Home ಕರಾವಳಿ Archive by category ಉಡುಪಿ (Page 82)

Bynduru : ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ

ಬೈಂದೂರಿನ ವಂಡ್ಸೆ ಗ್ರಾಮ ಪಂಚಾಯತ್ ಹಳೆ ಎಸ್‍ಎಲ್‍ಆರ್‍ಎಂ ಘಟಕದಲ್ಲಿರುವ ಕಸ ವಿಲೇವಾರಿ ಮಾಡದೆ ಇರುವುದರಿಂದ ಗಬ್ಬು ನಾರುತ್ತಿದೆ. ಪರಿಸರದಲ್ಲಿರುವ ಶಾಲಾ ಮಕ್ಕಳಿಗೆ ತೊಂದರೆ ಆಗಿದ್ದು, ಕಸವನ್ನು ವಿಲೇವಾರಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ವಂಡ್ಸೆ ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಶಾಲೆ ಬಳಿ ಇದ್ದ ಹಳೆ

ಕುಸಿದುಬಿದ್ದು ವ್ಯಕ್ತಿಯೋರ್ವನಿಗೆ ಗಂಭೀರ ಗಾಯ

ಉಡುಪಿ : ಕುಸಿದುಬಿದ್ದು ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಡಿಸೋಜ ಕಡೇಕಾರು ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಸಮೀಪದ ದಾತ್ರಿ ಮೆಡಿಕಲ್ ಸಿಬ್ಬಂದಿಯೋರ್ವರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡುದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ನಿತ್ಯಾನಂದ ಒಳಕಾಡು ಅವರು, ವ್ಯಕ್ತಿಯನ್ನು ಉಡುಪಿ ಜಿಲ್ಲಾಸ್ಪತ್ರೆಗೆ

ಬೈಂದೂರಿನ ಸೋಮೇಶ್ವರ ಬೀಚ್‍ಗೆ ಮೂಲಸೌಕರ್ಯ ಒದಗಿಸುವಂತೆ ಆಗ್ರಹ

ಬೈಂದೂರು ಕ್ಷೇತ್ರದ ಪಡುವರಿ ಗ್ರಾಮದ ಸೋಮೇಶ್ವರ ಬೀಚ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಬೀಚ್‍ಗೆ ಮೂಲ ಸೌಕರ್ಯ ಒದಗಿಸುವಂತೆ ಜನತೆ ಆಗ್ರಹಿಸುತ್ತಿದ್ದಾರೆ. ಸರಿಸುಮಾರು 2ಕಿಮೀ ಅಂತರದಲ್ಲಿ ಅಗಾಧ ಸೌಂದರ್ಯವಿದೆ. ಬೀಚ್ ಸೌಂದರ್ಯ ಆಕರ್ಷಕ. ತೀರದಿಂದ 300ಮೀಟರ್ ಅಂತರದವರೆಗೆ ಆಳವಿಲ್ಲ. ತೀರದ ಉದ್ದಕ್ಕೂ ಪ್ರಾಕೃತಿಕ ಕಲ್ಲುಬಂಡೆಗಳು ಹರಡಿಕೊಂಡಿದೆ. ಮಂದಗತಿಯಲ್ಲಿ ಬಂದು ಬಂಡೆಗೆ ಅಪ್ಪಳಿಸಿ ಹಿಂದಿರುಗುವ

ಉಡುಪಿ-ಮಣಿಪಾಲ ರಸ್ತೆ ಬದಿಯಲ್ಲಿ ಗುಡ್ಡ ಕುಸಿತ

ಉಡುಪಿ : ಉಡುಪಿ ಜಿಲ್ಲೆಗೆ ಹವಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಜಿಲ್ಲೆಯೆಲ್ಲೆಡೆ ವ್ಯಾಪಕ ಮಳೆಯಾಗುತ್ತಿದೆ. ನಿನ್ನೆಯಿಂದ ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಡುಪಿ-ಮಣಿಪಾಲ ರಸ್ತೆ ಬದಿಯಲ್ಲಿ ಗುಡ್ಡ ಜರಿತ ಉಂಟಾಗಿದೆ. ನಿರಂತರ ಮಳೆಯಿಂದ ಮಣ್ಣು ಹದಗೊಂಡು ಮಣಿಪಾಲದ ಏರು ಪ್ರದೇಶದಲ್ಲಿ ಗುಡ್ಡಗಳು ರಸ್ತೆಯ ಮೇಲೆ ಕುಸಿಯುತ್ತಿವೆ. ಜರಿಯುತ್ತಿರುವ ಗುಡ್ಡದ ಮೇಲೆ ಕಟ್ಟಡಗಳಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ಸಣ್ಣ

ಪಡುಬಿದ್ರಿಯ ಕಾಡಿಪಟ್ಣ ಪ್ರದೇಶದಲ್ಲಿ ತೀವೃಗೊಂಡ ಕಡಲ್ಕೊರೆತ

ಬೀಸಿದ ಭಾರೀ ಗಾಳಿ ಮಳೆಗೆ ಪಡುಬಿದ್ರಿ ಬೀಚ್ ಪಕ್ಕದ ಕಾಡಿಪಟ್ಣ ಶಂಕರ ಎಮ್.ಅಮೀನ್ ಮನೆ ಬಳಿ ಸುಮಾರು 50 ಮೀ. ಭಾಗದಲ್ಲಿ ಕಡಲ್ಕೊರೆತವುಂಟಾಗಿದ್ದು, ಸೊತ್ತು ಇನ್ನಷ್ಟು ಕಡಲು ಪಾಲಾಗುವ ಸಾಧ್ಯತೆ ಇದೆ. ಕಡಲಿ ತಡಿಗೆ ಅಪ್ಪಳಿಸುತ್ತಿರುವ ಅಬ್ಬರದ ತೆರೆಗಳಿಗೆ ಈಗಾಗಲೇ 4 ತೆಂಗಿನ ಮರಗಳು, ಪಡುಬಿದ್ರಿ ಬೀಚ್ ಅಭಿವೃದ್ಧಿ ಕಾಮಗಾರಿಯ ಭಾಗವಾಗಿರುವ ಒಂದು ಬೃಹತ್ ವಿದ್ಯುತ್ ಕಂಬವು ನೆಲಕಚ್ಚಿದೆ. ಇಲ್ಲಿನ ಅಭಿವೃದ್ಧಿ ಕಾಮಗಾರಿಯ ವೇಳೆ ಹಾಸಲಾಗಿದ್ದ ಹಾಲೋ ಬ್ಲಾಕ್ಸ್ ಅಂಗಳದ

ಕಾಪು : ಮಳೆಗೆ ಮನೆ ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ

ಪುರಸಭಾ ವ್ಯಾಪ್ತಿಯ ತೆಂಕಪೇಟೆಯಲ್ಲಿ ಮನೆಯೊಂದು ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಕಾಪು ತೆಂಕಪೇಟೆ ನಿವಾಸಿ ವಿಜಯಲಕ್ಷ್ಮಿ ಕಾಮತ್ ಅವರಿಗೆ ಸೇರಿದ ಹಳೆ ಹೆಂಚಿನಮನೆ ಭಾರೀ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದೆ. ಮನೆಯಲ್ಲಿ ಯಾರೂ ವಾಸಿಸುತ್ತಿಲ್ಲವಾಗಿದ್ದು ಇದರಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ .

ಉಡುಪಿ : ಕಾಲು ಜಾರಿ ತೋಡಿಗೆ ಬಿದ್ದು ವ್ಯಕ್ತಿ ಮೃತ್ಯು

ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೀಡಿನಗುಡ್ಡೆಯ ನಾಗಬನದ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ 38 ವರ್ಷದ ಸೋಮಪ್ಪ ರಾಠೋಡ್ ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಸ್ಥಳೀಯರು ಮೃತದೇಹವನ್ನು ತೋಡಿನಿಂದ ಮೇಲಕೆತ್ತಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು ನೆರವಾದರು. ಈ

ಬೀಡಿನಗುಡ್ಡೆಯಲ್ಲಿ ತೋಡಿಗೆ ಬಿದ್ದು ವ್ಯಕ್ತಿ ಮೃತ್ಯು

ಉಡುಪಿ : ದಾರಿಯಲ್ಲಿ ನಡೆದುಕೊಂಡು‌ ಹೋಗುತ್ತಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೀಡಿನಗುಡ್ಡೆಯ ನಾಗಬನದ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ 38 ವರ್ಷದ ಸೋಮಪ್ಪ ರಾಠೋಡ್ ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಸ್ಥಳೀಯರು ಮೃತದೇಹವನ್ನು‌ ತೋಡಿನಿಂದ ಮೇಲೆತ್ತಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಮೃತದೇಹವನ್ನು

ಸೇನೆ ಸೇರುವ ಕನಸುಗಳಿಗೆ ‘ಕೋಟಿ ಚೆನ್ನಯ’ ತರಬೇತಿ

ಉಡುಪಿ : ಸೇನೆಗೆ ಸೇರಬೇಕು, ದೇಶ ಸೇವೆ ಮಾಡಬೇಕು ಅನ್ನೋದು ಸಾವಿರಾರು ಯುವಕರ ಕನಸು. ಆದರೆ ಸೂಕ್ತ ಮಾಹಿತಿ ಹಾಗೂ ತರಬೇತಿಯ ಕೊರತೆಯಿಂದ ಕನಸು ನನಸಾಗೋದೆ ಇಲ್ಲ. ಇಂತಹ ದೇಶ ಸೇವೆಯ ಕನಸು ಹೊತ್ತ ಯುವಕರಿಗೆ ತರಬೇತಿ ನೀಡಿ, ಸೈನಿಕರಾಗಲು ಪ್ರೇರೆಪಿಸುತ್ತಿದೆ ಉಡುಪಿಯ ಕೋಟಿ ಚೆನ್ನಯ ಸೇನಾ ತರಬೇತಿ ಪೂರ್ವ ಸಂಸ್ಥೆ. ಇದು ಸೈಕರಾಗಿ ದೇಶ ಕಾಯಲು ಹೊರಟ ಯುವಕರಿಗೆ ತರಬೇತಿ ನೀಡುವ ಸೇನಾ ಪೂರ್ವ ತರಬೇತಿ ಶಾಲೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ

ಉಡುಪಿಯ ಹಳೆ ಜೈಲಿನ ನೆಲಸಮಕ್ಕೆ ಆದೇಶ : ಕಾಂತಾರ ಚಿತ್ರೀಕರಣಗೊಂಡ ಸ್ವಾತಂತ್ರ್ಯ ಪೂರ್ವದ ಜೈಲು

ಉಡುಪಿ : ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣಗೊಂಡ ಸರಿಸುಮಾರು 117 ವರ್ಷಗಳ ಇತಿಹಾಸ ಇರುವ ಉಡುಪಿ ನಗರದ ಹಳೆ ಸಬ್‌ಜೈಲು ಇನ್ನಿಲ್ಲದಂತಾಗುವಂತಿದೆ. ಕಾಂತಾರ ಸಿನಿಮಾದ ಕೆಲ ಭಾಗಗಳು ಚಿತ್ರೀಕರಣಗೊಂಡ, ಉಡುಪಿಯ ಏಕೈಕ ಪಾರಂಪರಿಕ ಕಟ್ಟಡದ ನೆಲಸಮಕ್ಕೆ ಇದೀಗ ಆದೇಶ ನೀಡಲಾಗಿದೆ. ಹೊಸ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಪಾರಂಪರಿಕ ಜೈಲನ್ನು‌ ಕೆಡವಲು ಉಡುಪಿ ನಗರಸಭೆ ಮೂದಾಗಿರುವುದು, ಆರ್ಕಿಟೆಕ್ಟ್‌ಗಳು ಹಾಗೂ ಕಲಾವಿದರಿಂದ ಬಾರೀ ವಿರೋಧ ವ್ಯಕ್ತವಾಗುತ್ತಿದೆ. ಉಡುಪಿ,