Home ಕರಾವಳಿ Archive by category ಮಂಗಳೂರು (Page 2)

ಪದ್ಮಾ ಆರ್. ಶೇಟ್ ನಿಧನ

ಮಂಗಳೂರಿನ ಲೇಡಿಹಿಲ್‌ನ ಎಸ್.ಎಲ್ ಡೈಮಂಡ್ ಹೌಸ್ ಮಾಲಕರಾದ ರವೀಂದ್ರ ಶೇಟ್ ಅವರ ಅಣ್ಣ ದಿ| ಎಂ.ರಘುನಾಥ ಶೇಟ್ ಅವರ ಪತ್ನಿ ಪದ್ಮಾ ಆರ್. ಶೇಟ್(75) ನಿಧನರಾಗಿದ್ದಾರೆ. ಪದ್ಮಾ ಆರ್. ಶೇಟ್ ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ. ಪದ್ಮಾ ಅವರು ದೈವಜ್ಞ ಬ್ರಾಹ್ಮಣ ಸಮುದಾಯದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ

ಅಂತಾರಾಷ್ಟ್ರೀಯ ವಿಮಾನ ವಿನ್ಯಾಸ ಮತ್ತು ವಿಮಾನಯಾನ ಸ್ಪರ್ಧೆ: ದ್ವಿತೀಯ ಸ್ಥಾನ ಪಡೆದ ಮಂಗಳೂರು ಅಮೃತ ವಿದ್ಯಾಲಯಂ ವಿದ್ಯಾರ್ಥಿ ವೈಭವ್ ಪ್ರಭು

ಡೈನಾಮಿಕ್ಸ್ ಸಂಸ್ಥೆಯು ಎಂಬ್ರೇರ್ ಸಹಯೋಗದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ವಿಮಾನ ವಿನ್ಯಾಸ ಮತ್ತು ವಿಮಾನಯಾನ ಸ್ಪರ್ಧೆಯಲ್ಲಿ ಮಂಗಳೂರು ಅಮೃತ ವಿದ್ಯಾಲಯಂನ ಗ್ರೇಡ್ 10ರ ವಿದ್ಯಾರ್ಥಿಯಾದ ವೈಭವ್ ಪ್ರಭು ಅವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ವಿವಿಧ ಪ್ರದೇಶಗಳಿಂದ ಭಾಗವಹಿಸಿದ್ದ ಸ್ಪರ್ಧಾರ್ಥಿಗಳ ನಡುವೆ, ವೈಭವ್ ಅವರ ಸಾಧನೆ ವಿಮಾನ ವಿನ್ಯಾಸ ತತ್ವಗಳು, ವಾಯುಗತಿ ಶಾಸ್ತ್ರ ಮತ್ತು ವಿಮಾನಯಾನ ಕಲ್ಪನೆಗಳ ಮೇಲಿನ ಗಟ್ಟಿಯಾದ ಅರಿವಿನ ಮೂಲಕ ವಿಶೇಷವಾಗಿ

ಹೊಸ ವರ್ಷದ ಸಂದರ್ಭದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ:ರಾಜ್ಯಾದ್ಯಂತ ಸೇವೆ ನೀಡಲಿರುವ ಇಎಮ್‌ಆರ್‌ಐ ಗ್ರೀನ್ ಹೆಲ್ತ್ ಸರ್ವೀಸಸ್

ಹೊಸ ವರ್ಷಚಾರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನು ತಡೆಯುವ ದೃಷ್ಟಿಯಿಂದ 108 ಆರೋಗ್ಯ ಕವಚ ಅಂಬುಲೆನ್ಸ್, ಇಎಮ್‌ಆರ್‌ಐ EMRI GREEN HEALTH SERVICES ಕರ್ನಾಟಕ ರಾಜ್ಯಾದ್ಯಂತ ಸುಸಜ್ಜಿತಗೊಂಡಿರುತ್ತದೆ. ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆಗಳಲ್ಲಿ ಸರಾಸರಿ ೩೦ರಿಂದ ೩೫ ಪರ್ಸೆಂಟ್ ಅಪಘಾತ ಪ್ರಕರಣಗಳು ವರದಿಯಾಗಿವೆ. 108 ಅಂಬುಲೆನ್ಸ್ ಸೇವೆಯು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರವನ್ನು ಹೊಂದಿರುತ್ತದೆ.

ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ರೈಲ್ವೆ ಮಾರ್ಗ ವಿದ್ಯುದ್ದೀಕರಣ: ಹರ್ಷ ವ್ಯಕ್ತಪಡಿಸಿದ ಸಂಸದ ಬ್ರಿಜೇಶ್ ಚೌಟ

ಮಂಗಳೂರು: ಅತ್ಯಂತ ಕಠಿಣ ಹಾಗೂ ಸವಾಲಿನ ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ವಿಭಾಗದ 55ಕಿ.ಮೀ. ಮಾರ್ಗದ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಈ ಭಾಗದ ಜನರ ದೀರ್ಘಕಾಲದ ರೈಲ್ವೆ ಮೂಲಸೌಕರ್ಯದ ಬೇಡಿಕೆ ಈಡೇರಿಕೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಆಗಿದೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ. ಘಾಟ್ ಮಾರ್ಗದ ವಿದ್ಯುದ್ದೀಕರಣ ಯೋಜನೆಯು ನಮ್ಮ ಭಾಗದ ರೈಲ್ವೆ ಮೂಲಸೌಕರ್ಯಗಳ ಪ್ರಗತಿಗೆ ದೊಡ್ಡ ಮಟ್ಟದ ವೇಗ ನೀಡಲಿದ್ದು, ಕರಾವಳಿಗೆ ಸರಕು

ಕವಿ, ಲೇಖಕ, ನಾಟಕಕಾರ ಯೋಗೀಶ್ ಕಾಂಚನ್ ಬೈಕಂಪಾಡಿ ನಿಧನ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರೂ ಆಗಿರುವ ಯಕ್ಷಗಾನ ಕಲಾವಿದ, ಕವಿ,ಲೇಖಕ, ನಾಟಕಕಾರ, ಸಂಘಟಕ ಯೋಗೀಶ್ ಕಾಂಚನ್‌ಬೈಕಂಪಾಡಿ ಅವರು ನಿಧನರಾಗಿದ್ದಾರೆ.ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2023-2024ರ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಸಾಹಿತಿ ಯೋಗೀಶ್ ಕಾಂಚನ್ ಬೈಕಂಪಾಡಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಡೆದಿದ್ದರು.ಬೈಕಂಪಾಡಿಯ ಮೀನಕಳಿಯದ ನಿವಾಸಿಯಾದ ಇವರು ಹವ್ಯಾಸಿ ಯಕ್ಷಗಾನ ಕಲಾವಿದ. ತುಳುವಿನಲ್ಲಿ ‘ಮಣ್ಣ್

ತುಳು ಭಾಷೆ ಸಂಸ್ಕೃತಿ ಉತ್ತೇಜನಕ್ಕೆ ಎಲ್ಲರ ಪ್ರಯತ್ನ ಅಗತ್ಯ :
ಕಿಶೋರ್ ಆಳ್ವ

ಮಂಗಳೂರು : ಪುರಾತನ ಹಿನ್ನೆಲೆ ಹೊಂದಿರುವ ತುಳು ಭಾಷೆ ಹಾಗೂ ತುಳುನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರ, ಸಮುದಾಯ ಹಾಗೂ ಖಾಸಗಿ ರಂಗ ಜೊತೆಯಾಗಿ ಕೈಜೋಡಿಸಬೇಕಾಗಿದೆ ಎಂದು ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಅವರು ಹೇಳಿದರು. ಅವರು ಮಂಗಳೂರಿನ ತುಳು ಭವನದಲ್ಲಿ ‘ಎಸ್ .ಯು. ಪಣಿಯಾಡಿ ತುಳುನಾಡ ಚಾವಡಿ’ಯಲ್ಲಿ ಹಿರಿಯ ಛಾಯಾಗ್ರಾಹಕ ಯಜ್ಞ ಅವರು ಕ್ಲಿಕ್ಕಿಸಿದ ಹಳೆಯ ಮಂಗಳೂರಿನ

ಉಪ್ಪಿನಂಗಡಿ ಪಾದಚಾರಿಯೋರ್ವರಿಗೆ ಟೆಂಪೋ ಡಿಕ್ಕಿ

ಉಪ್ಪಿನಂಗಡಿ ಪಾದಚಾರಿಯೋರ್ವರಿಗೆ ಟೆಂಪೋ ಡಿಕ್ಕಿಯಾಗಿ ಮೃತಪಟ್ಟ ಘಟನೆ ಕೊಯಿಲದ ಅತೂರ್ ನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಮೃತಪಟ್ಟವರನ್ನು ಕಡಬದ ಸುಂಕದಕಟ್ಟೆ ನಿವಾಸಿ ಅಬ್ದುಲ್ ಖಾದರ್ ಸಖಾಫಿ ಎಂದು ಗುರುತಿಸಲಾಗಿದೆ. ಇವರು ಕಾಸರಗೋಡಿನ ಮೈಮಾತ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಬಂಧಿಕರ ಮದರಂಗಿ ಕಾರ್ಯಕ್ರಮಕ್ಕೆ ಮನೆಯವರ ಜೊತೆ ಬಂದಿದ್ದರು. ಆತೂರಿನಲ್ಲಿ ಬಸ್ಸಿನಿಂದ ಇಳಿದು, ಮನೆಯವರನ್ನು ರಿಕ್ಷಾದಲ್ಲಿ ಕಳುಹಿಸಿದ್ದರು. ಬಳಿಕ

ಮಂಗಳೂರು:ಜ.9ರಿಂದ 11ರ ವರೆಗೆ ಕಲಾಪರ್ಬ ಚಿತ್ರ ಶಿಲ್ಪ ಸಾಂಸ್ಕೃತಿಕ ಮೇಳ

ಶರಧಿಪ್ರತಿಷ್ಠಾನ ಮಂಗಳೂರು ವತಿಯಿಂದ ಅಸ್ತ್ರ ಗೋಲ್ಡ್ & ಡೈಮಂಡ್ಸ್ ಸಹಯೋಗದಲ್ಲಿ ಕಲಾಪರ್ಬ ಚಿತ್ರ ಶಿಲ್ಪ ಸಾಂಸ್ಕೃತಿಕ ಮೇಳ-2026 ಜನವರಿ 9 ರಿಂದ 11ರ ವರೆಗೆ ನಗರದ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರಾವಳಿ ಚಿತ್ರಕಲಾ ಚಾವಡಿ, ತೋಟಗಾರಿಕಾ ಇಲಾಖೆ, ಮಹಾಲಸಾ ಕಾಲೇಜ್ ಆಫ್ ವಿಷುಯಲ್ ಆರ್ಟ್, ಸೌತ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಮಂಗಳೂರು ಸಹಕಾರದಲ್ಲಿ ಕಲಾ ಪರ್ಬ ಚಿತ್ರ ಶಿಲ್ಪ ಸಾಂಸ್ಕೃತಿಕ ಮೇಳ

ಮಂಗಳೂರಿನಲ್ಲಿ ಜ.31 ಮತ್ತು ಫೆ.1ರಂದು ಆಯುಷ್ ಹಬ್ಬ-2026

ಆಯುಷ್ ಹಬ್ಬ ಸಮಿತಿ 2026, ವತಿಯಿಂದ ಆಯುಷ್ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಮತ್ತು ಎಲ್ಲಾ ಆಯುಷ್ ಆಸ್ಪತ್ರೆಗಳು, ಕಾಲೇಜುಗಳು ಹಾಗೂ ವೃತ್ತಿ ನಿರತ ಆಯುಷ್ ವೈದ್ಯರುಗಳ ಜಂಟಿ ಆಶ್ರಯದಲ್ಲಿ 2026 ರ ಜನವರಿ 31 ಮತ್ತು ಫೆಬ್ರವರಿ 1 ಶನಿವಾರ ಭಾನುವಾರಗಳಂದು “ಆಯುಷ್ ಹಬ್ಬ” ಜರುಗಲಿದೆ. ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಟಿ ಎಂ ಎ ಪೈ ಸಭಾಂಗಣದಲ್ಲಿ ನಡೆಯಲಿರುವ ಈ ಮಹಾ ಮೇಳದಲ್ಲಿ ಸಾರ್ವಜಕರಿಗೆ ಉಪಯುಕ್ತವಾದ, ಸ್ವಾಸ್ಥ್ಯ ಸಂರಕ್ಷಣೆಗೆ

ಡಿ.29: ತುಳು ಭವನದಲ್ಲಿ ಕುಡ್ಲ ಚಿತ್ರ ದರ್ಶನ ಅನಾವರಣ

ಮಂಗಳೂರು: ಹಿರಿಯ ಪತ್ರಿಕಾ ಛಾಯಾಗ್ರಾಹಕ ಯಜ್ಞ ಅವರು ಕ್ಲಿಕ್ಕಿಸಿದ ಹಳೆಯ ಮಂಗಳೂರು ನಗರದ ಕಪ್ಪು ಬಿಳುಪು ಛಾಯಾಚಿತ್ರಗಳನ್ನು ಮಂಗಳೂರಿನ ತುಳು ಭವನದಲ್ಲಿ ಶಾಶ್ವತವಾಗಿ ಅಳವಡಿಸಲಾಗಿದ್ದು, ಛಾಯಾಚಿತ್ರಗಳ ಅನಾವರಣ ಕಾರ್ಯಕ್ರಮ ಡಿ.29ರ ಸೋಮವಾರ ಸಂಜೆ 4 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅದಾನಿ ಗ್ರೂಪ್ ನ ಕಾರ್ಯನಿರ್ವಾಹಕ ನಿರ್ದೇಶಕ ರುಪನ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಅವರು ನೇರವೇರಿಸುವರು. ಛಾಯಾಚಿತ್ರಗಳನ್ನು ಅಳವಡಿಸಲಾಗಿರುವ ತುಳು ಭವನದ