Home Archive by category ಕ್ರೈಮ್ (Page 15)

ಮುಂಬೈ: ನಾಪತ್ತೆಯಾಗಿದ್ದ ಸುಧೀರ್ ಕುಮಾರ್ ಸಫಲಿಗ ಶವವಾಗಿ ಪತ್ತೆ

ವಸಾಯಿಯ ಪಶ್ಚಿಮದ ಗೊರೈಪಾಡದ ಜೀವನ್ ನಗರ ನಿವಾಸಿ 35 ವರ್ಷ ಸುಧೀರ್ ಕುಮಾರ್ ಸಫಲ್ಯ ಅವರು ಆ.14ರಂದು ನಾಪತ್ತೆಯಾಗಿದ್ದು ಬಳಿಕ ಸೋಮವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾರೆ. ಮೂಲತಃ ಮಂಜೇಶ್ವರ ಬಳಿಯ ಉಪ್ಪಳ ನಿವಾಸಿಯಾಗಿದ್ದ ಸುಧೀರ್ ಅವಿವಾಹಿತನಾಗಿದ್ದು, ಇವರನ್ನು ಕೊಲೆ ಮಾಡಲಾದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗೊರೈಪಾಡದ ಕಂಪನಿಯಲ್ಲಿ

ಉದ್ಯಾವರ : ಬೆಳ್ಳಂಬೆಳಗ್ಗೆ ವಾಶ್ ರೂಂ ಗೆ ಹೋದ ಯುವತಿ ನಾಪತ್ತೆ

ಮೊಬೈಲ್ ಶಾಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯಾವರ ಸಂಪಿಗೆನಗರ ಮಸೀದಿ ಬಳಿಯ ಯುವತಿಯೋರ್ವಳು ರಾತೋ ರಾತ್ರಿ ಮನೆಯಿಂದ ನಾಪತ್ತೆಯಾದ ಘಟನೆ ಆ. 23 ರಂದು ನಡೆದಿದೆ. ನೇತ್ರಾವತಿ (20) ಕಾಣೆಯಾಗಿರುವ ಯುವತಿ. ಕಳೆದ ಮೂರು ತಿಂಗಳಿನಿಂದ ಉದ್ಯಾವರದ ಸ್ಮಾರ್ಟ್ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನೇತ್ರಾವತಿ ಅವರು ಆ. 22 ರಂದು ರಾತ್ರಿ ಊಟ ಮಾಡಿ ಮಲಗಿದ್ದು ಆ. 23 ರಂದು ಬೆಳಗ್ಗೆ 5.30 ಕ್ಕೆ ಹಾಲ್ ನಿಂದ ಎದ್ದು ವಾಶ್ ರೂಂ ಗೆ ಹೋಗಿದ್ದು, […]

ಪರಾರಿಯಾಗಲು ಯತ್ನಿಸಿದ ಆರೋಪಿಗೆ ಗುಂಡೇಟು

ಕೊಲೆಯತ್ನ ಸಹಿತ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿಯನ್ನು ಸ್ಥಳ ಮಹಜರು ನಡೆಸಲು ಕರೆದೊಯ್ದ ವೇಳೆ ತಪ್ಪಿಸಲೆತ್ನಿಸಿದ ಆರೋಪಿಗೆ ಪೊಲೀಸರು ಗುಂಡೇಟು ಹಾಕಿದ ಘಟನೆ ಮಂಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಂಕನಾಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಅಡ್ಯಾರ್ ಪದವು ಬಳಿ ಈ ಘಟನೆ ಸಂಭವಿಸಿದೆ. ನಗರದ ಗುಂಡೇಟು ಬಿದ್ದ ವ್ಯಕ್ತಿ ಮುಸ್ತಾಕ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಿಸ್ತಾ ಯಾನೆ ಮುಸ್ತಾಕ್ ಗುಂಡೇಟಿಗೊಳಗಾದ

ಕುಂದಾಪುರ : ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

ಕುಂದಾಪುರ: ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಲು ತವರು ಮನೆಯಿಂದ ಬಂದಿದ್ದ ಪತ್ನಿಯನ್ನು ಕುಡಿದ ಮತ್ತಿನಲ್ಲಿ ಕೊಲೆಗೈದ ಪತಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಇಲ್ಲಿನ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಲ್ಕುಂದ ಶಾಲೆ ಸಮೀಪದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಸೊರಬ ನಿವಾಸಿ ಪೂರ್ಣಿಮಾ ಆಚಾರ್ಯ (38) ಕೊಲೆಯಾದ ಮಹಿಳೆ. ಕೋಗಾರ್ ನಿವಾಸಿ ರವಿ ಆಚಾರ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೂಲತಃ ಸೊರಬ ನಿವಾಸಿ

ಕಾರ್ಕಳ : ಚಾಣಕ್ಯ ಕದೀಮರಿಬ್ಬರ ಸೆರೆ

ಒಡವೆ ಕಳ್ಳತನ ಸಹಿತ ವಾಹನಗಳ ಕಳ್ಳತನ ನಡೆಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಕದೀಮ ಕಳ್ಳರಿಬ್ಬರನ್ನು ಕಾರ್ಕಳ ಪೊಲೀಸ್ ಉಪಾಧೀಕ್ಷರ ಹಾಗೂ ವೃತ ನಿರೀಕ್ಷಕರ ತಂಡ ಬಂಧಿಸಿದೆ. ಬಂಧಿತರ ಮೇಲೆ ರಾಜ್ಯಾದ್ಯಂತ ಬಹಳಷ್ಟು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಮೂಲತಃ ಬಜಪೆ ನಿವಾಸಿ ಇದೀಗ ಮೂಳೂರುಎಸ್.ಎಸ್. ರಸ್ತೆಯ ಶ್ರೀ ಸಾಯಿ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ವಾಜೀದ್ ಜೆ.(25) ಹಾಗೂ ಉಡುಪಿ ಕಡಿಯಾಳಿ ಆಚಾರ್ಯ ರಸ್ತೆಯ ಬಾಡಿಗೆ ಮನೆ ನಿವಾಸಿ ಶಹನಾಜ್ (32)

ಕಟಪಾಡಿ ಪೇಟೆ ಸರಣಿ ಅಪಘಾತ

ಕಾರು ಚಾಲಕನ ಅವಾಂತರದಿಂದಾಗಿ ರಸ್ತೆಯಂಚಿನಲ್ಲಿ ನಿಲ್ಲಿಸಿದ ಕಾರು ಸಹಿತ ಸ್ಕೂಟರ್ ತೀವ್ರ ಜಖಂ ಗೊಂಡು ಇಬ್ಬರು ಗಾಯಗೊಂಡ ಘಟನೆ ಕಟಪಾಡಿ ಪೇಟೆಯಲ್ಲಿ ರಾತ್ರಿ ಸಂಭವಿಸಿದೆ. ಉಡುಪಿ ಕಡೆಯಿಂದ ಕಟಪಾಡಿ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಅತೀ ವೇಗವಾಗಿ ಮುನ್ನುಗ್ಗಿ ಬಂದ ಕಾರು ರಸ್ತೆಯಂಚಿನಲ್ಲಿ ನಿಲ್ಲಿಸಿದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ನಿಲ್ಲದೆ ಸ್ಕೂಟರ್ ಗೆ ಡಿಕ್ಕಿಯಾಗಿ ಪಕ್ಕದ ಪಾಸ್ಟ್ ಫುಡ್ ಅಂಗಡಿಯೊಳಗೆ ನುಗ್ಗಿದೆ. ಅಂಗಡಿಯಾತನಿಗೆ ಹಾಗೂ ಆಹಾರ ಸೇವಿಸುತ್ತಿದ್ದ

ಮಂಜೇಶ್ವರ : ಶಸ್ತ್ರಾಸ್ತ್ರದೊಂದಿಗೆ ತಿರುಗಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಜೇಶ್ವರ: ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಬಂದೂಕು ಹಾಗೂ ಶಸ್ತ್ರಾಸ್ತ್ರದೊಂದಿಗೆ ಉಪ್ಪಳದಲ್ಲಿ ತಿರುಗಾಡುತಿದ್ದ ಮೂವರನ್ನು ಮಂಜೇಶ್ವರ ಎಸ್ಸೈ ಅನ್ಸಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಈ ತಂಡದಲ್ಲಿದ್ದ ಪ್ರಮುಖ ಆರೋಪಿ ಅಯಾಝ್ ಎಂಬಾತನನ್ನು ಆತನ ಸಹೋದರ ಪೊಲೀಸರಲ್ಲಿ ಬಲ ಪ್ರಯೋಗಿಸಿ ಬಿಡಿಸಿರುವುದಾಗಿ ಆರೋಪಿಸಲಾಗಿದೆ. ಬಳಿಕ ಹೆಚ್ಚಿನ ಪೊಲೀಸರು ಸ್ಥಳಕ್ಕಾಗಮಿಸಿ ಆಟೋ ರಿಕ್ಷಾದಲ್ಲಿದ್ದ ಇಬ್ಬರನ್ನು ಹಾಗೂ ಆಯಾಝ್ ನ ಸಹೋದರನನ್ನು ಬಂಧಿಸಿದ್ದಾರೆ.

ಬೀಟ್ ಪೊಲೀಸ್ ಸಭೆ : ಅನೈತಿಕ ಚಟುವಟಿಕೆಗಳ ತಾಣ ಹೆಜಮಾಡಿ ಬಂದರು

ಹೆಜಮಾಡಿಯ ಮೀನುಗಾರಿಕಾ ಬಂದರು ಪ್ರದೇಶ ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಈ ಬಗ್ಗೆ ಪಡುಬಿದ್ರಿ ಪೆÇಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಸದಸ್ಯರು ಸಹಿತ ಗ್ರಾಮಸ್ಥರು ಹೆಜಮಾಡಿ ಬಂದರು ಪೊಲೀಸರಲ್ಲಿ ಆಗ್ರಹಿಸಿದ್ದಾರೆ. ಹೆಜಮಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಬೀಟ್ ಪೊಲೀಸ್ ಸಭೆಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯರೊರ್ವರು, ಶನಿವಾರ ಹಾಗೂ ಭಾನುವಾರ ಅತೀ ಹೆಚ್ಚು ಮಣಿಪಾಲ ಕಡೆಯಿಂದ ಜೋಡಿಗಳು ಬರುತ್ತಿದ್ದು , ಅವರಿಂದ ಈ ಪ್ರದೇಶಕ್ಕೆ

ಪಡುಬಿದ್ರಿ ಯುವಕನೋರ್ವ ನೇಣಿಗೆ ಶರಣು

ಪೈಂಟಿಂಗ್ ವೃತ್ತಿ ನಡೆಸುತ್ತಿದ್ದ ಯುವಕನೋರ್ವ ಅಣ್ಣನೊಂದಿಗೆ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣೆಗೆ ಶರಣಾದ ಘಟನೆ ನಡೆದಿದೆ.ಮೃತ ಯುವಕ ಸೋನಿತ್ ಪೂಜಾರಿ(30), ಇವರು ಅಣ್ಣ ಅತ್ತಿಗೆಯೊಂದಿಗೆ ಅವರಾಲು ಮಟ್ಟು ರಸ್ತೆಯ ಬೀಡು ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಣ್ಣ ಅತ್ತಿಗೆ ಕೆಲಸಕ್ಕೆ ಹೋಗುತ್ತಿದ್ದು, ಅವರ ಮಗು ಶಾಲೆಗೆ ಹೋಗುತ್ತಿತ್ತು, ಇಂದು ಕೆಲಸಕ್ಕೆ ಹೋಗದ ಈತ ಸಂಜೆ ಸುಮಾರು ಐದು ಗಂಟೆಯ ವರಗೆ ಪೇಟೆಯಲ್ಲೇ ಇದ್ದ ಈತ ಮತ್ತೆ ಮನೆಗೆ ಮರಳಿದ್ದ. ಈತನ

ಅಕ್ರಮ ಮರ ಸಾಗಾಟ ಪ್ರಕರಣ ಆರೋಪಿ ಬಂಧನ

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ವಿಶಾಲನಗರ ಬಳಿ ಅಕ್ರಮವಾಗಿ ಅಕೇಶಿಯಾ ಮರ ಸಾಗಟ ಮಾಡುತ್ತಿದ್ದ ವಾಹನ ಹಾಗೂ ಆರೋಪಿಯನ್ನು ಮಂಗಳೂರು ಅರಣ್ಯ ಸಂಚಾರಿದಳದ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ವಶ ಪಡಿಸಿಕೊಂಡಿರುವ ವಾಹನ ಹಾಗೂ ಸ್ವತ್ತುಗಳ ಮೌಲ್ಯ ಸುಮಾರು 19 ಲಕ್ಷ ರೂಪಾಯಿಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವನನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನ ನಡೆಸಲಾಗುತ್ತಿದೆ.ಸಂಚಾರಿದಳದ ಉಪ ಅರಣ್ಯ