ಮಂಗಳೂರು ನಗರದಾದ್ಯಂತ ಸ್ಮಾರ್ಟ್‍ಸಿಟಿ ಕಾಮಗಾರಿ ನಡೆಯುತ್ತಿದ್ದು ನಗರದ ಡೊಂಗರಕೇರಿ ಕಟ್ಟೆಯ ಬಳಿ ಕಾಮಗಾರಿಯನ್ನು ನಡೆಸುತ್ತಿರುವ ಸಂದರ್ಭ ಪುರಾತನ ಬಾವಿಯೊಂದು ಪತ್ತೆಯಾಗಿದೆ. ನಗರದ ಅಲ್ಲಿಲ್ಲಿ ಕಾಮಗಾರಿ ವೇಳೆ ಬಾವಿ ಪತ್ತೆಯಾಗುತ್ತಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ನಗರದ ಡೊಂಗರಕೇರಿ ಕಟ್ಟೆಯ ಬಳಿ ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ರಸ್ತೆ ಫುಟ್‍ಬಾತ್
ಕೇಂದ್ರ ಸಂಪುಟದಲ್ಲಿ ಪ್ರಥಮ ಬಾರಿ ಸಹಕಾರಿ ಸಚಿವಾಲಯ ಸ್ಥಾಪಿಸಿದ್ದು, ಸಹಕಾರಿ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ಸ್ವಾಗತಾರ್ಹ ಮತ್ತು ಅಭಿನಂದನೆ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆಯವರು ಹೇಳಿದರು.ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ ಅವರು, 97ನೇ ಸಂವಿಧಾನಿಕ ತಿದ್ದುಪಡಿಯಂತೆ ರಾಜ್ಯಗಳ ಸಹಕಾರಿ ಕಾಯ್ದೆಯಲ್ಲಿ ಪುನರಪಿ ಸಂಘಗಳ ಸ್ವಾಯತ್ತತೆ ಮತ್ತು ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆವಿದೆಯೆಂದು ಕೊಡವೂರು ರವಿರಾಜ
ಸೇತುವೆಯೆಂದರೆ ಕೇವಲ ಎರಡು ಊರಿನ ಸಂಪರ್ಕದ ಕೊಂಡಿ ಮಾತ್ರವಲ್ಲ ಎರಡು ಊರಿನ ಜನರ ಸಂಬಂಧದ ಕೊಂಡಿ. ಮರವೂರು ಸೇತುವೆ ಕುಸಿತದಿಂದ ಎರಡು ಊರಿನ ಸಂಪರ್ಕ ಕಳೆದುಕೊಂಡು 3 ವಾರಗಳು ಕಳೆದಿವೆ. ಆದರೆ ಇದರ ದುರಸ್ತಿ ಕಾರ್ಯ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿದೆ ಈ ಬಗ್ಗೆ ಸ್ಪೆಷಲ್ ರಿಪೋರ್ಟ್. ಮರವೂರು ಸೇತುವೆ ಕುಸಿತವಾಗಿ ಸುಮಾರು 3 ವಾರಗಳು ಕಳೆದಿವೆ. ಸಂಪೂರ್ಣ ಎರಡು ಕಡೆಯ ಸಂಪರ್ಕ ಕಳೆದುಕೊಂಡಿದೆ. ಕಾರಣಗಳ ಕುರಿತು
ಅದು ಬರೋಬರಿ 13.5 ರೂ ಕೋಟಿ ವೆಚ್ಚದಲ್ಲಿ ನಡೆದ ಮಾರ್ಕೇಟ್….. ಉದ್ಘಾಟನೆಗೊಂಡು 3 ವರ್ಷ ಕಳೆದರೂ , ವ್ಯಾಪಾರಕ್ಕಾಗಿ ಗ್ರಾಹಕರಿಗೆ ಬಿಟ್ಟುಕೊಟ್ಟಿಲ್ಲ…. ಬೀಕೋ ಎನ್ನುತ್ತಿರುವ ಕಟ್ಟಡ… ಹಾಗಾದ್ರೆ ಅದು ಯಾವ ಮಾರುಕಟ್ಟೆ ಅಂತೀರಾ ಇಲ್ಲಿದೆ ಸ್ಟೋರಿ… 2019ರ ಜೂನ್ 28ರಂದು ಮಂಗಳೂರಿನ ಉರ್ವನಲ್ಲಿ ನಿರ್ಮಾಣಗೊಂಡ ಮಾರ್ಕೇಟ್…..ಉದ್ಘಾಟನೆಗೊಂಡ ಬಳಿಕ ಮಳಿಗೆಗಳನ್ನು ಏಲಂ ಮಾಡದೇ ಬಿಕೋ ಎನ್ನುತ್ತಿರುವ ಕಟ್ಟಡ….. ಹೌದು ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಮತ್ತು ಪಿಲಿಕುಳದಲ್ಲಿರುವ ಟರ್ಶಿಯರಿ ಟ್ರೀಟ್ ಮೆಂಟ್ ಪ್ಲಾಂಟ್‍ಗೆ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಕಾರ್ಯಪಾಲಕ ಅಭಿಯಂತರ ಗುರುಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮೇಯರ್ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯೆ ನೀಡಿ,
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸಾಗರ ಮಾಲಾ ಯೋಜನೆ ಕರ್ನಾಟಕ ಕರಾವಳಿ ಜಿಲ್ಲೆಗಳ ಮೀನುಗಾರ ಸಮುದಾಯದಲ್ಲಿ ಆತಂಕವನ್ನು ಸೃಷ್ಟಿಸುತ್ತಿದೆ. ಮಂಗಳೂರು ಬೆಂಗರೆಯ ಪಲ್ಗುಣಿ ನದಿ ದಂಡೆಯಲ್ಲಿ ಸಾಗರ ಮಾಲಾ ಯೋಜನೆಯಡಿ ದೇಶೀಯ ಹಡಗುಗಳ ನಿಲುಗಡೆಗಾಗಿ ಕೋಸ್ಟಲ್ ಬರ್ತ್ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದು ಸ್ಥಳೀಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಬಲವಾದ ಪೆಟ್ಟು ನೀಡುತ್ತದೆ, ದುಡಿಮೆಯ ಅವಕಾಶವನ್ನು ನಾಶಗೊಳಿಸುತ್ತದೆ. ಮೀನುಗಾರರ
ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆಯೇರಿಕೆಯನ್ನು ಖಂಡಿಸಿ CPIM ನೇತ್ರತ್ವದಲ್ಲಿ ಮಂಗಳೂರು ನಗರದಾದ್ಯಂತ ವಾರಾಚರಣೆ ನಡೆಯತ್ತಿದ್ದು, ಇಂದು ನಗರದ ಹ್ರದಯ ಭಾಗವಾದ ಹಂಪನಕಟ್ಟಾ ಪ್ರದೇಶದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.ಬೆಲೆಯೇರಿಕೆಗೆ ಕಾರಣವಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ತಪ್ಪು ಆರ್ಥಿಕ ನೀತಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಭರಿತರಾಗಿ ಘೋಷಣೆಗಳನ್ನು ಕೂಗುವ ಮೂಲಕ ಸರಕಾರದ ಕ್ರಮವನ್ನು
ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬೆಲೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಸೈಕಲ್ ರ್‍ಯಾಲಿ ಮತ್ತು ಪಾದಯಾತ್ರೆಯನ್ನು ಹಮ್ಮಿಕೊಂಡರು. ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪಿವಿಎಸ್ ಸರ್ಕಲ್ ಮುಖಾಂತರ ಮಂಗಳೂರು ಪಾಲಿಕೆ ಕಚೇರಿ ವರೆಗೆ ಸೈಕಲ್ ರ್‍ಯಾಲಿ ಮತ್ತು ಪಾದಯಾತ್ರೆ ನಡೆಯಿತು. ರ್‍ಯಾಲಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ವಿಶ್ವಾಸ್‌ದಾಸ್ ಕುಮಾರ್, ಎಸಿ ವಿನಯರಾಜ್, ಟಿ.ಕೆ ಸುಧೀರ್ ಸೇರಿದಂತೆ ಮತ್ತಿತ್ತರ
ಅಚ್ಚೇದಿನ್ ಹೆಸರಿನಲ್ಲಿ ದೇಶವನ್ನೇ ಸರ್ವನಾಶಗೊಳಿಸಿದ ನರೇಂದ್ರ ಮೋದಿ ಸರಕಾರ. ಅಚ್ಚೇದಿನ್ ತರುವುದಾಗಿ, ಬೆಲೆಯೇರಿಕೆಯನ್ನು ನಿಯಂತ್ರಿಸುವುದಾಗಿ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಾಗಿ ಬೊಗಳೆ ಬಿಟ್ಟು, ದೇಶದ ಜನತೆಗೆ ಮಂಕುಬೂದಿ ಎರಚಿ, ಕಳೆದ 7 ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕತೆಯನ್ನು ದಿವಾಳಿನಂಚಿಗೆ ಕೊಂಡೊಯ್ದು, ಜನರ ಬದುಕನ್ನೇ ಸರ್ವನಾಶ ಮಾಡಿದ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರದ ವಿರುದ್ಧ ಪ್ರಬಲ ಜನಚಳುವಳಿ ಬೆಳೆದು ಬರುವ ಮೂಲಕ
ಬಂಟ್ವಾಳ: ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಾರ್ಮಿಕರಿಗೆ ನೀಡಲಾಗುವ ಆಹಾರದ ಕಿಟ್‌ಪಡೆಯಲು ಬಿ.ಸಿ.ರೋಡಿಗೆ ಆಗಮಿಸಿದ್ದ ಕಾರ್ಮಿಕರು ಕಿಟ್ ಸಿಗದ ಹಿನ್ನಲೆಯಲ್ಲಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ನಡೆದಿದೆ. ಸ್ಟಾಕ್ ಲಭ್ಯವಿಲ್ಲದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕಾರ್ಮಿಕರು ವಾಪಸ್ಸಾಗಬೇಕಾಯಿತು. ಕಳೆದ ಕೆಲ ದಿನಗಳಿಂದ ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿತ ಕಾರ್ಮಿಕರಿಗೆ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಆಹಾರದ