ಉಳ್ಳಾಲ: ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಆರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ನೇತ್ರಾವತಿ ನದಿಯ ಹೊಸಸೇತುವೆಯಲ್ಲಿ ಸಂಭವಿಸಿದೆ. ಅಕಾಲಿಕವಾಗಿ ಸುರಿದ ಮಳೆಯಿಂದ ವಾಹನಗಳು ಒಂದರ ಹಿಂದೆಯಂತೆ ಅಪ್ಪಳಿಸಿರುವುದಾಗಿ ತಿಳಿದುಬಂದಿದೆ. ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಲಾರಿ ಸೇತುವೆ ಮಧ್ಯಭಾಗದಲ್ಲಿ ಕೆಟ್ಟು ನಿಂತಿದೆ. ಇದೇ ವೇಳೆ ಭಾರೀ
ಉಳ್ಳಾಲ: ಕರ್ನಾಟಕ ಸಾರಿಗೆ ಬಸ್ ಹಾಗೂ ಸ್ಕೂಟರ್‍ಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಅಡ್ಕ ನಿವಾಸಿ ಕೃಷ್ಣ ಶೆಟ್ಟಿ ತಾಮಾರ್ ಎಂಬವರು ಗಂಭೀರ ಗಾಯಗೊಂಡಿರುವ ಘಟನೆ ಕೋಟೆಕಾರು ಬೀರಿ ಜಂಕ್ಷನ್ ನಲ್ಲಿ ಇಂದು ಸಂಜೆ ವೇಳೆ ಸಂಭವಿಸಿದೆ. ಕೋಟೆಕಾರು ಗ್ರಾಮದ ಕಾರಣೀಕ ಸ್ಥಳ ಕೊಂಡಾಣ ಪಿಲಿಚಾಮುಂಡಿ, ಬಂಟ, ಮುಂಡತ್ತಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಕೋಟೆಕಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಅವರು ಅಪಘಾತದಲ್ಲಿ
ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ರಾ.ಹೆ.೬೬ರ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಮೃತ ಸವಾರನನ್ನು ಮೂಲತಃ ಉಳ್ಳಾಲದ ಪ್ರಸಕ್ತ ಕೋಟೆಕಾರ್‌ನಲ್ಲಿ ನೆಲೆಸುತ್ತಿದ್ದ ಹನೀಫ್ ಎಂಬವರ ಪುತ್ರ ಅಝ್‌ವೀನ್ (21) ಎಂದು ಗುರುತಿಸಲಾಗಿದೆ. ದಕ್ಕೆಗೆ ಮೀನುಗಾರಿಕೆಯ ಕೆಲಸಕ್ಕೆಂದು ಅಝ್‌ವೀನ್ ೩:೩೦ರ ವೇಳೆಗೆ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ನೇತ್ರಾವತಿ ಸೇತುವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡರು
ಉಳ್ಳಾಲ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು ಸಹಿತ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಡಿವೈಎಫ್‍ಐ ಉಳ್ಳಾಲ ತಾಲೂಕು ಸಮಿತಿಯಿಂದ ಉಳ್ಳಾಲ ಸಮುದಾಯ ಆಸ್ಪತ್ರೆ ಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಡಿವೈಎಫ್‍ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಖಾಯಂ ವೈದ್ಯರನ್ನು ನಿಯುಕ್ತಿ ಮಾಡಲು ಆರೋಗ್ಯ ಇಲಾಖೆ ವಿಫಲವಾಗಿದೆ. ಬಾಣಂತಿಯರಿಗೆ ಬಿಸಿನೀರಿನ ವ್ಯವಸ್ಥೆಯಿಲ್ಲ, 108 ಆಂಬ್ಯುಲೆನ್ಸ್ ಸೇವೆ ಆರೋಗ್ಯ
ಜಿಲ್ಲೆಯ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಲಿಸಿದರೆ ಸುಸಜ್ಜಿತವಾದ ಎಲ್ಲಾ ವೈದ್ಯಕೀಯ ಪದ್ಧತಿಯ ಚಿಕಿತ್ಸೆ ಸಿಗುವ ಏಕೈಕ ಆರೋಗ್ಯ ಕೇಂದ್ರ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರವಾಗಿದ್ದು, ಈ ಆರೋಗ್ಯ ಕೇಂದ್ರವನ್ನು ಸುಸಜ್ಜಿತವಾಗಿ ನಿರ್ಮಿಸುವಲ್ಲಿ ಕ್ಷೇತ್ರದ ಶಾಸಕರೂ ಮತ್ತು ಪ್ರಸ್ತುತ ಯು.ಟಿ.ಖಾದರ್ ಅವರು, ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಿದ್ದು, ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರುಗಳು ಮತ್ತು
ಸಾಂದರ್ಭಿಕ ಚಿತ್ರ ಉಳ್ಳಾಲ : ಶಾಲಾ ಪರೀಕ್ಷೆಯ ಗಣಿತ ವಿಷಯದಲ್ಲಿ ಕಡಿಮೆ ಅಂಕ ಹಾಗೂ ಒಂದು ಮಾರ್ಕ್ ಕಡಿಮೆ ನೀಡಿದರೆಂಬ ದ್ವೇಷಕ್ಕೆ ಆರನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಗಣಿತ ಶಿಕ್ಷಕಿಯ ವಾಟರ್ ಬಾಟಲಿಗೆ ಎಕ್ಸ್ಪೈರಿ ಆದ ಮಾತ್ರೆ ಹಾಕಿದ ಪರಿಣಾಮ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡ ಘಟನೆ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಘಟನೆ ಸಂಬಂಧ ಇಂದು ಶಾಲೆಯಲ್ಲಿ ತುರ್ತು ಎಸ್‍ಡಿಎಂಸಿ ಸಭೆ ನಡೆಸಿ ವಿದ್ಯಾರ್ಥಿನಿಯರಿಬ್ಬರಿಗೆ ಟಿ.ಸಿ ನೀಡಲು ಶಾಲಾ
ಕೋಟೆಕಾರು ಅಯ್ಯಪ್ಪ ಮಂದಿರದ ಗರುಸ್ವಾಮಿ ದಿವಂಗತ ಪ್ರಭಾಕರನ್ ಅವರ ಸ್ಮರಣಾರ್ಥ ವಿಷನ್ ಕುಡ್ಲದ ವತಿಯಿಂದ ಅಸೈಗೋಳಿಯಲ್ಲಿರುವ ಅಭಯಾಶ್ರಮದ ವಾಸಿಗಳಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಷನ್ ಕುಡ್ಲದ ಅಧ್ಯಕ್ಷರಾದ ಜಿತೇಂದ್ರ, ಕಾರ್ಯದರ್ಶಿ ಸಂತೋಷ್ ಕುಮಾರ್, ಖಜಾಂಜಿ ರಾಮಚಂದ್ರ, ಉದಯ ಕುಮಾರ್, ಪ್ರಸನ್ನ, ಪ್ರವೀಣ್ ಮಯ್ಯ, ಪ್ರದೀಪ್, ಲೈನಲ್, ಅಭಯಾಶ್ರಮದ ಕಾರ್ಯದರ್ಶಿ ರವಿ ಕುಮಾರ್ ರೈ ಅವರು ಉಪಸ್ಥಿತರಿದ್ದರು.
ಕರ್ನಾಟಕ ಸರಕಾರದ ವಿಧಾನ ಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಆಪ್ತ ಸಹಾಯಕರಾಗಿ ಆಯ್ಕೆಯಾದ ಪ್ರಕಾಶ್ ಪಿಂಟೋ ಅವರಿಗೆ ತೊಕ್ಕೊಟ್ಟು ಶಿವಾಜಿ ಪ್ರೆಂಡ್ ಸರ್ಕಲ್ ಮತ್ತು ಸ್ವಾಮಿ ಕೊರಗಜ್ಜ ಸಮಿತಿಯ ವತಿಯಿಂದ ಗೌರವ ಸನ್ಮಾನ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ಪಿಂಟೋ ಶಿವಾಜಿ ಫ್ರೆಂಡ್ಸ್ ಸರ್ಕಲ್ ಕ್ಲಬ್ ನಲ್ಲಿ ಹಿಂದೂ ಮುಸ್ಲಿಮ್, ಕ್ರೈಸ್ತರು ಸದಸ್ಯರಾಗಿದ್ದಾರೆ, ಸುಮಾರು 50ವರ್ಷದಿಂದ ಮುಂದುವರೆಸುತ್ತಾ ಬಂದಿರುತ್ತಾರೆ, ನಿಮ್ಮ ಮುಂದಿನ ಯೋಜನೆಗಳು
ಸುವರ್ಣ ಮಹೋತ್ಸ ಸಮಿತಿ ಯುವಕ ಮಂಡಲ ಇರಾ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡರು. ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಇರಾ ಸಂಪಿಲದ ಬಿಲ್ಲವ ಭವನದ ವರೆಗೆ ಪ್ಲಾಸ್ಟಿಕ್, ಕಸಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಇರಾ ಗ್ರಾಮ ಪಂಚಾಯತ್ ಸದಸ್ಯರಾದ ಎಮ್.ಡಿ. ಉಮ್ಮರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್, ಪಂಚಾಯತ್ ಕಾರ್ಯದರ್ಶಿ ದಿನೇಶ್, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಜಯರಾಮ್ ಪೂಜಾರಿ ಸೂತ್ರಬೈಲ್, ಉಪಾಧ್ಯಕ್ಷರಾದ
ಉಳ್ಳಾಲ: ನಿಷೇಧಿತ ಎಂಡಿಎಂಎ ಮಾರಾಟ ನಡೆಸಲು ಯತ್ನಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಠಾಣಾಧಿಕಾರಿ ನೇತೃತ್ವದ ಪೊಲೀಸ್ ತಂಡ ಉಳ್ಳಾಲದ ಸೀಗ್ರೌಂಡ್ ನಲ್ಲಿ ನಡೆದಿದೆ. ಮಾಸ್ತಿಕಟ್ಟೆ ಆಝಾದನಗರದ ಫಝಲ್ ಮತ್ತು ಮುಕ್ಕಚ್ಚೇರಿ ಕಡಪ್ಪುರ ದ ಸಮೀರ್ ಬಂಧಿತರು. ಇಬ್ಬರು ಉಳ್ಳಾಲ ಸೀಗ್ರೌಂಡ್ ಸಮುದ್ರ ತೀರದಲ್ಲಿ ನಿಷೇಧಿತ 14 ಗ್ರಾಂ ಎಂಡಿಎಂಎ ಮಾರಾಟ ಮಾಡಲು ಯತ್ನಿಸುವ ಸಂದರ್ಭ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಬಂಧಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ



























