Home ಕರಾವಳಿ Archive by category ಮಂಗಳೂರು (Page 197)

ಮಂಗಳೂರು : ಐಕ್ಯಮ್ ವಿಶೇಷ ಮಕ್ಕಳ ಶಾಲೆ ಯಲ್ಲಿ ದೀಪಾವಳಿ ಆಚರಣೆ

ಐಕ್ಯಮ್ ವಿಶೇಷ ಮಕ್ಕಳ ಶಾಲೆ ಯಲ್ಲಿ ದೀಪಾವಳಿ ಆಚರಣೆಯು ಅತ್ಯಂತ ವಿಜೃಂಭಣೆಯಿಂದ ಜರಗಿತು. ಈ ಒಂದು ಕಾರ್ಯಕ್ರಮವು ಪೃಥ್ವಿ ಟ್ರಸ್ಟ್ ಸಹಭಾಗಿತ್ವದಲ್ಲಿ ಜರಗಿತ್ತು. ಮುಖ್ಯ ಅತಿಥಿಯಾಗಿ ಮಾಜಿ ಶಾಸಕರು ದಕ್ಷಿಣ ಕ್ಷೇತ್ರ ಮಂಗಳೂರು ಶ್ರೀ ಜೆ ಆರ್ ಲೋಬೊ ಉಪಸ್ಥಿತರಿದ್ದರು.ಇವರು ಐಕ್ಯಮ್ ಶಾಲೆಯ ಮಕ್ಕಳೊಂದಿಗೆ ದೀಪವನ್ನು ಬೆಳಗಿಸಿದರ ಮೂಲಕ ಈ ಕಾರ್ಯಕ್ರಮವನ್ನು

ಮಂಗಳೂರು : ಕರ್ತವ್ಯಗಳ ಪಾಲನೆ ಮನೆಯಿಂದಲೇ ಆರಂಭವಾಗಲಿ: ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ನಾಗರತ್ನ

ಕರ್ತವ್ಯಗಳ ಪಾಲನೆ ಮನೆಯಿಂದಲೇ ಆರಂಭ ಆಗಬೇಕು. ಸಮಾಜದಲ್ಲಿ ಆಗುವ ತಪ್ಪುಗಳ ಬಗ್ಗೆ ಧ್ವನಿ ಎತ್ತುವ ಮನೋಭಾವವನ್ನು ಯುವಜನರು ಹೊಂದಿರಬೇಕು. ಪ್ರಾಥಮಿಕ ಹಂತದಿಂದಲೇ ಇಂತಹ ವಿಚಾರಗಳನ್ನು ಕಲಿಸುವ ಮತ್ತು ಅರಿಯುವ ಪ್ರಕ್ರಿಯೆ ಆದಾಗ ಎಲ್ಲರೂ ಸಮಾನರೆಂಬ ಮನೋಭಾವ ಹುಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಅಭಿಪ್ರಾಯಪಟ್ಟರು.ಅವರು ಶನಿವಾರ ನಗರದ ರೋಶನಿ ನಿಲಯ ಸಭಾಂಗಣದಲ್ಲಿ ಯುವಜನ

ಬಿಜೆಪಿ ಸಂಸದ, ಶಾಸಕರುಗಳ ಬಣ್ಣ ಟೋಲ್ ಗೇಟ್ ಮುಂಭಾಗ ಕರಗುತ್ತಿದೆ. ವೈ ರಾಘವೇಂದ್ರ ರಾವ್

ಸುರತ್ಕಲ್ ಅಕ್ರಮ ಟೋಲ್ ಗೇಟ್ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಜನವಿರೋಧಿ ಆಡಳಿತದ ಸಂಕೇತವಾಗಿ ರಾರಾಜಿಸುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ಒಕ್ಕೊರಲ ಆಗ್ರಹದ ಹೊರತಾಗಿಯೂ ಟೋಲ್ ಕೇಂದ್ರ ಮುಚ್ಚದಿರುವುದರ ಹಿಂದೆ ಭ್ರಷ್ಟಾಚಾರ, ಕಮೀಷನ್, ಖಾಸಗಿ ಕಂಪೆನಿಗಳ ಹಿತಾಸಕ್ತಿಗಳು ಕೆಲಸ ಮಾಡುತ್ತಿರುವುದು, ಬಿಜೆಪಿ ಸರಕಾರ ಅಂತಹ ನೀತಿಗಳ ಪರ ನಿರ್ಲಜ್ಜವಾಗಿ ನಿಂತಿರುವುದು ಇಂದು ಜನಸಾಮಾನ್ಯರಿಗೂ ಅರ್ಥವಾಗುತ್ತಿದೆ. ಜನಪರ ಕಾರ್ಯಗಳಿಗೆ ಬೆನ್ನು

ಸೂಟರ್ ಪೇಟೆ ಶ್ರೀ ಬಬ್ಬುಸ್ವಾಮಿ ಕ್ಷೇತ್ರದಲ್ಲಿ ಪಾರಂಪರಿಕ ಬಲೀಂದ್ರ ಪೂಜೆ

ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಬಲೀಂದ್ರ ಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಲಾಯಿತು. ಅಂಧಕಾರವನ್ನು ಕಳೆಯುವ ದೀಪಾವಳಿ ಹಬ್ಬದ ಮೂರನೇ ದಿನವೇ ಬಲಿಪಾಡ್ಯಮಿ. ಅಂದು ದಾನಶೂರ ಬಲೀಂದ್ರನ ಪೂಜೆಯನ್ನು ದೈವಸ್ಥಾನಗಳಲ್ಲಿ ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ದಾನದಲ್ಲಿ ಬಲೀಂದ್ರ ಪೂಜೆಯನ್ನು ಅತ್ಯಂತ ಪಾರಂಪರಿಕ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ

ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರಿಡುವ ಬಗ್ಗೆ ಪ್ರಸ್ತಾಪ :ಗದ್ದಲದ ಗೂಡಾದ ಪಾಲಿಕೆ ಸಭೆ

ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರು ಇಡುವ ಬಗ್ಗೆ ಬಿಜೆಪಿ ಸದಸ್ಯರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು ಇದರಿಂದಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಕೆಲ ಕಾಲ ಸಭೆ ಮುಂದೂಡಿಕೆಯಾದ ಘಟನೆ ನಡೆಯಿತು. ಪಾಲಿಕೆಯ ಸಭೆ ಸಾಮಾನ್ಯ ಸಭೆಯಲ್ಲಿ ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರು ಇಡಬೇಕೆಂದು ಪ್ರಸ್ತಾಪ ಮಾಡಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗೆ ಇಳಿದಾಗ, ಬಿಜೆಪಿ ಸದಸ್ಯರು ವೀರ ಸಾವರ್ಕರ್ ಕೀ

ಮಂಗಳೂರು ವಿಮಾನ ನಿಲ್ದಾಣಕ್ಕೆ KSRTC ಬಸ್‌ ಸಂಚಾರ ಆರಂಭ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಣಿಪಾಲ ಮತ್ತು ಮಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್‌ ಸಂಚಾರ ಅ. 31ರಂದು ಆರಂಭಗೊಳ್ಳಲಿದ್ದು, ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ. ಈ ಹಿಂದೆ ನಿಗದಿ ಪಡಿಸಿದಂತೆ ಅಕ್ಟೋಬರ್‌ 27ರಂದು ಬಸ್‌ ಸಂಚಾರ ಆರಂಭಗೊಳ್ಳಬೇಕಿತ್ತು. ಕೆಲವು ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ. ಮಂಗಳೂರು ರೈಲು ನಿಲ್ದಾಣ ದಿಂದ ವಿಮಾನ ನಿಲ್ದಾಣಕ್ಕೆ ಬಸ್ಸು ಬೆಳಗ್ಗೆ 6.30, 8.45,

ಕದ್ರಿ ರಸ್ತೆಯಲ್ಲೆ ಹರಿಯುತ್ತಿರುವ ಕೊಳಚೆ ನೀರು

ಸ್ಮಾರ್ಟ್ ಸಿಟಿಯಾಗಿ ಹೊರಹೊಮ್ಮುತ್ತಿರುವ ಮಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಸ್ವಚ್ಚತೆಗೆ ಗಮನಹರಿಸದಿರುವುದು ವಿಷಾದನೀಯ ಸಂಗತಿ, ನಗರದ ಕದ್ರಿ ಮಲ್ಲಿಕಟ್ಟೆ ಸಮೀಪದ ವಾರ್ಡ್ ನಂಬರ್ 33ರ ಜುಗುಲ್ ಹಾಲ್ ಹಿಂಬದಿಯ ರಸ್ತೆಯಲ್ಲಿ ಮನೆಗಳ ಮುಂದೆ ಕಳೆದ ಮೂರು ದಿನಗಳಿಂದ ಚರಂಡಿ ತುಂಬಿ ಹರಿಯುತ್ತಿದೆ, ಸಮಸ್ಯೆ ಬಗೆಹರಿಸುವುದಾಗಿ ನಗರಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದಾರೆ ಆದರೆ ಇನ್ನು ಕೂಡ ಭರವಸೆ ಈಡೆರಿಲ್ಲ, ಸ್ಥಳಿಯ ನಿವಾಸಿಗಳು ಪ್ರತಿದಿನವೂ ದುರ್ವಾಸನೆಯಿಂದ

ಉರ್ವ : ಗೋಡೆ ಕುಸಿತ ಕಾರ್ಮಿಕ ಸಾವು

ಬಿ.ನಾರಾಯಣ ನಾಯಕ್ ಎಂಬುವರ ಮನೆಯ ಸಮೀಪ ಒಂದು ವಾರದಿಂದ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಆವರಣ ಗೋಡೆ ಕುಸಿಯುವ ಸಾಧ್ಯತೆಯನ್ನು ಮನೆಯ ಮಾಲೀಕರು ಗುತ್ತಿಗೆದಾರರ ಗಮನಕ್ಕೆ ತಂದಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾಮಗಾರಿ ಮುಂದುವರಿಸಲಾಗಿತ್ತು ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈರಪ್ಪ ಅವರ ಮೇಲೆ ಗೋಡೆ ಬಿದ್ದಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆ ಕೊಪ್ಪಳ

ಸುರತ್ಕಲ್ ಅಕ್ರಮ ಟೋಲ್‍ಗೇಟ್ ವಿರುದ್ಧ ಮತ್ತೆ ಹೋರಾಟ : ಸಮಾನ ಮನಸ್ಕ ಸಂಘಟನೆಗಳಿಂದ ಹಗಲು-ರಾತ್ರಿ ಧರಣಿ

ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನಮನಸ್ಕ ಸಂಘಟನೆಗಳು ನಡೆಸಲುದ್ದೇಶಿಸಿರುವ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿ ಇಂದು ಆರಂಭಗೊಂಡಿದೆ. ಟೋಲ್ ಗೇಟ್ ಪರಿಸರದಲ್ಲಿ ಧರಣಿ ಕುಳಿತಿರುವ ಹೋರಾಟಗಾರರು, ಭರವಸೆಗಳು ಬೇಡ, ಟೋಲ್ ನಿಲ್ಲಿಸಿ ಎಂದು ಒತ್ತಾಯಿಸುತ್ತಿದ್ದರಲ್ಲದೆ, ಅಕ್ರಮ ಟೋಲ್ ಗೇಟ್ ತೆರವು ಆಗುವವರೆಗೆ ಅನಿರ್ದಿಷ್ಟಾವಧಿ ಮುಂದುವರಿಯಲಿದೆ ಎಂದು

ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ 50 ಬೋಟ್ ಗಳ ಕಡಲಯಾನದಲ್ಲಿ ಮೊಳಗಿತು ಕೋಟಿ ಕಂಠ ಗಾಯನ

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನವು ಮಂಗಳೂರು ನಗರದಲ್ಲಿ ಕೂಡ ಅರ್ಥಪೂರ್ಣವಾಗಿ ನಡೆಯಿತು.ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಅರಬ್ಬಿಸಮುದ್ರದ ಅಲೆಗಳ ನಿನಾದದಲ್ಲಿ 50ರಷ್ಟು ಬೋಟ್ ಗಳ ಒಂದೂವರೆ ತಾಸಿನ ಕಡಲಯಾನದಲ್ಲಿ ಕೋಟಿ ಕಂಠ ಗಾಯನ ಸೊಗಸಾಗಿ ಮೂಡಿ ಬಂತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಮುಂದಾಳತ್ವದಲ್ಲಿ