Home ಕರಾವಳಿ Archive by category ಉಡುಪಿ (Page 27)

ಉಡುಪಿ: ಕಾಣೆಯಾಗಿದ್ದ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳು ಶವವಾಗಿ ಪತ್ತೆ

ಶಿರೂರು : ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ. ಬೈಂದೂರು ಯೋಜನಾನಗರದ ನಾಗೇಂದ್ರ (13) ಹಾಗೂ ರೈಲ್ವೆ ನಿಲ್ದಾಣದ ಬಳಿ ವಾಸಿಸುವ ಶಾನ್ ಮುಹಮ್ಮದ್ ಶಫಾನ್ (13) ‌ ಮೃತ ವಿದ್ಯಾರ್ಥಿಗಳು. ಪರೀಕ್ಷೆ ಮುಗಿಸಿ ಮನೆಯಲ್ಲಿ ಊಟ ಮಾಡಿ ಇಬ್ಬರು ಬೈಂದೂರು ನಗರ ಸಮೀಪದ ಕೆರೆಕಟ್ಟೆ ಕೆರೆಯಲ್ಲಿ ಈಜಲು

ಪಡುಬಿದ್ರಿ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ವ್ಯಕ್ತಿಯೋರ್ವರು ತಮ್ಮ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಜಾನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರು ಮೂಳೂರು ರಾಜಮನೆ ನಿವಾಸಿ ಸುಭಾಷ್ ಚಂದ್ರ ಪೂಜಾರಿ(68), ಈ ಭಾಗದ ಬಿಲ್ಲವ ಸಮಾಜದ ಒಂದನೇ ಗುರಿಕಾರರಾಗಿದ್ದು, ಕುಟುಂಬದ ದೈವದ ಆರಾಧಕರಾಗಿ ಸೇವೆ ನಡೆಸುತ್ತಿದ್ದ ಇವರು ಪಿಗ್ಮಿ ಸಂಗ್ರಹ ವೃತ್ತಿ ನಡೆಸಿ ಗೌರವಯುತವಾಗಿ ಜೀವನ ನಡೆಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಕೈ ನಡುಕ ಸಮಸ್ಯೆ ಅವರನ್ನು ಬಾಧಿಸುತ್ತಿದ್ದು ಪಿಗ್ಮಿ ಸಂಗ್ರಹ

ಬ್ರಹ್ಮಾವರದ ವಿದ್ಯಾಲಕ್ಷ್ಮೀ ಶಿಕ್ಷಣ ಸಂಸ್ಥೆಯಲ್ಲಿ “ಸ್ಪರ್ಶ 2024” ಫ್ರೆಷರ್ಸ್ ಡೇ ಆಚರಣೆ

ಬ್ರಹ್ಮಾವರ: ನೂತನ ವಿದ್ಯಾರ್ಥಿಗಳನ್ನು ಗುರುತಿಸಿ ಸ್ವಾಗತಿಸುವ ” ಸ್ಪರ್ಶ 2024″ ಕಾರ್ಯಕ್ರಮವನ್ನು ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟಿ, ಗಾಯಕಿ, ರೂಪದರ್ಶಿಯಾಗಿರುವ ಮಹಿಮಾ ಭಂಡಾರಿ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿ ಜೀವನ ಎಂಬುದು ಅನೇಕ ಅವಕಾಶ ಗಳನ್ನು ಹೊಂದಿರುವ ವೇದಿಕೆ ಇದನ್ನು ಸರಿಯಾಗಿ ಉಪಯೋಗಿಸಿದರೆ ಜೀವನದಲ್ಲಿ

ಡಾ.ಟಿ ಎಮ್ ಎ ಪೈ ಪಾಲಿಟೆಕ್ನಿಕ್ ಮಣಿಪಾಲದ 2024-25ನೇ ಸಾಲಿನ ಪ್ರವೇಶಾವಕಾಶಕ್ಕಾಗಿ ಸೆ. 27 ರವರೆಗೆ ದಿನಾಂಕ ವಿಸ್ತರಣೆ

ಡಾ.ಟಿ ಎಮ್ ಎ ಪೈ ಪಾಲಿಟೆಕ್ನಿಕ್ ಮಣಿಪಾಲ ಇದರ 2024-25ನೇ ಸಾಲಿನ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಪ್ರವೇಶಾವಕಾಶಕ್ಕಾಗಿ ಸೆ 27 ರವರೆಗೆ ದಿನಾಂಕ ವಿಸ್ತರಣೆ ಬಗ್ಗೆ ಮಾನ್ಯ ನಿರ್ದೇಶಕರು ಆದೇಶ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರಾದ ಕಾಂತರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಸಂಸ್ಥೆಯಲ್ಲಿಕೆಲವೇ ಸೀಟುಗಳು ಬಾಕಿ ಉಳಿದಿದ್ದು ಐಟಿಐ ಪಾಸಾಗಿರುವ ಅರ್ಹ ಅಭ್ಯರ್ಥಿಗಳಿಗೆ

ಉಡುಪಿ: ಪಿಎಸ್ಐ ಹೃದಯಾಘಾತದಿಂದ ಸಾವು

ಉಡುಪಿ ಜಿಲ್ಲಾ ನಿಯಂತ್ರಣ ಕೊಠಡಿಯ ಪೊಲೀಸ್ ಉಪನಿರೀಕ್ಷಕ ನಿತ್ಯಾನಂದ(51) ಶಿರ್ವ ಗ್ರಾಮದ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಕಳೆದ 3 ವರ್ಷಗಳಿಂದ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಸೆ.16ರಂದು ಬೆಳಗ್ಗೆ ಪಾಳಿ ಕರ್ತವ್ಯ ಮುಗಿಸಿ ವಿಶ್ರಾಂತಿಗೆ ತೆರಳಿದ್ದರು. ರಾತ್ರಿ ಮನೆಯಲ್ಲಿ ಊಟದ ನಂತರ ಮಲಗಿದ್ದ ಇವರು, ಬೆಳಗ್ಗೆ ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದರು.ಮೃತರು ಪತ್ನಿ,

ಉಡುಪಿ: ಉಚ್ಚಿಲ ದಸರಾ 2024- ಸೆ.22ರಂದು ಯುವ ನೃತ್ಯೋತ್ಸವದ ಆಡಿಷನ್ ರೌಂಡ್

ಉಡುಪಿ ಉಚ್ಚಿಲ ದಸರಾ 2024ರ ಪ್ರಯುಕ್ತ ನಡೆಯಲಿರುವ ಯುವ ನೃತ್ಯೋತ್ಸವದ ಆಡಿಷನ್ ರೌಂಡ್ ಸೆ.22ರಂದು ಮಧ್ಯಾಹ್ನ 3ರಿಂದ 6 ಗಂಟೆಯವರೆಗೆ ಉಚ್ಚಿಲದ ಮೊಗವೀರ ಭವನದಲ್ಲಿ ನಡೆಯಲಿದೆ. ಆಡಿಷನ್ ಸುತ್ತಿನ ಸ್ಪರ್ಧಾ ನಿಯಮಗಳು :1. ಒಂದು ನೃತ್ಯ ತಂಡದಲ್ಲಿ ಕನಿಷ್ಠ 5 ಜನ ಇರತಕ್ಕದ್ದು.2. ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.3. ಒಂದು ತಂಡಕ್ಕೆ 5 ನಿಮಿಷ (4+1)ದ ಸಮಯಾವಕಾಶ ಮಾತ್ರ ನೀಡಲಾಗುವುದು.4. ಆಡಿಷನ್ ಸುತ್ತಿನಲ್ಲಿ ಯಾವುದೇ ಕಾಸ್ಟ್ಯೂಮ್‌ನ (ವೇಷಭೂಷನ)

ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತದ ನೂತನ ಶಿರ್ವ ಶಾಖೆ ಶುಭಾರಂಭ

ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ನೂತನ ಶಾಖೆಯು ಶಿರ್ವದ ಸುವರ್ಣ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಶುಭಾರಂಭಗೊಂಡಿತು. ನೂತನ ಶಿರ್ವ ಶಾಖೆಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು. ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರುಗಳಾದ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಸೇಫ್ ಲಾಕರನ್ನು ಮತ್ತು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಗಣಕಯಂತ್ರ ವಿಭಾಗವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ

ಪೆರ್ಡೂರು ಗೋರೇಲಿನಲ್ಲಿ ಚಿರತೆಯ ಹಾವಳಿಗೆ ಸಾಕು ನಾಯಿ ಬಲಿ

ಹೆಬ್ರಿ:ಪೆರ್ಡೂರು ಗೋರೇಲಿನಲ್ಲಿ ಶ್ರೀಯುತ ಹರಿನಾರಾಯಣ ಭಂಡಿ ಯವರ ನಿವಾಸದಲ್ಲಿ ನಿನ್ನೆ ರೀತಿ ರಾತ್ರಿ ಹೊತ್ತು ದಾಳಿ ನಡೆಸಿದ ಚಿರತೆ ಮನೆಯಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಹೊತ್ತು ಕೊಂಡು ‌ಹೋಗುತ್ತಿರುವ ದೃಶ್ಯವು . ಮನೆಯ ಸಿಸಿಟಿವಿಯಲ್ಲಿ ಕಂಡು ಬಂದಿದೆ. ಪೆರ್ಡೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಚಿರತೆಯ ಓಡಾಟವನ್ನು ನೋಡಿದ ಸ್ಥಳೀಯರು ಹೇಳುತ್ತಿದ್ದಾರೆ.ಈ ಭಾಗದಲ್ಲಿ ಮತ್ತೆ ಚಿರತೆ ಕಾಣಿಸಿ ಕೊಳ್ಳುತ್ತಿರುವುದು

ಬ್ರಹ್ಮಾವರ : ವಿದ್ಯಾಲಕ್ಷ್ಮೀ ಕಾಲೇಜಿನಲ್ಲಿ ಪೋಸ್ಟರ್ ಮೇಕಿಂಗ್ ಸ್ಪರ್ಧೆ

ಬ್ರಹ್ಮಾವರ :ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ “ಪೋಸ್ಟರ್ ಮೇಕಿಂಗ್” ಸ್ಪರ್ಧೆಯನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗವಹಿಸಿ “ಮಾನವೀಯತೆ” ಎಂಬ ವಿಷಯದ ಕುರಿತು ಪೋಸ್ಟರ್ ಗಳನ್ನು ವಿಭಿನ್ನವಾಗಿ ತಯಾರಿಸಿದರು . ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ. ನಿರ್ದೇಶಕಿ ಶ್ರೀಮತಿ ಮಮತಾ, ಪ್ರಾಂಶುಪಾಲರಾದ ಶ್ರೀ ರವಿರಾಜ್ ಶೆಟ್ಟಿ

ರಾಜ್ಯದ ಮುಖ್ಯಮಂತ್ರಿಗಳ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿದ ಬಿಜೆಪಿಗರ ವರ್ತನೆ ಖಂಡನೀಯ. ಪ್ರಸಾದ್ ರಾಜ್ ಕಾಂಚನ್ ಆಕ್ರೋಶ

ರಾಜ್ಯದ ಮುಖ್ಯಮಂತ್ರಿಗಳ ಪ್ರತಿಕೃತಿಗೆ,ಚಪ್ಪಲಿಯಿಂದ ಹೊಡೆದು ಅವಮಾನಿಸುವ ಬಿಜೆಪಿಗರ ವರ್ತನೆ ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯವನ್ನು ಆಳುತ್ತಿರುವ ಮುಖ್ಯಮಂತ್ರಿ ಒಂದು ಗೌರವದ ಹುದ್ದೆಯಲ್ಲಿದ್ದಾಗ ಅವರ ಪ್ರತಿಕೃತಿ ರಚಿಸಿ ಚಪ್ಪಲಿಯಿಂದ ಹೊಡೆದು ಅವಮಾನಿಸುವುದು ಸರಿಯಾದ ಕ್ರಮವಲ್ಲ. ಸ್ಥಳದಲ್ಲಿ ಉಪಸ್ಥಿತರಿದ್ದ ಶಾಸಕರು ಇದನ್ನು ಕಂಡು ಕುರುಡರಂತೆ ವರ್ತಿಸುವ ಬದಲು ತಡೆಯುವ ಕೆಲಸ ಮಾಡಬೇಕಾಗಿತ್ತು