Home ಕರಾವಳಿ Archive by category ಮಂಗಳೂರು (Page 128)

ಕಾಪುವಿನಲ್ಲಿ ಕೆರೆಯಂತಾದ ಹೆದ್ದಾರಿ

ಕಾಪು ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಬಳಿಯ ಹೆದ್ದಾರಿ ಕೆರೆಯಾಗಿ ರೂಪುಗೊಂಡಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ಫಲವಾಗಿ ಇಲ್ಲಿ ನಿರಂತರ ಸಮಸ್ಯೆ ಅನುಭವಿಸುವಂತ್ತಾಗಿದ್ದು, ಸಣ್ಣ ಮಳೆಗೂ ರಸ್ತೆಯ ಈ ಭಾಗ ಜಲಾವೃತವಾಗುತ್ತಿದ್ದು, ಪಕ್ಕದ ಬಸ್ ತಂಗುದಾಣದಲ್ಲಿ ಬಸ್ ಕಾಯಲು ನಿಂತ ಸಾರ್ವಜನಿಕರ ಹಾಗೂ

ಕಾರ್ಮಿಕ ಚಳುವಳಿಯ ಧ್ರುವತಾರೆ CITU ಗೆ 53 ವರ್ಷಗಳ ಸಂಭ್ರಮ

ಐಕ್ಯತೆ ಮತ್ತು ಹೋರಾಟದ ನಿನಾದ ದೊಂದಿಗೆ,ತ್ಯಾಗ ಬಲಿದಾನದ ಪರಂಪರೆಯೊಂದಿಗೆ ಕಾರ್ಮಿಕ ಚಳುವಳಿಯ ಧ್ರುವತಾರೆಯಾಗಿ ಹೊರಹೊಮ್ಮಿದ CITUಗೆ 53 ವರ್ಷಗಳ ಸಂಭ್ರಮವಾಗಿದ್ದು, ಅದರ ಅಂಗವಾಗಿ ಇಂದು(30-05-2023) CITU ಜಿಲ್ಲಾ ಕೇಂದ್ರ ಕಛೇರಿಯಾದ ಬೋಳಾರದಲ್ಲಿ ಧ್ವಜಾರೋಹಣದ ಮೂಲಕ CITU ನ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣಗೈದ CITU ದ. ಕ. ಜಿಲ್ಲಾಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿಯವರು ಮಾತನಾಡುತ್ತಾ, ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ

ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿಯಾದ ಸ್ಪೀಕರ್ ಯು.ಟಿ.ಖಾದರ್

ಮಂಗಳೂರು ಶಾಸಕ, ಸ್ಪೀಕರ್ ಆಗಿರುವ ಯು.ಟಿ.ಖಾದರ್ ಅವರು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಸ್ಪೀಕರ್ ಹುದ್ದೆಗೆ ಖಾದರ್ ಸೂಕ್ತ ವ್ಯಕ್ತಿಯಾಗಿದ್ದು, ಅವರ ಭಾಷಣವನ್ನು ಪೂರ್ತಿ ಕೇಳಿದ್ದೇನೆ. ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಪೂಜಾರಿ ಬೆನ್ನು ತಟ್ಟಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಖಾದರ್, ಜನಾರ್ದನ ಪೂಜಾರಿ ಹಾಗೂ ಹಿರಿಯರ ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು,

ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ – ವ್ಯವಹಾರದಲ್ಲಿನ ಅಡೆತಡೆಗಳ ನಿವಾರಣೆ ವಿಚಾರಗೋಷ್ಠಿ

ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಇದರ ವತಿಯಿಂದ ಮಂಗಳೂರು ಕ್ಲಬ್‍ನಲ್ಲಿ ಸದಸ್ಯರ ಸಭೆ ಯನ್ನು ನಡೆಸಲಾಯಿತು. ಎನ್‍ಆರ್‍ಐ ಉದ್ಯಮಿ ಶ್ರೀ ಮೈಕಲ್ ಡಿಸೋಜಾ ಅವರು ಮುಖ್ಯ ಭಾಷಣಕಾರರಾಗಿದ್ದರು. ಮೈಕಲ್ ಡಿಸೋಜರವರು ಮಾತನಾಡಿ ಪರಿಶ್ರಮದ ಶಕ್ತಿ ಮತ್ತು ವ್ಯವಹಾರದ ಮೂಲಕ ವಿಪತ್ತುಗಳನ್ನು ನಿವಾರಿಸುವ ಬಗ್ಗೆ, ಪುತ್ತೂರಿನ ಪುಟ್ಟ ಊರಿನಿಂದ ಬಂದ ತಮ್ಮ ಜೀವನ ಪಯಣದ ಬಗ್ಗೆ , ಸಣ್ಣ ವಯಸ್ಸಿನಲ್ಲಿ ವ್ಯಾಪಾರವನ್ನು

ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಗ್ಯಾರಂಟಿಯಿಂದ ವಂಚಿಸಬೇಡಿ : ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಂದಿಗೆ ಗ್ಯಾರಂಟಿ ಯೋಜನೆ ಕೊಡಬಾರದು ಎಂದು ಕಾಂಗ್ರೆಸ್ಸಿಗರು ಜಾಲತಾಣಗಳಲ್ಲಿ ಬರೆಯುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ಕೇವಲ ಗೆಲ್ಲಿಸಿದ ಕ್ಷೇತ್ರಗಳಿಗೆ ಮಾತ್ರ ಗ್ಯಾರಂಟಿ ಕೊಡುವ ಕಾಂಗ್ರೆಸ್ ಮನಸ್ಥಿತಿ ಸರಿಯಲ್ಲ. ದ.ಕ.ಮತ್ತು ಉಡುಪಿ ಜಿಲ್ಲೆಯ ಜನತೆಯನ್ನು ಗ್ಯಾರಂಟಿ ಯೋಜನೆಯಿಂದ ವಂಚಿಸಬೇಡಿ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ

ದೆಹಲಿಯ ಕ್ರೀಡಾಪಟುಗಳ ಮೇಲಿನ ಪೊಲೀಸ್ ದೌರ್ಜನ್ಯ ಕರಾಳ ದಿನ : ಕವಿತಾ ಸನಿಲ್ ಆಕ್ರೋಶ

ದೆಹಲಿಯಲ್ಲಿ ನಡೆದ ಕ್ರೀಡಾಪಟುಗಳ ಮೇಲಿನ ಪೊಲೀಸ್ ದೌರ್ಜನ್ಯ ಕರಾಳ ದಿನ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡೆ, ಮಾಜಿ ಮೇಯರ್ ಕವಿತಾ ಸನಿಲ್ ಆಕ್ರೋಶ ವ್ಯಕ್ತಪಡಿಸಿದರು. ಅವರು ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮೋದಿ ಸರ್ಕಾರ ಹಾಗೂ ದೆಹಲಿ ರಾಜ್ಯ ಸರ್ಕಾರ ಕ್ರೀಡಾಪಟುಗಳ ಮೇಲೆ ದೌರ್ಜನ್ಯ ಮಾಡಿರುವುದು ಸರಿಯಲ್ಲ. ದೇಶವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳ

ಆರಾಧ್ಯ ವಸ್ತ್ರಮಳಿಗೆ ಜೂನ್ 15ರವರೆಗೆ ವಿಶೇಷ ಆಫರ್

ಮಂಗಳೂರಿನ ಪ್ರಸಿದ್ಧ ವಸ್ತ್ರ ಮಳಿಗೆಯಾದ ಆರಾಧ್ಯ ಮಳಿಗೆಯಲ್ಲಿ ಶುಭ ಸಮಾರಂಭ ಹಾಗೂ ಹಬ್ಬಗಳ ಖರೀದಿಗಾಗಿ ಅಮೋಘ ಕೊಡುಗೆಗಳನ್ನು ನೀಡುತ್ತಿದ್ದಾರೆ. ನಗರದ ಕಾರ್ ಸ್ಟ್ರೀಟ್ ನಲ್ಲಿರುವ ಆರಾಧ್ಯ ವಸ್ತ್ರಮಳಿಗೆಯಲ್ಲಿ ವಿಶೇಷ ಆಫರ್ ಗಳನ್ನು ಘೋಷಿಸಿದ್ದಾರೆ. ವಿವಿಧ ವಿನ್ಯಾಸದ ಸಿಲ್ಕ್ ಸಾರೀಸ್, ಕಾಂಜಿವರಂ ಸಾರೀಸ್ ,ಫ್ಯಾನ್ಸಿ ಸಾರೀಸ್ ,ಬನಾರಸ್ ಸಿಲ್ಕ್ಸ್ ,ಹಾಗೂ ಕುರ್ತಿಸ್‍ಗಳಿಗೆ ಶೇ.15 ರಷ್ಟು ರಿಯಾಯಿತಿಯನ್ನು ಘೋಷಿಸಿದ್ದಾರೆ. ಈ ಆಫರ್ ಜೂನ್ 15ರ ವರೆಗೆ

ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ – ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಗಂಭೀರ ಚರ್ಚೆ ಮಂಗಳೂರು ಮಹಾನಗರ ಪಾಲಿತೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ನವೀನ್ ಡಿಸೋಜ ನಗರದ ಬಹುತೇಕ ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆಯಾಗದೆ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗಾಲ ಹತ್ತಿರವಾಗುತ್ತಿದ್ದು, ಚರಂಡಿಗಳ

ಮೇ 28ರಂದು ಯಕ್ಷಧ್ರುವ ಪಟ್ಲ ಸಂಭ್ರಮ-2023

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ಮೇ 27ರಂದು ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ ಮೇ 28ರಂದು ಯಕ್ಷಧ್ರುವ ಪಟ್ಲ ಸಂಭ್ರಮವು ಅಡ್ಯಾರ್ ಗಾರ್ಡ್‍ನಲ್ಲಿ ನಡೆಯಲಿದೆ ಎಂದು ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಪಟ್ಲ ಫೌಂಡೇಶನ್ ವತಿಯಿಂದ ವಿನೂತನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ

ಕರಾವಳಿಯಾದ್ಯಂತ ಪಿರ್ಕಿಲು ಸಿನಿಮಾ ಮೇ 26ರಂದು ಬಿಡುಗಡೆ

ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಎಚ್.ಡಿ .ಆರ್ಯ ನಿರ್ದೇಶನದಲ್ಲಿ ತಯಾರಾದ `ಪಿರ್ಕಿಲು’ ತುಳು ಸಿನಿಮಾ ಮೇ 26 ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದ ಪ್ರೀಮಿಯರ್ ಶೋ ನಗರದ ಭಾರತ್ ಸಿನಿಮಾಸ್‍ನಲ್ಲಿ ನಡೆಯಿತು. ಸತೀಶ್ ಪೆರ್ನೆ ಹಾಗೂ ಶಿವಪ್ರಸಾದ್ ಇಜ್ಜಾವು ನಿರ್ಮಾಣದಲ್ಲಿ ತಯಾರಾದ ಈ ಸಿನಿಮಾ ಹಾಸ್ಯಭರಿತ ಕೌಟುಂಬಿಕ ಕತೆಯ ಎಳೆಯನ್ನು ಹೊಂದಿದೆ. ಊರಿನ ಜನರಿಂದ ಪಿರ್ಕಿಲು ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರ ಸೃಷ್ಟಿಸುತ್ತಾರೆ