Home ಕರಾವಳಿ Archive by category ಮಂಗಳೂರು (Page 170)

ಹೊಸ ವರ್ಷಾಚರಣೆಗೆ ಸಜ್ಜಾದ ಹೋಟೆಲ್ ಓಶಿಯನ್ ಪರ್ಲ್

ಮಂಗಳೂರು ನಗರದ ಪ್ರತಿಷ್ಟಿತ ಹೋಟೆಲ್‍ಗಳಲ್ಲಿ ಒಂದಾದ ಓಶಿಯನ್ ಪರ್ಲ್ ಹೋಟೆಲ್‍ನಲ್ಲಿ 2023 ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ ಖಾದ್ಯಪ್ರೀಯರ ಅಚ್ಚುಮೆಚ್ಚಿನ ಹೋಟೆಲ್ ಆಗಿದ್ದು, ಈ ಬಾರಿ ಹೊಸ ವರ್ಷ 2023ನ್ನು

ಎರಡು ದಿನಗಳ ಕಾಲ ನಡೆಯಲಿರುವ ಮಂಗಳೂರು ಉತ್ಸವ ಎಕ್ಸ್ ವಿಷನ್ ಕಮ್ ಸೇಲ್

ಮಂಗಳೂರು ಉತ್ಸವ ಎಕ್ಸ್‍ವಿಷನ್ ಕಮ್ ಸೇಲ್ ನಗರದ ಪಾಂಡೇಶ್ವರದ ರೋಸಾರಿಯೋ ಸಾಂಸ್ಕೃತಿಕ ಸಭಾಂಗಣದಲ್ಲಿ ಎರಡು ದಿನ ಕಾಲ ಹಮ್ಮಿಕೊಳ್ಳಲಾಗಿದ್ದು, ಶನಿವಾರದಂದು ಎಕ್ಸ್ ವಿಷನ್ ಕಮ್ ಸೇಲ್‍ಗೆ ಚಾಲನೆ ಸಿಕ್ಕಿತು. ಗೃಹಪ್ರಯೋಗಿ ವಸ್ತುಗಳು, ಮಹಿಳೆಯರ ವಿವಿಧ ಡ್ರೆಸ್ ಮೆಟೀರಿಯಲ್ಸ್ ಗಳು, ಕಾರು, ತಿಂಡಿ ತಿನ್ನಸುಗಳು ಹೀಗೆ ಒಂದೇ ವೇದಿಕೆಯಲ್ಲಿ ಕಾಣ ಸಿಕ್ಕಿತ್ತು. ಎಲ್ಲಾ ಉತ್ಪನ್ನಗಳು ಒಂದೇ ವೇದಿಕೆಯಲ್ಲಿ ಸಿಗುವ ನಿಟ್ಟಿನಲ್ಲಿ ಮಂಗಳೂರು ಉತ್ಸವ

ಹೊಸ ವರ್ಷಾಚರಣೆ ಹಿನ್ನೆಲೆ, ಪೊಲೀಸರಿಂದ ರಾತ್ರಿ ವೇಳೆ ಕಟ್ಟುನಿಟ್ಟಿನ ಕಾರ್ಯಾಚರಣೆ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದು ರಾತ್ರಿ ವೇಳೆ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ರಾತ್ರಿ ವೇಳೆ ಹೊಟೇಲ್, ಪಬ್, ರೆಸ್ಟೋರೆಂಟ್ ಗಳಲ್ಲಿ 12.30ರ ವರೆಗೂ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ, ಡಿಜೆ ಇನ್ನಿತರ ಧ್ವನಿ ವರ್ಧಕ ಬಳಕೆಯನ್ನು ರಾತ್ರಿ 10 ಗಂಟೆಗೆ ಕೊನೆಗೊಳಿಸಬೇಕು ಎಂದು ಕಮಿಷನರ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್

ಮಂಗಳೂರು ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೋಲಾಹಲ

ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಕೇವಲ ಚರಂಡಿ ಕಾಂಪೌಂಡ್ ಹಾಲ್ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ಸಾಲ ಪಡೆದಿದ್ದು, ಮಂಗಳೂರು ಪಾಲಿಕೆಯ ಆಡಳಿತದಲ್ಲಿ ಶಾಸಕರ ಹಸ್ತಕ್ಷೇಪವಿದೆ ಎಂಬ ಕಾಂಗ್ರೆಸ್ ಆರೋಪ ಮಂಗಳೂರು ಪಾಲಿಕೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆ ಕೋಲಾಹಲ ಸೃಷ್ಟಿಸಿತು. ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಲದ ವಿಚಾರದ ಚರ್ಚೆಯು ಆಡಳಿತ ಹಾಗೂ ಪ್ರತಿಪಕ್ಷಗಳ ಮಧ್ಯೆ ಸಮರಕ್ಕೆ ಸಾಕ್ಷಿಯಾಯಿತು. ಪ್ರತಿಪಕ್ಷದ ಸದಸ್ಯರು ಮೂರು ಬಾರಿ

ಎಐಟಿಯುಸಿ ರಾಷ್ಟ್ರೀಯ ಮಂಡಳಿಗೆ ವಿ.ಎಸ್.ಬೇರಿಂಜ ಆಯ್ಕೆ

ಮಂಗಳೂರು. ಸ್ವಾತಂತ್ರ್ಯಾಪೂರ್ವದ 1920 ರಲ್ಲಿ ಸಂಘಟಿತಗೊಂಡ ದೇಶದ ಪ್ರಪ್ರಥಮ ಕಾರ್ಮಿಕ ಸಂಘಟನೆಯಾದ ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ ರಾಷ್ಟ್ರೀಯ ಮಂಡಳಿಗೆ ಎಐಟಿಯುಸಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರೂ, ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಮಂಗಳೂರಿನ ವಿ.ಎಸ್. ಬೇರಿಂಜ ಆಯ್ಕೆಯಾಗಿದ್ದಾರೆ. 2022 ಡಿಸೆಂಬರ್ 16 ರಿಂದ 20 ರವರೆಗೆ ಕೇರಳದ ಅಳಪುಝದಲ್ಲಿ ಜರಗಿದ ಎಐಟಿಯುಸಿಯ 42ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ವಿ.ಎಸ್. ಬೇರಿಂಜರನ್ನು

ಪಡಿಲ್ ಗೇಟ್ ಉದ್ಘಾಟನೆ ; ಮಂಗಳೂರು ಬೆಳವಣಿಗೆ ಹೊಸ ಕೊಡುಗೆ : ಶಾಸಕ ವೇದವ್ಯಾಸ ಕಾಮತ್

ಮಂಗಳೂರು : ನಗರದ ಪಡಿಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಪಡಿಲ್ ಗೇಟ್’ ಕಮರ್ಷಿಯಲ್ ಸೆಂಟರ್ ನ ಉದ್ಘಾಟನೆ ಹಾಗೂ ಇಲ್ಲಿ ಆಯೋಜಿಸಲಾಗಿರುವ ಡಿಸ್ಕೌಂಟ್ ಮೇಳದ ಉದ್ಘಾಟನೆ ಶುಕ್ರವಾರ ನೆರವೇರಿತು. ಪಡಿಲ್ ಗೇಟ್ ಕಮರ್ಷಿಯಲ್ ಸೆಂಟರನ್ನು ಮಂಗಳೂರು ಮೇಯರ್ ಜಯಾನಂದ ಅಂಚನ್ ಉದ್ಘಾಟಿಸಿದರು. ಈ ಸೆಂಟರ್ ನಲ್ಲಿ ಆಯೋಜಿಸಲಾಗಿರುವ ‘ಮಂಗಳೂರು ಕಾರ್ನಿವಲ್’ ವಸ್ತು ಪ್ರದರ್ಶನ ಮೇಳವನ್ನು ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಅವರು

ಬಾಯಿಯೇ ಆರೋಗ್ಯದ ಹೆಬ್ಬಾಗಿಲು : ಡಾ|| ಚೂಂತಾರು

ನಾವು ತಿನ್ನುವ ಎಲ್ಲಾ ಆಹಾರ ಬಾಯಿಯ ಮುಖಾಂತರವೇ ದೇಹದೊಳಗೆ ಸೇರುತ್ತದೆ. ನಮ್ಮ ಬಾಯಿಯ ಆರೋಗ್ಯ ಚೆನ್ನಾಗಿದ್ದು, ಆರೋಗ್ಯವಂತ ಹಲ್ಲುಗಳು ಇದ್ದಲ್ಲಿ, ನಾವು ತಿನ್ನುವ ಆಹಾರ ಚೆನ್ನಾಗಿ ಪಚನಗೊಂಡು ದೇಹಕ್ಕೆ ಬೇಗನೆ ಸೇರಿಕೊಂಡು ನಮ್ಮ ಆರೋಗ್ಯ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಬಾಯಿಯ ಆರೋಗ್ಯ ಕಾಪಾಡಿಕೊಂಡಲ್ಲಿ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ತನ್ನಿಂತಾನೇ ವೃದ್ಧಿಸುತ್ತದೆ. ಬಾಯಿಯೇ ನಮ್ಮ ಆರೋಗ್ಯದ ಹೆಬ್ಬಾಗಿಲು ಆಗಿರುತ್ತದೆ. ನಿರಂತರವಾಗಿ ಬಾಯಿಯ ಆರೋಗ್ಯದ

ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸುರತ್ಕಲ್ ಯುವಕ ಮೃತ್ಯು

ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸುರತ್ಕಲ್ ತಡಂಬೈಲ್ ನ ಯುವಕನೋರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ.ಸೌದಿ ಅರೆಬಿಯಾದ ಅಲ್ಅಸಾ ಎಂಬಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಫಾಝಿಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.ಫಾಝಿಲ್ ಅವರಿಗೆ ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದು, ಸಣ್ಣ ಮಗು ಇದೆ. ಫಾಝಿಲ್ ತನ್ನ ಪತ್ನಿ

ಸಿಪಿಎಂ ಪಕ್ಷದ ಹಿರಿಯ ಸದಸ್ಯ, ಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡ ಕಾಂ. ಚಂದು ಭಂಡಾರಿ(80) ನಿಧನ

ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾದ ಚಂದು ಭಂಡಾರಿ ಆ ಕಾಲದಲ್ಲಿ ನಡೆಯುತ್ತಿದ್ದ ರೈತರ ಹೋರಾಟದಲ್ಲಿ ಭಾಗವಹಿಸುವ ಮೂಲಕ ರೈತಾಪಿ ಜನತೆಯ ನಾಯಕರಾಗಿ ಬೆಳೆದರು. ಜೊತೆಗೆ ಹಂಚು ಕಾರ್ಮಿಕರಾಗಿ ದುಡಿಯುವ ಮೂಲಕ ಹಂಚು ಕಾರ್ಮಿಕರ ಸಮರಶೀಲ ಹೋರಾಟಗಳಲ್ಲಿ ಭಾಗವಹಿಸಿ ಕಾರ್ಮಿಕ ನಾಯಕರಾದರು. ಬಜಾಲ್ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಅವರು ಪಕ್ಷದ ಪತ್ರಿಕೆ ಮಾರಾಟ ಮಾಡುವಲ್ಲಿ ಹಾಗೂ ಪಕ್ಷದ ನಿಧಿ ಸಂಗ್ರಹ ಮಾಡುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಶಬರಿಮಲೆ ಯಾತ್ರೆ : ಕರ್ನಾಟಕ-ಕೇರಳದ ವಾಹನಗಳಿಗೆ ತೆರಿಗೆಯಲ್ಲಿ ರಿಯಾಯಿತಿ ಕಲ್ಪಿಸಲು ಖಾದರ್ ಮನವಿ

ಕರ್ನಾಟಕದಿಂದ ಶಬರಿಮಲೆಗೆ ಹೋಗುವ ಮತ್ತು ಮರಳಿ ಬರುವ ಅಯ್ಯಪ್ಪ ಮಾಲಾಧಾರಿಗಳಿರುವ ಕರ್ನಾಟಕ-ಕೇರಳದ ವಾಹನಗಳಿಗೆ ತೆರಿಗೆಯಲ್ಲಿ ರಿಯಾಯಿತಿ ಕಲ್ಪಿಸಬೇಕು ಎಂದು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಯು.ಟಿ. ಖಾದರ್ ಮನವಿ ಮಾಡಿದ್ದಾರೆ. ಕರ್ನಾಟಕದಿಂದ ಶಬರಿಮಲೆ ಯಾತ್ರೆಗೆ ತೆರಳುವ ಅಯ್ಯಪ್ಪಮಾಲಾಧಾರಿಗಳ ವಾಹನಗಳಿಗೆ ಕರ್ನಾಟಕ ಮತ್ತು ಕೇರಳದ ಎರಡೂ ರಾಜ್ಯಗಳ ತೆರಿಗೆ ಪಾವತಿಸಲು ಕಷ್ಟವಾಗುತ್ತಿರುವುದರಿಂದ ತೆರಿಗೆಯಲ್ಲಿ ವಿಶೇಷ ರಿಯಾಯಿತಿ ಕಲ್ಪಿಸಲು ಅಧಿಕಾರಿಗಳು