Home ಕರಾವಳಿ Archive by category ಉಡುಪಿ (Page 94)

ಮಲ್ಪೆ ಬೀಚ್ ಬಳಿ ಉದ್ಘಾಟನೆಗೊಂಡ ರುದ್ರಭೂಮಿ : ಮಾಜಿ ಶಾಸಕ ಕೆ. ರಘುಪತಿ ಭಟ್ ಭಾಗಿ

ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಬಳಿಯಿರುವ ರುದ್ರಭೂಮಿಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು ಮೇ 29, 2023 ರ ಸೋಮವಾರದಂದು ರುದ್ರಭೂಮಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತ್ತು. ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಮತ್ತು ಮಾಜಿ ಶಾಸಕರಾದ ಕೆ. ರಘುಪತಿ ಭಟ್ ರವರು ಉದ್ಘಾಟಿಸಿದರು. ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಅವಧಿಯಲ್ಲಿ ಅವರ ಶಿಫಾರಸ್ಸಿನ ಮೇರೆಗೆ

ಕಾಪು : ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ನೂತನ ಕಚೇರಿ ಉದ್ಘಾಟನೆ

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ನೂತನ ಕಚೇರಿಯನ್ನು ಕಾಪು ಮಿನಿ ವಿಧಾನಸೌಧದ ಪ್ರಥಮ ಮಹಡಿಯಲ್ಲಿ ಬಿಜೆಪಿಯ ಹಿರಿಯ ಚೇತನ ಗುಜ್ಜಾಡಿ ಪ್ರಭಾಕರ್ ನಾಯಕ್ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಈಗಾಗಲೇ ಬಿಜೆಪಿ ಪಕ್ಷವು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಯಾವ ಬೂತ್‍ನಲ್ಲಿ ಕಡಿಮೆ ಮತ ಸಿಕ್ಕಿದೆಯೋ ಆ ಭಾಗಕ್ಕೆ ಹೆಚ್ಚಿನ ಒತ್ತು ನೀಡಿ ನಮ್ಮ ನ್ಯೂನ್ಯತೆಯನ್ನು ಸರಿ ಪಡಿಸಿಕೊಳ್ಳ ಬೇಕಾಗಿದೆ ಎಂದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಬೆಳ್ಳಂಬೆಳಗ್ಗೆ ಉಡುಪಿಗೆ ಆಗಮಿಸಿದ ವರುಣ

ಉಡುಪಿ : ಬಿಸಿಲ ಬೇಗೆಯಲ್ಲಿ ಕಂಗೆಟ್ಟ ಉಡುಪಿಯ ಜನತೆಗೆ ಇಂದು ಕೊಂಚ ನಿಟ್ಟುಸಿರು ಬಿಡುವಂತಾಯಿತು. ಇಂದು ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಉಡುಪಿ ನಗರದೆಲ್ಲೆಡೆ ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣದ ಮಳೆಯಾಗಿದೆ. ಉದ್ಯೋಗ ಹಾಗೂ ಇನ್ನಿತರ ಉದ್ದೇಶಕ್ಕಾಗಿ ತೆರಳಿದ ಜನರಿಗೆ ಏಕಾಏಕಿ ಸುರಿದ ಮಳೆಯಿಂದ ಸ್ವಲ್ಪ ಸಮಸ್ಯೆಯಾದರೂ, ಇಳೆ ತಂಪಾಯಿತೆಂಬ ಸಮಾಧಾನ ತಂದಿತು. ಬೇರೆ ಊರಿಂದ ಉಡುಪಿಗೆ ಬಂದ ಜನರಿಗೆ ಮಳೆರಾಯ ತಂಪೆರೆದು ಸ್ವಾಗತ ಕೋರಿದನು.

ಬ್ರಹ್ಮಾವರ : ಗ್ಯಾರೇಜ್ ಮಾಲಕರ ಸಂಘದ ವಾರ್ಷಿಕ ಸಭೆ

ಬ್ರಹ್ಮಾವರ ಗ್ಯಾರೇಜ್ ಮಾಲಕರ ಸಂಘದ ವಾರ್ಷಿಕ ಸಭೆ ಧರ್ಮಾವರ ಆಡಿಟೊರಿಯಂನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ ಆರ್ ಮಾತನಾಡಿ ದೇಶದಲ್ಲಿ ಕೋರೋನ ಬಂದ ಬಳಿಕ ಗ್ಯಾರೇಜ ಮಾಲಕರ ಸಂಘದಂತೆ ಅನೇಕ ಕಾರ್ಮಿಕ ಸಂಘಟನೆಗಳು ಸರಕಾರದ ಕೆಲವು ಸವಲತ್ತು ಪಡೆಯುವಂತೆ ಆಗಿದೆ . ಮುಂದೆಯೂ ಕೂಡಾ ಇಲಾಖೆಯ ಸವಲತ್ತುಗಳನ್ನು ಸಂಘಟನೆಯ ಮೂಲಕ ಪಡೆದುಕೊಳ್ಳಿ ಎಂದರು. ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ಮಹಾಂತೇಶ್ ಬ್ರಹ್ಮಾವರ

ಪಡುಬಿದ್ರಿಯಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಉಚಿತ ಪ್ರದರ್ಶನ

ವಿಶ್ವಹಿಂದೂ ಪರಿಷತ್, ಭಜರಂಗದಳ ಕಾಪು ಪ್ರಖಂಡವತಿಯಿಂದ ಪಡುಬಿದ್ರಿಯ ಎರಡು ಚಿತ್ರಮಂದಿರಗಳಲ್ಲಿ ” ಕೇರಳ ಸ್ಟೋರಿ ” ಚಲನಚಿತ್ರ ವೀಕ್ಷಿಸಲು ಯುವತಿಯರಿಗೆ ಉಚಿತ ಅವಕಾಶ ಮಾಡಿಕೊಟ್ಟಿದ್ದು, ಇನ್ನೂರಕ್ಕೂ ಅಧಿಕ ಯುವತಿಯರು ಹಾಗೂ ಮಹಿಳೆಯರು ಚಿತ್ರ ವೀಕ್ಷಣೆ ಮಾಡಿದ್ದಾರೆ. ಚಿತ್ರ ವೀಕ್ಷಣೆ ಮಾಡಿದ ಯುವತಿಯರು ಪ್ರತಿಕ್ರಿಯಿಸಿ ಮುಂದಿನ ದಿನದಲ್ಲಿ ನಮ್ಮ ಜೀವನದಲ್ಲೂ ಇಂಥಹ ಘಟನೆಗಳು ನಡೆಯ ಬಾರದು ಎಂದಾದರೆ ನಾವು ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ ಎಂದರು.

ಮನೆ ಮನೆಗೆ ನೀರು ವಿತರಣೆ : ಕೊಡವೂರು ವಾರ್ಡ್ ನಲ್ಲೊಂದು ಮಾದರಿ ಸೇವೆ

ಉಡುಪಿ : ಈ ಬಾರಿ ಪೂರ್ವ ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ರಾಜ್ಯದ ಹಲವು ಭಾಗಗಳು ಸೇರಿದಂತೆ ಉಡುಪಿ ಜಿಲ್ಲೆಗೂ ಬಿಸಿ ತಟ್ಟಿದೆ. ಆದ್ದರಿಂದ ಉಡುಪಿ ನಗರಸಭೆಯ ನೀರನ್ನೇ ಅವಲಂಬಿಸುವ ಸಂಕಷ್ಟ ಎದುರಾಗಿದೆ. ಆದರೆ ಇದೀಗ ಉಡುಪಿ ನಗರಸಭೆ ಕೂಡ ಸಮರ್ಪಕ ನೀರು ಪೂರೈಸಲು ವಿಫಲಗೊಂಡಿದೆ. ಆದರೆ ಉಡುಪಿ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಅವರ ನೇತೃತ್ವದಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಕಾರ್ಯ ಉಡುಪಿಯ ಕೊಡವೂರಿನಲ್ಲಿ ನಡೆಯುತ್ತಿದೆ. ಈ ಮೂಲಕ ತನ್ನ

‘ಎಚ್ಇಎಫ್’ ರಾಷ್ಟ್ರೀಯ ಮಟ್ಟದ ಸಮ್ಮೇಳನ : ಯಶ್ ಪಾಲ್ ಸುವರ್ಣ ಭಾಗಿ

ಮಣಿಪಾಲದ ವ್ಯಾಲಿ ವ್ಯೂ ನಲ್ಲಿ ಹಿಂದೂ ಎಕನಾಮಿಕ್ ಫೋರಮ್ ರಾಷ್ಟ್ರೀಯ ಮಟ್ಟದ ಸಮ್ಮೇಳನವು ಮೇ 28, 2023 ರ ಭಾನುವಾರದಂದು ಜರುಗಿತ್ತು. ಈ ಸಮ್ಮೇಳನದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಯಶ್ ಪಾಲ್ ಸುವರ್ಣ ಭಾಗವಹಿಸಿ, ಸಭೆಯನ್ನುದ್ದೇಶಿಸಿ ಮಾಡನಾಡಿ ಶುಭಹಾರೈಸಿದರು. ಸಮ್ಮೇಳನದಲ್ಲಿ 200 ಕ್ಕೂ ಅಧಿಕ ವ್ಯಾಪಾರೋದ್ಯಮಿಗಳು ಭಾಗವಹಿಸಿದ್ದು, ಹಿಂದೂ ಆರ್ಥಿಕತೆಯ ಅಭಿವೃದ್ದಿಗೆ ಹೊಸ ರೂಪ ಸಿಕ್ಕಿದೆ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ

ಪಡುಬಿದ್ರಿಯಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಉಚಿತ ಪ್ರದರ್ಶನ

ವಿಶ್ವಹಿಂದೂ ಪರಿಷತ್, ಭಜರಂಗದಳ ಕಾಪು ಪ್ರಖಂಡವತಿಯಿಂದ ಪಡುಬಿದ್ರಿಯ ಎರಡು ಚಿತ್ರಮಂದಿರಗಳಲ್ಲಿ ” ಕೇರಳ ಸ್ಟೋರಿ ” ಚಲನಚಿತ್ರ ವೀಕ್ಷಿಸಲು ಯುವತಿಯರಿಗೆ ಉಚಿತ ಅವಕಾಶ ಮಾಡಿಕೊಟ್ಟಿದ್ದು, ಇನ್ನೂರಕ್ಕೂ ಅಧಿಕ ಯುವತಿಯರು ಹಾಗೂ ಮಹಿಳೆಯರು ಚಿತ್ರ ವೀಕ್ಷಣೆ ಮಾಡಿದ್ದಾರೆ. ಚಿತ್ರ ವೀಕ್ಷಣೆ ಮಾಡಿದ ಯುವತಿಯರು ಪ್ರತಿಕ್ರಿಯಿಸಿ ಮುಂದಿನ ದಿನದಲ್ಲಿ ನಮ್ಮ ಜೀವನದಲ್ಲೂ ಇಂಥಹ ಘಟನೆಗಳು ನಡೆಯ ಬಾರದು ಎಂದಾದರೆ ನಾವು ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ ಎಂದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಅಭಿನಂದನೆ

ಬೈಂದೂರು ಶಾಸಕರಾದ ಗುರುರಾಜ್ ಗಂಟೆಹೊಳೆ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಶಕ್ತಿ ಕೇಂದ್ರ ಕಾರ್ಯಕರ್ತರ ಸಭೆ ಮರವಂತೆ ಸಾಧನ ಸಭಾಭವನದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಮರವಂತೆ ಎನ್ನುವುದು ಬಿಜೆಪಿಯ ಭದ್ರಕೋಟೆ ಹಾಗೂ ನನ್ನನ್ನು ಅತಿ ಹೆಚ್ಚು ಮತದಿಂದ ಗೆಲ್ಲಿಸುವಲ್ಲಿ ಮರವಂತೆ ಕಾರ್ಯಕರ್ತರು ಶ್ರಮಿಸಿದ್ದಾರೆ.. ಈ ಕಾರಣದಿಂದ ಅತಿ ಹೆಚ್ಚು ಮತದಿಂದ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ

ಉಡುಪಿ : ರಾಷ್ಟ್ರೀಯ ಪೈಲೆಟ್ ದಿನ ಆಚರಣೆ

ರಾಷ್ಟ್ರೀಯ ಪೈಲೆಟ್ ದಿನವನ್ನು ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ನೇತೃತ್ವದಲ್ಲಿ ಉಡುಪಿ ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಮೇ 26 ರಂದು ಆಚರಿಸಲಾಯಿತು.ಈ ಸಂದರ್ಭದಲ್ಲಿ ಇ.ಎಮ್.ಆರ್.ಐ ಗ್ರೀನ್ ಹೆಲ್ತ್ ಸರ್ವೀಸ್‌ನ ಅಧಿಕಾರಿಗಳಾದ ಜಿಲ್ಲಾ ವ್ಯವಸ್ಥಾಪಕರು, ಜಿಲ್ಲಾ ಅಧಿಕಾರಿಗಳು, ವಾಹನ ಉಸ್ತುವಾರಿ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಚಾಲಕರು ಉಪಸ್ಥಿತರಿದ್ದರು.