ಜಾಗತಿಕವಾಗಿ ವಿಶ್ವದಾದ್ಯಂತ ಜುಲೈ 28ರಂದು “ವಿಶ್ವ ಹೆಪಟೈಟಿಸ್ ದಿನ” ಎಂದು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷವಾದ ಜಾಗ್ರತೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಆಚರಣೆಯನ್ನು ವಿಶ್ವ ಸಂಸ್ಥೆ ಜಾರಿಗೆ ತಂದಿದೆ. ಜಗತ್ತಿನಾದ್ಯಂತ ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದು ಏನಿಲ್ಲವೆಂದರೂ 1.5
ಮಂಗಳೂರು: ದಾಖಲೆ ಮಾಡಬೇಕೆಂದು ಕೆಲವರು ಏನೇನೋ ಸಾಧನೆ ಮಾಡುತ್ತಿರುತ್ತಾರೆ. ಅದೇ ಮಾದರಿಯಲ್ಲಿ ಮಂಗಳೂರಿನ ವಿದ್ಯಾರ್ಥಿನಿ ನಿರಂತರ 7ದಿನಗಳ ಕಾಲ ಅನ್ನ, ಆಹಾರ, ನಿದ್ದೆಯನ್ನು ಬದಿಗೊತ್ತಿ ಬರೋಬ್ಬರಿ ೧೭೦ಗಂಟೆಗಳ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ರೆಮೋನಾ ಅವರು ಶನಿವಾರ ಸಂಜೆ ವೇಳೆಗೆ ವಿಶ್ವದಾಖಲೆ ಬರೆದಿದ್ದಾರೆ. ಬಳಿಕವೂ ಭರತ ನಾಟ್ಯ ಮುಂದುವರಿದಿದೆ. ಮಂಗಳೂರಿನ ಸಂತ ಆಲೋಶಿಯಸ್ ಕಾಲೇಜಿನ ಅಂತಿಮ ಬಿ.ಎ. ಪದವಿವಿದ್ಯಾರ್ಥಿನಿ ರೆಮೋನಾ ಎವೆಟ್ಟೆ
ಬ್ಯಾಂಕಿಂಗ್’ನಲ್ಲಿ ಹೊಸ ದಿಗಂತಗಳನ್ನು ಅನ್ವೇಷಿಸಲು ಮತ್ತು ಮುಂದಿನ ಹಂತದ ಬೆಳವಣಿಗೆಗೆ ವಿಚಾರ, ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲು, ಎಂಸಿಸಿ ಬ್ಯಾಂಕ್ ಜುಲೈ 24, 2025 ರಂದು ಮಂಗಳೂರಿನ ಅತ್ತಾವರದಲ್ಲಿರುವ ಹೋಟೆಲ್ ಅವತಾರ್‌ನಲ್ಲಿ ‘ಐಡಿಯಾ ಸಮ್ಮಿತ್ 2025’ (Idea Summit 2025) ಅನ್ನು ಆಯೋಜಿಸಲಾಗಿತ್ತು.ಈ ಸಮ್ಮಿತ್’ನ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಅವರು ವಹಿಸಿದ್ದರು. ಗಣ್ಯ
ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿರುವ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್. ವಿಶ್ವದ ಮೊದಲ AI ಕಾರ್ಡ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ಗಮನ ಸೆಳೆದಿದೆ. ಇದೀಗ, ಈ ಕಾರ್ಡ್ ಅನ್ನು ಒಳಗೊಂಡ AI ಸಾಕ್ಷರತೆಯನ್ನು ಬೆಳೆಸುವ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ಸಂಸ್ಥೆಯು ಮುನ್ನಡೆಯುತ್ತಿದೆ. ಇದರ ಭಾಗವಾಗಿ, ಪ್ರತಿ ತಾಲೂಕಿನಲ್ಲಿ ಆಯ್ದ 40 ಫಲಾನುಭವಿಗಳಿಗೆ ತಲಾ ರೂ. 20,000 ಮೌಲ್ಯದ AI ಶಿಕ್ಷಣ ಕಿಟ್ಗಳನ್ನು ವಿತರಿಸುವ ವಿಶೇಷ
ಮಂಗಳೂರು: ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್ ವತಿಯಿಂದ ಯಶಸ್ವಿ ಸ್ವದೇಶಿ ಐಟಿ ಉದ್ಯಮಗಳಲ್ಲಿ ಒಂದಾದ ನೋವಿಗೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರೊಂದಿಗೆ ’ದಿ ನೋವಿಗೋ ಸ್ಟೋರಿ’ ಎಂಬ ಶೀರ್ಷಿಕೆಯಲ್ಲಿ ಸಂವಾದ ಕಾರ್ಯಕ್ರಮ ಜು.18ರಂದು ಬಿಜೈ ಕಾಪಿಕಾಡ್‌ನ ಅಜಂತಾ ಬಿಸಿನೆಸ್ ಸೆಂಟರ್‌ನಲ್ಲಿ ಜರುಗಿತು.ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್‌ನ ವ್ಯವಸ್ಥಾಪಕ ಪಾಲುದಾರಗುರುದತ್ತ ಶೆಣೈಅವರು ’ಜಾಗತಿಕತಂತ್ರಜ್ಞಾನ ಶ್ರೇಷ್ಠತೆಯಲ್ಲಿ ಮಂಗಳೂರಿನ
ಈದಿನ ಡಾಟ್ ಕಾಮ್ ಯೂಟ್ಯೂಬ್ ಬ್ಲಾಕ್ ಮಾಡಲು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಆ ಮೂಲಕ ಧರ್ಮಸ್ಥಳ ಮತ್ತು ಸೌಜನ್ಯ ವಿಚಾರಕ್ಕೆ ಸಂಬಂಧಿಸಿ ಈದಿನ ಡಾಟ್ ಕಾಮ್‌ಗೆ ಮೊದಲ ಗೆಲುವು ಸಿಕ್ಕಿದಂತಾಗಿದೆ. ಧರ್ಮಸ್ಥಳ ಮತ್ತು ಸೌಜನ್ಯ ವಿಷಯಕ್ಕೆ ಸಂಬಂಧಿಸಿದ ಸುದ್ದಿ ಪ್ರಕಟಿಸದಂತೆ ಇದ್ದ ಸಿವಿಎಲ್ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಧರ್ಮಸ್ಥಳ ದೇವಸ್ಥಾನದ ಟ್ರಸ್ಟ್‌ನ ಕೆಲವರು ಈದಿನ ಡಾಟ್ ಕಾಮ್
ಕುಂದಗನ್ನಡದ ನೆಲದಲ್ಲಿ ಹುಟ್ಟಿ, ಬದುಕಿಗೊಂದು ನೆಲೆಯರಸಿ ಮಂಗಳೂರಿಗೆ ಬಂದು ಸೇರಿ, ಇಲ್ಲಿಯವರಾದವರೆಲ್ಲರೂ ಸೇರಿ, ತಮ್ಮ ಮೂಲ ಸಂಸ್ಕೃತಿ, ಭಾಷೆ, ಆಚರಣೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ “ಕುಡ್ಲದಗಿಪ್ಪ ಕುಂದಾಪ್ರದರ್” ಎಂಬ ವಾಟ್ಸಾಪ್ ಬಳಗವನ್ನು ರಚಿಸಿಕೊಂಡಿದ್ದಾರೆ. ಈಗ ಈ ವಾಟ್ಸಾಪ್ ಬಳಗದ ಸದಸ್ಯರ ಸಂಖ್ಯೆ 650ನ್ನು ಮೀರಿದೆ.ಈ ವಾಟ್ಸಾಪ್ ಬಳಗದ ಸದಸ್ಯರೆಲ್ಲರೂ ಸೇರಿ , ಕಳೆದ ಐದು ವರ್ಷಗಳಿಂದ, ಆಷಾಢ ಮಾಸದ ಒಂದು
ಹೊಟೇಲ್ ಡಿಂಕಿ ಡೈನ್‌ನ ಸಹಕಾರದಲ್ಲಿ ತುಳುವ ಬೊಳ್ಳಿ ಪ್ರತಿಷ್ಠಾನ ಸಂಸ್ಕಾರ ಭಾರತಿ ಮಂಗಳೂರು ಸಹಯೋಗದೊಂದಿಗೆ ಆಟಿ ಅಮಾವಾಸ್ಯೆಯ ವಿಶೇಷ ಕಷಾಯ ಮದ್ದನ್ನು ಉಚಿತವಾಗಿ ನೀಡುತ್ತಿದ್ದಾರೆ. ಮಂಗಳೂರಿನ ಜನತೆಗೆ ಕಳೆದ 10 ವರ್ಷಗಳಿಂದ ಈ ಸೇವೆಯನ್ನು ತುಳುವ ಬೊಳ್ಳಿ ಪ್ರತಿಷ್ಠಾನ ಡಿಂಕಿ ಡೈನ್ ಹೋಟೆಲ್ ನ ಸಂಪೂರ್ಣ ಸಹಭಾಗಿತ್ವದೊಂದಿಗೆ ನಡೆಸಿಕೊಂಡು ಬರುತ್ತಿದೆ. ಈ ಬಾರಿ 11 ನೇ ವರ್ಷ ಎಲ್ಲರೂ ಬಂದು ಆಟಿ ಅಮಾವಾಸ್ಯೆಯ ಈ ವಿಶೇಷ ಕಷಾಯ ಮತ್ತು ಮೆಂತೆ ಗಂಜಿಯನ್ನು ಉಚಿತವಾಗಿ
ಮಂಗಳೂರಿನ ಚಿಲಿಂಬಿಯ ಸೋನಿ ಸೆಂಟರ್‌ನ ಮಥಾಯಸ್ ಎಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ಸೋನಿ ಬ್ರಾವಿಯಾ ಥಿಯೇಟರ್ ಸಿಸ್ಟಮ್ ೬ ಮತ್ತು ಬಾರ್ ೬ ಬಿಡುಗಡೆಗೊಂಡಿತು. ವಾ.ಓ೦೧: ಹೊಸ ಹೊಸ ತಂತ್ರಜ್ಞಾನದ ಮೂಲಕ ಗ್ರಾಹಕರ ಮನಗೆದ್ದಿರುವ ಸೋನಿ ಸೆಂಟರ್ ಇದೀಗ ಉತ್ಕೃಷ್ಟವಾದ ಆಡಿಯೋ ವಿಶ್ಯುವಲ್ ಅನುಭವ ಹೆಚ್ಚಿಸುವ ನಿಟ್ಟಿನಲ್ಲಿ ಸೋನಿ ಬ್ರಾವಿಯಾ ಥಿಯೇಟರ್ ಸಿಸ್ಟಮ್ 6 ಮತ್ತು ಬಾರ್ 6 ಬಿಡುಗಡೆಗೊಳಿಸಿದೆ. ಮಂಗಳೂರಿನ ಚಿಲಿಂಬಿಯ ಸೋನಿ ಸೆಂಟರ್‌ನ ಮಥಾಯಸ್
ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸರ್ಕ್ಯೂಟ್ ಹೌಸ್ – ಬಿಜೈ ಬಳಿ ತಡರಾತ್ರಿ ಗುಡ್ಡ ಕುಸಿದು ರಸ್ತೆಗೆ ಬಿದ್ದು ಸಂಚಾರ ವ್ಯವಸ್ಥೆಗೆ ತೊಂದರೆ ಆಗಿದೆ. ನಗರದ ಮೇರಿಹಿಲ್ ಸಮೀಪದಲ್ಲಿ ತಡೆಗೋಡೆ ಕುಸಿದ ಪರಿಣಾಮ ಪಕ್ಕದಲ್ಲಿದ್ದ ಬೈಕ್ ಹಾಗೂ ಕಾರು ಜಖಂಗೊಂಡಿದೆ. ಸಮೀಪದಲ್ಲಿಯೇ ಗ್ಯಾರೇಜ್ ನ ವಾಹನಗಳನ್ನ ತಡೆಗೋಡೆ ಪಕ್ಕದಲ್ಲಿಯೇ ನಿಲ್ಲಿಸಲಾಗಿದ್ದು, ಮಳೆ ಪರಿಣಾಮ ತಡೆಗೋಡೆ