Home ಕರಾವಳಿ Archive by category ಮಂಗಳೂರು (Page 162)

ಕರ್ತವ್ಯದಲ್ಲಿದ್ದ ಸಂದರ್ಭ ಮೃತ ಪಟ್ಟಿದ್ದ ಪೊಲೀಸ್ ಕುಟುಂಬಕ್ಕೆ 1ಲಕ್ಷ ರೂ.ಪರಿಹಾರ ಚೆಕ್ ವಿತರಿಸಿದ ಪ್ರಿಯಾಂಕ್ ಖರ್ಗೆ

ಸುರತ್ಕಲ್: ಚಿತ್ತಾಪುರ್ ಶಾಸಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು ಇತ್ತೀಚಿಗೆ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಪೊಲೀಸ್ ಕಾನ್ ಸ್ಟೇಬಲ್ ಹನುಮಂತ ಅವರ ಕುಟುಂಬಕ್ಕೆ ಮಾಜಿ ಶಾಸಕ ಬಿ.ಎ. ಮೊಯಿದೀನ್ ಬಾವಾ ಅವರು ವೈಯಕ್ತಿಕ ನೆಲೆಯಲ್ಲಿ ಕೊಡಮಾಡಿದ 1 ಲಕ್ಷ ರೂ. ಮೊತ್ತದ ಚೆಕ್ ಅನ್ನು

ಇಂದು “ಶಕಲಕ ಬೂಂ ಬೂಂ” ತುಳು ಚಿತ್ರ ಕರಾವಳಿಯಾದ್ಯಂತ ಬಿಡುಗಡೆ

ಮಂಗಳೂರು: “ಶಕಲಕ ಬೂಂ ಬೂಂ” ತುಳು ಚಲನಚಿತ್ರ ಶುಕ್ರವಾರ ನಗರದ ಬಿಗ್ ಸಿನೆಮಾಸ್ ನಲ್ಲಿ ಬಿಡುಗಡೆಯಾಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಈಗ ತುಳು ಚಿತ್ರಕ್ಕೆ ಪರ್ವ ಕಾಲ. ಹೊಸ ಹೊಸ ತುಳು ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಸಂತಸದ ವಿಚಾರ. ತುಳುವರು ಚಿತ್ರ ನೋಡಿ ಪ್ರೋತ್ಸಾಹ ಕೊಡಬೇಕು” ಎಂದರು. ಬಳಿಕ ಮಾತಾಡಿದ ಪ್ರಕಾಶ್ ಪಾಂಡೇಶ್ವರ್

ವೇದವ್ಯಾಸ ಕಾಮತ್ ಅಭಿವೃದ್ಧಿ ಹೇಳಿಕೆಗೆ ಆಮ್ ಆದ್ಮಿ ಪಾರ್ಟಿ ಸವಾಲು

ಮಂಗಳೂರುಃ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 4750 ಕೋಟಿ ರೂ ಅಭಿವೃದ್ಧಿ ಕೆಲಸಗಳು ನಡೆದಿದೆ ಎಂದಿರುವ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಾರ್ಟಿ, 4750 ಕೋಟಿಯಲ್ಲಿ ಶೇ.40 ಎಷ್ಟಾಗುತ್ತದೆ ಎಂದು ಪ್ರಶ್ನಿಸಿದೆ. ಆಮ್ ಆದ್ಮಿ ಪಾರ್ಟಿ ಮುಖಂಡರಾದ ಸಂತೋಷ್ ಕಾಮತ್ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ನಲ್ವತ್ತು ಪರ್ಸೆಂಟ್ ಕಮೀಷನ್ ವಹಿವಾಟು ಕರ್ನಾಟಕದ ಮನೆ ಮನೆಯಲ್ಲಿ

ಜ. 22ರಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ

ಮಂಗಳೂರು: “ಬೆಳಗಾವಿಯಲ್ಲಿ ಪ್ರಾರಂಭವಾಗಿರುವ ಪ್ರಜಾಧ್ವನಿ ಯಾತ್ರೆಯು ಜ.22ರಂದು ಮಂಗಳೂರಿಗೆ ಆಗಮಿಸಲಿದ್ದು ನಗರದ ಕರಾವಳಿ ಮೈದಾನದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರ ಸಮಾಕ್ಷಮದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ” ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾಹಿತಿ ನೀಡಿದರು. ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. “ರಾಜ್ಯ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕೋವಿಡ್ ನಿಂದಾಗಿ ಜನರ ಆರ್ಥಿಕ ಸ್ಥಿತಿ

ಕಾಲಭೈರವ ದೇವಸ್ಥಾನ ಬ್ರಹ್ಮಕಲಶೋತ್ಸವ : ಹೊರೆ ಕಾಣಿಕೆ ಕೇಂದ್ರ ಆರಂಭ

ಮಂಗಳೂರು: ಕದ್ರಿ ಸುವರ್ಣ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀ ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಫೆ. 3ರಿಂದ 6ರ ತನಕ ನಡೆಯಲಿದ್ದು, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಹೊರೆ ಕಾಣಿಕೆ ಸಂಗ್ರಹ ಕೇಂದ್ರವನ್ನು ಆರಂಭಿಸಲಾಗಿದೆ.ಕದ್ರಿ ದೇವಸ್ಥಾನದಲ್ಲಿ ಹೊರೆ ಕಾಣಿಕೆ ಕೇಂದ್ರವನ್ನು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಗಣೇಶ್ ರಾವ್ ಹಾಗೂ ಮಂಗಳಾದೇವಿ ದೇವಸ್ಥಾನದಲ್ಲಿ ದೇವಸ್ಥಾನದ

Ex-Mayor Divakar’s Mother Passes Away.

Mangalore: Lalitha Prabhakar (87), mother of Ex-Mayor of Mangalore City Corporation and General Manager of Cardolite Chemicals, K Divakar passed away at her residence in Kadri here on Thursday morning. She is also mother of District Surveillance Officer at Government Wenlock Hospital, Dr Jagadeesh. Lalitha is wife of Late Prabhakar who was a banker having […]

ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ.ಗೆ ಕುಂದೇಶ್ವರ ಸಮ್ಮಾನ್

ಮಂಗಳೂರು: ಕಾರ್ಕಳ ಹಿರ್ಗಾನ ಕ್ಷೇತ್ರದಿಂದ ಪ್ರತಿ ವರ್ಷ ನೀಡಲಾಗುವ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಬಹುಮುಖ ಪ್ರತಿಭೆಯ ಯಕ್ಷ ಕಲಾವಿದ ರಂಗದ ಬಿರ್ಸೆ ಪ್ರಶಾಂತ್ ಸಿ.ಕೆ. ಆಯ್ಕೆಯಾಗಿದ್ದಾರೆ. ಜ.21ರಂದು ನಡೆಯುವ ಶ್ರೀ ಕುಂದೇಶ್ವರ ಜಾತ್ರೆಯ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯಕ್ಷಗಾನ ವೃತ್ತಿಪರ ಮೇಳದಲ್ಲಿ ಹಾಸ್ಯ ಕಲಾವಿದರಾಗಿರುವ ಪ್ರಶಾಂತ್ ಸಿ.ಕೆ. ಅವರು, ಅನೇಕ ಯಕ್ಷಗಾನ ಪ್ರಸಂಗ, ತುಳು ನಾಟಕಗಳನ್ನು ರಚಿಸಿದ್ದಾರೆ. ಸಿನಿಮಾ ರಂಗದಲ್ಲಿ

ಸ್ಕಿಲ್ ಗೇಮ್, ವಿಡಿಯೋ ಗೇಮ್, ಇಸ್ಪೀಟ್ ಕ್ಲಬ್ ಮುಚ್ಚುವಂತೆ ಪ್ರತಿಭಟನೆ

ಮಂಗಳೂರು ನಗರದಲ್ಲಿರುವ ಸ್ಕಿಲ್ ಗೇಮ್, ವಿಡಿಯೋ ಗೇಮ್, ಇಸ್ಪೀಟ್ ಕ್ಲಬ್, ಜುಗಾರಿ ಅಡ್ಡೆಗಳನ್ನು ಶಾಶ್ವತವಾಗಿ ಮುಚ್ಚಲು ಒತ್ತಾಯಿಸಿ ಮತ್ತು ಜೂಜುಕೇಂದ್ರಗಳ ಮೇಲೆ ಕ್ರಮ ಕೈಗೊಳ್ಳಲು ವಿಫಲರಾದ ಪೊಲೀಸ್ ನೀತಿಯ ವಿರುದ್ಧ ಡಿವೈಎಫ್‍ಐ ದ.ಕ. ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು. ನಗರದ ಮಿನಿವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.

ಕರಾವಳಿಯ ಸೌಹಾರ್ದತೆ ಸಾರುವ ಪವಿತ್ರ ಪುಣ್ಯ ಕ್ಷೇತ್ರ, ಬಿಕರ್ನಕಟ್ಟೆಯ ಬಾಲ ಯೇಸು ಮಂದಿರ

ಕರಾವಳಿಯಲ್ಲಿರುವ ಆ ಪವಿತ್ರ ಪುಣ್ಯ ಕ್ಷೇತ್ರ ಸೌಹಾರ್ದತೆಯ ಪಾಠ ಮಾಡ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಅಲ್ಲಿಗೆ ಸರ್ವಧರ್ಮದ ಭಕ್ತರ ದಂಡೇ ಹರಿದು ಬಂದಿದೆ. ಅಷ್ಟಕ್ಕೂ ಕರಾವಳಿಯಲ್ಲಿ ಸೌಹಾರ್ದತೆ ಸಾರ್ತಿರೋ ಆ ಪುಣ್ಯಕ್ಷೇತ್ರ ಯಾವುದು? ಅಲ್ಲಿನ ವಾರ್ಷಿಕ ಜಾತ್ರಾ ಸಂಭ್ರಮ ಹೇಗಿದೆ ಅಂತೀರಾ! ಮಂಗಳೂರಿನ ಬಿಕರ್ನಕಟ್ಟೆಯ ಆ ಬಾಲ ಯೇಸು ಮಂದಿರ ಸೌಹಾರ್ದತೆಯ ಪಾಠ ಮಾಡ್ತಿದೆ. ಇತಿಹಾಸ ಪ್ರಸಿದ್ಧವಾಗಿರೋ ಕ್ರೈಸ್ತರ ಧಾರ್ಮಿಕ ತಾಣ ಬಾಲ ಯೇಸು ಮಂದಿರ ಈ ಭಾಗದ ಸರ್ವಧರ್ಮದ

ಪಚ್ಚನಾಡಿ ಬೆಂಕಿ ಅವಘಡ : ಬಯೋ ಮೈನಿಂಗ್ ಕಾಮಗಾರಿ ಪೂರ್ಣಗೊಳಿಸಲು 4 ವರ್ಷ ಬೇಕು – ಮೇಯರ್ ಜಯಾನಂದ ಅಂಚನ್

ಪಚ್ಚನಾಡಿಯ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಸಂಭವಿಸುತ್ತಿರುವ ಬೆಂಕಿ ಅವಘಡಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರಂಭಿಸಿರುವ ತ್ಯಾಜ್ಯಗಳ ಬಯೋ ಮೈನಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಲು ನಾಲ್ಕು ವರ್ಷ ಅಗತ್ಯವಿದೆ. ಆದರೆ ಈ ಕಾಮಗಾರಿಯನ್ನು ತ್ವರಿತಗೊಳಿಸಿ ಮೂರು ವರ್ಷಗಳ ಅವಧಿಯೊಳಗೆ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ. ಮಂಗಳವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ