆ

ಕುಂದಾಪುರ ತಾಲೂಕು ಗಂಗೊಳ್ಳಿಯಲ್ಲಿ ಪ್ರಾಥಮಿಕ ಮೀನುಗಾರರ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚಗೋಡು ಇವರ ನೇತೃತ್ವದಲ್ಲಿ ಮಸ್ತ್ಯ ಸಂಪತ್ತು ಹೇರಳವಾಗಿ ದೊರೆಯಲಿ ಮತ್ತು ಇತ್ತೀಚಿನ ದಿನಗಳಲ್ಲಿ ಮೀನಗಾರರಲ್ಲಿ ವೈಮನಸ್ಸು ಉಂಟಾಗುತ್ತಿದ್ದು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಪರಸ್ಪರ ಸೌಹಾರ್ದತೆ ಯಿಂದ ಮೀನುಗಾರಿಕೆ ಮಾಡಲಿ ಎಂಬ ಸದುದ್ದೇಶದಿಂದ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗಂಗೆ ಮಾತೆಗೆ ನಮೀಸುತ್ತಾ ಮತ್ಸ್ಯ ಬೇಟೆಯಾಡುವಾಗ