ಪ್ರಧಾನಿ ನರೇಂದ್ರ ಮೋದಿಯವರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಮತ್ಸ್ಯಾ ಸಂಪಾದನಾ ಯೋಜನೆಯ ಆಳ ಸಮುದ್ರ ಮೀನುಗಾರಿಕೆಯ ಬೋಟ್ ಫಲಾನುಭವಿಗಳಿಗೆ ಆದೇಶ ಪತ್ರವನ್ನು ವೇದಿಕೆಯಲ್ಲಿ ವಿತರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ನವಮಂಗಳೂರಿನ ಬಂದರಿನಲ್ಲಿ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಬಂದರು ಇಲಾಖೆ ಸಚಿವ ಸರ್ಬಾನಂದ್ ಸೋನೊವಾಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಹರ್ದಿಪ್ ಸಿಂಗ್ ಪುರಿ, ಶ್ರೀಪಾದ್ ಯಶೋನಾಯಕ್, ಸಂತುನು ಠಾಕೂರ್
ಕೂಳೂರಿನ ಗೋಲ್ಡ್ ಪಂಚ್ ಸಿಟಿಯಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಗೋಲ್ಡ್ ಪಿಂಚ್ ಸಿಟಿಯತ್ತ ಜನಸಾಗರ ಹರಿಯಲಾರಂಭಿಸಿದೆ. ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಂಡೋಪತಂಡವಾಗಿ ಗೋಲ್ಡ್ ಪಿಂಚ್ ಸಿಟಿಯತ್ತ ಹೆಜ್ಜೆ ಹಾಕಲಾರಂಭಿಸಿದ್ದಾರೆ. ಬೆಳಗ್ಗೆ 11ರಿಂದ ಗೋಲ್ಡ್ ಪಂಚ್ ಸಿಟಿ ಮೈದಾನದತ್ತ ಜನರು ಮುಖ ಮಾಡಿದ್ದಾರೆ. ಮಂಗಳೂರಿನ ಪ್ರತಿ ವಾರ್ಡ್ ನಿಂದ ಜನರನ್ನು ಕಾರ್ಯಕ್ರಮಕ್ಕೆ
ಬಹಳ ಸಮಯದ ಬಳಿಕ ಪ್ರಧಾನಿ ಕರಾವಳಿಗೆ ಬರುತ್ತಿದ್ದಾರೆ. ಸುಮಾರು 3800ಕೋಟಿಯ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇಡೀ ಕರಾವಳಿಗೆ ಅಭಿವೃದ್ಧಿಗೆ ಈ ಯೋಜನೆಗಳು ಪೂರಕ. ಉದ್ಯೋಗವಕಾಶಗಳನ್ನೂ ಇದು ನೀಡಬಲ್ಲದು. ಮೀನುಗಾರರಿಗೆ ಅನುಕೂಲ ಆಗುವ ಯೋಜನೆಗಳನ್ನು ನೀಡಲಾಗಿದೆ. ಕರಾವಳಿ ಅಭಿವೃದ್ಧಿಗೆ ಈ ಯೋಜನೆಗಳು ಪೂರಕ ಎಂದ ಸಿಎಂಮುರುಘ ಶ್ರೀಗಳ ಬಗ್ಗೆ ಮಾತಾನಾಡುವ ಪೂರಕ ಸಂದರ್ಭ ಇದಲ್ಲ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ತನಿಖೆ ನಡೆಸುತ್ತಿದ್ದಾರೆ.
ಸೆ 2ರ ಮೋದಿ ಸಮಾವೇಶಕ್ಕಾಗಿ ಕೂಳೂರು ವ್ಯಾಪ್ತಿಯಲ್ಲಿ ಭಯದ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಎರಡು ದಿನದ ಬಂದ್ ಗೆ ಆಡಳಿತವೇ ಕರೆನೀಡಿದೆ. ಗೋಲ್ಡ್ ಪಿಂಚ್ ಮೈದಾನದ ಸುತ್ತಮುತ್ತಲಿನ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳಿಗೆ ಗಣೇಶೋತ್ಸವದ ನೆಪದಲ್ಲಿ ರಜೆ ಸಾರಲಾಗಿದೆ.. ಮೊದಲೇ ಕೊರೋನಾ, ನೆರೆ, ಬೆಲೆಏರಿಕೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕಾರ್ಯಕ್ರಮವು ಒಂದು ಪಕ್ಷದ
ಅವರು ಇಂದು ನಗರದಲ್ಲಿರೋ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡುತ್ತಾ, ಈ ಕಾರ್ಯಕ್ರಮದಲ್ಲಿ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಹಿತ ಸುಮಾರು ಒಂದುವರೆ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಕೆಲವು ಫಲಾನಭವಿಗಳಿಗೆ ಯೋಜನೆಗಳ ಹಸ್ತಾಂತರ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಕಾರ್ಯಕ್ರಮ ನಡೆಯಲಿರುವುದರಿಂದ ಸಾರ್ವಜನಿಕರು ಮುಂಚಿತವಾಗಿ ಭಾಗವಹಿಸಬೇಕು. ಸುರಕ್ಷತೆಯ ದೃಷ್ಟಿಯಿಂದ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ನಡೆಸಲಾಗುತ್ತಿದೆ
ಸುರತ್ಕಲ್: ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್(ರಿ.) ಸುರತ್ಕಲ್ ಇದರ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಸಂಘೇ ಶಕ್ತಿ ಕಲೌಯುಗೇ ಅನ್ನೋ ಮಾತಿನಂತೆ ಕಲಿಯುಗದಲ್ಲಿ ಸಂಘಟನೆಯ ಶಕ್ತಿಯಿದ್ದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಇದನ್ನು ಅಕ್ಷರಶಃ
ಹಿಂದೂಗಳಲ್ಲಿ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡುವ ಅಭಿಯಾನ ದೇಶದಲ್ಲಿ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ಮಣಿಸಬೇಕಾದ ಐಕ್ಯತೆ ರೂಪಿಸುವ ಕಲೆಗಾರಿಕೆಯನ್ನು ರೂಢಿಸಿಕೊಳ್ಳಬೇಕಿದೆ ಎಂದು ಚಿಂತಕ ದೆಹಲಿ ವಿಶ್ವವಿದ್ಯಾಲಯದ ಪ್ರೊ. ಅಪೂರ್ವಾನಂದ ಅಭಿಪ್ರಾಯಪಟ್ಟರು. ನಗರದ ಬಲ್ಮಠದ ಬಿಷಪ್ ಜತ್ತನ್ನ ಸಭಾಂಗಣದಲ್ಲಿಂದು ಅವರು ಸಮದರ್ಶಿ ವೇದಿಕೆ, ಹೊಸತು ಪತ್ರಿಕೆ ಮತ್ತು ಎಂ.ಎಸ್.ಕೃಷ್ಣನ್ ಸ್ಮಾರಕ ಟ್ರಸ್ಟ್ ಸಹಯೋಗದೊಂದಿ
ಮಂಗಳೂರು : ಶ್ರೀ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತ ನಡೆಯುತ್ತಿದ್ದು ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು . ಈ ಸಂದರ್ಭದಲ್ಲಿ ವಿಶೇಷ ಅಭಿಷೇಕಗಳು , ಅಷ್ಟಾವಧಾನ ಸೇವೆ , ಭರತನಾಟ್ಯ ಸೇವೆಗಳು ನಡೆದವು , ಕಾಶೀ ಮಠಾಧೀಶರಾದ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ದೇವರ ಮಹಾಮಂಗಳಾರತಿ ನೆರವೇರಿತು . ಈ ಸಂದರ್ಭದಲ್ಲಿ ದೇವಳದ ಆಡಳಿತ
ಮಂಗಳೂರಿನ ಪದವಿನಗಂಡಿಯಲ್ಲಿರುವ ಪುನರ್ವಸು ಆಯುರ್ವೇದ ಕ್ಲಿನಿಕ್ ಮತ್ತು ಕೋಟ್ಟಕ್ಕಲ್ ಆರ್ಯು ವೈದ್ಯ ಶಾಲಾ ಔಷಧ ಮಳಿಗೆಯಲ್ಲಿ ಚಿಕಿತ್ಸೆಗಳು ಮತ್ತು ವಿವಿಧ ಸೌಲಭ್ಯಗಳು ಲಭ್ಯವಿದೆ.ಎಲ್ಲಾ ತರಹದ ಸೋಂಕು ರೋಗಗಳು, ಎಲ್ಲಾ ತರಹದ ಜ್ವರಗಗಳಿಗೆ ಆಸ್ಪತ್ರೆಯ ವಾಸವಿಲ್ಲದೆ ಚಿಕಿತ್ಸೆ ನೀಡುತ್ತಾರೆ. ಬೊಜ್ಜು, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಲಿವರ್ ಹಾಗೂ ಪಿತ್ತಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಜಾಂಡೀಸ್, ಸಿರೋಸಿಸ್, ಹೆಪಟೈಸಿಸ್, ಪಿತ್ತಕೋಶದ ಕಲ್ಲು



























