ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಹಿಂದೂ ವಿರೋಧಿ ಹೇಳಿಕೆಯನ್ನು ಖಂಡಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು. ವಿಧಾನಪರಿಷತ್‍ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಅವರು ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ಹಿಂದೂ ಶಬ್ಧದ ಬಗ್ಗೆ ಬುದ್ದಿಗೇಡಿ ಹೇಳಿಕೆ
ಯಾವುದೇ ರೀತಿಯಲ್ಲಿ ಕರುಣೆ ತೋರಿಸದೆ ಹೆದ್ದಾರಿ ಇಕ್ಕೆಲಗಳಲ್ಲಿ ಗ್ಯಾಸ್ ಪೈಪ್ ಅಳವಡಿಸುತ್ತಿರುವ ಗುತ್ತಿಗೆದಾರ ಬಡಪಾಯಿಗಳ ಕಟ್ಟಡಕ್ಕೆ ಜೆಸಿಬಿ ಹತ್ತಿಸಿ ದ್ವಂಸ ನಡೆಸಿದ್ದು, ಇದೀಗ ಸಿರಿವಂತರ ಮೇಲಿನ ಕರುಣೆಯಿಂದಾಗ ಹೆದ್ದಾರಿಗೆ ಅತೀ ಸಮೀಪ ವಿರುವ ಮನೆಗಳನ್ನು ಉಳಿಸಲು ಭೂಗತ ಪೈಪ್ ಲೈನ್ ನಡೆಸಲು ಸಿದ್ದತೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಈ ಕಾಮಗಾರಿಯಿಂದ ತೊಂದರೆ ಅನುಭವಿಸಿದ ಸಂತ್ರಸ್ತರು, ಹೆದ್ದಾರಿಗೆ ಬಹಳ ದೂರವಿದ್ದರೂ ಬಡಪಾಯಿಗಳಾದ ನಮ್ಮ
ಮಳಲಿಪೇಟೆ ಮಸೀದಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು 3ನೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯವು ಬುಧವಾರ ನೀಡಿದ ತೀರ್ಪಿನ ವಿರುದ್ಧ ರಾಜ್ಯ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ತಿಳಿಸಿದ್ದಾರೆ. ದ.ಕ.ಜಿಲ್ಲಾ ವಕ್ಫ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಕಾಯ್ದೆಯ ಪ್ರಕಾರ ವಕ್ಫ್‍ಗೆ ಸಂಬಂಧಿಸಿದ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಮನೋಹರ್ ಕಾಮತ್ ಅವರು ಕೊಂಕಣಿ ಮಾತೃಭಾಷೆ ಹಾಗೂ ಕೊಂಕಣಿ ಸಂಸ್ಕೃತಿಯ ಕಾರಣಕ್ಕಾಗಿ 49ವರುಷಗಳ ಮೊದಲು ಆರಂಭವಾಗಿ ಕೊಂಕಣಿ ಲೋಕ ಮಹಾ ಮೇಳವನ್ನು ಮಂಗಳೂರು ನಗರದಲ್ಲಿ ಸಂಘಟನೆ ಮಾಡಿದ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಬಿಇಎಮ್ ಸ್ಕೂಲ್ ಕಂಪಂವ್ಡ್ ಕಾರ್ ಸ್ಟ್ರೀಟ್ ಇಲ್ಲಿನ ನೂತನ ಕಛೇರಿಯ ಭೆಟಿ ಮಾಡಿ ಸಂವಾದ ನಡೆಸಿದರು.ಭಾಶಾ ಮಂಡಳ್ ಅಂತಹ ಸಂಸ್ಥೆಯ ಜೊತೆಯಲ್ಲಿ ಕೊಂಕಣಿ ಕಾರ್ಯಕ್ರಮ ಮಾಡುವ ಇಚ್ಚೆ ಇದ್ದು ನೂತನ
ರಾಜ್ಯದ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತದಿಂದ ವಿದೇಶಿ ಹೂಡಿಕೆದಾರರು ಪ್ರಭಾವಿತರಾಗಿದ್ದು, ಅದರ ಫಲವಾಗಿ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ಹೂಡಿಕೆಯ ಒಪ್ಪಂದಗಳಾಗಿರುವುದು ಹೆಮ್ಮೆಯ ವಿಷಯ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಹರ್ಷ ಪಿ.ಎಸ್. ಅವರು ಹರ್ಷ ವ್ಯಕ್ತ ಪಡಿಸಿದರು. ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಎನ್.ಎಂ.ಪಿ.ಎಯ ಬಿ.ಡಿ.ಸಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ
ಉಡುಪಿಯ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಭೀಮಾ ಜ್ಯೂವೆಲರ್ ವತಿಯಿಂದ ಉಡುಪಿ ಸಂಚಾರಿ ಪೊಲೀಸ್ ಠಾಣೆಗೆ ಬ್ಯಾರಿಕೇಡ್‌ಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.ಉಡುಪಿ ಜಿಲ್ಲೆಯಲ್ಲಿರುವ ಹೆಸರಾಂತ ಚಿನ್ನಾಭರಣ ಸಂಸ್ಥೆಯಾದ ಭೀಮ ಜ್ಯೂವೆಲರ್ ಸಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿದೆ. ಇದೀಗ ಉಡುಪಿ ಜಿಲ್ಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಬ್ಯಾರಿಕೇಡ್‌ನ್ನು ಕೊಡುಗೆಯಾಗಿ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಭೀಮ ಜ್ಯುವೆಲ್ರ‍್ಸ್ನ ಸೀನಿಯರ್ ಮೇನೆಜರ್
ಮಂಗಳೂರಿನ ಹೊರವಲಯದ ಮಳಲಿಪೇಟೆ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಇಂದು ವಜಾಗೊಳಿಸಿದೆ.ಮಳಲಿ ಮಸೀದಿ ಪ್ರಕರಣದಲ್ಲಿ ಮಸೀದಿಯು ವಕ್ಫ್ ಆಸ್ತಿಯಾಗಿರುವ ಕಾರಣ ಈ ಪ್ರಕರಣದ ವಿಚಾರಣೆಗೆ ವಕ್ಫ್ ಸಂಬಂಧಿತ ಕೋರ್ಟ್‍ಗಳು ಇರುವುದರಿಂದ ಈ ಪ್ರಕರಣವನ್ನು ವಿಚಾರಣೆ ನಡೆಸಲು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಮಸೀದಿ ವಿರುದ್ಧ ದಾಖಲಾಗಿರುವ
ಕಾರ್ಕಳ ವಿಧಾನ ಸಭಾ ಕ್ಷೇತ್ರದ ಪಡುಕುಡುರು ಗ್ರಾಮದ ಒಳಗುಡ್ಡೆ ,ಹಳೆಮಜಲು ನಿವಾಸಿ ಪ್ರೇಮ ಪೂಜಾರ್ತಿ ವಾಸಿಸುವ ಮನೆಗೊಂದು ಬಾಗಿಲಿಲ್ಲ, ಕಿಟಕಿಗಳಂತೂ ಇಲ್ಲವೇ ಇಲ್ಲ,ಶೌಚಲಯಕ್ಕೆ ಬಯಲೇ ಗತಿ, ಒಂದೊತ್ತು ಊಟಕ್ಕೂ ಗತಿಯಿಲ್ಲದೇ ಪ್ರೇಮಕ್ಕನ ಬದುಕು ನಿಜಕ್ಕೂ ಕರುಳು ಹಿಂಡಿಸುವOತಹದ್ದು. ಕೆಲವು ವರುಷಗಳ ಹಿಂದೆ ಬಂಡೆಗಳ ಮೇಲೆ ವಾಸ ಮಾಡುತ್ತಿದ್ದ ಪ್ರೇಮಕ್ಕನ ಪರಿಸ್ಥಿತಿ ಕಂಡು ಕೆಲವು ಸಾಮಾಜಿಕ ಕಾರ್ಯಕರ್ತರು ಪುಟ್ಟದ್ದೊಂದು ಸೂರು ಕಟ್ಟಿಕೊಡಲು ಮುಂದಾಗಿದ್ದರು.ಅರ್ಧ
ಮಳಲಿ ಮಸೀದಿ ಕಟ್ಟಡದಲ್ಲಿ ದೇವಾಲಯ ಹೋಲುವ ರಚನೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ತೀರ್ಪನ್ನು ಮಂಗಳೂರಿನ ನ್ಯಾಯಾಲಯ ಇಂದು ನೀಡುವ ಸಾಧ್ಯತೆ ಇದೆ. ಕೋರ್ಟ್ ಕಮಿಷನರ್ ಮೂಲಕ ಸರ್ವೆ ಮಾಡುವಂತೆ ವಿಎಚ್‍ಪಿ ಮನವಿ ಮಾಡಿತ್ತು. ಆ ಬಳಿಕ ಮಸೀದಿಯ ಜಾಗಕ್ಕೆ ಸಂಬಂಧಿಸಿದಂತೆ ವಕ್ಫ್ ಮತ್ತು ಸಿವಿಲ್ ನ್ಯಾಯಾಲಯದ ಅಧಿಕಾರದ ಬಗ್ಗೆ ವಾದ ವಿವಾದ ನಡೆದು ಕಳೆದ ಅಕ್ಟೋಬರ್ 17ರಂದು ಆದೇಶವನ್ನು ಮತ್ತೆ
ವಿಟ್ಲ: ಸಮಸ್ಯೆಗಳ ಕೂಪವಾಗಿ ವಿಟ್ಲ ಪಟ್ಟಣ ಮಾರ್ಪಾಡಾಗಿದೆ. ಸಮಸ್ಯೆಯಿಂದ ಕಂಗಾಲಾದ ಜನಅವರ ಕಷ್ಟಗಳನ್ನು ನಮ್ಮಲ್ಲಿ ಹೇಳುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಅದ್ದರಿಂದ ಬಿಜೆಪಿಯ ಕಾರ್ಯವೈಖರಿ ಏನೆಂಬುದು ಜನರಿಗೆ ಮನದಟ್ಟಾಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು. ಅವರು ವಿಟ್ಲ ಪಟ್ಟಣ ಪಂಚಾಯತ್ ನ ದುರವಸ್ಥೆಯ ವಿರುದ್ಧ ವಿಟ್ಲ – ಉಪ್ಪಿನಗಂಡಿ ಬ್ಲಾಕ್ ಕಾಂಗ್ರೆಸ್ ಹಾಗೂ ವಿಟ್ಲ ನಗರ ಪಂಚಾಯತ್ ವತಿಯಿಂದ




























