ತೋಕೂರಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ, ಯುವ ವೇದಿಕೆಯ ಪ್ರಾಯೋಜಕತ್ವದಲ್ಲಿ ಉಚಿತ ಬೇಸಿಗೆ ಶಿಬಿರ ನಡೆಯಲಿದೆ. ಎಪ್ರಿಲ್ 6ರಿಂದ ಎಪ್ರಿಲ್ 13ರ ವರೆಗೆ ಬೇಸಿಗೆ ಶಿಬಿರ ನಡೆಯಲಿದೆ. ಎಪ್ರಿಲ್ 6ರಂದು ತೋಕೂರಿನ ಎಸ್. ಕೋಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಿಬಿರದಲ್ಲಿ
ಕಾರ್ಕಳ: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ(44) ಕೊಲೆ ಪ್ರಕರಣದ ಆರೋಪಿ ದಿಲೀಪ್ ಹೆಗ್ಡೆ(28)ಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿದೆ. ದಿಲೀಪ್ ಹೆಗ್ಡೆ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳ ಮಾರ್ಚ್ 4ರಂದು ತಿರಸ್ಕರಿಸಿದ್ದು, ಈ ಹಿನ್ನೆಲೆಯಲ್ಲಿ ಆರೋಪಿ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ
ಮುನಿಯಾಲಿನ ಅಪ್ತಿ ಆಚಾರ್ಯ ಕಳೆದ ಮಾರ್ಚ್ 01 ರಂದು ಜಿಮ್ನಾಸ್ಟಿಕ್ ನ ಮಾದರಿಯಲ್ಲೊಂದಾದ ಹೆಡ್ರೋಲ್ ನಲ್ಲಿ ಗರಿಷ್ಠ 4 ನಿಮಿಷ 40 ಸೆಕೆಂಡ್ ನಲ್ಲಿ ಸತತ 65 ರೌಂಡ್ ಗಳನ್ನು ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ. ಮುನಿಯಲಿನ ಶಿವಾನಂದ ಆಚಾರ್ಯ ಮತ್ತು ಲತಾ ಆಚಾರ್ಯ ದಂಪತಿಯ ಪುತ್ರಿಯಾಗಿರುವ ಆಪ್ತಿ ಆಚಾರ್ಯ ಹೆಬ್ರಿಯ ಎಸ್. ಆರ್ ಪಬ್ಲಿಕ್ ಸ್ಕೂಲಿನ 4ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಕಳೆದ ಎರಡು ವರ್ಷಗಳಿಂದ ಅವಿನಾಶ್ ಪೆರ್ಡೂರು ರ ವರಿಂದ
ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಬಾಳೆಹೊನ್ನೂರು ಸಂಘದ ಗೌರವಯುತ ಸತೀಶ್ ಪೂಜಾರಿಯವರ ನೇತೃತ್ವದಲ್ಲಿ ನೂತನ ಅಧ್ಯಕ್ಷರ ಆಯ್ಕೆಯನ್ನು ಚೀಟಿ ಎತ್ತುವ ಮೂಲಕ ನಡೆಸಲಾಯಿತು. ಈ ಪ್ರಕ್ರಿಯೆಯಲ್ಲಿ ಎನ್ ಎ ಸಂಜೀವ ಪೂಜಾರಿಯವರು ಆಯ್ಕೆಗೊಂಡರು. ನೂತನ ಅಧ್ಯಕ್ಷರನ್ನು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಬಾಳೆಹೊನ್ನೂರು ಸಂಘದ ಎಲ್ಲಾ ಸದಸ್ಯರುಗಳು ಒಮ್ಮತದ ಒಪ್ಪಿಗೆಯೊಂದಿಗೆ ಶುಭ ಹಾರೈಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘ (ರಿ.) ಎಸ್.ಕೋಡಿ, ತೋಕೂರು, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ, ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ- ಇವರ ಸಹಭಾಗಿತ್ವದಲ್ಲಿ ಉಚಿತ ಬೇಸಿಗೆ ಶಿಬಿರ ಚಿಣ್ಣರ ಹಬ್ಬ 2025 ನಡೆಯಲಿದೆ. ಈ ಶಿಬಿರದಲ್ಲಿ ಯೋಗ/ಧ್ಯಾನ,ಶ್ಲೋಕ/ ಭಗವದ್ಗೀತಾ,ಭಜನೆ,ಸಂಗೀತ,ನೃತ್ಯ,ನೀತಿ ಕಥೆಗಳು, ಪೇಪರ್ ಕ್ರಾಫ್ಟ್,ಚಿತ್ರಕಲೆ/ ವರ್ಣ ಕಲೆ,ವ್ಯಕ್ತಿತ್ವ ವಿಕಸನಕಸದಿಂದ ರಸ,ಆವೆ ಮಣ್ಣಿನ ಕಲಾಕೃತಿ ಹಾಗೂ ಗುಂಪು ಚರ್ಚೆ ಮುಂತಾದ ಹಲವಾರು
ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಮಾ.12 ರಂದು ಮಣಿಪಾಲ ಠಾಣಾ ಪೋಲಿಸ್ ನಿರೀಕ್ಷಕ ದೇವರಾಜ್ ಅವರಿಂದ ಕಾಲಿಗೆ ಗುಂಡೇಟು ತಿಂದಿದ್ದ ಗರುಡ ಗ್ಯಾಂಗಿನ ಆರೋಪಿ ಇಸಾಕ್‌ನನ್ನು ಪೋಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಎ.1 ರವರೆಗೆ ಒಟ್ಟು 9 ದಿನ ಪೋಲಿಸ್ ಕಸ್ಟಡಿಗೆ ನೀಡಿದೆ.ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಬೆಂಗಳೂರಿನ ನೆಲಮಂಗಲ ಪೋಲಿಸರಿಂದ ತಪ್ಪಿಸಿಕೊಳ್ಳುವ ವೇಳೆ ಸಾರ್ವಜನಿಕರ ಕಾರು, ಬೈಕ್‌ಗೆ ಗುದ್ದಿದ ಪ್ರಕರಣದಲ್ಲಿ ಆರೋಪಿಯನ್ನು
ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮೀನುಗಾರರ ಬಂಧನ ವಿರೋಧಿಸಿ ಮಾ 22ರಂದು ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿಂದೂ ಯುವಸೇನೆಯ ಮಾಜಿ ಜಿಲ್ಲಾಧ್ಯಕ್ಷ ಮಂಜುಕೊಳ ವಿರುದ್ಧ ಸುಮೊಟೋ ಪ್ರಕರಣ ದಾಖಲಾಗಿದೆ. ದಯಮಾಡಿ ಬಂಧಿತ ನಾಲ್ಕು ಮಹಿಳೆಯರನ್ನು ಬಿಡಬೇಕು ಎಂದ ವೇದಿಕೆ ಮಂಜು ಕೊಳ ಭಾಷಣ ಮಾಡುವ ನೆಪದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಗಟ್ಟುವ ಮಾತನಾಡುತ್ತಾ ಸಾರ್ವಜನಿಕರಿಂದ ಇಂತಹ ಅಪರಾಧ ಮಾಡಿಸಲು
ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದ ಆವರಣದಲ್ಲಿ ಹಿರಿಯ ಸಂಶೋಧಕ ಹಂಪ ನಾಗರಾಜಯ್ಯ ಅವರಿಗೆ ಗೋವಿಂದ ಪೈ ಸಂಶೋಧನಾ ಪ್ರಶಸ್ತಿ ಸಂದಿತು. ಅರುವತ್ತು ವರುಷಗಳ ಹಿಂದೆ ಗೋವಿಂದ ಪೈಗಳ ಗ್ರಂಥ ಭಂಡಾರವನ್ನು ಎಂಜಿಎಂ ಕಾಲೇಜಿಗೆ ತಂದು ಅವರ ಹೆಸರಿನ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿತ್ತು. ಅಲ್ಲಿನ ಹಲವು ಸಂಶೋಧನೆಗಳ ನಡುವೆ ಪೈಗಳ ಕೃತಿ ಸಂಪುಟವನ್ನು ಸಹ ತರಲಾಗಿತ್ತು. ಇಂದು ಎರಡನೆಯ ಸಂಪುಟ ಬಿಡುಗಡೆ ಆಯಿತು. ಈ ಸಂದರ್ಭದಲ್ಲಿ ಹಂಪನಾ ಅವರನ್ನು ಪ್ರಶಸ್ತಿ ನೀಡಿ
ಕಾರ್ಕಳ :ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವವು ಮೇ ೧೦ ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವುದು ಎಂದು ಹಿರಿಯ ಸಹಕಾರಿ ದುರೀಣ, ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ದ.ಕ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ .ರಾಜೇಂದ್ರ ಕುಮಾರ್ ತಿಳಿಸಿದರು. ಕಾರ್ಕಳದ ದಾನಶಾಲೆ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದರು. ಕಾರ್ಕಳದಲ್ಲೆ ಪ್ರಾರಂಭಗೊಂಡ ಈ
ಪಡುಬಿದ್ರಿ ರಾಗ್ ರಾಂಗ್ ಕಲ್ಚರಲ್ ಕ್ಲಬ್ (ರಿ) ವತಿಯಿಂದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ 20 ನೇ ವರ್ಷದ ” ಸ್ಟಾರ್ ನೃೆಟ್” ಸಾಂಸ್ಕೃತಿಕ ಕಾರ್ಯಕ್ರಮವು ವಿಶ್ವಾಸ್ ವಿ.ಅಮೀನ್ ಸಾರಥ್ಯದಲ್ಲಿ ಮಾರ್ಚ್ 21 ರಂದು ರಾತ್ರಿ 8:00 ಗಂಟೆಗೆ ದೇವಸ್ಥಾನದ ವಠಾರದಲ್ಲಿ ಅದ್ದೂರಿ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಗಣ್ಯಾತೀ ಗಣ್ಯರು ಹಾಗು ಕನ್ನಡ ಮತ್ತು ತುಳು ಚಿತ್ರರಂಗದ ಖ್ಯಾತ ನಟ ನಟಿಯರು ಭಾಗವಹಿಸಲಿದ್ದು, ವಿವಿಧ




























