ಉಡುಪಿ ನಗರದಲ್ಲಿ ನೂತನವಾಗಿ ಶುಭಾರಂಭಗೊಂಡ ದಿಶಾ ಸರ್ಜಿಕಲ್ಸ್ & ಲೈಫ್ ಕೇರ್, ಹಳೆ ಡಯಾನ ಸರ್ಕಲ್ ನ ಕಲ್ಪನಾ ರೆಸಿಡೆನ್ಸಿ ಬಿಲ್ಡಿಂಗ್ ನೆಲ ಮಹಡಿಯಲ್ಲಿ ಜನರ ಸೇವೆಗಾಗಿ ತೆರೆದುಕೊಂಡಿದೆ. ಇದರ ಉದ್ಘಾಟನಾ ಸಮಾರಂಭವು ಅಕ್ಟೋಬರ್ 14, 2022 ರ ಶುಕ್ರವಾರದಂದು ಜರುಗಿತ್ತು. ಈ ಶುಭ ಸಂದರ್ಭದಲ್ಲಿ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ
ಕಾಮಗಾರಿಯ ಹೆಸರಲ್ಲಿ ಹೆದ್ದಾರಿಯನ್ನು ಏಕಾಏಕಿ ಮುಚ್ಚಿದ ಪರಿಣಾಮ ವಾಹನ ಸವಾರರು ಗಲಿಬಿಲಿಕೊಂಡು ರಾತ್ರಿ ಹೊತ್ತು ಸರಣಿ ಅಪಘಾತ ನಡೆದ ಘಟನೆ ಉಚ್ಚಿಲದಲ್ಲಿ ನಡೆದಿದೆ. ಪೊಲೀಸ್ ಇಲಾಖೆ ಸಹಿತ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿದೆ ಕಾಮಗಾರಿ ಹೆಸರಲ್ಲಿ ಅಪಾಯಕಾರಿಯಾಗಿ ಹೆದ್ದಾರಿ ಮುಚ್ಚಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಹೆದ್ದಾರಿ ಡಿವೈಡರ್ ಗಳಲ್ಲಿ ದಾರಿದೀಪಕ್ಕಾಗಿ ಎಲ್ಲೆಡೆ ಟವರ್‍ಗಳನ್ನು ನಿರ್ಮಿಸಿ ಅದೆಷ್ಟೋ ಕಾಲವಾದರೂ ದೀಪ
ಉಡುಪಿಯಲ್ಲಿ ಅಕ್ಟೋಬರ್ 9ರಂದು ನಡೆದಿದ್ದ ರಸ್ತೆ ಅಪಘಾತದಲ್ಲಿ ಎಂಐಟಿ ವಿದ್ಯಾರ್ಥಿ ಶ್ರೀ ವೆಮುಲಾ ಸುದರ್ಶನ್ ಚೌಧರಿ ಅವರಿಗೆ ಗಂಭೀರವಾದ ಗಾಯಗಳಾಗಿದ್ದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಮೆದುಳು ನಿಷ್ಕ್ರೀಯಗೊಂಡ ಯುವಕ ಅಂಗಾಂಗಳನ್ನು ಕುಟುಂಬಸ್ಥರು ದಾನ ಮಾಡಲು ನಿರ್ಧರಿಸಿದ್ದರು, ಅಂತೆಯೇ ಅಂಗಾಂಗಗಳನ್ನು ದಾನ ಮಾಡುವ ಪಕ್ರಿಯೆ ನಡೆಯಿತು. ಮಣಿಪಾಲ ಆಸ್ಪತ್ರೆಯ ವೈದ್ಯರು ಶ್ರೀ ವೆಮುಲಾ ಸುದರ್ಶನ್ ಚೌಧರಿ ಅವರನ್ನು ರಕ್ಷಿಸಲು
ಕಾಲ್ತೋಡು ಗ್ರಾಮದ ಯಡೇರಿ ಎಂಬಲ್ಲಿ ಸರ್ವೇ ನಂಬರ್ 293/* ರಲ್ಲಿ 0.50 ಎಕ್ರೆ ಸ್ಥಳವು 1998 ರಂದು ಮಾನ್ಯ ಸಹಾಯಕ ಕಮೀಷನರ್ ಆದೇಶದಂತೆ ಹಿಂದೂ ರುದ್ರಭೂಮಿಗೆ ಕಾಯ್ದಿರಿಸಲಾಗಿದೆ. ಅದನ್ನು ಖಾಸಾಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಬಡ ಜನರ ಮೃತ ದೇಹವನ್ನು ದಫನ ಮಾಡಲು ಜಾಗವಿಲ್ಲದೆ ಪರದಾಡುವಂತಾಗಿದೆ ಎಂದು ಜನತಾ ಕಾಲೋನಿಯ ಜನರು ಅಳಲು ತೋಡಿಕೊಂಡಿದ್ದಾರೆ ಬೈಂದೂರಿನ ಕಾಲ್ತೋಡಿನ ಯಡೇರಿ ಎಂಬಲ್ಲಿಯ ಜನತಾ ಕಾಲೋನಿಯರು ಜನರು ಹಿಂದೂ ರುದ್ರಭೂಮಿ ಇಲ್ಲದೆ ತೊಂದರೆಗೆ
ಕಾರ್ಕಳ: ಕಳೆದ ಕೆಲ ದಿನಗಳಿಂದ ಕಾರ್ಕಳದ ಜನತೆಯಲ್ಲಿಆತಂಕ ಮೂಡಿಸಿದ್ದ ಕಾಳಿಂಗ ಸರ್ಪವನ್ನು ಅನಿಲ್ ಪ್ರಭು ಸೆರೆಹಿಡಿದ್ದಾರೆ.ಅನಂತಶಯನ ತೆಳ್ಳಾರು ರಸ್ತೆಯ ವಕೀಲರ ಮನೆಯೊಂದರ ಬಳಿ ತಿರುಗಾಡುತ್ತಿದ್ದನ್ನು ಪುರಸಭಾ ಸದಸ್ಯ ಶುಭೋದ್ ರಾವ್ ಗಮನಕ್ಕೆ ತಂದಿದ್ದು ಕೂಡಲೇ ಅನಿಲ್ ಪ್ರಭು ರವರನ್ನು ಸಂಪರ್ಕಿಸಿ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಯಿತು. ಈ ಸಂದರ್ಭ ಮಾತನಾಡಿದ ಪುರಭ ಸದಸ್ಯ ಶುಭದ ರಾವ್ ”ಅನೇಕ ಸಮಯಗಳಿಂದ ಕಾಳಿಂಗ ಸರ್ಪಗಳು ನಗರ ಪ್ರದೇಶಕ್ಕೆ ಬರಲು
ಬೈಂದೂರು: ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ಕೋಳೂರು ಎಂಬಲ್ಲಿ ಚಿರತೆಯೊಂದು ಆಹಾರ ಹುಡುಕಿಕೊಂಡು ಬಂದು ಮಾಸ್ತಿ ಎಂಬುವವರ ಮನೆಯ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆಯು ನಾಜೂಕಿನಿಂದ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಾವಿಯಿಂದ ಬೋನಿನೊಳಗೆ ಹಾಕಿ ಮೇಲೆಕ್ಕೆತ್ತಿ ರಕ್ಷಿಸಲಾಗಿದೆ. ಇದೀಗ ಗುಡ್ಡಿಹೋಟಲ್, ಜಡ್ಡಾಡಿ ಕೋಣ್ಕಿ, ಬಡಾಕೆರೆ ತಾರೀಬೇರುನಲ್ಲಿ ಮುಂತಾದ ಸ್ಥಳದಲ್ಲಿ ಪದೇ ಪದೇ ಜನ ವಾಸ್ತವ ಸ್ಥಳದಲ್ಲಿ ಚಿರತೆಗಳು ಕಾಣಿಸಿಕೊಂಡು ಜನರು ಭಯ
ಬೈಕ್ಕೊಂದಕ್ಕೆ ಲಾರಿಯೊಂದು ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉದ್ಯಾವರದಲ್ಲಿ ನಡೆದಿದೆ. ಮೃತ ವ್ಯಕ್ತಿ ಕಟಪಾಡಿ ಸರ್ಕಾರಿ ಗುಡ್ಡೆ ಮೂಡಬೆಟ್ಟು ನಿವಾಸಿ ಹೂವಿನ ವ್ಯಾಪಾರಿ ಮಹಮ್ಮದ್ ರಫೀಕ್ ಬಾವ(35), ವಿವಾಹಿತರಾಗಿದ್ದ ಇವರು ಒಂದು ಮಗುವಿನ ತಂದೆ, ಕಟಪಾಡಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಇವರು ದ್ವಿಚಕ್ರ ವಾಹನದಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ ಉದ್ಯಾವರ ತಲುಪುತಿದ್ದಂತೆ, ಕೇರಳದಿಂದ ಮುಂಬೈಗೆ ಬಾಡಿ ಪಿಕ್ಸ್
ಮೀನು ಸಾಗಾಟ ವಾಹನಗಳು ಹೆದ್ದಾರಿ ಎಲ್ಲೆಡೆ ಮೀನಿನ ನೀರನ್ನು ಚೆಲ್ಲಿಕೊಂಡು ಹೋಗುತ್ತಿದ್ದ ವಾಹನಗಳನ್ನು ಉಚ್ವಿಲದಲ್ಲಿ ತಡೆದ ಪೊಲೀಸರು ದಂಡ ವಿಧಿಸಿದ್ದಾರೆ.ಕೇರಳ ರಾಜ್ಯದಲ್ಲಿ ಹೆದ್ದಾರಿಯಲ್ಲಿ ಮೀನಿನ ನೀರು ಚೆಲ್ಲಿಕೊಂಡು ಹೋಗುವ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಯಲ್ಲಿ ಇರುವುದರಿಂದ ಅಲ್ಲಿ ಯಾವುದೇ ಕಾರಣಕ್ಕೆ ಹೆದ್ದಾರಿಗೆ ಚೆಲ್ಲದ ಮೀನಿನ ನೀರು ಇಲ್ಲಿ ಮಾತ್ರ ಯಾವುದೇ ಲಂಗು ಲಗಾಮು ಇಲ್ಲದೆ ಹೆದ್ದಾರಿಗೆ ಚೆಲ್ಲಿಕೊಂಡು ಹೋಗುವುದರಿಂದ ಪಾದಚಾರಿಗಳು
ಬಹಳಷ್ಟು ವರ್ಷಗಳಿಂದ ದನಗಳನ್ನು ಕದ್ದು ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಬೆಳಪು ತಬ್ರೇಸ್ ಎಂಬಾತನ ಮನೆಗೆ ದಾಳಿ ಮಾಡಿದ ಶಿರ್ವ ಪೊಲೀಸರು ಜೀವಂತ ಕರು, ದನದ ಮಾಂಸ ಸಹಿತ ಮೂವರು ಆರೋಪಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಬೆಳಪುವಿನ ಸುಲ್ತಾನ್ ಅಹಮ್ಮದ್ ಎಂಬವರ ಮಗ ತಬ್ರೇಸ್( 30), ಕಾಪು ಮಲ್ಲಾರಿ ಶಾಲೆ ಬಳಿ ನಿವಾಸಿ ಅಮಾನುಲ್ಲಾ ಅಸೈನ್ ಎಂಬವರ ಮಗ ಮೊಹಮ್ಮದ್ ಅಜೀಮ್(39) ಹಾಗೂ ಬೆಳಪುವಿನ ಮಥುರಾ ಸ್ಟೋರ್ ಬಳಿ ನಿವಾಸಿ ಮಕ್ಬುಲ್ ಹುಸೇನ್ ಎಂಬವರ ಮಗ
9ನೇ ಅಕ್ಟೋಬರ್ 2022: ಅಕ್ಟೋಬರ್ ಎರಡನೇ ಶನಿವಾರದಂದು ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ ಆರೈಕೆ ದಿನವನ್ನು ಆಚರಿಸಲಾಗುತ್ತದೆ. ವಾಯ್ಸ್ ಫಾರ್ ವಿಶ್ರಾಂತಿ ದಿನವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಅದೇ ದಿನ ಆಚರಿಸಲಾಗುತ್ತದೆ. ವಿಶ್ವ ಹಾಸ್ಪೈಸ್ ಮತ್ತು ಪ್ರಶಾಮಕ ಆರೈಕೆ ದಿನವನ್ನು ಆಚರಿಸುವುದರ ಮುಖ್ಯ ಉದ್ದೇಶ ಪ್ರಶಾಮಕ ಆರೈಕೆ ಅಗತ್ಯಗಳನ್ನು ಪರಿಹರಿಸುವುದು ಮತ್ತು ಅವಶ್ಯವಿರುವ ರೋಗಿಗಳಿಗೆ ಪ್ರಶಾಮಕ ಆರೈಕೆಯ ಅರಿವು ಹೆಚ್ಚಿಸುವ ದೃಷ್ಟಿಯನ್ನು




























