Home ಕರಾವಳಿ Archive by category ಮಂಗಳೂರು (Page 106)

“ರಾಪಟ” ತುಳು ಸಿನಿಮಾ – ಸಪ್ಟೆಂಬರ್ ನಲ್ಲಿ ವಿದೇಶಗಳಲ್ಲಿ ಪ್ರೀಮಿಯರ್ ಶೋ

ಬೊಳ್ಳಿ ಮೂವೀಸ್ ಹಾಗೂ ಅವಿಕ ಪೆÇ್ರಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಅರ್ಜುನ್ ಕಾಪಿಕಾಡ್ ನಿರ್ದೇಶನದ “ರಾಪಟ” ತುಳು ಸಿನಿಮಾದ ಪ್ರೀಮಿಯರ್ ಶೋ ಸಪ್ಟೆಂಬರ್‍ನಲ್ಲಿ ವಿದೇಶಗಳಲ್ಲಿ ನಡೆಯಲಿದೆ. ಇದೇ ಮೊಟ್ಟ ಮೊದಲ ಬಾರಿಗೆ ತುಳು ಸಿನಿಮಾ ಪ್ರೀಮಿಯರ್ ಶೋದ ಟಿಕೆಟ್

🛑 ಮಂಗಳೂರು: ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ-ಆರೋಪಿಗಳಿಬ್ಬರಿಗೆ ನ್ಯಾಯಾಂಗ ಬಂಧನ

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಕಲಚೇತನ ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳನ್ನು ಮುಂಬೈನಲ್ಲಿ ನೆಲೆಸಿರುವ ಬಿಹಾರ ಮೂಲದ ಅಬ್ದುಲ್ ಹಲೀಂ (37) ಮತ್ತು ಕುಲಶೇಖರ ನಿವಾಸಿ ಶಮೀನಾ ಬಾನು (22) ಎಂದು ಗುರುತಿಸಲಾಗಿದೆ. ಮನ್ಸೂರ್ ಅಹಮದ್ ಬಾಬಾ ಶೇಖಾ ಎಂಬವರು ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ

🛑 ವಾಮಂಜೂರು ಅಣಬೆ ಪ್ಯಾಕ್ಟರಿ ಘಟಕ ಸ್ಥಳಾಂತರಿಸಲು ಆಗ್ರಹ

ವಾಮಂಜೂರಿನಲ್ಲಿ ಕಾರ್ಯಾಚರಿಸುತ್ತಿರುವ ವೈಟ್‍ಗ್ರೋ ಅಣಬೆ ಪ್ಯಾಕ್ಟರಿ ಘಟಕದಿಂದ ಊರಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಘಟಕವನ್ನು ಸ್ಥಳಾಂತರಿಸಬೇಕು ಇಲ್ಲವೇ ಶಾಶ್ವತವಾಗಿ ಬಂದ್ ಮಾಡಬೇಕು ಎಂದು ಅಣಬೆ ಫ್ಯಾಕ್ಟರಿ ವಿರುದ್ಧ ಹೋರಾಟ ಸಮಿತಿ ಆಗ್ರಹಿಸಿದೆ. ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ ಶೇಣವ ಅವರು, ಜಿಲ್ಲಾಧಿಕಾರಿಗಳ ಆದೇಶದಂತೆ ಆ.19ರ ಬಳಿಕ ತಾಂತ್ರಿಕ ಸಮಿತಿಯ ಶಿಫಾರಸು ಪರಿಗಣಿಸಿ

ಮಂಗಳೂರು ತಾಲೂಕಿನ ಮಲ್ಲೂರು ಗ್ರಾಮ ಪಂಚಾಯತ್ ಎರಡನೇ ಬಾರಿಗೆ SDPI ತೆಕ್ಕೆಗೆ

ಮಂಗಳೂರು : ಮಂಗಳೂರು ತಾಲೂಕಿನ ಮಲ್ಲೂರು ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ SDPI ಬೆಂಬಲಿತ ಅಭ್ಯರ್ಥಿಗಳಾದ ಪ್ರೇಮ ಅದ್ಯಕ್ಷರಾಗಿ ಇಲ್ಯಾಸ್ ಪಾದೆ ಉಪಾಧ್ಯಕ್ಷ ರಾಗಿ ಅವಿರೋದವಾಗಿ ಆಯ್ಕೆಯಾಗಿ ಪಂಚಾಯತ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮೀಸಲಾತಿ ನಿಗದಿಯಾಗಿತ್ತು . ಒಟ್ಟು ಒಂಬತ್ತು ಸದಸ್ಯ ಬಲ ಹೊಂದಿರುವ

ಮಂಗಳೂರು ಪ್ರೀಮಿಯರ್ ಕಬಡ್ಡಿಲೀಗ್ : ಖಾದ್ಯ ಪ್ರಿಯರಿಗಾಗಿ ಫುಡ್ ಫೆಸ್ಟಿವಲ್

ವಿ.ಆರ್. ಯುನೈಟೆಡ್ ಮಂಗಳೂರು ಸಂಸ್ಥೆ ವತಿಯಿಂದ ಅ. 18ರಿಂದ 20ರ ವರೆಗೆ ಮಧ್ಯಾಹ್ನ 2ರಿಂದ ರಾತ್ರಿ 10ರವರೆಗೆ ನಗರದ ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ಹಾಗೂ ಆಹಾರ ಉತ್ಸವ ಏರ್ಪಡಿಸಲಾಗಿದೆ. ಪ್ರೊಕಬಡ್ಡಿ ಆಟಗಾರರನ್ನೊಳ ಗೊಂಡಂತೆ ಒಟ್ಟು 8 ತಂಡಗಳು ಈ ಕಬಡ್ಡಿ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿ ಆರ್ ಯುನೈಟೆಡ್ ಸಂಸ್ಥೆ ಕೋಶಾಕಾರಿ ಸುದೇಶ್‌ ಭಂಡಾರಿ ಇರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆ. 18ರಂದು ಆಹಾರ

ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯು ಬ್ಯಾಂಕ್ ಆಫ್ ಬರೋಡದಲ್ಲಿ ಬಹು ಉಪಕ್ರಮಗಳೊಂದಿಗೆ ಆಚರಣೆ

ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡ ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಷ್ಟ್ರವ್ಯಾಪಿ ಉಪಕ್ರಮಗಳೊಂದಿಗೆ ಆಚರಿಸಿತು.ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ದೇಬದತ್ತ ಚಂದ್ ಮಾತನಾಡಿ, ನಾವು ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವಾಗ ಬ್ಯಾಂಕ್ ಆಫ್ ಬರೋಡಾ, ರಾಷ್ಟ್ರಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿ, ದೇಶದ ಆರ್ಥಿಕ, ಸಾಮಾಜಿಕ ಮತ್ತು ಡಿಜಿಟಲ್

ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಟೂರ್ನಮೆಂಟ್ ಸಮಾರೋಪ

ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಆಶ್ರಯದಲ್ಲಿ ನಡೆದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಟೂರ್ನಮೆಂಟ್‌ನ ಪದವಿ ವಿಭಾಗದಲ್ಲಿ ಯೆನೆಪೋಯ ಕಾಲೇಜು ವಿದ್ಯಾರ್ಥಿಗಳ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನೆಹರೂ ಮೈದಾನದ ಪಕ್ಕದ ಫುಟ್ಬಾಲ್ ಗ್ರೌಂಡ್‌ನಲ್ಲಿ ನಡೆದ ಫೈನಲ್‌ನಲ್ಲಿ ಯೆನಪೋಯ ಕಾಲೇಜು ತಂಡ 1-0 ಅಂತರದಲ್ಲಿ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜು ತಂಡವನ್ನು ಮಣಿಸಿ ಪ್ರಶಸ್ತಿ ಬಾಚಿಕೊಂಡಿತು. ಪಿ.ಯು.ಕಾಲೇಜು ವಿದ್ಯಾರ್ಥಿಗಳ ವಿಭಾಗದ ಫೈನಲ್‌ನಲ್ಲಿ ಸೈಂಟ್

ದ.ಕ. ಜಿಲ್ಲೆಯ ಬಿಜೆಪಿ ಶಾಸಕರಿಂದ ಪ್ರತಿಭಟನೆ

ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ಶಾಸಕರಿಗೆ ಅಗೌರವ, ಹಕ್ಕುಚ್ಯುತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಗ್ರಾಪಂ, ತಾಲೂಕು ಮಟ್ಟದ ಕಾರ್ಯಕ್ರಮಗಳನ್ನು ದಿಢೀರ್ ರದ್ದುಪಡಿಸಿ ಕಾಂಗ್ರೆಸ್ ನಾಯಕರು ದುರಾಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಗಳು ಕ್ಷೇತ್ರದ ಶಾಸಕರನ್ನು ಕಡೆಗಣಿಸಿ ದರ್ಪ ಮೆರೆಯುತ್ತಾರೆ. ಗ್ರಾಪಂ ಮಟ್ಟದ ಅಧಿಕಾರಿಗಳನ್ನು

ಮಿಲಾಗ್ರಿಸ್ ಪ.ಪೂ. ಕಾಲೇಜು : ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮ

ನಗರದ ಮಿಲಾಗ್ರಿಸ್ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಹಿರಿಯ ಪತ್ರಕರ್ತ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟನೆ ನೆರವೇರಿಸಿದರು. ಉದ್ಘಾಟನೆ ನೆರವೇರಿಸಿದ ತಾರಾನಾಥ್ ಗಟ್ಟಿ ಅವರು ಮಾತನಾಡಿ, ಜಾತಿ ಮತ ಪಂಥಗಳ ಬೇಧ ಭಾವವನ್ನು ಮರೆತು ಸಮಾಜ ಸೇವೆಯನ್ನು ಮಾಡಲು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇ.

ಆಗಸ್ಟ್ 12 : ವಿಸ್ಡಮ್ ಎಡ್ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರಿನ ಕೊಡಿಯಾಲ್ ಬೈಲ್‍ನಲ್ಲಿರುವ ವಿಸ್ಡಮ್ ಎಡ್ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗಾಗಿ ಡಬ್ಲ್ಯುಇ ತಂಡದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಗಸ್ಟ್ 12ರಂದು ಆಯೋಜಿಸಿದ್ದಾರೆ.ವಿಸ್ಡಮ್ ಕಚೇರಿಯಲ್ಲಿ ಉಚಿತ ದಂತ ತಪಾಸಣೆ, ರಕ್ತ ತಪಾಸಣೆ ಮತ್ತು ಕಣ್ಣಿನ ಪರೀಕ್ಷೆಯನ್ನು ಮಾಡಿಕೊಳ್ಳಲು ಅವಕಾಶವಿದೆ. ಆಗಸ್ಟ್ 12ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಆರೆಂಜ್ ಡೆಂಟಲ್ ಕ್ಲೀನಿಕ್, ಟೈಟನ್ ಐಪ್ಲಸ್