Home ಕರಾವಳಿ Archive by category ಕಾಸರಗೋಡು (Page 6)

ಮಂಜೇಶ್ವರ: ರಸ್ತೆ ಬದಿ ಹೂವಿನ ಗಿಡ ನೆಡುವ ಕಾರ್ಯಕ್ರಮ

ಮಂಜೇಶ್ವರ : ವರ್ಕಾಡಿ ಗ್ರಾಮ ಪಂಚಾಯತ್ ಮತ್ತು ಕೆಎಯು –ಇಟಿಸಿ ಮಂಜೇಶ್ವರ ಸಹಯೋಗದಲ್ಲಿ ವರ್ಕಾಡಿ ಪಂಚಾಯತಿನ ಹದಿಮೂರನೇ ಧರ್ಮನಗರ ವಾರ್ಡ್‍ನ ಪಿ.ಎಚ್.ಸಿ- ಕೆವಿಕೆ ರಸ್ತೆಯ ಬದಿಗಳಲ್ಲಿ ಹೂವಿನ ಗಿಡಗಳನ್ನು ನೆಡುವ ಮೂಲಕ ಹರಿತ ರೋಡ್ ಕಾರ್ಯಕ್ರಮಕ್ಕೆ ಹೂವಿನ ಗಿಡಗಳನ್ನು ನೆಟ್ಟು ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಚಾಲನೆ ನೀಡಿದರು. ಪಂಚಾಯತ್ ಅಭಿವೃದ್ಧಿ

ಮಂಜೇಶ್ವರ: ರಸ್ತೆ ದುರಸ್ತಿಗಾಗಿ ಹಣ ಸಂಗ್ರಹಿಸುವ ಮೂಲಕ ವಿನೂತನ ಪ್ರತಿಭಟನೆ

ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಹಾಗೂ 8 ವಾರ್ಡುಗಳಲ್ಲಿರುವ ಮಂಜೇಶ್ವರ ರಾಗಂ ಜಂಕ್ಷನ್‍ನಿಂದ ಸಿರಾಜುಲ್ ಹುದಾ ಶಾಲೆಯಲ್ಲಿಂದ ರಸ್ತೆ ಸಂಪೂರ್ಣ ಹದಗೆಟ್ಟಿದು,್ದ ಕಳೆದ 15 ವರ್ಷಗಳಿಂದ ಜನಪ್ರತಿನಿಧಿಗಳಾಗಲೀ ಅಧಿಕಾರಿಗಳಾಗಲೀ ಇತ್ತ ಕಡೆ ತಿರುಗಿಯೂ ನೋಡದೆ ಇರುವುದು ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ಮಳೆ ಸ್ವಲ್ಪ ಸುರಿದರೆ ಸಾಕು.. ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ವಾಹನ ಸವಾರರ ಜೀವನಕ್ಕೂ ಸಂಚಾಕಾರವಾಗುತ್ತಿದೆ. ಈ

ಗೋವಿಂದ ಪೈ-ಕೆದಂಬಾಡಿ ರಸ್ತೆ ತ್ವರಿತ ಕಾಮಗಾರಿಗೆ ಆಗ್ರಹ

ಮಂಜೇಶ್ವರ ಗೋವಿಂದ ಪೈ -ಕೆದಂಬಾಡಿ ರಸ್ತೆ ಗ್ರಾಮೀಣ ಸಡಕ್ ಯೋಜನೆಯಲ್ಲಿ ಲೋಕೋಪಯೋಗಿ ಇಲಾಖೆಯ ಮುತುವರ್ಜಿಯಲ್ಲಿ 6 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಆರಂಭಗೊಂಡ ಮರು ಡಾಮರೀಕರಣ ಕಾಮಗಾರಿ ನಿಧಾನವಾಗಿ ನಡೆಯುತ್ತಿರುವುದು ನಾಗರಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಕಾಮಗಾರಿ ಪರಿಸರವನ್ನು ಶೋಚನೀಯ ಸ್ಥಿತಿಗೆ ತಳ್ಳಿದ್ದು, ವ್ಯಾಪಾರಿಗಳು, ಗ್ರಾಹಕರು, ಜನಸಾಮಾನ್ಯರು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡು

ಕಾಸರಗೋಡು: ನಟಿ ರೂಪ ವರ್ಕಾಡಿ ಅವರಿಗೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯಿಂದ ಕೊಡಮಾಡುವ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ನಟಿ ರೂಪ ವರ್ಕಾಡಿ ಅವರು ಭಾಜನರಾಗಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ ಮತ್ತು ಕಲೆಗಳ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿರುವ ಗಡಿನಾಡ ಸಾಹಿತ್ಯ. ಸಾಂಸ್ಕøತಿಕ ಅಕಾಡೆಮಿ ವತಿಯಿಂದ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಕಾಸರಗೋಡಿನಲ್ಲಿ ನಡೆಯಿತು. ಚಲನಚಿತ್ರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ನಟಿ ರೂಪ ವರ್ಕಾಡಿ ಅವರು

ಮಂಜೇಶ್ವರ: ನವ ಕೇರಳ ಯಾತ್ರೆಗೆ ಸಿಎಂ ಪಿಣರಾಯಿ ವಿಜಯನ್ ಚಾಲನೆ

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪೈವಳಿಕೆಗೆ ಆಗಮಿಸಿದ್ದ ನವ ಕೇರಳ ಯಾತ್ರೆಗೆ ಕೇರಳದ ಸಿಎಂ ಪಿಣರಾಯಿ ವಿಜಯ್ ಅವರು ಚಾಲನೆ ನೀಡಿದರು. ರಾಜ್ಯ ಸರಕಾರದ ಅಭಿವೃದ್ದಿಯನ್ನು ಕೊಂಡಾಡಿದ ಮುಖ್ಯಮಂತ್ರಿಯವರು ಕೇಂದ್ರ ಸರಕಾರವನ್ನು ಹಾಗೂ ಯುಡಿಎಫ್‍ನ ಬಗ್ಗೆ ಅಸಮಧಾನ ವ್ಯಕ್ತಪಡಿಸಿ, ಅವರ ವಿರುದ್ಧ ಗಟ್ಟಿಯಾದ ಧ್ವನಿಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲೂ ರಾಜ್ಯ ಸರಕಾರ ಜಾರಿಗೆ ತಂದ ಯೋಜನೆಗಳು ಹಾಗೂ

ಚಿಕ್ಕಪ್ಪನ ಕಾರಿನಡಿಗೆ ಸಿಲುಕಿ ಒಂದೂವರೆ ವರ್ಷದ ಮಗುವಿನ ದಾರುಣ ಸಾವು

ಮಂಜೇಶ್ವರ : ತಂದೆಯ ಸಹೋದರ ಕಾರನ್ನು ಮುಂದಕ್ಕೆ ತೆಗೆಯುತ್ತಿರುವ ಮಧ್ಯೆ ಕಾರಿನಡಿಯಲ್ಲಿ ಸಿಲುಕಿ ಒಂದೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ್ದಾನೆ. ಸೋಂಕಾಲ್ ಕೋಡಂಗ ರಸ್ತೆಯ ನಿಸಾರ್ – ತಸ್ರೀಫಾ ದಂಪತಿಗಳ ಪುತ್ರ ಮಾಶಿತುಲ್ ಜಿಶಾನ್ ಸಾವನ್ನಪ್ಪಿದ ದುರ್ದೈವಿ. ಉಪ್ಪಳಕ್ಕೆ ಹೋಗಲು ಬಾಲಕನ ಚಿಕ್ಕಪ್ಪ ಮನೆಯ ಗೇಟಿನೊಳಗೆ ಕಾರಿನಲ್ಲಿ ಆಗಮಿಸುತ್ತಿರುವಾಗ ಕಾರನ್ನು ನೋಡಿ ಎದುರಿಗೆ ಹೋದ ಮಗು ಕಾರಿನ ಮುಂಬಾಗದ ಚಕ್ರದಡಿ ಸಿಲುಕಿ ಈ ದುರ್ಘಟನೆ ಸಂಭವಿಸಿದೆ.

ತಹಶೀಲ್ದಾರ್‌ಗೆ ಹಲ್ಲೆ ಮಾಡಿದ ಶಾಸಕ : ಶಾಸಕರಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

: ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್‌ (MLA AKM Ashraf) ಸಹಿತ ನಾಲ್ವರಿಗೆ ಕಾಸರಗೋಡು ಜ್ಯುಡೀಶಿಯಲ್‌ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಒಂದು ವರ್ಷ ಸಜೆ ವಿಧಿಸಿದೆ.2015ರಲ್ಲಿ ನವೆಂಬರ್‌ 25 ರಂದು ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಕಾನ್ಪರೆನ್ಸ್‌ ಹಾಲ್‌ನಲ್ಲಿ ಚುನಾವಣೆ ಕುರಿತು ಹಿಯರಿಂಗ್‌ ನಡೆಯುತ್ತಿದ್ದ ಸಂದರ್ಭದಲ್ಲಿ ಮತದಾರನೋರ್ವನ ಅರ್ಜಿಯಲ್ಲಿ ಲೋಪ ಇರುವ ಕಾರಣ ಬದಿಗಿರಿಸಿದ್ದರು. ಇದರಿಂದ ಕೋಪಗೊಂಡ ಕೆಎಂ ಅಶ್ರಫ್‌ ಮತ್ತಿತರರು ಅಂದಿನ

ಉಡುಪಿ: ಕೇರಳದಲ್ಲಿ ಬಾಂಬ್ ಸ್ಫೋಟ ವಿಚಾರ: ಕರಾವಳಿ ಗಡಿ ಭಾಗದಲ್ಲಿ ತೀವ್ರ ನಿಗಾ: ಗೃಹ ಸಚಿವ ಡಾ. ಜಿ. ಪರಮೇಶ್ವರ್

ಕೇರಳ ರಾಜ್ಯದ ಎರ್ನಾಕುಲಂನಲ್ಲಿ ಬಾಂಬ್ ಸ್ಫೋಟ ನಡೆದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೂಕ್ಷ್ಮವಾಗಿ ಗಮನಿಸಿದ್ದೇವೆ. ಕರಾವಳಿ ಭಾಗ ಮತ್ತು ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗುಪ್ತಚರ ಇಲಾಖೆ ತೀವ್ರ ನಿಗಾ ಇರಿಸುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಅವರು ಉಡುಪಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಕರ್ನಾಟಕದಲ್ಲಿ ಬಾಂಬ್ ಸ್ಫೋಟದಂತಹ ಘಟನೆಗಳು ನಡೆಯಲು ಬಿಡಲ್ಲ. ಯಾವುದೇ ವ್ಯಕ್ತಿ ಅಥವಾ

ಮಂಜೇಶ್ವರ: ಸಾರ್ವಜನಿಕ ಸ್ಥಳದಲ್ಲಿ ವಸತಿ ಸಮುಚ್ಚಯದ ಕೊಳಚೆ ನೀರು: ಸ್ಥಳೀಯಾಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶ

ಮಂಜೇಶ್ವರ ಸಮೀಪದ ಕುಂಜತ್ತೂರಿನ ದಾರುಸ್ಸಲಾಂ ಸಲಫಿ ಮಸೀದಿ ತಿರುವಿನಲ್ಲಿರುವ ಖಾಸಗಿ ಅಪಾರ್ಟ್ಮೆಂಟ್‍ನಿಂದ ಶೌಚಾಲಯದ ನೀರು ಸಾರ್ವಜನಿಕ ಸ್ಥಳಕ್ಕೆ ಹಾಗೂ ಸಮೀಪದ ರಸ್ತೆಗೆ ಹರಿದು ಬರುತಿದ್ದು, ಪರಿಸರವೆಲ್ಲ ದುರ್ವಾಸನೆ ಆವರಿಸಿದೆ. ಪರಿಸರವಾಸಿಗಳು ಹಾಗೂ ಈ ದಾರಿಯಿಂದ ಸಾಗುವವರು ಮೂಗು ಮುಚ್ಚಿಕೊಂಡು ಸಾಗುವ ಪರಿಸ್ಥಿತಿ ಎದುರಾಗಿದೆ. ಈ ದಾರಿಯಾಗಿ ದಿನನಿತ್ಯ ಶಾಲೆಗೂ ಮದ್ರಸಕ್ಕೂ ನೂರಾರು ವಿದ್ಯಾರ್ಥಿಗಳು ಈ ಶೌಚಾಲಯದ ನೀರನ್ನು ದಾಟಿಕೊಂಡೇ ಸಾಗಬೇಕಾದ

ಮಂಜೇಶ್ವರ|| ಸರ್ಕಾರಿ ಶಾಲೆಯಲ್ಲಿ ಶುಚಿತ್ವವಿಲ್ಲದ ಶೌಚಾಲಯ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಶಾಲಾ ಮಕ್ಕಳು

ಮಂಜೇಶ್ವರದ ಉಪಜಿಲ್ಲಾ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳಲ್ಲಿ ಹಾಗೂ ಖಾಸಗಿ ಶಾಲೆಗಳ ಶೌಚಾಲಯಗಳಲ್ಲಿ ಶುಚಿತ್ವ ಇಲ್ಲದೇ ಇರುವುದು ಪೋಷಕರಲ್ಲಿ ಸಾಂಕ್ರಾಮಿಕ ರೋಗದ ಭೀತಿಯನ್ನು ಹೆಚ್ಚಿಸಿದೆ. ಮಂಜೇಶ್ವರ ಉಪಜಿಲ್ಲೆಯ ವ್ಯಾಪ್ತಿಯಲ್ಲಿರುವ ಶಾಲೆಯೊಂದರಲ್ಲಿ ಶೌಚಾಲಯದಲ್ಲಿ ಮಾಲಿನ್ಯ ಕಟ್ಟಿ ನಿಂತು ದುರ್ವಾಸನೆಯಿಂದ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಆದರೂ ಶಾಲೆಯ ಉಸ್ತುವಾರಿ ವಹಿಸಿಕೊಂಡಿರುವವರು ಈ ಬಗ್ಗೆ ಗಮನ ಹರಿಸುತ್ತಿಲ್ಲ