ಪುತ್ತೂರು ತಾಲೂಕಿನ ಕೊಯಿಲದಲ್ಲಿ ನಿರ್ಮಾಣವಾದ ಪಶು ವೈದ್ಯಕೀಯ ಕಾಲೇಜಿಗೆ 2012-13ನೇ ಸಾಲಿನಲ್ಲಿ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಬಜೆಟ್ ನಲ್ಲಿ ಪಶು ವೈದ್ಯಕೀಯ ಕಾಲೇಜು ಘೋಷಿಸಿ 145 ಕೋಟಿ ರೂ. ಮೀಸಲಿಟ್ಟಿದ್ದರು. ಬಳಿಕ ಸದಾನಂದ ಗೌಡ ಕನಸಿನ ಕೂಸಿಗೆ 2016 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಶಿಲಾನ್ಯಾಸ ನೆರವೇರಿಸಿದ್ದರು.
ರೂಪೇಶ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ “ಸರ್ಕಸ್” ತುಳು ಸಿನಿಮಾ ಭಾರತ್ ಮಾಲ್ ನ ಬಿಗ್ ಸಿನಿಮಾಸ್‍ನಲ್ಲಿ ಬಿಡುಗಡೆಗೊಂಡಿತು. ಸಿನಿಮಾ ಬಿಡುಗಡೆಗೂ ಮುನ್ನ ಅದ್ಧೂರಿ ಮೆರವಣಿಗೆ ನಡೆಯಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಚಿತ್ರ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಅವರು, “ತುಳು ಸಿನಿಮಾಕ್ಕೆ ಸಣ್ಣ ಮಾರುಕಟ್ಟೆ ಇದ್ದರೂ ಇಷ್ಟು ದೊಡ್ಡ ರೀತಿಯಲ್ಲಿ ತುಳುವರು ಪೆÇ್ರೀತ್ಸಾಹ
ಮಂಗಳೂರು: ಗುರುಪುರ ಜಂಕ್ಷನ್ ಬಳಿ ಜೂನ್ 22ರಂದು ಬಸ್ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆಯನ್ನು ಖಂಡಿಸಿ ಶುಕ್ರವಾರ ಸ್ಥಳೀಯರು ಕೈಕಂಬ ಜಂಕ್ಷನ್‍ನಲ್ಲಿ ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಬಸ್ ಢಿಕ್ಕಿಯಾಗಿ ಬೈಕ್ ಸವಾರ ಪೊಳಲಿ ಕರಿಯಂಗಳ ನಿವಾಸಿ ಸಂತೋಷ್ ಕುಮಾರ್ ಅವರು ಮೃತಪಟ್ಟಿದ್ದು ಈ ಘಟನೆಯನ್ನು ಖಂಡಿಸಿ ನೂರಾರು ಮಂದಿ ಪ್ರತಿಭಟನೆ ಸೇರಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಕೈಕಂಬ ಜಂಕ್ಷನ್
ಮೂಡುಬಿದಿರೆ: ಮಳೆಗಾಲ ಬಂತೆಂದರೆ ಸಾಕು “ಉಳ್ಳವರು” ತಮಗೆ ಮನೆಗೆ ಬೇಕಾದ ವ್ಯವಸ್ಥೆಯನ್ನು ಬೇಗನೇ ಮಾಡಿ ಮುಗಿಸುತ್ತಾರೆ. ಆದರೆ ಒಂದು ತುತ್ತು ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿಯಲ್ಲಿರುವ ಬಡವರು ಮಾತ್ರ ಹೊಟ್ಟೆ ತುಂಬಿಸುವುದು ಹೇಗೆ ಎಂಬುದೇ ಚಿಂತೆ ಇರುವಾಗ ಮನೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲು ಕಷ್ಟ ಸಾಧ್ಯವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಇರುವೈಲಿನಲ್ಲೊಂದು ಅಸಹಾಯಕ ಕುಟುಂಬವು ಇಂದೋ, ನಾಳೆಯೋ ಬಿದ್ದು ಹೋಗಲಿರುವ ಮನೆಯಲ್ಲಿ ಜೀವನ
ಮಂಗಳೂರು ನಗರ ಹೊರವಲಯ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ ವಾರ್ಡಿನ ಜಲ್ಲಿಗುಡ್ಡೆಯಿಂದ ಜಯನಗರ ಪ್ರದೇಶಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಸ್ಥಳೀಯ ನಿವಾಸಿಗಳ ಸುಗಮ ಸಂಚಾರಕ್ಕೆ ಬಹಳ ಅಡಚಣೆಯುಂಟಾಗಿದೆ. ರಸ್ತೆಯುದ್ದಕ್ಕೂ ಇರುವ ಗುಂಡಿಗಳಿಗೆ ಮಣ್ಣು ಮತ್ತು ಜಲ್ಲಿ ಮಿಶ್ರಣ ಮಾಡಿದ ಪರಿಣಾಮ ರಸ್ತೆಯಲ್ಲೆಲ್ಲ ಕೆಸರುಮಯವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಉರುಳಿ ಬೀಳುವಂತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದ್ದು
ಕರಿಯಂಗಳ ನಿವಾಸಿ ಸಂತೋಷ್ ಇಂದು ಮುಂಜಾನೆ ವಾಮಂಜೂರು ಕಡೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಗುರುಪುರದ ಬಳಿ ಖಾಸಗಿ ಬಸ್ಸಿನ ಅತೀ ವೇಗದ ಚಾಲನೆಯಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ
ಮಂಗಳೂರು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಹದಿನೈದನೇ ವಾರ್ಷಿಕೋತ್ಸವ, ರಂಗಭಾಸ್ಕರ-2023 ಪ್ರಶಸ್ತಿ ಪ್ರದಾನ ಹಾಗೂ ರಂಗ ಗೌರವ ಕಾರ್ಯಕ್ರಮವುಜೂನ್ 29 ಮತ್ತು 30 ರಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದ ಅಗರಿ ರಘುರಾಮ ವೇದಿಕೆಯಲ್ಲಿ ನಡೆಯಲಿದೆ. ಶ್ರೀ ಗುರುಲೀಲಾ ಮೋಟರ್ಸ್ ಡ್ರೈವಿಂಗ್ ಸ್ಕೂಲ್ ಮಂಗಳೂರು ಮತ್ತು ಶ್ರೀ ಶಾರದಾ ಸೇವಾ ಸಮಿತಿ ಸಹಯೋಗದೊಂದಿಗೆ ಎರಡು ದಿನದ ಕಾರ್ಯಕ್ರಮ ಆಯೋಜಿಸಲಾಗಿದೆ.ಜೂನ್ 29ರಂದು ಸಂಜೆ ಶ್ರೀ ಗುರುಲೀಲಾ ಮೋಟರ್ಸ್
ಮಂಗಳೂರು ನಗರ ಹೊರವಲಯ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ ವಾರ್ಡಿನ ಜಲ್ಲಿಗುಡ್ಡೆಯ ಮುಖ್ಯರಸ್ತೆಯಿಂದ ಹಿಡಿದು ಒಳರಸ್ತೆಗಳು ಸಂಪೂರ್ಣವಾಗಿ ಕೆಟ್ಟು ಸ್ಥಳೀಯ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಮೇಲು ಕೀಳಾಟದಲ್ಲಿ ಸ್ಥಳೀಯ ನಿವಾಸಿಗಳು ದಿನನಿತ್ಯ ಸಮಸ್ಯೆಯನ್ನು ಅನುಭವಿಸುವಂತಾಗಿದೆ . ಆದ್ದರಿಂದ ಪಾಲಿಕೆ ಆಡಳಿತ ಈ ಕೂಡಲೇ ಸಂಪೂರ್ಣವಾಗಿ ಹದಗೆಟ್ಟ ಜಲ್ಲಿಗುಡ್ಡೆ ಜಯನಗರದ ರಸ್ತೆಯನ್ನು
ಸುರತ್ಕಲ್ :ಬಂಟರ ಸಂಘ ಸುರತ್ಕಲ್ ಮಹಿಳಾ ವೇದಿಕೆಯ ಅಧ್ಯೆಕ್ಷೆಯಾಗಿ ಭವ್ಯಾ ಎ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬಂಟರ ಭವನದಲ್ಲಿ ನಡೆದ ಮಹಿಳಾ ವೇದಿಕೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಅಧ್ಯಕ್ಷರಾಗಿ ಭವ್ಯಾ ಎ ಶೆಟ್ಟಿ, ಉಪಾಧ್ಯಕ್ಷರಾಗಿ ಸರೋಜ ಟಿ ಶೆಟ್ಟಿ, ಕಾರ್ಯದರ್ಶಿಯಾಗಿ ಸುಜಾತ ಶೆಟ್ಟಿ ಕೃಷ್ಣಾಪುರ, ಜೊತೆ ಕಾರ್ಯದರ್ಶಿಯಾಗಿ ವಜ್ರಾಕ್ಷಿ ಶೆಟ್ಟಿ, ಕೋಶಾಧಿಕಾರಿಯಾಗಿ ಜ್ಯೋತಿ ಪಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ನಾಗಲತಾ
ಮಂಗಳೂರಿನ ಕಂಕನಾಡಿಯಲ್ಲಿರುವ ವೆಸ್ಟ್‍ಕೋಸ್ಟ್ ಶೋರೂಂನಲ್ಲಿ ವಿಶಿಷ್ಟ ವಿನ್ಯಾಸದ ವಾಹಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಇದೀಗ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಫ್ಯಾಷನ್ ಪ್ಲಸ್ ದ್ವಿಚಕ್ರ ವಾಹನ ಮಂಗಳೂರಿನ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಪ್ರತಿಷ್ಠಿತ ವೆಸ್ಟ್ ಕೋಸ್ಟ್ ಶೋರೂಂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಗ್ರಾಹಕರ ಅಚ್ಚುಮೆಚ್ಚಿನ ಶೋರೂಂ ಆಗಿದೆ. ವೆಸ್ಟ್ ಕೋಸ್ಟ್ ಶೋರೂಂನ ದ್ವಿಚಕ್ರ ವಾಹನಗಳು ವಿವಿಧ ವಿನ್ಯಾಸ




























