ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 8೦೦೦ ಎಕರೆ ಹಡೀಲು ಭೂಮಿಯಿದ್ದು, ಅಲ್ಲಿ ಕೃಷಿಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸುವುದು ಹಾಗೂ ಸಹಕಾರ ಸಂಸ್ಥೆಯ ಮೂಲಕ ಕೃಷಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ಅವರು ಕುಂಜತ್‌ಬೈಲ್ ಪ್ರದೇಶದ ಮರಕಡ ವಾರ್ಡಿನ ದಿ. ಕಾಂತಣ್ಣ ಶೆಟ್ಟಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಎಂಬ ವಿಚಾರಕ್ಕೆ ಸಂಬಂಧಿಸಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಂಗಳೂರಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ರಾಜೀನಾಮೆ ಮಾತು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅವರೇ ಉತ್ತರ ಕೊಡಲಿ, ಅವರು ರಾಜೀನಾಮೆ ಕೊಡೋದು ಏನೂ ಆಗಿಲ್ಲ. ಅವರು ಕಾಂಗ್ರೆಸ್‌ನಲ್ಲಿ ಮೋಸ ಆಯ್ತು ಅಂತ ಬಿಜೆಪಿಗೆ ಬಂದವರು, ಸಿಡಿ ಜಾಲ ಸೇರಿ ಬೇರೆ ಬೇರೆ ಕಾರಣಕ್ಕೆ ಈ ವಿದ್ಯಮಾನ ನಡೀತಿದೆ ಎಂದು
ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಕಾಂಗ್ರೆಸ್ ಪಕ್ಷ ಕೈಗೊಂಡ ದಮನಕಾರಿ ನೀತಿಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂನ್ 26ರ ಸಂಜೆ 4ರಂದು ವೆಬೆಕ್ಸ್ ಮೂಲಕ ವಿಚಾರಗೋಷ್ಠಿಯನ್ನು ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ವಕ್ತಾರ ಜಗದೀಶ್ ಶೇಣವ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1975ರಲ್ಲಿ ಕಾಂಗ್ರೆಸ್ ಪಕ್ಷವು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವದ ಹತ್ಯೆ
ಕೊರೋನಾದ ಚೈನ್ ಬ್ರೇಕ್ ಮಾಡುವ ನಿಟ್ಟಿನಿಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಅತ್ಯಂತ ಮುಖ್ಯವಾದುದು, ಆದರೆ ನಮ್ಮ ಮಾರುಕಟ್ಟೆ , ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವುದೇ ಬಾರೀ ದೊಡ್ಡ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಯುನಿವರ್‌ಸಲ್ ಪ್ರಾಪರ್‌ಟೀಸ್ ಐಲಾಂಡ್ ಮಂಗಳೂರಿನ ಮ್ಯಾನೆಜಿಂಗ್ ಪಾರ್ಟ್‌ನರ್ ಆಗಿರುವ ಗಿರ್ಲ್ಬಟ್ ಡಿಸೋಜ ಅವರು ಒಂದು ಹೊಸ ಪ್ಲಾನ್ ಒಂದನ್ನು ರೂಪಿಸಿದ್ದಾರೆ. ಜನರ ಮೊಬೈಲ್ ಫೋನ್ ಸಂಖ್ಯೆಯ ಕೊನೆಯ ಒಂದು ಸಂಖ್ಯೆಯ
ಕದ್ರಿ ಮಂಜುನಾಥ ಹಾಗೂ ಮಂಗಳಾದೇವಿ ದೇಗುಲದ ಸ್ಥಾಪನೆಗೆ ಮೂಲ ಕಾರಣಿಕರ್ತರು ಈ ಮಹಾನ್ ಯೋಗಿ ಗುರು ಮಚ್ಚೇಂದ್ರನಾಥರು. ಇವರ ಕಾಲ್ಪನಿಕ ಭಾವ ಚಿತ್ರವನ್ನು ಲೀಫ್ ಆರ್ಟ್ ಮುಖಾಂತರ ಯುವ ಕಲಾವಿದ ತಿಲಕ್ ಕುಲಾಲ್ ಮೂಡುಬಿದರೆ ಅವರು ಚಿತ್ರಿಸಿದ್ದಾರೆ. ಅವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮಂಗಳೂರು: ಸಮಾಜ ಸೇವೆಗೆ ವಿವಿಧ ಮುಖಗಳು. ಕಷ್ಟ ಕಾರ್ಪಣ್ಯಗಳಿಗೆ ಆಸರೆಯಾಗುವುದರೊಂದಿಗೆ ಸಂತ್ರಸ್ತರಾದವರಲ್ಲಿ ಆತ್ಮ ಸ್ಥೈರ್ಯ ಮೂಡಿಸುವುದೂ ಸಮಾಜಮುಖೀ ಕಾರ್ಯವೆನಿಸುತ್ತದೆ’ ಎಂದು ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅವರ ನೇತೃತ್ವದಲ್ಲಿ ಕೋವಿಡ್ ಸಂತ್ರಸ್ತರಿಗಾಗಿ ನಗರದ ವಿವಿಧ
ಮಂಜೇಶ್ವರ : ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ 2016-17 ರಲ್ಲಿ ಮಂಜೇಶ್ವರ ಹಾರ್ಬರ್ ಇಂಜಿನಿಯರಿಂಗ್ ಉಸ್ತುವಾರಿಯಲ್ಲಿ ಮಂಜೂರಾದ. ಪಂಡ್ ನಿಂದ ನಡೆಸಿದ 685 ಮೀಟರ್ ವ್ಯಾಪ್ತಿಯಲ್ಲಿ ತೂಮಿನಾಡು ಪದವು ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ವಿಜಿಲೆನ್ಸ್ ಇಲಾಖೆಯಲ್ಲಿ ಸ್ಥಳೀಯ ನಾಗರಿಕರಿಂದ ಹಾಗೂ ಬಿಜೆಪಿ ಮತ್ತು ಸಿಪಿಎಂ ಲೋಕಲ್ ಕಮಿಟಿಯ ವತಿಯಿಂದ ದೂರು ದಾಖಲಿಸಿದ್ದಾರೆ. ಕಾಮಗಾರಿ ನಡೆದ ಬಳಿಕ ಈ ರಸ್ತೆಗೆ ಕೇವಲ ಒಂದು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ನಿಯಂತ್ರಣಕ್ಕೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆ ಸಂದರ್ಭ ಸಂಪೂರ್ಣ ಲಾಕ್‍ಡೌನ್ ಇರಲಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಸೂಚನೆ ನೀಡಿದರು. ಕೊರೋನ ನಿಯಂತ್ರಣ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರ್‍ಗಳು, ತಾಲೂಕು ಆರೋಗ್ಯಾಧಿಕಾರಿಗಳ ಜೊತೆಗೆ ದ.ಕ.ಜಿಲ್ಲಾಧಿಕಾರಿ ಕಚೇರಿಯ ವೀಡಿಯೊ ಕಾನ್ಫರೆನ್ಸ್
ಸುರತ್ಕಲ್ ಸಮೀಪದ ಕುಳಾಯಿಯ (ಸದ್ಯ ಸೂರಿಂಜೆ ನಿವಾಸಿ) ಆಟೋ ಚಾಲಕ ಬಶೀರ್ ಮನೆ ಸಾಲದ ಮೇ ತಿಂಗಳ ಕಂತು ಕಟ್ಟಲು ಲಾಕ್ ಡೌನ್, ಕೊರೋನ ಬಿಕ್ಕಟ್ಟಿನಿಂದಾಗಿ ಅಸಾಧ್ಯವಾಗಿದ್ದು. ಸಾಲಕೊಟ್ಟ ಕೆನರಾ ಬ್ಯಾಂಕ್ ಬೈಕಂಪಾಡಿ ಬ್ರಾಂಚ್ ನ ಅಧಿಕಾರಿಗಳಲ್ಲಿ ಮೂರ್ನಾಲ್ಕು ತಿಂಗಳು ಕಂತು ಪಾವತಿಗೆ ವಿನಾಯತಿ ಕೇಳಿದ್ದು, ಅಲ್ಲಿ ಸಕಾರಾತ್ಮಕ ಸ್ಪಂದನೆ ಸಿಗದೆ ಅವರ ಖಾತೆಯಲ್ಲಿದ್ದ 27೦೦ ರೂಪಾಯಿಗಳನ್ನು ಹಾಗೂ ಆಟೋ ಚಾಲಕರಿಗೆ ಕೊರೋನ ಪರಿಹಾರವಾಗಿ ಸರಕಾರ ನೀಡಿದ 3೦೦೦ ರೂಪಾಯಿಗಳನ್ನು
ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2019ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಸಾಹಿತಿ, ದಿವಂಗತ ಮುಮ್ತಾಜ್ ಬೇಗಮ್ (73)ರವರ ‘ಸ್ವಾತಂತ್ರ್ಯದ ಕಹಳೆ’ ಕೃತಿ ಆಯ್ಕೆಯಾಗಿದೆ. ಖತಾರ್‌ನಲ್ಲಿರುವ ಯುನೆಸ್ಕೋದ ಆರ್ಥಿಕ ಹಾಗೂ ಆಡಳಿತ ಸಹಾಯಕರಾಗಿ, ದುಬೈನ ಅಲ್ ಮೀರ್ ಸಂಸ್ಥೆ ಮತ್ತು ಫ್ಯೂಜಿ ಗಾರ್ಮೆಂಟ್ಸ್’ನ ಕಾರ್ಯದರ್ಶಿಯಾಗಿ, ಕರ್ನಾಟಕ