Home ಕರಾವಳಿ Archive by category ಉಡುಪಿ (Page 144)

ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ನಿರ್ಮಿಸಿದ್ದ ಆಧಾರ ಕಂಬಗಳಿಗೆ ತುಕ್ಕು

ಕಾರ್ಕಳದಲ್ಲಿ 2015ರಲ್ಲಿ ಜರುಗಿದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಪುರಸಭೆಯ ವತಿಯಿಂದ ಸ್ವಾಗತ ಕಮಾನು ಅಂಚೆ ಇಲಾಖೆಗೆ ಸೇರಿದ ನಿವೇಶನ ಇರಿಸಲಾಗಿದೆ. ಸುಮಾರು ಏಳು ವರ್ಷಗಳು ಕಳೆದರೂ ಕಬ್ಬಿಣದ ಆಧಾರ ಸ್ತಂಭಗಳು ತುಕ್ಕು ಹಿಡಿದು ಹೋಗಿದ್ದು, ತೆರಿಗೆ ಹಣ ಪೋಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ

ಛಾಯಾಗ್ರಾಹಕರಲ್ಲಿ ಉತ್ತಮ ಕಲಾವಿದ ಅಡಕವಾಗಿದ್ದಾನೆ : ಪತ್ರಕರ್ತ ರಾಮಚಂದ್ರ ಆಚಾರ್ಯ

ಛಾಯಾಚಿತ್ರಗಾರರಿಗೆ ಕಪ್ಪು ಬಿಳುಪು ಯುಗದಲ್ಲಿದ್ದ ಕಷ್ಟ ಕಾರ್ಪಣ್ಯಗಳು ಇಂದಿನ ಡಿಜಿಟಲ್ ಯುಗದಲ್ಲಿ ಇಲ್ಲ. ದಾಖಲೆಗಳನ್ನು ಚಿರಾಯ್ಯುವಾಗಿಸುವಲ್ಲಿ ಛಾಯಾಚಿತ್ರಗಾರರ ಪಾತ್ರ ಪ್ರಮುಖವಾಗಿದೆ ಛಾಯಾಚಿತ್ರಗಾರರಲ್ಲಿ ಉತ್ತಮ ಕಲಾವಿಧ ಅಡಕವಾಗಿದ್ದಾನೆ ಎಂಬುದುದಾಗಿ ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್ಯ ಹೇಳಿದ್ದಾರೆ. ಪಡುಬಿದ್ರಿಯ ಎಸ್ ಎಸ್ ಖಾಸಗಿ ಸಭಾಂಗಣದಲ್ಲಿ ವಿಶ್ವ ಛಾಯಾಚಿತ್ರಗಾರರ ದಿನಾಚರಣೆಯ ಅಂಗವಾಗಿ ಹಿರಿಯ ಛಾಯಾಚಿತ್ರಗಾರರಾದ ಬೆಳ್ಮಣ್ ವೆಂಕಟರಾಯ ಕಾಮತ್

ಪಡುಬಿದ್ರಿ: ತಡೆರಹಿತ ಬಸ್ಸುಗಳ ಪೈಪೋಟಿ, ಹೆದ್ದಾರಿ ಬ್ಲಾಕ್

ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಮುಖ್ಯ ಪೇಟೆಯಲ್ಲಿ ಖಾಸಗಿ ಬಸ್ಸುಗಳೆರಡು ಪೈಪೋಟಿಯಿಂದ ಮುನ್ನುಗ್ಗಿ ಬಂದು ಒಂದು ಬಸ್ ಮತ್ತೊಂದಕ್ಕೆ ಅಡ್ಡವಾಗಿ ನಿಂತ ಪರಿಣಾಮ ಸುಮಾರು ಹತ್ತು ನಿಮಿಷಗಳ ಕಾಲ ಹೆದ್ದಾರಿ ತಡೆಯುಂಟಾಗಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ರೇಷ್ಮಾ ಹಾಗೂ ದುರ್ಗಾಂಬ ಹೆಸರಿನ ಖಾಸಗಿ ಬಸ್ ಗಳೆರಡು ರಸ್ತೆ ತಡೆಗೆ ಕಾರಣವಾದವುಗಳು. ಬಹಳಷ್ಟು ಹೊತ್ತು ರಸ್ತೆ ತಡೆಯಾಗುತ್ತಿದ್ದಂತೆ ಆಕ್ರೋಶಗೊಂಡ ಸಾರ್ವಜನಿಕರು ಬಸ್ ಚಾಲಕ ನಿರ್ವಾಹಕರನ್ನು

ಉಡುಪಿ : ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ, ರೋಟರಿ ಉಡುಪಿ ರೋಯಲ್ ಜಂಟಿಯಾಗಿ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕ ಜಗನ್ನಾಥ ಶೆಟ್ಟಿ ಹಾಗೂ ಚಂದ್ರಶೇಖರ್ ಅಂಬಲಪಾಡಿ ಇವರಿಗೆ ಛಾಯಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ನಡೆದ ಛಾಯಾಚಿತ್ರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಮತ್ತು ದೇಶದ ಗಡಿ

ಮರವಂತೆ ಕಡಲ ತೀರದಲ್ಲಿ ಉಪಾಧ್ಯಕ್ಷ ಫಿಲಂ ಶೂಟಿಂಗ್

ಬೈಂದೂರು ತಾಲೂಕಿನ ವಿಶ್ವಪ್ರಸಿದ್ಧ ಮರವಂತೆ ಕಡಲ ತೀರದಲ್ಲಿ ಹಾಗೂ ಕುಂದಾಪುರ ಉಡುಪಿಯ ಪರಿಸರದಲ್ಲಿ ಇಂದು ಉಪಾಧ್ಯಕ್ಷ ಫಿಲಂ ಶೂಟಿಂಗ್ ನಡೆಯಿತು.ಸ್ಯಾಂಡಲ್‍ವುಡ್‍ನಲ್ಲಿ ಕಾಮಿಡಿ ಕಿಂಗ್ ಎಂದು ಹೆಸರು ಮಾಡಿದ ಖ್ಯಾತರಾದ ಚಲನಚಿತ್ರ ನಟ ಚಿಕ್ಕಣ್ಣ ಕೆಲವೊಂದು ಸಿನಿಮಾಗಳಲ್ಲಿ ಇವರೇ ಹೀರೋಗಿಂತ ಹಾಸ್ಯ ನಟನಾಗಿ ಹೆಚ್ಚಾಗಿ ಮಿಂಚಿದ್ದು, ಈಗ ಉಪಾಧ್ಯಕ್ಷ ಚಿತ್ರದಲ್ಲಿ ನಾಯಕನಾಗಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಸಾಕಷ್ಟು ಹಿಟ್ ಚಿತ್ರಗಳ ನಿರ್ಮಾಪಕರಾದ

ಕಾರ್ಕಳ : ಚಾಣಕ್ಯ ಕದೀಮರಿಬ್ಬರ ಸೆರೆ

ಒಡವೆ ಕಳ್ಳತನ ಸಹಿತ ವಾಹನಗಳ ಕಳ್ಳತನ ನಡೆಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಕದೀಮ ಕಳ್ಳರಿಬ್ಬರನ್ನು ಕಾರ್ಕಳ ಪೊಲೀಸ್ ಉಪಾಧೀಕ್ಷರ ಹಾಗೂ ವೃತ ನಿರೀಕ್ಷಕರ ತಂಡ ಬಂಧಿಸಿದೆ. ಬಂಧಿತರ ಮೇಲೆ ರಾಜ್ಯಾದ್ಯಂತ ಬಹಳಷ್ಟು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಮೂಲತಃ ಬಜಪೆ ನಿವಾಸಿ ಇದೀಗ ಮೂಳೂರುಎಸ್.ಎಸ್. ರಸ್ತೆಯ ಶ್ರೀ ಸಾಯಿ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ವಾಜೀದ್ ಜೆ.(25) ಹಾಗೂ ಉಡುಪಿ ಕಡಿಯಾಳಿ ಆಚಾರ್ಯ ರಸ್ತೆಯ ಬಾಡಿಗೆ ಮನೆ ನಿವಾಸಿ ಶಹನಾಜ್ (32)

ಕಟಪಾಡಿ : ಹುಲಿವೇಷ ಹಾಕಿ ಮಾನವೀಯತೆ ಮೆರೆದ ಫ್ರೆಂಡ್ಸ್

ಹಣಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ತಯಾರಿದ್ದ ಈ ಕಾಲಘಟ್ಟದಲ್ಲಿ, ಯಾವುದೋ ಕುಟುಂಬದ ಪರಿಚಯವೇ ಇಲ್ಲದ ಎರಡು ತಿಂಗಳ ಮಗುವಿನ ಚಿಕಿತ್ಸಾ ವೆಚ್ಚ ಭರಿಸುವ ನಿಟ್ಟಿನಲ್ಲಿ ಕಟಪಾಡಿ ಪ್ರೇಂಡ್ಸ್ ಸಂಸ್ಥೆಯ ಸದಸ್ಯರು ಹುಲಿವೇಷ ಹಾಕಿ ಮಾನವೀಯತೆ ಭೂಮಿಯಲ್ಲಿ ಇನ್ನೂ ಸತ್ತಿಲ್ಲ ಎಂಬುದನ್ನು ಸಾಭೀತು ಪಡಿಸಿದ್ದಾರೆ. ಹುಲಿವೇಷ ಎಂದರೆ ಬೇರೆ ವೇಷಗಳಂಥಲ್ಲ…ಇದಕ್ಕೆ ಅದರದ್ದೇ ಆದ ರೀತಿ ರಿವಾಜುಗಳಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ನಡೆಯುವುದೇ ಈ ಹುಲಿವೇಷ. ಬಣ್ಣ ಹಚ್ಚುವ ಮುನ್ನ

ಕೃಷ್ಣನ ಹುಟ್ಟುಹಬ್ಬಕ್ಕಾಗಿ ಲತಾ ಮನೆಯವರಿಂದ ಮೂಡೆ

ಶ್ರೀ ಕೃಷ್ಣ ಜನ್ಮಾಷ್ಟಮಿಗಾಗಿ ಎರ್ಮಾಳಿನಲ್ಲಿ ಲತಾ ಮನೆಮಂದಿ ಸೇರಿ ಕೊಟ್ಟೆ ಕಡುಬು ತಯಾರಿಯಲ್ಲಿ ತೊಡಗಿದ್ದಾರೆ. ಕೃಷ್ಣ ಜನ್ಮಾಷ್ಟಮಿ ದಿನ ತುಳುವಿನ ಮೂಡೆ ಕನ್ನಡದ ಕೊಟ್ಟೆ ಕಡುಬು ಮಾಡುವುದು ವಾಡಿಕೆ. ಯದುನಂದನನಿಗೆ ಪ್ರಿಯವಾದ ತಿಂಡಿಗಳಲ್ಲಿ ಮೂಡೆಯೂ ಒಂದಾಗಿದ್ದು, ಅಷ್ಟಮಿಯಂದು ಕರಾವಳಿಯ ಎಲ್ಲರ ಮನೆಯಲ್ಲೂ ಮೂಡೆ ಘಮಘಮಿಸುತ್ತಿರುತ್ತದೆ. ಕೇದಗೆ ವರ್ಗದ ಮುಂಡೇವು ಮುಂಡಕ ಎಲೆ, ಪೆÇದರುಗಳು ತುಳುನಾಡಿನಲ್ಲಿ ಮುಖ್ಯವಾಗಿ ತೋಡು ತೊರೆಗಳ ದಂಡೆಗಳಲ್ಲಿ ಕಂಡು

ಬಡತನದಲ್ಲೂ ದೀನರ ಕಷ್ಟಕ್ಕೆ ಮಿಡಿಯುವ ಹೃದಯ ರವಿ ಕಟಪಾಡಿ

ತಾನು ಆರ್ಥಿಕವಾಗಿ ಬಲಹೀನನಾಗಿದ್ದರೂ ಬೇರೊಬ್ಬರ ಕಷ್ಟಕ್ಕೆ ವಿಡಿಯುವ ತುಡಿತ ಇರುವ ಮನುಷ್ಯ ಅಪರೂಪ.. ಆದರೆ ಅದಕ್ಕೆ ಅಪವಾದವೋ ಎಂಬಂತೆ ಕೂಲಿ ಕೆಲಸ ನಡೆಸಿ ಜೀವನ ಸಾಗಿಸುವ ಅಪ್ರತಿಮ ಅಪ್ಪಟ ಸಮಾಜ ಸೇವಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಕಟಪಾಡಿ ಎಂಬುದಾಗಿ ಗಮನಾರ್ಹ. ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ರವಿ ಕಟಪಾಡಿ ಅದೆಷ್ಟೋ ಬಡ ಕುಟುಂಬಗಳ ಕಷ್ಟಕ್ಕೆ ಸಂಧಿಸುವ ಮೂಲಕ ನಿಜವಾದ ಸಮಾಜ ಸೇವಕ ಎಣಿಸಿದ್ದಾರೆ. ಇದೀಗ ಬಡ ಕುಟುಂಬಗಳ ಮಕ್ಕಳ ಚಿಕಿತ್ಸೆಯ

ಕಟಪಾಡಿ ಪೇಟೆ ಸರಣಿ ಅಪಘಾತ

ಕಾರು ಚಾಲಕನ ಅವಾಂತರದಿಂದಾಗಿ ರಸ್ತೆಯಂಚಿನಲ್ಲಿ ನಿಲ್ಲಿಸಿದ ಕಾರು ಸಹಿತ ಸ್ಕೂಟರ್ ತೀವ್ರ ಜಖಂ ಗೊಂಡು ಇಬ್ಬರು ಗಾಯಗೊಂಡ ಘಟನೆ ಕಟಪಾಡಿ ಪೇಟೆಯಲ್ಲಿ ರಾತ್ರಿ ಸಂಭವಿಸಿದೆ. ಉಡುಪಿ ಕಡೆಯಿಂದ ಕಟಪಾಡಿ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಅತೀ ವೇಗವಾಗಿ ಮುನ್ನುಗ್ಗಿ ಬಂದ ಕಾರು ರಸ್ತೆಯಂಚಿನಲ್ಲಿ ನಿಲ್ಲಿಸಿದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ನಿಲ್ಲದೆ ಸ್ಕೂಟರ್ ಗೆ ಡಿಕ್ಕಿಯಾಗಿ ಪಕ್ಕದ ಪಾಸ್ಟ್ ಫುಡ್ ಅಂಗಡಿಯೊಳಗೆ ನುಗ್ಗಿದೆ. ಅಂಗಡಿಯಾತನಿಗೆ ಹಾಗೂ ಆಹಾರ ಸೇವಿಸುತ್ತಿದ್ದ