ಉಳ್ಳಾಲ: ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ನಡೆಸುವ 13 ನೇ ವರ್ಷದ ಗೂಡುದೀಪ ಸಂಗಮ ದೀಪಾವಳಿ ಸಂಭ್ರಮ ಗೂಡುದೀಪ ಸ್ಪರ್ಧೆಯು ನ. 11 ರಂದು ಸಂಜೆ 5.30 ಕ್ಕೆ ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಹೇಳಿದರು ತೊಕ್ಕೊಟ್ಟು ಬ್ರಹ್ಮಶ್ರೀ ಬಿಲ್ಲವ ವೇದಿಕೆ
ಕೊಣಾಜೆ: ಕೊಣಾಜೆ ಅಡ್ಕರೆ ಪಡ್ಪು ವಿನ ಜಮಿಯ್ಯುತುಲ್ ಫಲಾಹ್ ಸಂಸ್ಥೆಯಗ್ರೀನ್ ವೀವ್ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ ‘ಅಟಲ್ ಟಿಂಕೆರಿಂಗ್ ಲ್ಯಾಬ್’ ನ್ನು ಉದ್ಘಾಟನೆ ಕಾರ್ಯಕ್ರಮ ನಡೆಯಿತು. ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ‘ಅಟಲ್ ಟಿಂಕೆರಿಂಗ್ ಲ್ಯಾಬ್ ನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಶೈಕ್ಷಣಿಕವಾದ ಓದಿನೊಂದಿಗೆ ನಮ್ಮ ಸಾಮಾನ್ಯ ಜ್ಞಾನವನ್ನು ವಿಸ್ತರಿಸುವ ಹಾಗೂ ಪ್ರಾಯೋಗಿಕ
ಹಾಜಬ್ಬರಿಗೆ ಉಚಿತ ಉಮ್ರಾ ನಿರ್ವಹಣೆಗೆ ಅವಕಾಶ ನೀಡಿದ ಫಾಹಿಮಾ ಇಂಟರ್‍ನ್ಯಾಷನಲ್ ಇಂದು ಹರೇಕಳದ ಹಾಜಬ್ಬನವರ ಶಾಲೆಯಲ್ಲಿ ವಿವಿಧ ಸಂಘಸಂಸ್ಥೆಗಳು ಅವರನ್ನು ವಿವಿಧ ರೀತಿಯಲ್ಲಿ ಸನ್ಮಾನಿಸಿತ್ತು. ಆದರೆ ದೇರಳಕಟ್ಟೆಯ ಫಾಹಿಮಾ ಇಂಟರ್‍ನ್ಯಾಷನಲ್ ನವರು ಹಾಜಬ್ಬನವರಿಗೆ ಉಚಿತವಾಗಿ ಉಮ್ರಾ ನಿರ್ವಹಣೆಗೆ ಅವಕಾಶ ಒದಗಿಸುವ ಭರವಸೆಯನ್ನು ನೀಡಿದೆ. ಈ ಕುರಿತಾದ ಪತ್ರವನ್ನು ಸಂಸ್ಥೆಯ ನಿರ್ದೇಶಕ ಕಲಂದರ್, ಮ್ಯಾನೇಜರ್ ಅಝೀಝ್ ಝುಹ್‌ರಿ ಇಂದು ಅವರಿಗೆ ಹಸ್ತಾಂತರಿಸಿದರು. ಕೋವಿಡ್
ಹರೇಕಳ ಹಾಜಬ್ಬ ಅವರು ಕಟ್ಟಿ ಬೆಳೆಸಿದ ನ್ಯೂಪಡ್ಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಶಾಲೆ ಯಜಮಾನನಿಗೆ ಪ್ರಶಸ್ತಿ ಪ್ರಧಾನ ನಡೆಯುವ ವೇಳೆ ಬ್ಯಾಂಡ್ ಹಾಗೂ ಚಪ್ಪಾಳೆ ಮೂಲಕ ಹಾಜಬ್ಬರನ್ನು ಹಾಡಿ ಹೊಗಳುವ ಮೂಲಕ ಗೌರವ ಸಮರ್ಪಿಸಿದರು. ಮನೆಯಲ್ಲಿ ಪತ್ನಿ , ಮೂವರು ಮಕ್ಕಳು ಹಾಗೂ ಸಂಬಂಧಿಕರು ಮೊಬೈಲ್ ಮೂಲಕ ಮನೆ ಯಜಮಾನ ಪದ್ಮಶ್ರೀ ಪುರಸ್ಕಾರ ಪಡೆಯುವುದನ್ನು ನೋಡಿ ಸಂಭ್ರಮಿಸಿದರು. ಶಾಲಾ ವಿದ್ಯಾರ್ಥಿ ಗಳಿಗೆ ಹರೇಕಳ ಹಾಜಬ್ಬನವರು ಪದ್ಮಶ್ರೀ ಪುರಸ್ಕಾರ
ದಕ್ಷಿಣ ಭಾರತದ ಅಜ್ಮಿರ್ ಎಂದೇ ಪ್ರಸಿದ್ಧಗೊಂಡ ಇತಿಹಾಸ ಪ್ರಸಿದ್ಧ ಉಳ್ಳಾಲದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಖುತುಬುಝಮಾನ್ ಸಯ್ಯದ್ ಶರೀಫುಲ್ ಮದನಿ ರವರ ಹೆಸರಲ್ಲಿ 21ನೇ ಉರೂಸ್ ಸಮಾರಂಭ ಡಿಸೆಂಬರ್ 23 ರಂದು ನಡೆಯಲಿದ್ದು, ಇದರ ಪ್ರಚಾರ ಸಮಾರಂಭ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಜನತಾದಳ ರಾಷ್ಟ್ರೀಯ ಕಾರ್ಯಾಧ್ಯಕ್ಷರೂ, ವಿಧಾನ ಪರಿಷತ್ ಶಾಸಕರಾದ ಬಿ. ಎಂ ಫಾರೂಕ್ ರವರು ಹಾಗೂ ಶಾಸಕರಾದ ಯು. ಟಿ ಖಾದರ್ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು, ಈ
ಉಳ್ಳಾಲ: ಫ್ಲೈಓವರ್‌ನಿಂದ ಕೆಳಕ್ಕೆ ಬಿದ್ದು ಬುಲೆಟ್ ಸವಾರ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಬುಧವಾರ ಸಂಜೆ ವೇಳೆ ನಡೆದಿದೆ. ಕುಂಪಲ ನಿವಾಸಿ ಸುಬ್ರಹ್ಮಣ್ಯ (50) ಸಾವನ್ನಪ್ಪಿದವರು. ಮಂಗಳೂರು ಕಡೆಯಿಂದ ಕುಂಪಲ ಕಡೆಗೆ ಬುಲೆಟ್ ವಾಹನದಲ್ಲಿ ಬರುವ ಸಂದರ್ಭ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ಬುಲೆಟ್ ಫ್ಲೈಓವರ್ ಗೆ ಢಿಕ್ಕಿ ಹೊಡೆದಿದ್ದು, ಸವಾರ ಸೇತುವೆಯಿಂದ ಕೆಳಗೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯ
ಉಳ್ಳಾಲ: ವಾರೆಂಟ್ ಆರೋಪಿಯನ್ನು ಹಿಡಿಯಲು ಹೋದ ಉಳ್ಳಾಲ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಗೆ ರೌಡಿಶೀಟರ್ ತಲವಾರು ತೋರಿಸಿ ಪರಾರಿಯಾದ ಘಟನೆ ಉಳ್ಳಾಲದ ಧರ್ಮನಗರದಲ್ಲಿ ನಡೆದಿದೆ. ಧರ್ಮನಗರ ನಿವಾಸಿ ಮುಕ್ತಾರ್ ಮುಕ್ತಾರ್ ಅಹ್ಮದ್ ಎಂಬಾತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಈತನ ಮೇಲೆ ಹತ್ತಕ್ಕೂ ಹೆಚ್ಚು ಕೇಸುಗಳಿದ್ದು, ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಉಳ್ಳಾಲ ಪೊಲೀಸರು ಕೋರ್ಟಿನಿಂದ ವಾರಂಟ್ ಪಡೆದು ಇಂದು ಬೆಳಗ್ಗೆ ಬಂಧಿಸಲು
ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಉಳ್ಳಾಲದಲ್ಲಿ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ಉಳ್ಳಾಲದಲ್ಲಿ ಗ್ಯಾಸ್ ಸ್ಟವ್‌ಗೆ ಸಂಬಂಧಿಸಿದ ಸಾಮಗ್ರಿಗಳನ್ನು ಹೊಂದಿರುವ ಅಂಗಡಿ ಮಾಲಕ ಹರೀಶ್ ಗಾಣಿಗ ಚೂರಿ ಇರಿತಕ್ಕೊಳಗಾಗಿರುವವರು. ಆರೋಪಿಯು ಈ ಹಿಂದೆ ಹರೀಶ್ ಜೊತೆ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ಗಲಾಟೆ ಮಾಡಿದ್ದನೆನ್ನಲಾಗಿದೆ. ಈ ಬಗ್ಗೆ ಹರೀಶ್ ಗಾಣಿಗ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ಆರೋಪಿ ಮಂಗಳವಾರ ಹರೀಶ್
ಉಳ್ಳಾಲ: ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಸಮೀಪ ನಿನ್ನೆ ತಡರಾತ್ರಿ ನಡೆದಿದೆ. ಬಿಜೆಪಿ ಕಾರ್ಯಕರ್ತ, ಕೊಣಾಜೆ ಗ್ರಾ.ಪಂ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ (38) ಎಂಬವರ ಕೊಲೆಗೆ ಯತ್ನಿಸಲಾಗಿದೆ. ಬೈಕಲ್ಲಿ ಬಂದ ಮೂವರು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಸ್ನೇಹಿತ ಮಂಜುನಾಥ್ ಜೊತಗೆ ಬೈಕಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. ಪವಾಡಸದೃಶವಾಗಿ ತಲವಾರು ದಾಳಿ ಕೈಗೆ ಮಾತ್ರ
ಉಳ್ಳಾಲ: ಬೈಕ್ ಅಪಘಾತಕ್ಕೀಡಾಗಿ ಮಂಗಳೂರು ದಸರಾ ಮುಗಿಸಿ ವಾಪಸ್ಸಾಗುತ್ತಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ರಾ.ಹೆ. 66ರ ಕೆ.ಸಿ ರೋಡ್ ಬಳಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಕಾಸರಗೋಡು ಜಿಲ್ಲೆಯ ಕುಂಬ್ಳೆ ನಿವಾಸಿಗಳಾದ ಕೃಷ್ಣಪ್ರಸಾದ್ (26) ಮತ್ತು ಪ್ರಜೀತ್ (24) ಮೃತರು. ನಿನ್ನೆ ರಾತ್ರಿ ಯುವಕರಿಬ್ಬರು ದಸರಾ ವೀಕ್ಷಿಸಿ ವಾಪಸಾಗುತ್ತಿದ್ದ ವೇಳೆ ಅಪಘಾತ ನಡೆದಿದೆ.ಬೈಕ್ ಸ್ಕಿಡ್ ಆಗಿ ಅಪಘಾತ ನಡೆದಿರುವುದಾಗಿ ತಿಳಿದುಬಂದಿದೆ. ಯುವಕರಿಬ್ಬರ


















