ಯೋಗದ ಮೂಲವಾದ ಆದಿಯೋಗಿಯ 112 ಅಡಿ ಮೂರ್ತಿಯನ್ನು ಬೆಂಗಳೂರಿನ ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರುಗಳ ಸಮ್ಮುಖದಲ್ಲಿ ಭಾನುವಾರ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, “ನಾನು ಕೊಯಮತ್ತೂರಿಗೆ ಹೋಗಿದ್ದೇನೆ. ಆದಿಯೋಗಿ ಬಹಳ ಸಮಯದಿಂದ ಜನರನ್ನು
ಧಾರವಾಡ, ಜ, 16; ಭಾರತ ಯುವ ಸಮೂಹದ ದೇಶವಾಗಿದ್ದು, ಯುವ ಜನಾಂಗವೇ ಭಾರತದ ಭವಿಷ್ಯ. ದೇಶವನ್ನು ಅಭ್ಯುದಯದ ಪಥದಲ್ಲಿ ಕೊಂಡೊಯ್ದು, ಉಜ್ವಲಗೊಳಿಸುವ ಸಾಮರ್ಥ್ಯ ಯುವ ಜನರ ಕೈಯಲ್ಲಿದೆ ಎಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ 26 ನೇ ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯುವ ಜನಾಂಗ ಉತ್ತಮವಾಗಿ ಕೆಲಸ ಮಾಡಿದರೆ ಭಾರತ ಇನ್ನಷ್ಟು ಉತ್ತಮ ಸ್ಥಾನಕ್ಕೆ
ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಪಾಳ್ಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಂಜಾನೆ ವೈದ್ಯ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದ ಅಮಾನವೀಯ ಘಟನೆ ನೆಡೆದಿದೆ.ಇದಕ್ಕೆ ಹಲವು ಭಾರಿ ಇಂತಹ ಘಟನೆ ಪ್ರತ್ಯಕ್ಷವಾದರೂ ಹಿರಿಯ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದೇ ಪ್ರಮುಖ ಕಾರಣ ಎಂದು ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ರಸ್ತೆತಡೆದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು ನಂತರ ಪೆÇೀಲಿಸ್ ಮಧ್ಯಸ್ಥಿಕೆಯಿಂದ ಸಮಾಧಾನಗೊಳಿಸಿದರು
ಧಾರವಾಡ, ಜ, 14: ಕೋವಿಡ್ ಸಾಂಕ್ರಾಮಿಕ ಲೆಕ್ಕಿಸದೇ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ, ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸೋಮಶೇಖರ್ ಯು ಅವರಿಗೆ 2019 – 20 ನೇ ಸಾಲಿನ ಎನ್.ಎಸ್.ಎಸ್ ರಾಷ್ಟ್ರೀಯ ಅತ್ಯುತ್ತಮ ಸ್ವಯಂ ಸೇವಕ [ರಾಷ್ಟ್ರೀಯ ಬೆಸ್ಟ್ ವಾಲೇಂಟರ್] ಪ್ರಶಸ್ತಿ ಸಂದಿದೆ. ಹುಬ್ಬಳ್ಳಿ – ಧಾರವಾಡದಲ್ಲಿ ನಡೆಯುತ್ತಿರುವ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್
ಧಾರವಾಡ, ಜ, 13; ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವ 26 ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ “ನಿಮ್ಮ ಸೇನೆ ಬಗ್ಗೆ ತಿಳಿದುಕೊಳ್ಳಿ” [ನೋ ಯುವರ್ ಆರ್ಮಿ] ಎಂಬ ವಿಶೇಷ ಮಳಿಗೆಗಳು ಗಮನ ಸೆಳೆಯಲಿವೆ. ಯುವ ಜನೋತ್ಸವದ ಅಂಗವಾಗಿ ಧಾರವಾಡದ ಕೆಸಿಡಿ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನದಲ್ಲಿ ‘ಭಾರತೀಯ ಸೈನ್ಯದ ಕುರಿತು ಒಂದು ಸ್ಟಾಲ್ ನಿರ್ಮಿಸಲಾಗಿದೆ’ ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆಗಾಗಿ ಈ ಪಡೆಗಳು ಬಳಸುವ
ಧಾರವಾಡ, ಜ.13; ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಪ್ರತಿದಿನ ಮುಂಜಾನೆ ಯೋಗ ಮತ್ತು ಧ್ಯಾನ ಕಾರ್ಯಕ್ರಮ ಯುವ ಸಮೂಹದಲ್ಲಿ ನವೋಲ್ಲಾಸ ಮೂಡಿಸುತ್ತಿದೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಕೆ.ಸಿ.ಡಿ ಕಾಲೇಜು ಮೈದಾನದಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ 8 ಗಂಟೆವರೆಗೆ ಯೋಗ ಮತ್ತು ಧ್ಯಾನ ಶಿಬಿರ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಯೋಗ ಸಂಸ್ಥೆಯ ಪರಿಣಿತರು ಯೋಗ ಮತ್ತು ಧ್ಯಾನದ ಮಹತ್ವ ಕುರಿತು ಯುವ ಸಮೂಹಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ಬೆಂಗಳೂರು: ಪರಿಶಿಷ್ಟರ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿ ಅವಾಸ್ತವಿಕ, ಅವೈಜ್ಞಾನಿಕ, ಅಂವಿಧಾನಿಕವಾಗಿದ್ದು, ಈ ವರದಿಯನ್ನು ತಿರಸ್ಕರಿಸುವಂತೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಆಗ್ರಹಿಸಿದೆ. ನಗರದ ಮೆಜೆಸ್ಟಿಕ್ ನ ಕೆ.ಆರ್.ಎಸ್ ನಿಲ್ದಾಣದಿಂದ ಬೃಹತ್ ಜಾತಾ ಮೂಲಕ ಫ್ರೀಡಂ ಪಾರ್ಕ್ ನಲ್ಲಿ ಸೇರಿದ ಒಕ್ಕೂಟದ ಸದಸ್ಯರು, ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದರು. ಈ ಬೃಹತ್ ಜಾಥಾದಲ್ಲಿ ಭೋವಿ ಮಠಾಧೀಶರಾದ
ವಿರಾಜಪೇಟೆ ಸಮೀಪದ ಮಗ್ಗುಲದ ಅಗ್ನೋನಿಮಾ ರೆಸಾರ್ಟ್ ನಲ್ಲಿನ ಜಿಲ್ಲಾ ಬಂಟರ ಸಂಘದ ಮಹಾಸಭೆಯಲ್ಲಿ ವಿರಾಜಪೇಟೆಯ ಹಿರಿಯ ವಕೀಲರು, ಹಲವಾರು ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿ ಆರ್ ರತ್ನಾಕರ ಶೆಟ್ಟಿ ಅವರನ್ನು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಂಘದ ನಿಕಟಪೂರ್ವ ಅಧ್ಯಕ್ಷ ನಾರಾಯಣ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಬಾಲಕೃಷ್ಣ ರೈ, ಹಾಗೂ ನಾರಾಯಣ್ ರೈ ಯವರನ್ನು
ಧಾರವಾಡ, ಜ, 8; ಅವಳಿ ನಗರದಲ್ಲಿ ಜ.12 ರಿಂದ 16 ರ ವರೆಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರತಿನಿಧಿಗಳ ಆಗಮನ ಆರಂಭಗೊಂಡಿದ್ದು, ಇಂದು ಭಾರತದ ಮುಕುಟ ಪ್ರಾಯ ರಾಜ್ಯ ಜಮ್ಮು ಕಾಶ್ಮೀರದಿಂದ ಮೊದಲ ತಂಡ ಆಗಮಿಸಿತು. ಯುವ ಪ್ರತಿನಿಧಿಗಳು ಮತ್ತು ತಂಡದ ನಾಯಕರನ್ನೊಳಗೊಂಡ 80 ಸದಸ್ಯರ ತಂಡಕ್ಕೆ ಅದ್ದೂರಿ ಮತ್ತು ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಕೆ.ಸಿ.ಡಿ ಕಾಲೇಜಿನ ಆವರಣದಲ್ಲಿ ಯುವ ಜನೋತ್ಸವದ ವಸತಿ ಉಸ್ತುವಾರಿ ಅಧಿಕಾರಿ ಹಾಗೂ ಕರ್ನಾಟಕ ವಿಶ್ವ
ಆಲೂರು ತಾಲೂಕು ಹಂಜಿಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ಯೋಗೇಶ್ ಎಂಬುವವರ ಜೋಳದ ರಾಶಿಗೆ ಅಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಜೋಳ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಆಲೂರು ಸಕಲೇಶಪುರ ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ, ಚಂಚಲ ಕುಮಾರಸ್ವಾಮಿ, ಜೆ ಡಿಎಸ್ ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಣದಳ್ಳಿ ಮಂಜಣ್ಣ, ತಹಸೀಲ್ದಾರ್ ಕೆ.ಸಿ ಸೌಮ್ಯ. ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎಚ್ ಕೆ ಕುಮಾರಸ್ವಾಮಿ