Home ಕರಾವಳಿ Archive by category ಉಳ್ಳಾಳ (Page 27)

ಕೆಟ್ಟು ನಿಂತ ಲಾರಿಗೆ ಸ್ಕೂಟರ್ ಢಿಕ್ಕಿ: ಸ್ಕೂಟರ್ ಚಾಲಕ ಮೃತ್ಯು : ಸಹ ಸವಾರನಿಗೆ ಗಾಯ

ಉಳ್ಳಾಲ: ಕೆಟ್ಟು ನಿಂತ ಲಾರಿಗೆ ಎರಡು ಸ್ಕೂಟರ್ ಗಳು ಢಿಕ್ಕಿ ಹೊಡೆದು ಒಂದು ಸ್ಕೂಟರಿನಲ್ಲಿದ್ದ ಸವಾರ ಸಾವನ್ನಪ್ಪಿ ಸಹಸವಾರ ಗಂಭೀರ ಗಾಯಗೊಂಡು, ಇನ್ನೊಂದು ಸ್ಕೂಟರಿನಲ್ಲಿದ್ದ ಸವಾರ ಗಾಯಗೊಂಡ ಘಟನೆ ನೇತ್ರಾವತಿ ಸೇತುವೆಯಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.ಅಂಗರಗುಂಡಿ ನಿವಾಸಿ ಮೊಹಮ್ಮದ್ ನೌಫಾಲ್ (26) ಸಾವನ್ನಪ್ಪಿ ದವರು. ಸಹಸವಾರ ಉಮ್ಮರ್ ಫಾರುಕ್ ಎಂಬವರು

ಕಾಂಗ್ರೆಸ್ ಆಡಳಿತದ ಅವ್ಯವಹಾರಕ್ಕೆ ಬಿಜೆಪಿ ಬೆಂಬಲ ನೀಡುತ್ತಿದೆ : ಜೆಡಿಎಸ್ ರಾಜ್ಯ ವಕ್ತಾರ ದಿನಕರ್ ಉಳ್ಳಾಲ್ ಆರೋಪ

ಉಳ್ಳಾಲ ನಗರಸಭೆಯಲ್ಲಿ ಕಳೆದ ಎರಡೂವರೆ ವರ್ಷದಿಂದ ಬಹುಮತವಿಲ್ಲದ ಕಾಂಗ್ರೆಸ್ ಪಕ್ಷ ದುರಾಡಳಿತ ಮತ್ತು ಅವ್ಯವಹಾರಗಳಿಗೆ ಪ್ರಸಿದ್ಧಿಯನ್ನು ಪಡೆದಿದ್ದು, ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದ್ಧ ವೈರಿಯಾಗಿರುವ ಬಿಜೆಪಿ ಉಳ್ಳಾಲ ನಗರಸಭೆಯಲ್ಲಿ ಮಾತ್ರ ಕಾಂಗ್ರೆಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಆಡಳಿತದ ಅವ್ಯವಹಾರಕ್ಕೆ ಬೆಂಬಲ ನೀಡುತ್ತಿದೆ ಎಂದು ಜಾತ್ಯಾತೀತ ಜನತಾದಳದ ರಾಜ್ಯ ವಕ್ತಾರ ಹಾಗೂ ಉಳ್ಳಾಲ ನಗರಸಭೆಯ ಸದಸ್ಯ ದಿನಕರ ಉಳ್ಳಾಲ್

ಉಳ್ಳಾಲ ನಗರಸಭೆಯ 2023-24ನೇ ಸಾಲಿನ ಬಜೆಟ್ : ನಗರಸಭೆಯ ಸದಸ್ಯರ ನಡುವೆ ನೂಕಾಟ, ತಳ್ಳಾಟ

ಉಳ್ಳಾಲ: ಉಳ್ಳಾಲ ನಗರಸಭೆಯ 2023-24 ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು ಬಜೆಟ್‍ನ್ನು ವಿರೋಧಿಸಿದ ಜೆಡಿಎಸ್ ಕೌನ್ಸಿಲರ್‍ಗಳು ಕಿವಿಗೆ ಹೂವಿಟ್ಟು ಆಡಳಿತ ರೂಢ ಕಾಂಗ್ರೆಸನ್ನು ಅಣಕಿಸಿದ್ದಾರೆ. ಕಳೆದ ರಾಜ್ಯ ಬಜೆಟ್ ಮಂಡನೆ ವೇಳೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸದನದಲ್ಲಿ ಕಿವಿಗೆ ಹೂ ಇಟ್ಟು ಬಿಜೆಪಿ ಸರಕಾರವನ್ನ ಅಣಕಿಸಿ ಗಮನ ಸೆಳೆದಿದ್ದರು.ಕಾಂಗ್ರೆಸ್ ಅಸ್ತ್ರವನ್ನೇ ಇದೀಗ ಜೆಡಿಎಸ್ ನ ಉಳ್ಳಾಲ ನಗರ ಸದಸ್ಯರು ಬಳಸಿ ಆಡಳಿತರೂಢ ಕಾಂಗ್ರೆಸ್

ಹರೇಕಳ: ಒಂಟಿ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಉಳ್ಳಾಲ: ಒಂಟಿ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ತಾನು ವಾಸವಿದ್ದ ಮನೆಯ ಅಡುಗೆಕೋಣೆಯಲ್ಲಿ ಪತ್ತೆಯಾಗಿರುವ ಘಟನೆ ಹರೇಕಳ ಸಮೀಪದ ದೇರಡ್ಕ ಎಂಬಲ್ಲಿ ನಡೆದಿದೆ.ಹರೇಕಳ ದೇರಡ್ಕ ನಿವಾಸಿ ಜೀನಿ ಡಿಸೋಜ ಎಂಬವರ ಪತ್ನಿ ಮಗ್ಗಿ ಮೊಂತೇರೊ (62) ಎಂಬವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಫೆ.16 ರಂದು ಪುತ್ರಿ ಮನೆಗೆ ಬಂದು ತಾಯಿ ಜತೆಗೆ ಮಾತನಾಡಿ ತೆರಳಿದ್ದರು. ಆನಂತರ ಮೂರು ದಿನಗಳಿಂದ ಮೊಬೈಲ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪುತ್ರಿ ಮನೆಗೆ ಬಂದಾಗ

ಉಳ್ಳಾಲ: ಕೆ ಎಸ್ ಆರ್ ಪಿ ಪೇದೆ ಆತ್ಮಹತ್ಯೆ

ಅಸೈಗೋಳಿ ಕೆ ಎಸ್ ಆರ್ ಪಿಯ ಏಳನೇ ಬೆಟಾಲಿಯನ್ ನ ನೂತನ ಬ್ಯಾಚ್ ನ ಪೊಲೀಸ್ ಪೇದೆ ಬಾಡಿಗೆ ರೂಮಿನಲ್ಲಿ ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಅಸೈಗೋಳಿ ಸೈಟ್ ನಲ್ಲಿ ಇಂದು ಸಂಜೆ ಬೆಳಕಿಗೆ ಬಂದಿದೆ. ಬೆಳಗಾಂ ನಿವಾಸಿ ವಿಮಲನಾಥ ಜೈನ್ (28) ಆತ್ಮಹತ್ಯೆ ಮಾಡಿಕೊಂಡವರು. ತಿಂಗಳ ಹಿಂದಷ್ಟೇ ತಾಯಿ ತೀರಿಕೊಂಡ ನಂತರ ದು:ಖದಲ್ಲಿದ್ದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ನೂತನ ಬ್ಯಾಚ್ ನವರಾಗಿದ್ದ ವಿಮಲನಾಥ್ ಇಂದು ಕರ್ತವ್ಯಕ್ಕೆ ಹಾಜರಾಗದೇ ಬಾಡಿಗೆ ರೂಮಿನಲ್ಲಿ

ಕುಂಪಲ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಸಾವು

ಕುಂಪಲ ಆಶ್ರಯ ಕಾಲನಿಯಲ್ಲಿ ವಾಸವಿರುವ ತಮಿಳುನಾಡು ಮೂಲದ ಸೋಮನಾಥ ಮತ್ತು ಭವ್ಯ ದಂಪತಿಯ ಹಿರಿಯ ಪುತ್ರಿ ಧನ್ಯ(17) ಮೃತ ವಿದ್ಯಾರ್ಥಿನಿ. ಧನ್ಯ ನಗರದ ಕಾಲೇಜಿನಲ್ಲಿ ದ್ವಿತೀಯ ಪಿ.ಯು ವಿದ್ಯಾರ್ಥಿನಿಯಾಗಿದ್ದಳು.ಫೆ.14 ರಂದು ಮದ್ಯಾಹ್ನ ಧನ್ಯ ತಾಯಿ ಭವ್ಯ ಮನೆಗೆ ತೆರಳಿದಾಗ ರಜೆಯಲ್ಲಿದ್ದ ಮಗಳು ಮನೆಯಲ್ಲಿ ಇರಲಿಲ್ಲ.ಮದ್ಯಾಹ್ನ 3 ಗಂಟೆಗೆ ಧನ್ಯ ಮನೆಗೆ ಮರಳಿದ್ದು ಈ ವೇಳೆ ತಾಯಿ ಮಗಳಲ್ಲಿ ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನಿಸಿದ್ದು ಗೆಳತಿ ಮ‌ನೆಗೆ ಓದಲು ತೆರಳಿದ್ದೆ

ಕಾಪಿಕಾಡ್ : ಉಮಾಮಹೇಶ್ವರಿ ದೇವಸ್ಥಾನ : ಆಹೋರಾತ್ರಿ ಭಜನೋತ್ಸವ

ಉಳ್ಳಾಲ ತಾಲೂಕಿನ ಕಾಪಿಕಾಡ್ ಉಮಾಪುರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಆಹೋರಾತ್ರಿ ಭಜನೋತ್ಸವ ಆಯೋಜಿಸಲಾಯಿತು. ಶನಿವಾರ ಮುಂಜಾನೆ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಆಹೋರಾತ್ರಿ ಭಜನೋತ್ಸವಕ್ಕೆ ಉದ್ಯಮಿ ವನಿತಾ ಶೆಟ್ಟಿ ಮತ್ತು ಗಣೇಶ್ ಶೆಟ್ಟಿ ದಂಪತಿಗಳು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಶನಿವಾರ ಮುಂಜಾನೆ ಆರಂಭಗೊಂಡ ಭಜನೋತ್ಸವವು ರಾತ್ರಿ ಶಿವರಾತ್ರಿಯ ಜಾಗರಣೆಯೊಂದಿಗೆ ಮುಂದುವರಿದು ಭಾನುವಾರ ಬೆಳಿಗ್ಗೆ ತನಕ

ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ, ನಿಟ್ಟೆ ವಿಶ್ವ ವಿದ್ಯಾಲಯ ಮತ್ತು ಇಂಟೀ ಇಂಟರ್ನ್ಯಾಷನಲ್ ವಿಶ್ವ ವಿದ್ಯಾಲಯ, ಮಲೇಷ್ಯಾ. ಶೈಕ್ಷಣಿಕ, ಸಂಶೋಧನ ಒಡಂಬಡಿಕೆ ಒಪ್ಪಂದ

ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ,ನಿಟ್ಟೆ ವಿಶ್ವ ವಿದ್ಯಾಲಯ ಮತ್ತು ಇಂಟಿ ವಿಶ್ವ ವಿದ್ಯಾಲಯ ಮಲೇಷಿಯಾ ನಡುವೆ ನೂತನ ಶೈಕ್ಷಣಿಕ ಮತ್ತು ಸಂಶೋಧನ ಒಪ್ಪಂದ ಸಮಾರಂಭ ನಡೆಯಿತು.ತಾರೀಕು ಫೆಬ್ರವರಿ 16 ಬೆಳಗ್ಗೆ 10;30 am ಗಂಟೆಗೇ ಒಪ್ಪಂದ ಸಹಿ ಸಮಾರಂಭ ನಡೆಯಿತು.ಈ ಒಪ್ಪಂದ ಎರಡು ವಿಶ್ವ ವಿದ್ಯಾಲಯ ನಡುವೆ ವಿದ್ಯಾರ್ಥಿ ವಿನಿಮಯ, ಶಿಕ್ಷಕರ ವಿನಿಮಯ, ಹಾಗೂ ನೂತನ ಸಂಶೋಧನೆಗೆ ಅವಕಾಶ ಕೊಡಲಿದೇ. ಮಲೇಷ್ಯಾ ವಿಶ್ವ ವಿದ್ಯಾಲಯದಲ್ಲಿ ನೆರೆದಿದ್ದ ಸಮಾರಂಭದಲ್ಲಿ

ಸೋಮೇಶ್ವರ : ಫೆ.18ರಂದು ಮಹಾಶಿವರಾತ್ರಿ

ಉಳ್ಳಾಲ: ಮಹಾಶಿವರಾತ್ರಿಯ ಸೂರ್ಯಾಸ್ತದ ನಂತರ ಜಾಗರಣದ ಸಂಧಿಕಾಲದಲ್ಲಿ ಸೋಮೇಶ್ವರ ದೇವಸ್ಥಾನದ ಬಳಿ ಇರುವ ರುದ್ರಪಾದೆಯಲ್ಲಿ ಲೋಕಕಲ್ಯಾಣಕ್ಕಾಗಿ ಅಗ್ನಿಹೋತ್ರ ಮತ್ತು ಭಸ್ಮ ತಯಾರಿ ಯಜ್ಞವು ಕರಾವಳಿ ಕಲ್ಯಾಣ ಪರಿಷತ್, ಕರ್ನಾಟಕ ಸೋಮೇಶ್ವರ ಶಕ್ತಿ ಕೇಂದ್ರದ ನೇತೃತ್ವದಲ್ಲಿ ಜರಗಲಿದೆ ಫೆಬ್ರವರಿ 18ರಂದು ನಡೆಯಲಿದೆ ಎಂದು ಪರಿಷತ್ ನ ಪದ್ಮನಾಭ ವರ್ಕಾಡಿ ತಿಳಿಸಿದ್ದಾರೆ. ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್‍ಕ್ಲಬ್ ನಲ್ಲಿ ನಡೆಸಿದ

ಫೆ.20ರಿಂದ 25ರ ವರೆಗೆ ಉಳ್ಳಾಲ್ ಪ್ರೀಮಿಯರ್ ಲೀಗ್ -2023

ಉಳ್ಳಾಲ: ಉಳ್ಳಾಲ್ ಕ್ರಿಕೆಟ್ ಬೋರ್ಡ್ ವತಿಯಿಂದ ಎಂಟನೇ ಅವಧಿಯ ಟೆನಿಸ್ ಬಾಲ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉಳ್ಳಾಲ್ ಪ್ರೀಮಿಯರ್ ಲೀಗ್ ಫೆ.20 ರಿಂದ ಫೆ.25 ರವರೆಗೆ ಐದು ದಿನಗಳ ಕಾಲ ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಉಳ್ಳಾಲದ ಸೀಗ್ರೌಂಡ್ ನಲ್ಲಿ ನಡೆಯಲಿದೆ ಎಂದು ಉಳ್ಳಾಲ್ ಕ್ರಿಕೆಟ್ ಬೋರ್ಡ್ ಇದರ ಅಧ್ಯಕ್ಷ ಯು.ಬಿ ಸಲೀಂ ಹೇಳಿದರು. ಅವರು ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್‍ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ