ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ ಗ್ರಾಮದ ಪಡುಶೆಡ್ಡೆ ಕಡೆಗೆ ಹೋಗುವ ಕಾಂಕ್ರಿಟ್ ರಸ್ತೆಯಲ್ಲಿ ಆಪಾದಿತ ಯುವಕನಾದ ಸುಹಾನ್ ಎಸ್.ಪೂಜಾರಿ( 23 ವರ್ಷ) ಎಂಬಾತನು ಗಾಂಜಾ ಮಾದಕ ಪದಾರ್ಥವನ್ನು ಸ್ಕೂಟರ್ ನಲ್ಲಿರಿಸಿ ಮಾರಾಟ ಮಾಡಲು ಬಂದವನನ್ನು ಪೊಲೀಸರು ವಶಕ್ಕೆ ಪಡೆದು, ಆಪಾದಿತನು ಮಾರಾಟ ಮಾಡಲು ತಂದಿದ್ದ ಖಾಕಿ ಬಣ್ಣದ ಪ್ಯಾಕೇಟ್ ನಲಿದ್ದ 1 ಕೆ.ಜಿ 990 ಗ್ರಾಂ
ಮಂಜೇಶ್ವರ : ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಶನ್ ಮಂಜೇಶ್ವರ ಝೋನಲ್ ಸಮಿತಿಯ ವತಿಯಿಂದ ಹೊಸಂಗಡಿ ಗ್ರ್ಯಾಂಡ್ ಆಡಿಟೋರಿಯಂನಲ್ಲಿ ಪವಿತ್ರವಾದ ರಂಝಾನ್ ಇಫ್ತಾರ್ ಸಂಗಮ ಹಮ್ಮಿಕೊಳ್ಳಲಾಯಿತು. ಖ್ಯಾತ ವಿದ್ವಾಂಸ ಮುಜಾಹಿದ್ ಬಾಳುಶ್ಯೇರಿ ಯವರು “ನಾಳೆಗಾಗಿ ಸಿದ್ಧರಾಗಿ” ಎಂಬ ವಿಷಯದ ಕುರಿತು ಪ್ರವಚನ ನೀಡಿದರು. ರಂಜಾನ್ ತಿಂಗಳಲ್ಲಿ ಧರ್ಮದ ಹೆಸರಿನಲ್ಲಿ ವಿಶ್ವಾಸಿಗಳನ್ನು ವಂಚಿಸಿ ಹಣ ಸಂಪಾದಿಸಲು ಬಯಸುವ ಮೋಸದ ಪುರೋಹಿತರ ಬಗ್ಗೆ ವಿಶ್ವಾಸಿಗಳು ಹೆಚ್ಚು
ಈ ಬಾರಿಯ ವಿಧಾನಸಭೆ ಚುನಾವಣೆಗೆ ನಾನು ಯಾವುದೇ ಕ್ಷೇತ್ರದಿಂದಲೂ ಟಿಕೇಟ್ ಆಕಾಂಕ್ಷಿಯಾಗಿರುವುದಿಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್.ಗಣೇಶ್ ಕಾರ್ಣಿಕ್ ಅವರು ತಿಳಿಸಿದ್ದಾರೆ. ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಗಣೇಶ್ ಕಾರ್ಣಿಕ್ ಅವರ ಹೆಸರು ಇದೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುದ್ಧಿಗೆ ಅವರು ಪತ್ರಿಕ್ರಿಯಿಸಿ ನಾನು ಯಾವುದೇ ಕ್ಷೇತ್ರದಿಂದಲೂ ಟಿಕೆಟ್ ಆಕಾಂಕ್ಷಿಯಾಗಿರುವುದಿಲ್ಲ ಎಂದು ಸ್ವಷ್ಟಪಡಿಸಿದರು
ಯೆನೆಪೋಯ ದಂತ ಮಹಾವಿದ್ಯಾಲಯದ 2017ನೇ ಬಿಡಿಎಸ್ ಬ್ಯಾಚ್‍ನ ಎನ್‍ಎಸ್‍ಎಸ್ ಸ್ವಯಂ ಸೇವಕರಿಗೆ ವಾರ್ಷಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ಯೆನೆಪೋಯ ದಂತ ಮಹಾವಿದ್ಯಾಲಯದ 5ನೇ ಮಹಡಿಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಎನ್‍ಎಸ್‍ಎಸ್ ಸ್ವಯಂ ಸೇವಕರಾದ ಎಂ.ಎಸ್. ಝೀಭಾ ಅವರು ಸ್ವಾಗತ ಭಾಷಣ ಮಾಡಿದರು. ಎಂ.ಎಸ್. ಫಾತಿಮತ್ ಇಶಾನ ಅವರು ವಾರ್ಷಿಕ ವರದಿ ವಾಚಿಸಿದರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಸಬಲೀಕರಣ ಗೃಹ ಕಾರ್ಮಿಕ ಒಕ್ಕೂಟದ ವತಿಯಿಂದ ಮಂಗಳೂರಿನ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಎ.ಜೆ ದಂತ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಕಾವೂರಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಸುಮಂತ್ ರಾವ್ ಉಚಿತ ಅರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.ಕಾವೂರು ವ್ಯವಸಾಯ ಸೇವಾ
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಚುನಾವಣಾ ನಿರ್ವಾಹಣಾ ಸಮಿತಿ ಕಾರ್ಯಾಗಾರವು ನಗರದ ಸುಧೀಂದ್ರ ಸಭಾ ಭವನದ ಹಾಲ್‍ನಲ್ಲಿ ನಡೆಯಿತು.ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಚಾಲನೆಯನ್ನು ನೀಡಿದರು. ಬಳಿಕ ಮಾತನಾಡಿ ಅವರು, ಜನಸಾಮಾನ್ಯರ ಮಧ್ಯ ಬಿಜೆಪಿ ಪಕ್ಷ ಬಹಳ ಪ್ರಬಲವಾಗಿ ಬೆಳೆದು ಮುಂದಿನ ಅಧಿಕಾರದ ಸೂತ್ರವನ್ನು ಹಿಡಿಯುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ. ಮುಂದಿನ ಚುನಾವಣೆಯಲ್ಲಿ ನಿಶ್ಚಲ
ಕರ್ನಾಟಕ ರಾಜ್ಯ ಸರಕಾರವು ಇತ್ತೀಚೆಗೆ ಹೊರಡಿಸಿರುವ ಪರಿಶಿಷ್ಟ ಜಾತಿಗಳ ಮೀಸಲಾತಿ ಪಟ್ಟಯಲ್ಲಿ ಕರ್ನಾಟಕ ರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸುವ ಮೊಗೇರ ಜಾತಿ ಸೇರಿದಂತೆ 89 ಉಪಜಾತಿಗಳಿಗೆ ಕೇವಲ 1 ಶೇಕಡಾ ಮೀಸಲಾತಿಯನ್ನು ಪ್ರಕಟಿಸಿ ವಂಚನೆ ಮಾಡಿರುವ ಸರಕಾರದ ಧೋರಣೆಯನ್ನು ಖಂಡಿಸಿ, ಮೊಗೇರ, ಸಮಾಜವು ರಾಜ್ಯದಾದ್ಯಂತ ತೀವ್ರ ಹೋರಾಟವನ್ನು ನಡೆಸಲಿದೆ ಎಂದು ಕರ್ನಾಟಕ ರಾಜ್ಯ ಮೊಗೇರ ಸಂಘದ ಸ್ಥಾಪಕಾಧ್ಯಕ್ಷರು ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಸುಂದರ ಮೇರ ತಿಳಿಸಿದ್ದಾರೆ.
ಮಂಜೇಶ್ವರ: ದೇಶಿ, ವಿದೇಶಿ ಗ್ರಾಹಕರ ಅಪೇಕ್ಷೆಯನ್ನು ಪೂರೈಸುವ ವಿಭಿನ್ನತೆಯೊಂದಿಗೆ, ಅಂತರಾಷ್ಟ್ರೀಯ ಗುಣಮಟ್ಟದ ಸೌಲಭ್ಯವುಳ್ಳ ಹೊಟೇಲ್ ಹಿರಾ ಇಂಟರ್ ನ್ಯಾಷನಲ್, ಇದೀಗ ಮಂಗಳೂರಿನಲ್ಲಿ ಶುಭಾರಂಭಗೊಂಡಿದೆ. ಮಂಗಳೂರಿನ ಪಂಪ್ವೆಲ್ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ತಲೆ ಎತ್ತಿ ನಿಂತಿರುವ ಮಂಜೇಶ್ವರ ಉದ್ಯಾವರ ನಿವಾಸಿ ಆಲಿ ಕುಟ್ಟಿ ಹಾಜಿಯವರ ಮಾಲಕತ್ವದಲ್ಲಿರುವ ನೂತನ ಕಟ್ಟಡದಲ್ಲಿ ಶುಭಾರಂಭಗೊಂಡಿತು. ಅಂತರಾಷ್ಟ್ರೀಯ ಗುಣಮಟ್ಟದ, ಕೇವಲ ಫೈವ್ ಸ್ಟಾರ್
ಮೂಲಭೂತ ಸೌಕರ್ಯ ವಂಚಿತ ಮೀನು ಮಾರುಕಟ್ಟೆ, ತಾತ್ಕಾಲಿಕ ಮಾರುಕಟ್ಟೆಯೊಳಗಡೆ ತೆರೆದ ಚರಂಡಿ, ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮಾರುಕಟ್ಟೆ, ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಮಾರುಕಟ್ಟೆ, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮೀನು ವ್ಯಾಪಾರ ಮಹಿಳೆಯರ ಅಳಲು ಇದು ಸುರತ್ಕಲ್ ಮೀನು ವ್ಯಾಪಾರ ಮಾರುಕಟ್ಟೆಯ ದುಸ್ಥಿತಿ. ಕಳೆದ ನಾಲ್ಕು ವರ್ಷದಿಂದ ಅಲ್ಲಿನ ಮೀನುಗಾರಿಗೆ ತಾತ್ಕಾಲಿಕ ಮಾರುಕಟ್ಟೆಯ ವ್ಯವಸ್ಥೆಯನ್ನು ರೂಪಿಸಿದ್ದರು. ಆದರೆ ವರ್ಷ ನಾಲ್ಕು ಕಳೆದರೂ,
ಮಂಗಳೂರು: ನಗರದ ಉರ್ವಸ್ಟೋರ್‌ನಲ್ಲಿರುವ ಸ್ವಸ್ತಿಕ ನ್ಯಾಷನಲ್ ಸ್ಕೂಲ್‌ನ ಭಾಷಾ ಸಂಘದ ಸಹಯೋಗದಲ್ಲಿ ಸ್ವಸ್ತಿಕದಲ್ಲಿ ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಕವಿ, ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ 40ನೇ ಕೃತಿ ಲೇಖನಗಳ ಸಂಕಲನ ‘ದೇವರುಗಳ ನ್ಯಾಯಾಲಯ ಮತ್ತು ಸ್ಮಶಾನದಲ್ಲಿ ನೃತ್ಯ’ ಹಾಗೂ 41ನೇ ಕೃತಿ ಲೇಖನಗಳ ಸಂಕಲನ ‘ಎಲ್ಲಿಗೋ ಪಯಣ ಯಾವುದೋ ದಾರಿ’ ಬಿಡುಗಡೆಗೊಂಡಿತು. ‘ದೇವರುಗಳ ನ್ಯಾಯಾಲಯ ಮತ್ತು ಸ್ಮಶಾನದಲ್ಲಿ ನೃತ್ಯ’ ಕೃತಿಯನ್ನು ಬಿಡುಗಡೆಗೊಳಿಸಿದ ಹಿರಿಯ




























