Home ಕರಾವಳಿ Archive by category ಮಂಗಳೂರು (Page 222)

v4 ಡಿಜಿಟಲ್ ಇನ್ಫೋಟೆಕ್‌ನ ಸೆಕ್ಯೂರಿಟಿ ನಿಧನ

ಮಂಗಳೂರಿನ ಯೆಯ್ಯಾಡಿಯ V4 ಡಿಜಿಟಲ್ ಇನ್ಫೋಟೆಕ್‌ನ ಸೆಕ್ಯೂರಿಟಿ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜು(74) ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಕಳೆದ ಹಲವಾರು ವರ್ಷಗಳಿಂದ V4 ಮೀಡಿಯಾದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದರು. ಮೃತರಿಗೆ ಪತ್ನಿ ಹಾಗೂ ಮೂವರು ಮಕ್ಕಳು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. ಮೂಲತಃ ಮಡಿಕೇರಿಯಾಗಿರುವ ಇವರು,

ಐಬಿಬಿಐ ನಡೆಸಿದ ಮೌಲ್ಯಮಾಪಕರ ಪರೀಕ್ಷೆ : ಸಿಎ ನಿತಿನ್ ಬಾಳಿಗಾ ತೇರ್ಗಡೆ

ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಸಿಎ ನಿತಿನ್ ಬಾಳಿಗಾ ಅವರು ಇತ್ತೀಚೆಗೆ ಐಬಿಬಿಐ ನಡೆಸಿದ ಕ್ಯಾಟಗರಿ ಫೈನಾನ್ಸಿಯಲ್ ಅಸೆಟ್ ಸೆಕ್ಯುರಿಟೀಸ್ ವಿಭಾಗದ ಮೌಲ್ಯಮಾಪಕರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಹಣಕಾಸು ಆಸ್ತಿಗಳಿಗೆ ನೋಂದಾಯಿತ ಮೌಲ್ಯಮಾಪಕರಾಗಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಸಿಎ ನಿತಿನ್ ಬಾಳಿಗಾ ಅವರು ಮೂಲತಃ ಮಂಗಳೂರಿನ ಉರ್ವ ಮಾರ್ಕೇಟ್‍ನ ನಿವಾಸಿಯಾಗಿದ್ದಾರೆ.

ಸೆ.2 : ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳೂರಿಗೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೆ.2ರಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಕ್ಷರು ಹಾಗೂ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು, ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಡಾ.ವೈ ಭರತ್ ಶೆಟ್ಟಿ ಅವರೊಂದಿಗೆ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.ಈ ವೇಳೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಪೊಲೀಸ್

ಮೊಗವೀರ ಗಾಟ್ ಟ್ಯಾಲೆಂಟ್ ಟೈಟಲ್ ಸಾಂಗ್ ಬಿಡುಗಡೆ

ಸಿನಿ ಗ್ಯಾಲಕ್ಸಿ ಅರ್ಪಿಸುವ ಮೋಗವೀರ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಅದ್ಧೂರಿಯಾಗಿ ನಡೆಯಲಿದ್ದು, ಈ ಕಾರ್ಯಕ್ರಮದ ಧ್ವನಿ ಸುರುಳಿ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ನಡೆಯಿತು.ಉಡುಪಿ ಮತ್ತು ದ.ಕ.ಜಿಲ್ಲಾ ಮೀನು ಮಾರಾಟಗಾರರ ಪೆಡರೆಸನ್ ಮಂಗಳೂರು ಇದರ ಜಿಲ್ಲಾ ಅಧ್ಯಕ್ಷರಾದ ಯಶಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ರವರನ್ನು ಸನ್ಮಾನಿಸಲಾಯಿತು. ರಿಯಾಲಿಟಿ ಶೋನ ಧ್ವನಿ ಸುರುಳಿ, ಪೆÇೀಸ್ಟರ್

ಪರಾರಿಯಾಗಲು ಯತ್ನಿಸಿದ ಆರೋಪಿಗೆ ಗುಂಡೇಟು

ಕೊಲೆಯತ್ನ ಸಹಿತ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿಯನ್ನು ಸ್ಥಳ ಮಹಜರು ನಡೆಸಲು ಕರೆದೊಯ್ದ ವೇಳೆ ತಪ್ಪಿಸಲೆತ್ನಿಸಿದ ಆರೋಪಿಗೆ ಪೊಲೀಸರು ಗುಂಡೇಟು ಹಾಕಿದ ಘಟನೆ ಮಂಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಂಕನಾಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಅಡ್ಯಾರ್ ಪದವು ಬಳಿ ಈ ಘಟನೆ ಸಂಭವಿಸಿದೆ. ನಗರದ ಗುಂಡೇಟು ಬಿದ್ದ ವ್ಯಕ್ತಿ ಮುಸ್ತಾಕ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಿಸ್ತಾ ಯಾನೆ ಮುಸ್ತಾಕ್ ಗುಂಡೇಟಿಗೊಳಗಾದ

ಮಾಲಿನ್ಯಕಾರಕ ಕೈಗಾರಿಕೆಗಳ ಮೇಲೆ ಕ್ರಮ ಜರುಗಿಸದಿದ್ದಲ್ಲಿ‌ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬೀಗ ಜಡಿಯುತ್ತೇವೆ : ಮುನೀರ್ ಕಾಟಿಪಳ್ಳ

  ಪರಿಸರ ನಿಯಮಗಳನ್ನು ಎಗ್ಗಿಲ್ಲದೆ ಉಲ್ಲಂಘಿಸುತ್ತಿರುವ, ಸುತ್ತಲ ಗ್ರಾಮಗಳ ಜನರ ಬದುಕನ್ನು ನರಕ ಸದೃಶಗೊಳಿಸಿರುವ ಎಸ್ಇಝಡ್, ಅದಾ‌‌ನಿ ವಿಲ್ಮಾ, ರುಚಿಗೋಲ್ಡ್, ಯು  ಬಿ ಬಿಯರ್ ಸಹಿತ ಕೈಗಾರಿಕೆ ಘಟಕಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಸಿದರು.  ಅವರು ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ

ಕುಂದಾಪುರ : ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

ಕುಂದಾಪುರ: ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಲು ತವರು ಮನೆಯಿಂದ ಬಂದಿದ್ದ ಪತ್ನಿಯನ್ನು ಕುಡಿದ ಮತ್ತಿನಲ್ಲಿ ಕೊಲೆಗೈದ ಪತಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಇಲ್ಲಿನ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಲ್ಕುಂದ ಶಾಲೆ ಸಮೀಪದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಸೊರಬ ನಿವಾಸಿ ಪೂರ್ಣಿಮಾ ಆಚಾರ್ಯ (38) ಕೊಲೆಯಾದ ಮಹಿಳೆ. ಕೋಗಾರ್ ನಿವಾಸಿ ರವಿ ಆಚಾರ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೂಲತಃ ಸೊರಬ ನಿವಾಸಿ

ನಟ ಅರ್ಜುನ್ ಕಾಪಿಕಾಡ್ ಹುಲಿ ಕುಣಿತಕ್ಕೆ ಮನಸೋತ ಪ್ರೇಕ್ಷಕರು

ಕೋಸ್ಟಲ್ ವುಡ್ ನಲ್ಲಿ ಅಬತರ ಮೂವಿ ಸಖತ್ ಸದ್ದು ಮಾಡ್ತಾ ಇದೆ.ಬೊಳ್ಳಿ ಮೂವೀಸ್ ಲಾಂಛನದಲ್ಲಿ ಅರ್ಜುನ್ ಕಾಪಿಕಾಡ್ ನಿರ್ದೇಶನದ `ಅಬತರ’ ತುಳು ಮೂವಿ ಕರಾವಳಿಯಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ.ಇದೀಗ ಅಬರತ ಬೈಕ್ ರಥಯಾತ್ರೆ ಮಂಗಳೂರಲ್ಲಿ ಸಂಭ್ರಮದಿಂದ ಜರುಗಿತ್ತು. ನಗರದ ಫಾರಂ ನೆಕ್ಸಾ ಮಾಲ್ ನಲ್ಲಿ ಅಬರತ ಬೈಕ್ ರಥಯಾತ್ರೆಗೆ ಚಾಲನೆ ಸಿಕ್ಕಿತ್ತು. ನಟರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್ ಅವರು ಅಧಿಕೃತವಾಗಿ ಚಾಲನೆ

ದುಸ್ಥಿತಿಯಲ್ಲಿದೆ ಮಂಗಳೂರಿನ ನಂತೂರು ಬಸ್ ನಿಲ್ದಾಣ

ಸಾರ್ವಜನಿಕರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಸರಕಾರದ್ದು. ಆದರೆ ಈ ವಿಚಾರದಲ್ಲಿ ಆಡಳಿತದಲ್ಲಿರುವ ಮಂದಿ ತಮ್ಮ ಲಾಭವನ್ನೇ ನೋಡಿದಲ್ಲಿ ಅಂತಹ ಮೂಲಭೂತ ಸೌಲಭ್ಯಗಳು ಜನರಿಗೆ ಇದ್ದೂ ಇಲ್ಲದಂತಾಗುತ್ತದೆ. ಇಂತಹುದೇ ಒಂದು ವ್ಯವಸ್ಥೆ ಮಂಗಳೂರಲ್ಲಿ ಕಾಣಬಹುದು. ಹೌದು. ಮಂಗಳೂರು ನಗರದ ನಂತೂರು ಸಮೀಪದಲ್ಲಿರುವ ಬಸ್ ನಿಲ್ದಾಣ ಈಗಲೋ, ಆಗಲೋ ಬೀಳುವ ಸ್ಥಿತಿಯಲ್ಲಿದೆ. ಮಂಗಳೂರು ಮಹಾನಗರ ಪಾಲಿಕೆಯ ಬಸ್ ನಿಲ್ದಾಣ ಹಲವಾರು ವರ್ಷಗಳಿಂದ

ಮಂಗಳೂರು : ಅಮೃತಭಾರತಿಗೆ ತುಲು ಪುರ್ಪ ಪುಸ್ತಕದ ಅರ್ಪಣೆ

ಪ್ರಧಾನಿ, ರಾಷ್ಟ್ರಪತಿ, ಕೇಂದ್ರ ಗೃಹಮಂತ್ರಿ ಭಾರತದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ನಮ್ಮ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗೆ ತುಲು ಪುರ್ಪ ಕಳುಹಿಸಿ ತುಲು ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ರಾಜ್ಯದ ಅಧಿಕೃತ ಭಾಷೆ ಮತ್ತು 8ನೇ ಪರಿಚ್ಛೇದಕ್ಕೆ ಸೇರಿಸಲು ಮನವಿ. ಜೈ ತುಲುನಾಡ್(ರಿ) ಸಂಘಟನೆ ಉಡುಪಿ,ಮಂಗಳೂರು, ಕಾಸರಗೋಡು ಸೇರಿಕೊಂಡು, ತುಲು ಬಾಷೆಗೆ ಎರಡನೇ ಪ್ರಾದೇಶಿಕ ಬಾಷೆಯ ಮಾನ್ಯತೆ ದೊರೆಯಬೇಕು ಮತ್ತು ನಮ್ಮ ಸಂವಿಧಾನದ ಎಂಟನೇ