ಕೊಲ್ಕತ್ತಾದಲ್ಲಿ ಒಂದು ಲಕ್ಷ ನಾಗರಿಕರನ್ನು ಸೇರಿಸಿ ನಡೆದ ಗೀತಾ ಮಂತ್ರ ಪಠಣ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಹಣ ಬಾಚಿದ್ದಾರೆ ಎಂದು ಆರೋಪ ಮಾಡಿದ್ದ ಪಡುವಣ ಬಂಗಾಳದ ಬಿಜೆಪಿ ಮುಖಂಡ ಅನುಪಮ್ ಹಜ್ರಾ ಅವರನ್ನು ಕೇಂದ್ರೀಯ ಸ್ಥಾನದಿಂದ ವಜಾ ಮಾಡಲಾಗಿದೆ.ಗೀತಾ ಮಂತ್ರ ಪಠಣ ಕಾರ್ಯಕ್ರಮಕ್ಕೆ ಬಿಜೆಪಿಯ ಕೆಲವರು ಹಣವಂತರಿಗೆ ದೊಡ್ಡ ಮೊತ್ತದ ಹಣಕ್ಕೆ ವಿಶೇಷ ಪಾಸ್ ಮಾರಾಟ
ಇತ್ತೀಚೆಗೆ ಸಂಸತ್ತಿನಲ್ಲಿ ಪಾಸಾದ ಮೂರು ಕ್ರಿಮಿನಲ್ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕುವ ಮೂಲಕ ಅವನ್ನು ಕಾನೂನು ಆಗಿಸಿದರು. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆ ಇವೇ ಆ ಮೂರು. 1872ರ ಬ್ರಿಟಿಷರ ಕಾನೂನುಗಳಿಗೆ ಈ ಮೂಲಕ ಇನ್ನಷ್ಟು ತಿದ್ದುಪಡಿ ತರಲಾಗಿದೆ.
ಆರೋಪಿಯ ಆಪ್ತನೇ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಿಗೇ ಸುದ್ದಿಗೊಷ್ಟಿ ನಡೆಸಿದ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಸಿ ಮಲಿಕ್ ಅವರು ಇನ್ನೆಂದೂ ಕುಸ್ತಿ ಆಡುವುದಿಲ್ಲ ಎಂದು ಘೋಷಣೆ ಮಾಡಿದರು. ಭಾರತೀಯ ಕುಸ್ತಿ ಫೆಡರೇಶನ್‍ನಲ್ಲಿ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ಇನ್ನೂ ನಿಲ್ಲುವ ಲಕ್ಷಣ ಇಲ್ಲ. ಮನಸಾಕ್ಸಿಯೊಡನೆ ಕುಸ್ತಿಯಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ ಎಂದು ಸಾಕ್ಸಿ ಮಲಿಕ್ ಹೇಳಿದರು. ಸಾಕ್ಸಿಯವರ ಜೊತೆಗೆ ಬಜರಂಗ್
ಈ ಬಾರಿಯ ಧ್ಯಾನ್‍ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ಕಿರಣ್ ರೆಡ್ಡಿ ಮತ್ತು ಚಿರಾಗ್ ಶೆಟ್ಟಿಯವರಿಗೆ ನೀಡಲಾಗಿದೆ. ಇದೇ ವೇಳೆ 26 ಮಂದಿ ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಗಿದೆ. ಜಮ್ಮು ಕಾಶ್ಮೀರದ ಶೀತಲ್ ದೇವಿ ಕಾಲಿನಿಂದಲೇ ಬಿಲ್ಲೆಳೆದು ಬಾಣ ಬಿಟ್ಟು ಅಂತರರಾಷ್ಟ್ರೀಯ ಸಾಧನೆ ಮಾಡಿದವರು. ಅವರ ಜೊತೆಗೆ ಮೊಹಮದ್ ಶಮಿ, ಪಾರುಲ್ ಚೌಧರಿ, ನಸ್ರೀನ್, ಪ್ರಾಚಿ ಯಾದವ್, ವೈಶಾಲಿ, ಅದಿತಿ ಎಂದು 26 ಜನ ಅರ್ಜುನ
ರಾಮ ಮಂದಿರ ಉದ್ಘಾಟನೆಗೆ ದಯವಿಟ್ಟು ಬರಬೇಡಿ ಎಂದು ರಾಮ ಮಂದಿರ ಹೋರಾಟದ ಪ್ರಮುಖರು ಮತ್ತು ಬಿಜೆಪಿ ನಾಯಕರಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯವರಿಗೆ ರಾಮ ಮಂದಿರ ಟ್ರಸ್ಟ್. ಇದು ಸ್ವಲ್ಪ ವಿವಾದಕ್ಕೆ ಕಾರಣವಾಗುತ್ತಲೇ ರಾಮ ಮಂದಿರ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅವರು ಇಬ್ಬರು ಹಿರಿಯರೂ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಕ್ಷಗಟ್ಟಲೆ ಜನರು ಸೇರುವ ತಾಣದಲ್ಲಿ ಅವರನ್ನು ನೋಡಿಕೊಳ್ಳಲು
ಡಿಸೆಂಬರ್ 15ನ್ನು 2005ರಿಂದ ಜಾಗತಿಕ ಟೀಡೇ ಆಗಿ ಭಾರತ ಸಹಿತ ಹಲವು ದೇಶಗಳು ಆಚರಿಸುತ್ತಿವೆ. ಚಾ ಬೆಳೆಗೆ ಪೆÇ್ರೀತ್ಸಾಹ, ಗ್ರಾಹಕರ ಮತ್ತು ಚಾ ಕಾರ್ಮಿಕರ, ಮುಖ್ಯವಾಗಿ ಎಲೆ ಕೊಯ್ವ ಮಹಿಳೆಯರ ಒಳಿತನ್ನು ಹುಡುಕುವುದು ಈ ದಿನಾಚರಣೆಯ ವಿಶೇಷವಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ವಿಯೆಟ್ನಾಂ, ಇಂಡೋನೇಶಿಯಾ, ಕೆನ್ಯಾ, ಮಲಾವಿ, ಮಲೇಶಿಯಾ, ಉಗಾಂಡಾ, ತಾಂಜಾನಿಯಾ, ಭಾರತ ಇವು ಮುಖ್ಯವಾಗಿ ಚಾ ದಿನ ಆಚರಿಸುವ ದೇಶಗಳಾಗಿವೆ.
ಆರೆಸ್ಸೆಸ್ ರಾಷ್ಟ್ರೀಯ ಕಚೇರಿ ಇರುವ ನಾಗಪುರ ವಲಯದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಈ ಜಿಲ್ಲೆಯ ಹದಿಮೂರು ಪಂಚಾಯತು ಸಮಿತಿಗಳಲ್ಲಿ ಒಂಬತ್ತರ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.ಮೂರು ಪಂಚಾಯತು ಸಮಿತಿಗಳು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಸಿಕಿದೆ. ಒಂದರಲ್ಲಿ ಶಿವಸೇನೆಯ ಭಿನ್ನಮತೀಯ ಬಣವು ಅಧ್ಯಕ್ಷತೆಯನ್ನು ಗೆದ್ದಿದೆ. ಬಿಜೆಪಿ ಒಂದರಲ್ಲೂ ಅಧ್ಯಕ್ಷ ಸ್ಥಾನ ಗೆಲ್ಲಲು ವಿಫಲವಾಗಿದೆ. ಮೈತ್ರಿ ಕಾರಣಕ್ಕೆ ಎರಡು ಕಡೆ
ಸಂಸತ್ ದಾಳಿಯ ಆರೋಪಿ ಮನೋರಂಜನ್ ವಿವೇಕಾನಂದ, ಭಗತ್ ಸಿಂಗ್ ಮೊದಲಾದವರ ಪುಸ್ತಕ ಹೆಚ್ಚು ಓದುತ್ತಿದ್ದ ಎಂದೂ, ಮನೆಯಲ್ಲಿ ಸಾಕಷ್ಟು ಕ್ರಾಂತಿಕಾರಿಗಳ ಎಡ ಬಲ ವಾದದ ಪುಸ್ತಕಗಳು ದೊರೆತಿರುವುದಾಗಿ ವರದಿಯಾಗಿದೆ. ಹಾಸನ ಜಿಲ್ಲೆಯ ರಾಮನಾಥಪುರ ತಾಲೂಕಿನ ಮಲ್ಲಾಪುರ ಗ್ರಾಮ ಮೂಲದ ದೇವರಾಜೇಗೌಡ, ಶೈಲಜಾ ದಂಪತಿಯ ಮಗ ಮನೋರಂಜನ್. ವಿಕ್ರಾಂತ್ ಉದ್ಯೋಗದ ಬಳಿಕ ದೇವರಾಜೇಗೌಡರು ಕೃಷಿ ಮಾಡುತ್ತಿದ್ದರು. ಮೈಸೂರಿನ ವಿಜಯನಗರದಲ್ಲಿ ಸ್ವಂತ ಕಟ್ಟಿದ ಮನೆಯಲ್ಲಿ ವಾಸವಿದ್ದರು.
ಸೆಪ್ಟೆಂಬರ್ ವಿಶೇಷ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಸ್ವೀಕಾರದ ವೇಳೆ ಅಟ್ಟಣಿಗೆಯಿಂದ ಕೆಲವರು ಮೋದೀಜಿ ಜೈ ಎಂದು ಕೂಗಿದ್ದರು. ಇದು ಭದ್ರತಾ ಲೋಪ, ನಾಳೆ ಅಟ್ಟಣಿಗೆಯಿಂದ ದಾಳಿ ಆಗಬಹುದು, ಬಾಂಬು ಎಸೆಯಬಹುದು ಎಂದು ಹಲವು ಸಂಸದರು ಆತಂಕ ವ್ಯಕ್ತಪಡಿಸಿದ್ದರು. ಈಗ ಇಬ್ಬರು ಗ್ಯಾಲರಿಯಿಂದ ಲೋಕಸಭೆಯೊಳಕ್ಕೆ ನುಗ್ಗಿ ಬಂದು ಹಾರಿ ಸಿಕ್ಕಿ ಬಿದ್ದಿದ್ದಾರೆ. ಇವರೂ ಬಲಪಂಥೀಯರೆ. ಅವರಲ್ಲಿ ಒಬ್ಬ ಮೈಸೂರಿನ ವಿದ್ಯಾರ್ಥಿ. ಪ್ರೇಕ್ಷಕರ ಗ್ಯಾಲರಿಗೆ ಪಾಸ್ ಮೈಸೂರು
ಸರ್ವಾಧಿಕಾರ ನಿಲ್ಲಿಸಿ, ಅತ್ಯಾಚಾರ ತಡೆಯಿರಿ ಎಂದು ಸಂಸತ್ತಿನ ಹೊರಗಡೆ ಇಬ್ಬರು ಪ್ರತಿಭಟನೆ ನಡೆಸಿದರು. ನೀಲಂ ಎನ್ನುವ ಪ್ರತಿಭಟನೆ ನಡೆಸಿದ ಮಹಿಳೆಯನ್ನು ಪೋಲೀಸರು ಬಂಧಿಸಿದರು. ಅಲ್ಲದೆ ಪ್ರತಿಭಟನೆ ನಡೆಸುತ್ತಿದ್ದ ನೀಲಂ ಅವರ ಸಂಗಾತಿಗಳು ಎನ್ನಲಾದ ಮತ್ತೂ ಮೂವರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.ಜೈಭೀಮ್, ಜೈ ಭಾರತ್, ವಂದೇ ಮಾತರಂ ಘೋಷಣೆ ಕೂಗುತ್ತಿದ್ದ ಮಹಿಳೆ ನೀಲಂ ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು ಮತ್ತು ಸರಕಾರವು ಮಹಿಳೆಯರ




























